ವಾಯು ಮಾಲಿನ್ಯತೆಯ ಎಚ್ಚರಿಕೆ

ದೇಶದ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದಿಂದ ದಿನವೊಂದಕ್ಕೆ ಒಬ್ಬರು ಐವತ್ತು ಸಿಗರೇಟ್ ಸೇದುವ ವಾಯು ಮಾಲಿನ್ಯವನ್ನು ಅನುಭವಿಸುತ್ತಿದ್ದಾರೆಂದು ಪರಿಸರ ತಜ್ಞರು ಹೇಳಿದ್ದಾರೆ ಹಾಗೂ ಇದರ ಕಾರಣದಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಗಲಭೆಯ ಸಮಯದಲ್ಲಿ ರಜೆ ಸಾರಿದರೆ ರಕ್ಷಣೆ ಹೊಂದಬಹುದಾದರೂ ವಾಯು ಮಾಲಿನ್ಯಕ್ಕೆ ರಜೆ ಸಾರಿದರೆ ಅದರಿಂದ ಪಾರಾಗಲು ಸಾಧ್ಯವಿಲ್ಲ ಕಾರಣ ವಾಯು ಎಂಬುಂದು ಜೀವಕ್ಕಿರುವ ಇಂಧನವಾಗಿದೆ ಅದು ಒಂದು ಸ್ಥಳದಲ್ಲಿ ಮಾತ್ರ ನಿಲ್ಲುವ ವಸ್ತುವಲ್ಲ ಉಸಿರಾಡುವ ಗಾಳಿಯೇ ವಿಷವಾದರೆ ಅದಕ್ಕಿಂತ ದೊಡ್ಡ ದುರಂತವಿಲ್ಲ ಅಭಿವೃದ್ಧಿಯ ಹೆಸರಲ್ಲಿ ಅನೇಕ ವಿದೇಶಿ ಕಂಪೆನಿಗಳಿಗೆ ಹಸಿರು ಹಾಸು ನೀಡುತ್ತಿರುವ ಕೇಂದ್ರ ಸರಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಕಾರ್ಖಾನೆಗಳಿಂದ ಹೊರಡುವ ತ್ಯಾಜ್ಯಗಳು ವಾಹನಗಳಿಂದ ಹೊರಡುವ ಹೊಗೆಗಳು ವಾಯು ಮಾಲಿನ್ಯದ ಕೇಂದ್ರಬಿಂದುವಾಗಿದೆ ಹರಿಯಾಣ ಪಂಜಾಬಿನಲ್ಲಿರುವ ರೈತರು ಸುಡುವ ಹುಲ್ಲಿನಿಂದ ವಾಯುಮಾಲಿನ್ಯವೆಂದು ಕಂಡು ಹಿಡಿದ ಮುಖ್ಯಮಂತ್ರಿ ಕೇಜ್ರಿವಾಲರ ನಡೆಯು ಆಶ್ಚರ್ಯಕರವಾಗಿದೆ ನಮ್ಮ ದೇಶವು ಕೃಷಿ ಪ್ರಧಾನವಾಗಿದೆ ಇಲ್ಲಿ ಕೃಷಿಕಾರ್ಯಗಳಿಗೆ ಹೆಚ್ಚು ಒತ್ತು ಕೊಡಬೇಕಾಗಿದೆ ಅಭಿವೃದ್ಧಿಯ ಹೆಸರಲ್ಲಿ ವಿದೇಶಿ ಕಂಪೆನಿಗಳಿಗೆ ಪರವಾನಿಗೆ ನೀಡಿದರೆ ಅದು ದೇಶದ ಜನರಿಗೆ ಸಾವನ್ನು ಆಮದು ಮಾಡಿಕೊಂಡತಾಗುತ್ತದೆ ಹಾಗೂ ಅತ್ಯಾಸೆಯ ಕಾರಣದಿಂದ ಪ್ರತೀ ಮನೆಯಲ್ಲೂ ಇಂದು ವ್ಯಕ್ತಿಗೊಬ್ಬರಂತೆ ವಾಹನಗಳಿವೆ ಇದನ್ನು ಕಡಿಮೆ ಮಾಡಿ ಸೈಕಲ್ ರೈಲು ಸರಕಾರಿ ಬಸ್ಸುಗಳನ್ನು ದಿನನಿತ್ಯದ ಆವಶ್ಯಕತೆಗಳಿಗೆ ಉಪಯೋಗಿಸಬೇಕಾಗಿದೆ ಎಲ್ಲಾ ವಿಷಯದಂತೆ ಇದನ್ನೂ ತಾತ್ಸಾರವಾಗಿ ಕಂಡರೆ ನಮ್ಮ ನಾಶಕ್ಕೆ ನಾವೇ ಗುಂಡಿ ತೋಡುವ ಅವಸ್ಥೆ ಬಂದೊರಗಬಹುದು ಅಭಿವೃದ್ಧಿಯೆಂದರೆ ಹುಚ್ಚು ಎಂದು ಯಾರೋ ಹೇಳಿದ ಮಾತು ಸರಿಯೆಂದು ತೋರುತ್ತದೆ

  • ಜಿ ಯಂ ಫೈಝಿ  ಗೋಳ್ತಮಜಲ್  ಕಲ್ಲಡ್ಕ