Monday, April 24, 2017

ರೈಲ್ವೇ ಅಧಿಕಾರಿಗಳು ದಾಖಲಿಸಿದ ಮೊಕದ್ದಮೆ ವಾಪಸ್ ಪಡೆಯಲು ಕಾರವಾರಿಗರ ಒತ್ತಾಯ

ನಮ್ಮ ಪ್ರತಿನಿಧಿ ವರದಿ ಕಾರವಾರ : ಗೋವಾ ರಾಜ್ಯಕ್ಕೆ ತೆರಳುವ ಪ್ಯಾಸೆಂಜರ್ ರೈಲು ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದರಿಂದ ತೊಂದರೆಗೊಳಗಾದ ಪ್ರಯಾಣಿಕರು ರೈಲ್ವೇ ಅಧಿಕಾರಿಗಳನ್ನು ಪ್ರಶ್ನಿಸಿದ್ದಕ್ಕೆ ರೈಲ್ವೇ ಅಧಿಕಾರಿಗಳು ದಾಖಲಿಸಿದ ಪ್ರಕರಣವನ್ನು ವಾಪಸ್ ಪಡೆಯುವಂತೆ...

ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಆರೋಗ್ಯಾಧಿಕಾರಿ ಭೇಟಿ

ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನಮ್ಮ ಪ್ರತಿನಿಧಿ ವರದಿ ಭಟ್ಕಳ : ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ನರ್ಸುಗಳು ಮತ್ತು ಸಿಬ್ಬಂದಿಗಳಲ್ಲಿ ಸೂಕ್ತ ಹೊಂದಾಣಿಕೆ ಕೊರತೆಯಿಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಲಭಿಸುತ್ತಿಲ್ಲ ಎನ್ನುವ ದೂರು ಸಾರ್ವಜನಿಕರಿಂದ ಕೇಳಿಬಂದ...

ಸೀಬರ್ಡ್ ನಿರಾಶ್ರಿತರ ಪರಿಹಾರ : 6 ತಿಂಗಳಲ್ಲಿ ವಿತರಣೆಗೆ ರಕ್ಷಣಾ ಸಚಿವ ಬಾಂಬ್ರೆ ಭರವಸೆ

ನಮ್ಮ ಪ್ರತಿನಿಧಿ ವರದಿ ಅಂಕೋಲಾ : ``ಸೀಬರ್ಡ್ ನಿರಾಶ್ರಿತರ ಪರಿಹಾರ ವಿತರಣೆ ಹಿನ್ನೆಲೆಯಲ್ಲಿ ಇರುವ ಸಮಸ್ಯೆಯನ್ನು ಇನ್ನು 6 ತಿಂಗಳಲ್ಲಿ ಪರಿಹರಿಸಿ ಸಮರ್ಪಕ ಪರಿಹಾರ ಒದಗಿಸಲು ಕ್ರಮ ತೆಗೆದುಕೊಳ್ಳುಲಾಗುವುದು'' ಎಂದು ಕೇಂದ್ರ ರಕ್ಷಣಾ ಖಾತೆ...

ಶ್ರದ್ಧೆಯಿಂದ ಕೃಷಿ ಕೈಗೊಳ್ಳುವ ಕೃಷಿಕರಿಗೆ ದುರ್ಭಿಕ್ಷ ಬರುವುದಿಲ್ಲ : ಸ್ವರ್ಣವಲ್ಲೀ ಶ್ರೀ

ನಮ್ಮ ಪ್ರತಿನಿಧಿ ವರದಿ ಯಲ್ಲಾಪುರ : ``ಶ್ರದ್ಧೆಯಿಂದ ಕೃಷಿ ಕಾರ್ಯ ಕೈಗೊಳ್ಳುವ ಕೃಷಿಕರಿಗೆ ಎಂದೂ ದುರ್ಭಿಕ್ಷ ಬರುವುದಿಲ್ಲ. ಪ್ರತಿ ನಿತ್ಯ ಜಪಾನುಷ್ಠಾನ, ದೇವರ ಪೂಜೆ, ಮಾಡುವ ಯಾರಿಗೂ ಪಾಪದ ಲೇಪ ತಟ್ಟುವದಿಲ್ಲ'' ಎಂದು ಸ್ವರ್ಣವಲ್ಲೀ...

ಗೋಕರ್ಣ ಜಾತಿ ತಾರತಮ್ಯವಿಲ್ಲದ ಧಾರ್ಮಿಕ ಕ್ಷೇತ್ರ : ಬ್ರಹ್ಮಾನಂದ ಶ್ರೀ

ನಮ್ಮ ಪ್ರತಿನಿಧಿ ವರದಿ ಗೋಕರ್ಣ : ``ಗೋಕರ್ಣ ಜಾತಿ ತಾರತಮ್ಯವಿಲ್ಲದ ಏಕೈಕ ಧಾರ್ಮಿಕ ಕ್ಷೇತ್ರ. ಬಹಳ ಪುರಾತನ ಕಾಲದಿಂದಲೂ ಇಲ್ಲಿಯ ಬ್ರಾಹ್ಮಣರೂ ಯಾವುದೇ ಜಾತಿ, ಮತ ಭೇದವಿಲ್ಲದೇ ಎಲ್ಲರನ್ನೂ ತಮ್ಮ ಮನೆಗೆ ಕರೆದು ಆದÀರಾಥಿತ್ಯ ...

ದೇಶದ ಸಂವಿಧಾನ ತಿರುಚಲು ಯತ್ನ ರಾಮ್ ಪುನಿಯಾನಿ

ನಮ್ಮ ಪ್ರತಿನಿಧಿ ವರದಿ ಭಟ್ಕಳ : ``ದೇಶದ ಸಂವಿಧಾನವನ್ನೂ ತಿರುಚುವ ಪ್ರಯತ್ನಕ್ಕೆ ಕೈಹಾಕಲಾಗುತ್ತಿದೆ. ಸಮಾಜದಲ್ಲಿ ದ್ವೇಷ, ವೈಷಮ್ಯದ ವಾತವರಣ ಸೃಷ್ಟಿಸಲಾಗುತ್ತಿದೆ. ಹಿಂದೂ ಮುಸ್ಲಿಮರಲ್ಲಿ ಶತ್ರುತ್ವದ ಬೀಜವನ್ನು ಬಿತ್ತುವ ವ್ಯವಸ್ಥಿತ ಷಡ್ಯಂತ್ರವನ್ನು ರಚಿಸಲಾಗುತ್ತಿದೆ'' ಎಂದು ಇಂದಿರಾಗಾಂಧಿ...

ಅಕ್ರಮ ಮರಳು ಸಾಗಿಸುತ್ತಿದ್ದ 4 ಲಾರಿ ವಶ : ಇಬ್ಬರ ಬಂಧನ

ನಮ್ಮ ಪ್ರತಿನಿಧಿ ವರದಿ ಶಿರಸಿ : ಇಲ್ಲಿನ ಸಿದ್ದಾಪುರ ರಸ್ತೆಯಲ್ಲಿ ಸೋಮವಾರ ಅಕ್ರಮವಾಗಿ ಶಿರಸಿ ಕಡೆ ಮರಳು ಸಾಗಿಸುತ್ತಿದ್ದ 4 ಲಾರಿಗಳನ್ನು ಶಿರಸಿ ಪೊಲೀಸರು ವಶಕ್ಕೆ ತೆಗೆದುಕೊಂಡು ಇಬ್ಬರನ್ನು ಬಂಧಿಸಲಾಗಿದೆ. ಚಂದ್ರಗುತ್ತಿ ಬಳಿ ವರದಾ ನದಿಯಲ್ಲಿ...

ಅಪರಾಧ ಚಟುವಟಿಕೆ ನಿಯಂತ್ರಿಸಲು ಕಾರವಾರದ ವಿವಿಧೆಡೆ ಸೀಸಿ ಟೀವಿ ಅಳವಡಿಕೆಗೆ ಪೊಲೀಸ್ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ ಕಾರವಾರ : ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ನಗರದ ವಿವಿಧೆಡೆ ಒಟ್ಟೂ 15 ಸೀಸಿ ಟೀವಿ ಕ್ಯಾಮೆರಾಗಳನ್ನು ಅಳವಡಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ. ಜಿಲ್ಲಾ ಕೇಂದ್ರ ಕಾರವಾರದಲ್ಲಿ ಜನಸಂಖ್ಯೆ ಬೆಳೆದಂತೆ ಹಲವು...

ಉ ಕ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ವ್ಯಯಿಸಿದ ರೂ 100 ಕೋಟಿ, ಕಾಮಗಾರಿ ವೆಚ್ಚ ...

ನಮ್ಮ ಪ್ರತಿನಿಧಿ ವರದಿ ಕಾರವಾರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವನ್ನು ವೃದ್ಧಿಸಲು ಶಾಶ್ವತ ಯೋಜನೆಗಳ ಕಾಮಗಾರಿಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಶ್ ಮೌದ್ಗಿಲ್ ಜಿಲ್ಲೆಯ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬರ ಪರಿಹಾರ...

ಯಲ್ಲಾಪುರ : ದಲಿತ ಸಂಘಟನೆಗಳು ಸ್ಥಾಪಿಸಿದ್ದ ಅಂಬೇಡ್ಕರ್ ಪ್ರತಿಮೆ ತೆರವು

ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಕಳೆದ 3 ದಿನಗಳ ಹಿಂದೆ ದಲಿತ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ರಾತ್ರಿ ದಿಢೀರ್ ಪ್ರತಿಷ್ಠಾಪನೆಗೊಂಡ ಅಂಬೇಡ್ಕರ್ ಪ್ರತಿಮೆಯನ್ನು ಶನಿವಾರ ರಾತ್ರಿ ತೆರವುಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ...

ಸ್ಥಳೀಯ

ಖುರೇಷಿ ಆರೋಗ್ಯ ಸುಧಾರಣೆ, ಪಿ ಎಫ್ ಐ ಕಾರ್ಯಕರ್ತರಿಗೆ ಮಾತ್ರ ಇನ್ನೂ ಬಿಡದ ಚಿಂತೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪ್ರಕಾಶ್ ಪೂಜಾರಿ ಕೊಲೆ ಯತ್ನ ಆರೋಪದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟು ದೌರ್ಜನ್ಯಕ್ಕೆ ಒಳಗಾಗಿದ್ದಾನೆ ಎನ್ನಲಾಗುವ ಅಹ್ಮದ್ ಖುರೇಷಿ ಪ್ರಸ್ತುತ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದಾನೆ. ಹೀಗಿದ್ದರೂ...

ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಜಾರಿ : ಸೀಎಂ

ನಮ್ಮ ಪ್ರತಿನಿಧಿ ವರದಿ ಬಾರ್ಕೂರು (ಉಡುಪಿ) : ರಾಜ್ಯದ ಮೂರು ಕರಾವಳಿ ಜಿಲ್ಲೆಗಳಿಗೆ ಅನ್ವಯಿಸಿ ಪ್ರತ್ಯೇಕ ಮರಳು ನೀತಿ ರೂಪಿಸಲಾಗುವುದೆಂದು ಸೀಎಂ ಸಿದ್ದರಾಮಯ್ಯ ಇಲ್ಲಿ ತಿಳಿಸಿದರು. ಸರ್ಕಾರ ಅಕ್ರಮ ಮರಳುಗಾರಿಕೆ ಸಹಿಸುವುದಿಲ್ಲ ಎಂದು ಸುದ್ದಿಗಾರರ ಜೊತೆ...

ನಗರದ ನೈರ್ಮಲ್ಯ ಕಾಪಾಡಲು ಆಗ್ರಹಿಸಿ ಪರಿಸರ ಪ್ರೇಮಿಯ ನೂತನ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ನಗರದಲ್ಲಿ ಎಲ್ಲಿ ನೋಡಿದರಲ್ಲಿ ಕಸದ ರಾಶಿ, ತೆರೆದ ಚರಂಡಿಗಳು, ಮೋರಿಗಳು ಜನರನÀ್ನು ಕಾಯಿಲೆಯ ಗೂಡನ್ನಾಗಿ ಮಾಡುತ್ತಿವೆ. ಇದನ್ನು ಸ್ವಚ್ಛ ಮಾಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ...

ಕೊಳವೆಬಾವಿಯಲ್ಲೂ ಕೆಸರುಮಿಶ್ರಿತ ನೀರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅತ್ತ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವಂತೆ ಇತ್ತ ಮಂಗಳೂರು ನಗರ ಸೇರಿದಂತೆ ಆಸುಪಾಸಿನಲ್ಲಿ ನೀರಿನ ಸಮಸ್ಯೆ ಕೂಡಾ ತಾರಕಕ್ಕೇರತೊಡಗಿದೆ. ಈ ನಡುವೆ ಮಂಗಳೂರು ಮಹಾನಗರ ಪಾಲಿಕೆ...

ಉಡುಪಿ ನಗರಪಾಲಿಕೆಯಿಂದ ಹೊಸ ಘನ ತ್ಯಾಜ್ಯ ನಿರ್ವಹಣಾ ಯೋಜನೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಉಡುಪಿ ನಗರಪಾಲಿಕೆಯು ನಗರಕ್ಕಾಗಿ `ನಗರಪಾಲಿಕೆ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ' ಎಂಬ ಹೊಸ ಯೋಜನೆಯನ್ನು ಪ್ರಸ್ತಾವಿಸಿದೆ. ವಿವಿಧ ತಂತ್ರಗಳನ್ನು ಬಳಸಿಕೊಂಡು ಸಂಪೂರ್ಣ ತ್ಯಾಜ್ಯ ನಿರ್ವಹಣೆ ಮಾಡುವುದೇ ಈ...

ಮಂಗಳೂರಿಗೆ ಹೊಸ ಸಂಗೀತ ಕಾರಂಜಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ನಗರದ ಅಂದಚೆಂದ ಹೆಚ್ಚಿಸಲು ಮತ್ತೊಂದು ಆಕರ್ಷಣೆ ಸೇರ್ಪಡೆಯಾಗಿದೆ. ಹೌದು, ನಗರದ ಉದ್ಯಾನವನ ಪ್ರಿಯರ ಕೇಂದ್ರ ಬಿಂದುವಾಗಿರುವ ಕದ್ರಿ ಪಾರ್ಕ್ ಎದುರುಗಡೆ ಇರುವ ಡೀರ್ ಪಾರ್ಕಿನಲ್ಲಿ ಹೊಸ...

ಬೇಸಿಗೆ ಪ್ರಯಾಣಿಕರ ನಿಬಿಡತೆ ನೀಗಿಸಲು 216 ವಿಶೇಷ ರೈಲು ಓಡಿಸಲಿರುವ ಕೊಂಕಣ್ ರೈಲ್ವೇ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೇಸಿಗೆ ಪ್ರಯಾಣಿಕರ ಹೆಚ್ಚುವರಿ ಜನಜಂಗುಳಿಯನ್ನು ನಿಭಾಯಿಸಲು ಕೊಂಕಣ್ ರೈಲ್ವೇಯು ವಲಯ ರೈಲ್ವೇಗಳ ಸಹಕಾರದೊಂದಿಗೆ 216 ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಬೇಸಿಗೆ ರಜಾ ಸಮಯದ ಪ್ರಯಾಣಿಕರಿಂದ...

ಪಾದೂರು-ಕಳತ್ತೂರು ಪ್ರದೇಶದ ಸಂತ್ರಸ್ಥರಿಂದ ಪ್ರತಿಭಟನೆ ಎಚ್ಚರಿಕೆ

ಐ ಎಸ್ ಪಿ ಆರ್ ಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ಸಂಕಟ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಪಾದೂರು ಕಚ್ಚಾತೈಲ ಘಟಕದ ಪೈಪ್ ಲೈನ್ ಕಾಮಗಾರಿಯನ್ನು ಸಂತ್ರಸ್ಥರಿಗೆ ಪರಿಹಾರ ನೀಡದೆ ಬೆದರಿಕೆಯೋಡ್ಡಿ ನಡೆಯುತ್ತಿರುವುದಲ್ಲದೆ ಕಾಮಗಾರಿಗಾಗಿ...

ಸ್ಕೂಟಿಯೊಳಗೆ ವಿಷಕಾರಿ ಹಾವು

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಗ್ರಾಹಕರೊಬ್ಬರು ಖರೀದಿಸಿದ ಹೊಚ್ಚ ಹೊಸ ಸ್ಕೂಟಿಯಲ್ಲಿ ವಿಷಕಾರಿ ಹಾವೊಂದು ನುಸುಳಿ ಸ್ಥಳೀಯರ ಬೆವರಿಳಿಸಿದ ಘಟನೆ ನಡೆದಿದೆ. ತಾವು ಖರೀದಿಸಿದ ಹೊಸ ಸ್ಕೂಟಿಯಲ್ಲಿ ಶೋರೂಮಿನಿಂದ ಮನೆಗೆ ಹೋಗಲು ಸದ್ರಿ ಗ್ರಾಹಕ...

ನಾಗುರಿ ನಿವಾಸಿಗಳಿಗೆ ಜಾಗ ನಷ್ಟ ಭೀತಿ

ರಸ್ತೆ ಅಗಲೀಕರಣ ಎಫೆಕ್ಟ್ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ನಗರ ಪಾಲಿಕೆ ಪ್ರಸ್ತಾವಿಸಿರುವ ರಸ್ತೆ ಅಗಲೀಕರಣ ಯೋಜನೆಯಿಂದ ನಾಗುರಿಗೆ ಹತ್ತಿರದ ರೆಡ್ ಬಿಲ್ಡಿಂಗ್ ರಸ್ತೆಯ ಸುಮಾರು 150 ನಿವಾಸಿಗರು ಜಾಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ....