Friday, August 18, 2017

ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿಗೆ ಕುಂದಾಪುರದಲ್ಲಿ ಐದು ಎಕ್ರೆ ಜಾಗ ಗುರುತು

ನಮ್ಮ ಪ್ರತಿನಿಧಿ ವರದಿ ಉಡುಪಿ : ``ಕುಂದಾಪುರ ತಾಲೂಕಿನ ನಾಡಾ ಎಂಬಲ್ಲಿನ ಸೇನಾಪುರ ಗ್ರಾಮದಲ್ಲಿ ಎಂಡೋ ಸಂತ್ರಸ್ತರ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಐದು ಎಕ್ರೆ ಜಾಗವನ್ನು ಗುರುತಿಸಲಾಗಿದೆ'' ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್...

ರಿಕ್ಷಾ ಚಾಲಕರ ಸಮಸ್ಯೆಗೆ ಸ್ಪಂದಿಸದ ಪ್ರಮೋದ್ ಮಧ್ವರಾಜ್ ವಿರುದ್ಧ ಆಟೋ ಯೂನಿಯನ್ ಸ್ಥಾಪಕಾಧ್ಯಕ್ಷ ಆಕ್ರೋಶ

 ನಮ್ಮ ಪ್ರತಿನಿಧಿ ವರದಿ ಉಡುಪಿ : ``ಜಿಲ್ಲೆಯ ರಿಕ್ಷಾ ಚಾಲಕರ ಸಮಸ್ಯೆಗಳ ಬಗ್ಗೆ ಉಡುಪಿ ಶಾಸಕ, ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜರಿಗೆ ಮನವಿ ನೀಡಿ 9 ತಿಂಗಳು ಕಳೆದರೂ ಇಲ್ಲಿಯ ತನಕ ಸಚಿವರು ರಿಕ್ಷಾ...

ಬಿರುಕುಬಿಟ್ಟ ಕಟ್ಟಡದಲ್ಲಿ ಅಂಗನವಾಡಿ

 ನಮ್ಮ ಪ್ರತಿನಿಧಿ ವರದಿ ಉಡುಪಿ : ಮಹಾತ್ಮ ಗಾಂಧಿ ಹಿರಿಯ ಪ್ರಾಥಮಿಕ (ಮೈನ್) ಶಾಲೆಯ ಗೋಡೆ ಬಿರುಕುಬಿಟ್ಟು ಕುಸಿಯುವ ಭೀತಿಯ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಶಾಲೆಯ ವಿದ್ಯಾರ್ಥಿಗಳನ್ನು ಇತ್ತೀಚೆಗೆ ನಗರದ ನಾರ್ತ್ ಶಾಲೆಗೆ ಸ್ಥಳಾಂತರಿಸಲಾಗಿದೆ....

ಪರೀಕ್ಷಾ ಯಶಸ್ಸಿನ ಟಿಪ್ಸ್ ಹಂಚಿಕೊಂಡ ಟಾಪರ್

ಉಡುಪಿ : ಯು ಪಿ ಎಸ್ ಸಿ ಸಿವಿಲ್ ಸರ್ವಿಸ್ 2016ರಲ್ಲಿ ನಡೆದ ಪರೀಕ್ಷೆಯಲ್ಲಿ 112ನೇ ಶ್ರೇಯಾಂಕ ಗಳಿಸಿದ ಮಣಿಪಾಲದ ರಂಜನ್ ರಾಜಗೋಪಾಲ್ ಶೆಣೈ ತನ್ನ ಸಾಧನೆಯ ಹಿಂದಿನ ಟಿಪ್ಸಗಳನ್ನು ಕಿರಿಯ ವಿದ್ಯಾರ್ಥಿಗಳೊಂದಿಗೆ...

ರಾತ್ರಿ ಆಶ್ರಯ ಯೋಜನೆಯ ಮನೆ ಇದೀಗ ನಾಯಿಗಳ ಆವಾಸ ಸ್ಥಾನ

ನಮ್ಮ ಪ್ರತಿನಿಧಿ ವರದಿ ಉಡುಪಿ : ಮನೆಯಿಲ್ಲದ ವಲಸೆ ಕಾರ್ಮಿಕರಿಗಾಗಿ ಬೀಡಿನಗುಡ್ಡೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಮನೆ ಇದೀಗ ಬೀದಿನಾಯಿಗಳ ಆವಾಸ ತಾಣವಾಗಿ ಬದಲಾಗಿದೆ. ಈ ಮನೆಯನ್ನು ಜೂನ್ ತಿಂಗಳಲ್ಲಿ ಉದ್ಘಾಟಿಸಲಾಗಿದೆ. ನಗರಸಭೆ ಅಧಿಕಾರಿಗಳು ಕಳೆದ ವರ್ಷ...

ಉಡುಪಿ ಎಸ್ಪಿ ವರ್ಗ

ನಮ್ಮ ಪ್ರತಿನಿಧಿ ವರದಿ ಉಡುಪಿ : ವರ್ಷದ ಹಿಂದೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಕೆ ಟಿ ಬಾಲಕೃಷ್ಣ, ಬೆಂಗಳೂರು ಹೋಮ್ ಗಾರ್ಡ್ ಕಮಾಡೆಂಟ್ ಎಸ್ಪಿಯಾಗಿ ವರ್ಗಾಗೊಂಡಿದ್ದಾರೆ. ಉಡುಪಿ ಜಿಲ್ಲಾ ಎಸ್ಪಿಯಾಗಿ ಭ್ರಷ್ಟಾಚಾರ...

`ನನ್ನ ಮಗಳನ್ನು ಕೊಲೆಗೈಯ್ಯಲಾಗಿದೆ’

ಕಾವ್ಯಾ ಪೂಜಾರಿ ತಾಯಿ ಹೇಳಿಕೆ ನಮ್ಮ ಪ್ರತಿನಿಧಿ ವರದಿ ಉಡುಪಿ : ``ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯನ್ನು ಕೊಲೆಗೈಯ್ಯಲಾಗಿದೆ'' - ಹೀಗೆಂದು ನುಡಿದವರು ತಮ್ಮ ಏಕೈಕ ಪುತ್ರಿಯನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿರುವ ಬೇಬಿ ಪೂಜಾರಿ. ಬೇಬಿ...

ಫೇಸ್ಬುಕ್ಕಲ್ಲಿ ನಿಂದಿಸಿದ ನಾಲ್ವರ ವಿರುದ್ಧ ಕೇಸು

ಮಠದಲ್ಲಿ ಎರಡೆರಡು ಕೃಷ್ಣ ಜನ್ಮಾಷ್ಟಮಿ ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ಕೃಷ್ಣ ಮಠದಲ್ಲಿ ಎರಡೆರಡು ಕೃಷ್ಣ ಜನ್ಮಾಷ್ಟಮಿ ಆಚರಿಸುವ ಪ್ರಕರಣಕ್ಕೆ ಸಂಬಂಧಿಸಿ ಅವಾಚ್ಯವಾಗಿ ನಿಂದಿಸಿ ಫೇಸ್ಬುಕ್ಕಿನಲ್ಲಿ ಹಾಕಿದ ನಾಲ್ವರು ಆರೋಪಿಗಳ ವಿರುದ್ಧ ಉಡುಪಿ...

ಜನವಸತಿ, ಶಾಲೆ, ದೇವಳ ಪರಿಸರದಲ್ಲಿ ಮದ್ಯದಂಗಡಿ ತೆರೆಯದಂತೆ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಕುಂದಾಪುರ : ವಡೇರಹೋಬಳಿ ಗ್ರಾಮದ  ಕುಂದಾಪುರ ಪುರಸಭೆ ವ್ಯಾಪ್ತಿಯ 21ನೇ ವಾರ್ಡಿನಲ್ಲಿ  ಜನವಸತಿ, ಶಾಲಾ ವಠಾರ ಹಾಗೂ ದೇವಸ್ಥಾನದ ವ್ಯಾಪ್ತಿ ಇದ್ದರೂ ಸಹ ಮದ್ಯದಂಗಡಿಯನ್ನು  ತೆರೆಯುವ ಹುನ್ನಾರ ನಡೆಯುತ್ತಿದ್ದು, ಈ...

ಮೀನುಗಾರಿಕೆ ಆರಂಭದ ದಿನವೇ ಒಂದು ಸಾವು

ನಮ್ಮ ಪ್ರತಿನಿಧಿ ವರದಿ ಕುಂದಾಪುರ : ನಾಡದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಆಯತಪ್ಪಿ ನೀರಿಗೆ ಬಿದ್ದ ಪರಿಣಾಮ ಸಮುದ್ರದಲ್ಲಿ ಸಾವನ್ನಪ್ಪಿದ್ದಾನೆ.  ಘಟನೆ ಮಂಗಳವಾರ ಕುಂಭಾಸಿ ಸಮೀಪದ ಕೊರವಡಿ ಸಮುದ್ರ ಕಿನಾರೆ ಬಳಿ ನಡೆದಿದೆ. ಮೃತ...

ಸ್ಥಳೀಯ

ಮಳೆಗಾಲದಲ್ಲಿ ಮನೆಯೊಳಗೆ `ಚಿಕ್ಕ ಮೇಳ’ ಆಟ

ವಾಸ್ತುದೋಷ ಪರಿಹಾರಕ್ಕೂ ಯಕ್ಷಗಾನ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಆಟಿ ತಿಂಗಳಲ್ಲಿ ಮನೆಮನೆಗೆ ಬರುವ ಆಟಿ ಕಳಂಜ ಮಾರಿ ಕಳೆದರೆ, ಭಾರೀ ಮಳೆಯ ನಡುವೆ ಮನೆ ಮನೆಗೆ ಬರುವ `ಚಿಕ್ಕ ಮೇಳ' ಮನೆಯೊಳಗಿನ ಸರ್ವದೋಷಗಳನ್ನೂ...

ಉಪ್ಪಿಗೆ ಉತ್ಸಾಹದಿಂದ ಪ್ರತಿಕ್ರಿಯಿಸಿದ ಅಭಿಮಾನಿಗಳು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸ್ಯಾಂಡಲ್ವುಡ್ ನಟ ಉಪೇಂದ್ರ ರಾಜಕೀಯಕ್ಕೆ ಧುಮುಕುವ ಆಸಕ್ತಿಯನ್ನು ಘೋಷಿದಂದಿನಿಂದ ಅಭಿಮಾನಿಗಳ ಉತ್ಸಾಹ-ಆಸಕ್ತಿಗಳೂ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ನಟ ಉಪ್ಪಿ ತನ್ನ ರುಪ್ಪಿ ರೆಸಾರ್ಟಿನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾಗ...

`ಮಿಸೆಸ್ ಪಾಪ್ಯುಲರ್ 2017′ ಪಡೆದ ನಗರದ ಸೌಜನ್ಯಾ ಹೆಗ್ಡೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ವಿಯೆಟ್ನಾಂನಲ್ಲಿ ಜುಲೈ 27ರಿಂದ ಆಗಸ್ಟ್ 4ರವರೆಗೆ ನಡೆದ ಮಿಸಸ್ ಇಂಡಿಯಾ ವಲ್ರ್ಡ್ ವೈಡ್ ಪೂರಕ ತರಬೇತಿ ಹಾಗೂ ಸ್ಪರ್ಧೆಯಲ್ಲಿ ಮಂಗಳೂರಿನ ಸೌಜನ್ಯಾ ಹೆಗ್ಡೆ 7ನೇ ಸ್ಥಾನ ಪಡೆಯುವುದರೊಂದಿಗೆ...

ಉಡುಪಿ ನಗರಕ್ಕೆ ಬೇಸಗೆ ವೇಳೆ ವಾರಾಹಿ ನೀರು : ಮಧ್ವರಾಜ್

ನಮ್ಮ ಪ್ರತಿನಿಧಿ ವರದಿ ಉಡುಪಿ : ``ಬಜೆ ಗ್ರಾಮದಲ್ಲಿ ವರಾಹಿ ನದಿಗೆ ನಿರ್ಮಿಸಲಾಗಿರುವ ಬಜೆ ಅಣೆಕಟ್ಟಿನಿಂದ ಬೇಸಗೆಕಾಲದ ವೇಳೆ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ'' ಎಂದು ಉಡುಪಿ...

ಇನ್ನಾ ಪಂಚಾಯತ್ ಸದಸ್ಯರು ಸಹಿತ ಕಾರ್ಕಳ ಯುವ ಕಾಂಗ್ರೆಸ್ಸಿಗರಿಂದ ರಸ್ತೆ ಗುಂಡಿಗಳಿಗೆ ಮುಕ್ತಿ

ಯುವಕರ ಉತ್ತಮ ಕಾರ್ಯಕ್ಕೆ ಭಾರೀ ಪ್ರಶಂಸೆ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಗ್ರಾಮ ಪಂಚಾಯಿತಿಗೆ ಅನುದಾನದ ಕೊರತೆ, ಜನಪ್ರತಿಧಿಗಳ ನಿರ್ಲಕ್ಷ್ಯ, ಹೊಂಡಮಯವಾದ ಇನ್ನಾ-ಸಾಂತೂರು ರಸ್ತೆ, ಈ ಸಮಸ್ಯೆಗೆ ಮುಕ್ತಿ ತೋರಿಸಿದವರು ಗ್ರಾ ಪಂ.ನ ಇಬ್ಬರು...

ಮಂಗಳೂರು ತಲುಪಿದ ರಿಕ್ಷಾ ಛಾಲೆಂಜ್ ರೈಡ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಜಗತ್ತಿನಾದ್ಯಂತದ ರಿಕ್ಷಾಗಳ ಭಾಗವಹಿಸುವಿಕೆಯೊಂದಿಗೆ `ಮುಂಬಯಿ ಎಕ್ಸಪ್ರೆಸ್ ರಿಕ್ಷಾ ಚಾಲೆಂಜ್ 2017' ಎಂಬ ವಿಶಿಷ್ಟವಾದ ರಿಕ್ಷಾಗಳ ಸಾಹಸ ಯಾತ್ರೆ ಮಂಗಳವಾರ ಮಂಗಳೂರಿಗೆ ತಲುಪಿದೆ. ರಿಕ್ಷಾ ಚಾಲೆಂಜ್ ಅಧಿಕಾರಿಗಳ ಸಹಯೋಗದೊಂದಿಗೆ ಮಂಗಳೂರು...

ನಿರ್ಗತಿಕರಿಗೆ ಊಟ ನೀಡಿದ ಅಂಗರಗುಂಡಿ ಯುವಕರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಆಗಸ್ಟ್ 15ರಂದು ಎಲ್ಲಾ ಕಡೆ ಧ್ವಜಾರೋಹಣ, ಭಾಷಣ, ಸಿಹಿ ತಿಂಡಿ ವಿತರಣೆ ನಡೆಯುತ್ತಿದ್ದರೆ, ಸುರತ್ಕಲ್ ಅಂಗರಗುಂಡಿಯ ಯುವಕರು ಬಡ, ನಿರ್ಗತಿಕರಿಗೆ ಊಟ ನೀಡಿ ಮಾನವೀಯತೆ ಮೆರೆದರು. ಅಂಗರಗುಂಡಿಯ ರಜ್ಜಾನ್...

ನೇತ್ರಾವತಿ ಉಳಿಸಲು ಪರಿಸರ ಹೋರಾಟಗಾರರಿಂದ ಪ್ರತ್ಯೇಕ ಪ್ರಾಧಿಕಾರ ರಚನೆಗೆ ಆಗ್ರಹ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪಶ್ಚಿಮಘಟ್ಟವನ್ನು ಉಳಿಸುವ ನಿಟ್ಟಿನಲ್ಲಿ ನೇತ್ರಾವತಿ ನದಿ ಹಾಗೂ ಪಶ್ಚಿಮಘಟ್ಟಕ್ಕೆ ರಾಜಕೀಯ ವ್ಯವಸ್ಥೆಯಿಂದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಹ್ಯಾದ್ರಿ ಸಂಚಯದ...

ಸುರತ್ಕಲ್ ಅಗರಿ ಎಂಟರಪ್ರೈಸಸಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಫರ್

ಮಂಗಳೂರು : ಮನೆ ಮಾತಾಗಿರುವ ಅಗರಿ ಎಂಟರಪ್ರೈಸಸ್ ಗ್ರಾಹಕರಿಗೆ ಪ್ರತೀ ತಿಂಗಳು ಹೊಸ ಹೊಸ ಆಫರುಗಳನ್ನು ಒದಗಿಸುತ್ತಾ ಬಂದಿದೆ. ರಂಜಾನ್ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರುಗಳ ಜೊತೆ ಖರೀದಿಗೆ ಉಚಿತ ಬಹುಮಾನಗಳು...

ಪ ವಲಯ ನೂತನ ಐಜಿಪಿಯಾಗಿ ನಿಂಬಾಳ್ಕರ್ ಅಧಿಕಾರ ಸ್ವೀಕಾರ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪಶ್ಚಿಮ ವಲಯ ಐಜಿಪಿಯಾಗಿ ಹೇಮಂತ್ ನಿಂಬಾಳ್ಕರ್ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮನ ಐಜಿಪಿ ಹರಿಶೇಖರನ್ ನೂತನ ಐಜಿಪಿಗೆ ಅಧಿಕಾರ ಹಸ್ತಾಂತರ ಮಾಡಿದರು. ``ಸಮಾಜದ ಸ್ವಾಸ್ಥ್ಯ ಕದಡುವ ಚಟುವಟಿಕೆಗಳಿಗೆ ಕಾನೂನು ರೀತಿಯಲ್ಲಿ...