ಎಟಿಎಂ ಹಣ ಕಳವಿಗೆ ಯತ್ನ : ಸೀಸಿಟೀವಿಯಲ್ಲಿ ವ್ಯಕ್ತಿ ಚಿತ್ರ ಸೆರೆ

ಒಡೆದ ಎಟಿಎಂ ಯಂತ್ರ

 

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಪೈವಳಿಕೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಎಟಿಎಂನಿಂದ ಹಣ ಕಳವಿಗೆ ಯತ್ನ ನಡೆದಿದ್ದು, ಈ ಬಗ್ಗೆ ಮಂಜೇಶ್ವರ ಪೆÇಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಕಳ್ಳನದ್ದೆಂದು ಸಂಶಯಿಸುವ ಚಿತ್ರವೊಂದು ಸಮೀಪದ ಬೇಕರಿಯ ಸೀಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದನ್ನುಪೆÇಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಎಟಿಎಂ ಯಂತ್ರವನ್ನು ಮುರಿಯಲು ಯತ್ನಿಸಿದ್ದು, ಆದರೆ ಹಣ ದೋಚಲು ಸಾಧ್ಯವಾಗಿಲ್ಲ. ಬ್ಯಾಂಕ್ ಪರಿಸರದಲ್ಲೇ ಎಟಿಎಂ ಕೌಂಟರ್ ಕಾರ್ಯಾಚರಿಸುತ್ತಿದ್ದು, ಸಮೀಪದಲ್ಲಿ ವ್ಯಾಪಾರ ಸಂಸ್ಥೆಗಳೂ ಇವೆ. ಕೌಂಟರಿಗೆ ಗ್ರಾಹಕರು ಬಂದಾಗಲೇ ಕಳವು ಯತ್ನ ನಡೆದ ಬಗ್ಗೆ ಅರಿವಿಗೆ ಬಂದಿದೆ. ಬ್ಯಾಂಕಿನ ಪೈವಳಿಕೆ ಶಾಖೆ ಪ್ರಬಂಧಕ ಶನೀಸ್ ಸಿ ಎಚ್ ನೀಡಿದ ದೂರಿನಂತೆ ಮಂಜೇಶ್ವರ ಪೆÇಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿದ್ದಾರೆ. ಕೌಂಟರ್ ಮುರಿಯಲು ಕಳ್ಳ ಬಳಸಿದ ಪಿಕ್ಕಾಸು ಸಮೀಪದಲ್ಲಿ ಪತ್ತೆಯಾಗಿದ್ದು, ಅದನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.

ಎಟಿಎಂ ಬಳಿಯ ಬೇಕರಿಯೊಂದರ ಸೀಸಿ ಕ್ಯಾಮರಾವನ್ನು ಪೆÇಲೀಸರು ಪರಿಶೀಲಿಸಿದಾಗ ಕಳ್ಳನದ್ದೆಂದು ಸಂಶಯಿಸಲಾದ ವ್ಯಕ್ತಿಯೊಬ್ಬನ ಚಿತ್ರ ಪತ್ತೆಯಾಗಿದೆ. ಬಾಯಾರು ಭಾಗದ ರಸ್ತೆಯಲ್ಲಿ ನಡೆದು ಬಂದ ವ್ಯಕ್ತಿ ಹೆಲ್ಮೆಟ್ ಧರಿಸಿ ಕೌಂಟರಿನೊಳಗೆ ಪ್ರವೇಶಿಸಿರುವುದು ಕಂಡುಬಂದಿದೆ. ಅಲ್ಲದೆ ಇದೇ ಸೀಸಿ ಕ್ಯಾಮರಾವನ್ನು ಆತ ತಿರುಗಿಸಿಟ್ಟಿರುವುದು ಕೂಡಾ ದೃಶ್ಯದಲ್ಲಿ ಪತ್ತೆಯಾಗಿದೆ. ಈ ಎಲ್ಲಾ ಪುರಾವೆಗಳನ್ನು ಪೆÇಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಎಟಿಎಂ ಯಂತ್ರ ಹಾನಿಗೀಡಾಗಿದ್ದು, ಸುಮಾರು 4 ಲಕ್ಷ ರೂ.ಗಳ ನಷ್ಟ ಅಂದಾಜಿಸಲಾಗಿದೆ.