ದನಗಳ್ಳ ಬಂಧನ, ಮೂವರು ಪರಾರಿ

ಸಾಂದರ್ಭಿಕ ಚಿತ್ರ

ಉಡುಪಿ : ಜಾನುವಾರಗಳನ್ನು ಕದ್ದು ಸಾಗಾಟ ಮಾಡುತ್ತಿದ್ದವರನ್ನು ಹಿರಿಯಡ್ಕ ಪೊಲೀಸರು ಪತ್ತೆಹಚ್ಚಿದ್ದು ಒಬ್ಬನನ್ನು ಬಂಧಿಸಿದ್ದು, ಮೂವರು ಪರಾರಿಯಾಗಿದ್ದಾರೆ. ಕಾಪು ಸಮೀಪದ ಮಲ್ಲಾರು ಗುಡ್ಡೆಗೇರಿ ನಿವಾಸಿ ಮೊಹಮ್ಮದ್ ಅಕ್ತರ್ ಎಂಬವರ ಮಗ ನಾಜೀಮ್ ಬಂಧಿತ ಆರೋಪಿ. ಮಲ್ಲಾರು ಗ್ರಾಮದ ನಿವಾಸಿಗಳಾದ ಅಶ್ರಫ್, ಇಲಿಯಾಸ್ ಮತ್ತು ದಾವೂದ್ ಪರಾರಿಯಾದ ಆರೋಪಿಗಳು. ಕುಂದಾಪುರ ತಾಲೂಕಿನ ಹಾಲಾಡಿ ಪೇಟೆಯಲ್ಲಿ ಮೂರು ಜಾನುವಾರಗಳನ್ನು ಕದ್ದು, ರಿಟ್ಜ್ ಕಾರಿನಲ್ಲಿ ಅಲಂಗಾರು ಕಡೆಯಿಂದ ಪೆರ್ಡೂರು ಕಡೆಗೆ ಸಾಗಾಟ ಮಾಡುತ್ತಿದ್ದಾಗ ರೌಂಡ್ಸಿನಲ್ಲಿದ್ದ ಹಿರಿಯಡ್ಕ ಪೊಲೀಸರು ಪೆರ್ಡೂರು ಕುಬೇರಾ ಬಾರ್ ಬಳಿ ಕಾರನ್ನು ತಡೆದಿದ್ದಾರೆ. ಕಾರಿನಲ್ಲಿದ್ದ ಮೂವರು ಓಡಿ ಹೋಗಿದ್ದು, ಒಬ್ಬನನ್ನು ಬಂಧಿಸಿದ್ದಾರೆ.