Friday, August 18, 2017

ನೇಣು ಬಿಗಿದು ವೃದ್ಧ ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಮಣಿಪಾಲ ಸಮೀಪದ ಅಲೆವೂರು ಗ್ರಾಮದ ಪದವು ಸಿದ್ದಾರ್ಥನಗರ ನಿವಾಸಿ ಕುಡ್ಪ (75) ಮನೆವ ಬಳಿಯ ಶೀಲಾ ಎಂಬವರಿಗೆ ಸೇರಿದ ಜಾಗದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೈದ...

ರಸ್ತೆ ಹೊಂಡಗಳಲ್ಲಿ ಈಜಾಡಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಶೈಕ್ಷಣಿಕ ಕೇಂದ್ರವಾ ಗಿರುವ ಮಣಿಪಾಲದ ಸಿಂಡಿಕೇಟ್ ಸರ್ಕಲಿನಿಂದ ಎಂಐಟಿ ಜಂಕ್ಷನು ವರೆಗಿನ ರಸ್ತೆಯಲ್ಲಿ ಉಂಟಾಗಿರುವ ಬೃಹತ್ ಹೊಂಡಗಳ ವಿರುದ್ಧ ಇಲ್ಲಿನ ನಿವಾಸಿಗಳು ನಾಗರಿಕ ಹಿತರಕ್ಷಣಾ ವೇದಿಕೆ ಮುಂದಾಳತ್ವದಲ್ಲಿ...

ಚಿರತೆ ದಾಳಿ : ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ನಿರೀಕ್ಷೆಯಲ್ಲಿ ಗ್ರಾಮಸ್ಥರು

ಉಡುಪಿ : ಆಹಾರವನ್ನು ಹುಡುಕಿಕೊಂಡು ನಾಡಿನತ್ತ ಲಗ್ಗೆ ಇಟ್ಟು ಜನತೆಯಲ್ಲಿ ಭೀತಿ ಹುಟ್ಟಿಸುತ್ತಿರುವ ಚಿರತೆ ದಾಳಿಗೆ ಕಂಗಾಲಾಗಿರುವ ಜನತೆಗೆ ನೆಮ್ಮದಿ ಮೂಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇನ್ಮುಂದೆ ನಿಯಮಬದ್ಧವಾಗಿ ಕಾರ್ಯಾಚರಣೆ ನಡೆಸಲಿದ್ದಾರೆ...

ವಿಷಾನಿಲ ಹೊರಸೂಸುತ್ತಿರುವ ಕರ್ವಾಲಿನ ತ್ಯಾಜ್ಯ ಘಟಕ

ನಮ್ಮ ಪ್ರತಿನಿಧಿ ವರದಿ ಉಡುಪಿ : ಅಲೆವೂರಿನ ಕರ್ವಾಲಿನಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕ ಅದೆಷ್ಟು ವಿನಾಶಕಾರಿಯಾಗಹುದೆಂದರೆ ಒಂದು ಸಣ್ಣ ಕಿಡಿ ಕೂಡ ಇಲ್ಲಿ ಬೆಂಕಿಯ ಉಂಡೆಗಳನ್ನು ಉಗುಳಿ ವಿಷಕಾರಿ ಮಿಥೇನ್ ಅನಿಲ ಎಲ್ಲೆಡೆ ವ್ಯಾಪಿಸುವಂತೆ...

ಬಡರೋಗಿಗಳ ಆಶಾಕಿರಣ ವೆನ್ಲಾಕ್ ಆಸ್ಪತ್ರೆಯಲ್ಲಿ ಹಿಂದ್ ಲ್ಯಾಬ್ಸ್ ಎಂಆರೈ ಸ್ಕ್ಯಾನ್ ಸೆಂಟರ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬಡರೋಗಿಗಳ ಆಶಾಕಿರಣವಾಗಿರುವ ನಗರದ ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಮೆಷಿನುಗಳನ್ನು ಅಳವಡಿಸುವ ಮೂಲಕ ರೋಗಿಗಳಿಗೆ ಇನ್ನಷ್ಟು ಪರಿಣಾಮಕಾರಿಯಾದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ದಕ್ಷಿಣ ಕನ್ನಡ,...

ಉಡುಪಿಯ ಐತಿಹಾಸಿಕ ಮೈನ್ ಶಾಲೆ ವರ್ಗಾವಣೆಗೆ ವಿದ್ಯಾರ್ಥಿಗಳ ವಿರೋಧ

ನಮ್ಮ ಪ್ರತಿನಿಧಿ ವರದಿ ಉಡುಪಿ : ಐತಿಹಾಸಿಕ ಹಿನ್ನೆಲೆಯ ಮಹಾತ್ಮಾ ಗಾಂಧಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ವರ್ಗಾಯಿಸುವ ಜಿಲ್ಲಾಡಳಿತದ ನಿರ್ಧಾರವನ್ನು ವಿರೋಧಿಸಿ ಜಿಲ್ಲಾ ನಾಗರಿಕ ಸಮಿತಿ ಮುಂದಾಳತ್ವದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಉಡುಪಿ...

ಮರಳು ಗಣಿಗಾರಿಕೆಗೆ ಇನ್ನೂ ಅನುಮತಿ ಸಿಕ್ಕಿಲ್ಲ

ನಮ್ಮ ಪ್ರತಿನಿಧಿ ವರದಿ ಉಡುಪಿ : ಜಿಲ್ಲೆಯು ಇದೀಗ ಹಲವು ದಿನಗಳಿಂದ ಮರಳು ಕೊರತೆಯನ್ನು ಎದುರಿಸುತ್ತಿದ್ದರೂ ನಿಷೇಧಿತ ವಲಯಗಳಲ್ಲಿ ಮರಳು ಗಣಿಗಾರಿಕೆಗೆ ಕರ್ನಾಟಕ ಕರಾವಳಿ ವಲಯ ನಿರ್ವಹಣಾ ಸಮಿತಿಯು ಜಿಲ್ಲಾಡಳಿತಕ್ಕೆ ಇನ್ನೂ ಅನುಮತಿ ನೀಡಿಲ್ಲ. ಹಲವು...

ವಂದಾರು ಗ್ರಾಮಸ್ಥರಿಗೆ ಚಿರತೆ ದಾಳಿಯ ಭಯ

ನಮ್ಮ ಪ್ರತಿನಿಧಿ ವರದಿ ಕುಂದಾಪುರ : ತಾಲೂಕಿನ ವಂದಾರು ಗ್ರಾಮಸ್ಥರು ಚಿರತೆ ದಾಳಿಯ ಭೀತಿಯಲ್ಲಿ ದಿನಗಳೆಯುತ್ತಿದ್ದಾರೆ. ಈ ಹಳ್ಳಿಯಲ್ಲಿ ಚಿರತೆಗಳು ಅಡ್ಡಾಡುತ್ತಿರುವುದು ಕಂಡುಬಂದಿದೆ. ವಂದಾರು ಗ್ರಾಮದಲ್ಲಿ ಇತ್ತೀಚೆಗೆ ಜನನಿಬಿಡ ಪ್ರದೇಶದ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ...

ಉಡುಪಿ : ಪ್ರಚಾರದಲ್ಲಿರದ ತಾಣಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಯತ್ನ

ನಮ್ಮ ಪ್ರತಿನಿಧಿ ವರದಿ ಉಡುಪಿ : ಉಡುಪಿ ಜಿಲ್ಲೆ ಕರಾವಳಿ ಪ್ರವಾಸೋದ್ಯಮದ ಕೇಂದ್ರಬಿಂದುವಾಗಿದ್ದು, ಪ್ರಕೃತಿ ದಯೆಯಿರುವ ಇದು ಇನ್ನೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಂಡಿಲ್ಲ. ಜಿಲ್ಲೆಯ ಇತರೆರಡು ತಾಣಗಳಂತೆ ಉಳಿದ ಪ್ರವಾಸಿ ತಾಣಗಳು ಜಾಹೀರುಗೊಂಡಿಲ್ಲ. ಭವಿಷ್ಯದಲ್ಲಿ...

ಪ್ರಾಥಮಿಕ ಶಿಕ್ಷಣ ಮಂಡಳಿಗಾಗಿ ಪ್ರೈಮರಿ ಶಾಲಾ ಶಿಕ್ಷಕರ ಬೇಡಿಕೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಪ್ರಾಥಮಿಕ ಶಿಕ್ಷಣ ಮಂಡಳಿ ಅಸ್ಥಿತ್ವಕ್ಕೆ ಒತ್ತಾಯಿಸಿ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಪ್ರತಿಭಟನೆ ನಡೆಸಿತು. ಪ್ರಾಥಮಿಕ ಶಿಕ್ಷಣ ಮಂಡಳಿ ಅಸ್ಥಿತ್ವಕ್ಕೆ ತರಬೇಕು, ಹಳೆಯ...

ಸ್ಥಳೀಯ

ಮಳೆಗಾಲದಲ್ಲಿ ಮನೆಯೊಳಗೆ `ಚಿಕ್ಕ ಮೇಳ’ ಆಟ

ವಾಸ್ತುದೋಷ ಪರಿಹಾರಕ್ಕೂ ಯಕ್ಷಗಾನ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಆಟಿ ತಿಂಗಳಲ್ಲಿ ಮನೆಮನೆಗೆ ಬರುವ ಆಟಿ ಕಳಂಜ ಮಾರಿ ಕಳೆದರೆ, ಭಾರೀ ಮಳೆಯ ನಡುವೆ ಮನೆ ಮನೆಗೆ ಬರುವ `ಚಿಕ್ಕ ಮೇಳ' ಮನೆಯೊಳಗಿನ ಸರ್ವದೋಷಗಳನ್ನೂ...

ಉಪ್ಪಿಗೆ ಉತ್ಸಾಹದಿಂದ ಪ್ರತಿಕ್ರಿಯಿಸಿದ ಅಭಿಮಾನಿಗಳು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸ್ಯಾಂಡಲ್ವುಡ್ ನಟ ಉಪೇಂದ್ರ ರಾಜಕೀಯಕ್ಕೆ ಧುಮುಕುವ ಆಸಕ್ತಿಯನ್ನು ಘೋಷಿದಂದಿನಿಂದ ಅಭಿಮಾನಿಗಳ ಉತ್ಸಾಹ-ಆಸಕ್ತಿಗಳೂ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ನಟ ಉಪ್ಪಿ ತನ್ನ ರುಪ್ಪಿ ರೆಸಾರ್ಟಿನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾಗ...

`ಮಿಸೆಸ್ ಪಾಪ್ಯುಲರ್ 2017′ ಪಡೆದ ನಗರದ ಸೌಜನ್ಯಾ ಹೆಗ್ಡೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ವಿಯೆಟ್ನಾಂನಲ್ಲಿ ಜುಲೈ 27ರಿಂದ ಆಗಸ್ಟ್ 4ರವರೆಗೆ ನಡೆದ ಮಿಸಸ್ ಇಂಡಿಯಾ ವಲ್ರ್ಡ್ ವೈಡ್ ಪೂರಕ ತರಬೇತಿ ಹಾಗೂ ಸ್ಪರ್ಧೆಯಲ್ಲಿ ಮಂಗಳೂರಿನ ಸೌಜನ್ಯಾ ಹೆಗ್ಡೆ 7ನೇ ಸ್ಥಾನ ಪಡೆಯುವುದರೊಂದಿಗೆ...

ಉಡುಪಿ ನಗರಕ್ಕೆ ಬೇಸಗೆ ವೇಳೆ ವಾರಾಹಿ ನೀರು : ಮಧ್ವರಾಜ್

ನಮ್ಮ ಪ್ರತಿನಿಧಿ ವರದಿ ಉಡುಪಿ : ``ಬಜೆ ಗ್ರಾಮದಲ್ಲಿ ವರಾಹಿ ನದಿಗೆ ನಿರ್ಮಿಸಲಾಗಿರುವ ಬಜೆ ಅಣೆಕಟ್ಟಿನಿಂದ ಬೇಸಗೆಕಾಲದ ವೇಳೆ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ'' ಎಂದು ಉಡುಪಿ...

ಇನ್ನಾ ಪಂಚಾಯತ್ ಸದಸ್ಯರು ಸಹಿತ ಕಾರ್ಕಳ ಯುವ ಕಾಂಗ್ರೆಸ್ಸಿಗರಿಂದ ರಸ್ತೆ ಗುಂಡಿಗಳಿಗೆ ಮುಕ್ತಿ

ಯುವಕರ ಉತ್ತಮ ಕಾರ್ಯಕ್ಕೆ ಭಾರೀ ಪ್ರಶಂಸೆ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಗ್ರಾಮ ಪಂಚಾಯಿತಿಗೆ ಅನುದಾನದ ಕೊರತೆ, ಜನಪ್ರತಿಧಿಗಳ ನಿರ್ಲಕ್ಷ್ಯ, ಹೊಂಡಮಯವಾದ ಇನ್ನಾ-ಸಾಂತೂರು ರಸ್ತೆ, ಈ ಸಮಸ್ಯೆಗೆ ಮುಕ್ತಿ ತೋರಿಸಿದವರು ಗ್ರಾ ಪಂ.ನ ಇಬ್ಬರು...

ಮಂಗಳೂರು ತಲುಪಿದ ರಿಕ್ಷಾ ಛಾಲೆಂಜ್ ರೈಡ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಜಗತ್ತಿನಾದ್ಯಂತದ ರಿಕ್ಷಾಗಳ ಭಾಗವಹಿಸುವಿಕೆಯೊಂದಿಗೆ `ಮುಂಬಯಿ ಎಕ್ಸಪ್ರೆಸ್ ರಿಕ್ಷಾ ಚಾಲೆಂಜ್ 2017' ಎಂಬ ವಿಶಿಷ್ಟವಾದ ರಿಕ್ಷಾಗಳ ಸಾಹಸ ಯಾತ್ರೆ ಮಂಗಳವಾರ ಮಂಗಳೂರಿಗೆ ತಲುಪಿದೆ. ರಿಕ್ಷಾ ಚಾಲೆಂಜ್ ಅಧಿಕಾರಿಗಳ ಸಹಯೋಗದೊಂದಿಗೆ ಮಂಗಳೂರು...

ನಿರ್ಗತಿಕರಿಗೆ ಊಟ ನೀಡಿದ ಅಂಗರಗುಂಡಿ ಯುವಕರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಆಗಸ್ಟ್ 15ರಂದು ಎಲ್ಲಾ ಕಡೆ ಧ್ವಜಾರೋಹಣ, ಭಾಷಣ, ಸಿಹಿ ತಿಂಡಿ ವಿತರಣೆ ನಡೆಯುತ್ತಿದ್ದರೆ, ಸುರತ್ಕಲ್ ಅಂಗರಗುಂಡಿಯ ಯುವಕರು ಬಡ, ನಿರ್ಗತಿಕರಿಗೆ ಊಟ ನೀಡಿ ಮಾನವೀಯತೆ ಮೆರೆದರು. ಅಂಗರಗುಂಡಿಯ ರಜ್ಜಾನ್...

ನೇತ್ರಾವತಿ ಉಳಿಸಲು ಪರಿಸರ ಹೋರಾಟಗಾರರಿಂದ ಪ್ರತ್ಯೇಕ ಪ್ರಾಧಿಕಾರ ರಚನೆಗೆ ಆಗ್ರಹ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪಶ್ಚಿಮಘಟ್ಟವನ್ನು ಉಳಿಸುವ ನಿಟ್ಟಿನಲ್ಲಿ ನೇತ್ರಾವತಿ ನದಿ ಹಾಗೂ ಪಶ್ಚಿಮಘಟ್ಟಕ್ಕೆ ರಾಜಕೀಯ ವ್ಯವಸ್ಥೆಯಿಂದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಹ್ಯಾದ್ರಿ ಸಂಚಯದ...

ಸುರತ್ಕಲ್ ಅಗರಿ ಎಂಟರಪ್ರೈಸಸಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಫರ್

ಮಂಗಳೂರು : ಮನೆ ಮಾತಾಗಿರುವ ಅಗರಿ ಎಂಟರಪ್ರೈಸಸ್ ಗ್ರಾಹಕರಿಗೆ ಪ್ರತೀ ತಿಂಗಳು ಹೊಸ ಹೊಸ ಆಫರುಗಳನ್ನು ಒದಗಿಸುತ್ತಾ ಬಂದಿದೆ. ರಂಜಾನ್ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರುಗಳ ಜೊತೆ ಖರೀದಿಗೆ ಉಚಿತ ಬಹುಮಾನಗಳು...

ಪ ವಲಯ ನೂತನ ಐಜಿಪಿಯಾಗಿ ನಿಂಬಾಳ್ಕರ್ ಅಧಿಕಾರ ಸ್ವೀಕಾರ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪಶ್ಚಿಮ ವಲಯ ಐಜಿಪಿಯಾಗಿ ಹೇಮಂತ್ ನಿಂಬಾಳ್ಕರ್ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮನ ಐಜಿಪಿ ಹರಿಶೇಖರನ್ ನೂತನ ಐಜಿಪಿಗೆ ಅಧಿಕಾರ ಹಸ್ತಾಂತರ ಮಾಡಿದರು. ``ಸಮಾಜದ ಸ್ವಾಸ್ಥ್ಯ ಕದಡುವ ಚಟುವಟಿಕೆಗಳಿಗೆ ಕಾನೂನು ರೀತಿಯಲ್ಲಿ...