ಅಕ್ರಮ ದನ ಸಾಗಾಟ : ಆರೋಪಿಗಳ ಬಂಧನ

ನಮ್ಮ ಪ್ರತಿನಿಧಿ ವರದಿ

ಸುಳ್ಯ : ಶುಕ್ರವಾರ ಮುಂಜಾನೆ ಕಾಣಿಯೂರು ಮಠದ ರಸ್ತೆಯಲ್ಲಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 13 ದನಗಳನ್ನು ಬೆಳ್ಳಾರೆ ಪೆÇಲೀಸರು ಹಿಡಿದು ಆರೋಪಿಯನ್ನು ಬಂಧಿಸಿದ್ದಾರೆ.

ಬೆಳ್ಳಾರೆ ಪೆÇಲೀಸರು ನಸುಕಿನ ವೇಳೆ ಅತೀ ವೇಗದಲ್ಲಿ ಚಲಿಸುತ್ತಿದ್ದ ಪಿಕಪ್ ವಾಹನವನ್ನು ಬೆಂಬತ್ತಿದಾಗ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ವಾಹನವನ್ನು ಕಾಣಿಯೂರು ಮಠದ ಬಳಿ ತಡೆದು ನಿಲ್ಲಿಸಿದಾಗ ಮಂಗಳೂರಿನ ಕುಳಾಯಿ ನಿವಾಸಿ ಅಬ್ದುಲ್ ರಝಾಕ್ ಮತ್ತು ತಂಡದವರ ಕೃತ್ಯ ಬಯಲಾಯಿತು. ಕೂಡಲೇ ಅಬ್ದುಲ್ ರಝಾಕನನ್ನು ಪೆÇಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಎಣ್ಮೂರಿನ ಮಹಮ್ಮದ್, ಫಯಾಝ್ ಎಣ್ಮೂರು, ಉಸ್ಮಾನ್ ಎಣ್ಮೂರು, ಸುರತ್ಕಲ್ ಮುಸ್ತಫಾ, ಕೃಷ್ಣಪುರದ ಶಬೀರ್ ಪರಾರಿಯಾದ ಆರೋಪಿಗಳೆನ್ನಲಾಗಿದೆ. ಬೆಳ್ಳಾರೆ ಪೆÇಲೀಸರು ಪ್ರಕರಣ ದಾಖಲಿಸಿ ವಾಹನವನ್ನು ಜಪ್ತಿ ಮಾಡಿ ತನಿಖೆ ನಡೆಸುತ್ತಿದ್ದಾರೆ.