Friday, February 24, 2017

ಹೊನ್ನಾವರ ಕೋರ್ಟಿಗೆ `ಬಿ’ ರಿಪೋರ್ಟ್ ಸಲ್ಲಿಸಿದ ಸಿಐಡಿ

ಶಾಸ್ತ್ರಿ ದಂಪತಿಯಿಂದ ಸ್ವಾಮಿಗೆ ಬ್ಲ್ಯಾಕ್ಮೇಲ್ ಪ್ರಕರಣ ಹೊನ್ನಾವರ : ರಾಮಚಂದ್ರಾಪುರ ಮಠದ ರಾಮಕಥಾ ಗಾಯಕಿ ಪ್ರೇಮಲತಾ ಹಾಗೂ ದಿವಾಕರ ಶಾಸ್ತ್ರಿ ಮೇಲಿನ ಬ್ಲಾಕ್ಮೇಲ್ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳ ತಂಡ ಬುಧವಾರ ಹೊನ್ನಾವರ ಜೆಎಂಎಫ್ಸಿ...

ಹರಾಜಿನಲ್ಲಿ ಉಳಿದವರ ತಂಡ ಕಟ್ಟಿದರೆ ?

ನಾವಿಲ್ಲಿ ಮಾರಾಟವಾಗದೆ ಉಳಿದ ಆಟಗಾರರ ಒಂದು ತಂಡವನ್ನು ರಚಿಸಲು ಪ್ರಯತ್ನಿಸಿದ್ದೇವೆ. ಇವರು ಉಳಿದವರಲ್ಲಿ ಉತ್ತಮರು. ಪ್ರತೀ ವರ್ಷದಂತೆ 2017ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲೂ ಡ್ರಾಮಾ, ಗೊಂದಲ ಮತ್ತು ಉದ್ರೇಕದ ಬಿಡ್ಡಿಂಗ್ ಮತ್ತು...

ಸಮತೋಲಿತ ವೀಸಾ ನಿಲುವು ಲೇಸು : ಟ್ರಂಪಿಗೆ ಮೋದಿ ಸಲಹೆ

ನವದೆಹಲಿ : ತಮ್ಮ ದೇಶದ ಹಿತಾಸಕ್ತಿಯನ್ನು ರಕ್ಷಿಸುವ ನೆಪದಲ್ಲಿ ಭಾರತದ ಪ್ರತಿಭಾವಂತ ವೃತ್ತಿಪರರ ಅಮೇರಿಕಾ ಪ್ರವೇಶಕ್ಕೆ ತಡೆ ಹೇರಬಾರದೆಂದು ಪ್ರಧಾನಿ ನರೇಂದ್ರ ಮೋದಿ  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸ್ಪಷ್ಟ ಸಂದೇಶ...

ಮಲ್ಯ ಗಡಿಪಾರು: ಭಾರತದ ಮನವಿಗೆ ಬ್ರಿಟನ್ ಸಮ್ಮತಿ?

ನವದೆಹಲಿ : ಬ್ಯಾಂಕುಗಳಿಗೆ ಸಾವಿರಾರು ಕೋಟಿ ಸಾಲ ಮರು ಪಾವತಿಸದೇ ಲಂಡನ್ನಿನಲ್ಲಿ ನೆಲಸಿರುವ ಉದ್ಯಮಿ ವಿಜಯ್ ಮಲ್ಯ ಗಡಿಪಾರು ವಿಚಾರದಲ್ಲಿ ಭಾರತವು ಮಾಡಿರುವ ಮನವಿಗೆ ಬ್ರಿಟನ್ ಧನಾತ್ಮಕವಾಗಿ ಸ್ಪಂದಿಸಿದೆಯೆಂದು ವರದಿಯಾಗಿದೆ. ಜತೆಗೆ, ಐಪಿಎಲ್ ಹಗರಣದಲ್ಲಿ...

49 ಅನಾಥರ ಶವಸಂಸ್ಕಾರ ನಡೆಸಿದ ಉಡುಪಿ ಸಾಮಾಜಿಕ ಕಾರ್ಯಕರ್ತರು

ಉಡುಪಿ : ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ಸಾಮಾಜಿಕ ಕಾರ್ಯಕರ್ತರ ಶ್ರಮದಾನದ ಸಹಕಾರದೊಂದಿಗೆ ಸುಮಾರು 32 ವರ್ಷದ ಅಪರಿಚಿತ ಯುವಕನ ಶವಸಂಸ್ಕಾರ ಉಡುಪಿ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ನೆರವೆರಿಸಿದರು. ಇದರೊಂದಿಗೆ ವಿಶು ಶೆಟ್ಟಿ...

ಬುಂಡೇಲಖಂಡದ ಗ್ರಾಮಗಳ ಹೆಸರಿಗೂ ಜಾತಿ ಕಳಂಕ

``ನನ್ನ ಗ್ರಾಮದ ಹೆಸರು ನನ್ನ ಪಾಲಿಗೆ ಶಾಪವಿದ್ದಂತೆ. ನನ್ನ ಜಾತಿಯನ್ನು ನಾನು ಅಡಗಿಸಬಹುದು. ಆದರೆ ನನ್ನ ಗ್ರಾಮದ ಹೆಸರು ಹೇಳಿದೊಡನೆ ನನ್ನನ್ನು ನಿಂದಿಸಲಾಗುತ್ತದೆ'' ಎಂದು ಚಾಮರಸೇನ ಗ್ರಾಮದ ಯುವ ನಿವಾಸಿಯೊಬ್ಬರು ವಿಷಾದದಿಂದ ನುಡಿಯುತ್ತಾರೆ. ಝಾನ್ಸಿ...

ಈ ಬಾರಿ ಫೆಬ್ರುವರಿಯಲ್ಲೇ ಖಾಸಗಿ ನೀರಿನ ಟ್ಯಾಂಕರು ನಿರ್ವಾಹಕರ ಬಿಸ್ನೆಸ್ ಹೆಚ್ಚಳ

ಬೆಂಗಳೂರು : ನಗರದಲ್ಲಿ ಈ ಬಾರಿ ಫೆಬ್ರುವರಿಯಲ್ಲೇ ಬಿಸಿಲಿನ ತಾಪ ಮಿತಿಮೀರಿದ್ದು, ನೀರಿನ ದಾಹ ಅಧಿಕವಾಗಿದೆ. ಮಾತ್ರವಲ್ಲ ಜನರ ಬೇಡಿಕೆಗೆ ತಕ್ಕ  ನೀರಿನ ಪೂರೈಕೆ ಕೂಡ ಇಲ್ಲದಾಗಿದೆ. ಪರಿಣಾಮ ನೀರು ಪೂರೈಸುವ ಖಾಸಗಿ...

ತಮ್ಮ ಜಮೀನಿನಲ್ಲಿರುವ ಗಂಧದ ಮರ ಮಾಹಿತಿ ಬಹಿರಂಗಪಡಿಸುತ್ತಿರುವ ಖಾಸಗಿ ಭೂ ಮಾಲಕರು

ಮೈಸೂರು : ರಾಜ್ಯ ಸರಕಾರವು ಶ್ರೀಗಂಧದ ಮರಗಳನ್ನು ಖಾಸಗಿ ಜಮೀನಿನಲ್ಲೂ ಬೆಳೆಸುವುದಕ್ಕೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಸಡಿಲಗೊಳಿಸಿದ ಬಳಿಕ ಇದೀಗ ತಮ್ಮ ಜಮೀನಿನಲ್ಲಿ ಬೆಳೆಸಲಾಗಿರುವ ಶ್ರೀಗಂಧದ ಮರ ಹಾಗೂ ಕಟಾವಿಗೆ ಸಿದ್ಧವಾಗಿರುವ ಮರಗಳ...

ಕಾಲಿಯಾ ರಫೀಕ್ ಹತ್ಯೆ : ಇನ್ನೊಬ್ಬ ಆರೋಪಿ ವಶಕ್ಕೆ

ಬಂಧಿತರ ಸಂಖ್ಯೆ 5ಕ್ಕೇರಿಕೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕುಖ್ಯಾತ ರೌಡಿ, 45ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳ ಆರೋಪಿ ಕಾಲಿಯಾ ರಫೀಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೊಬ್ಬ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು...

ಆಸ್ಪತ್ರೆಗೆ ಒಯ್ಯಲು ಅಂಬುಲೆನ್ಸ್ ಇಲ್ಲ, ಸ್ಕೂಟರಲ್ಲಿ ಯುವತಿ ಮೃತ

ಬೆಂಗಳೂರು : ವಿಷಮ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಾತು ಬಾರದ ಮತ್ತು ಕಿವಿ ಕೇಳಿಸದ 20 ವರ್ಷದ ಯುವತಿಯೊಬ್ಬಳನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲೆಯ ಸ್ಥಳೀಯ ಸರ್ಕಾರಿ ಆಸ್ಪತ್ರೆಯಿಂದ...

ಸ್ಥಳೀಯ

ವಾರ್ಸಿಟಿ ಕಾಲೇಜು ಸ್ಕಾರ್ಪ್ ವಿವಾದ ಅಂತ್ಯ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸುವ ವಿಚಾರದಲ್ಲಿ ನಡೆಯುತ್ತಿದ್ದ ಪರಸ್ಪರ ವಾಗ್ವಾದವನ್ನು ಕಾಲೇಜಿನ ಆಡಳಿತ ಮಂಡಳಿ ಇದೀಗ ಸೌಹಾರ್ದಯುತವಾಗಿ ಬಗೆಹರಿಸಿದೆ.  ಮಾ 2ರಿಂದ ಕಾಲೇಜು...

14 ಬಾಂಗ್ಲಾ ಪ್ರಜೆಗಳ ಬಂಧನ

ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಘಟನೆ ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಯಾವುದೇ ಪೌರತ್ವದ ದಾಖಲೆಗಳಿಲ್ಲದೆ ಅಕ್ರಮ ವಾಸ್ತವ್ಯ ಹೊಂದಿದ್ದ 14 ವಿದೇಶಿ ಪ್ರಜೆಗಳನ್ನು ವೇಣೂರು ಪೊಲೀಸರು ಬುಧವಾರ ಬಂಧಿಸಿದ್ದು, ಜಿಲ್ಲೆಯ ಇತಿಹಾಸದಲ್ಲಿಯೇ ಇಂಥ ಪ್ರಕರಣ...

ಬೆಂಗಳೂರಿಗೆ ಅಕ್ರಮ ಮರಳು ಸಾಗಾಟಕ್ಕೆ ಬೆಂಬಲಿಸಿದ ಹೊಸಬೆಟ್ಟು ಪಂಚಾಯತ್

ಜೆಡಿಎಸ್ ಮುಖಂಡ ಆರೋಪ ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ``ಹೊಸಬೆಟ್ಟು ಪಂಚಾಯತಿನಲ್ಲಿ ಆದಾಯ ಕಡಿಮೆ ಇದೆ. ತೆರಿಗೆ ಪರಿಷ್ಕರಣೆ ಅನಿವಾರ್ಯ ಎಂದು ಅಧ್ಯಕ್ಷರು ಹೇಳಿದ್ದಾರೆ. ಈ ಪಂಚಾಯತ್ ವ್ಯಾಪ್ತಿಯಲ್ಲಿ ಅವ್ಯಾಹತ ಮರಳು ಕಳ್ಳ ವ್ಯಾಪಾರ...

ಕಾನತ್ತೂರು ನಾಲ್ವರ್ ದೈವಸ್ಥಾನ ಮೊರೆ ಹೋದ ಬಾರ್ ಮಾಲಿಕ

ಸುಳ್ಯಪದವು ದಲಿತ ವ್ಯಕ್ತಿ ಸಾವು ಪ್ರಕರಣ ಪುತ್ತೂರು : ಸುಳ್ಯಪದವಿನಲ್ಲಿ ವಿನ್ಯಾಸ್ ಬಾರ್ ಸಮೀಪದ ಜಗುಲಿಯಲ್ಲಿ ತಿಂಗಳುಗಳ ಹಿಂದೆ ದಲಿತ ವ್ಯಕ್ತಿ ಕೇಶವ ಎಂಬವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂಬುವುದು ಸುಳ್ಳು ಮಾಹಿತಿಯಾಗಿದ್ದು, ಬಾರ್ ಕೆಲಸದಾಳುಗಳೇ...

ಕ್ರಷರ್ ಲಾರಿಗಳ ಅಟ್ಟಹಾಸ ; ಮಾಡತ್ತಡ್ಕ ರಸ್ತೆ ದುರವಸ್ಥೆ

ಬ್ಯಾನರಲ್ಲಿ ಉಗ್ರ ಪ್ರತಿಭಟನೆ ಎಚ್ಚರಿಕೆ ನಮ್ಮ ಪ್ರತಿನಿಧಿ ವರದಿ ವಿಟ್ಲ : ಕ್ರಷರ್ ಲಾರಿಗಳ ಅಟ್ಟಹಾಸದಿಂದ ಎಕ್ಕುಟ್ಟಿ ಹೋಗಿರುವ ಚಂದಳಿಕೆ-ಮಾಡತ್ತಡ್ಕ ಸಂಪರ್ಕ ರಸ್ತೆಯ ಅಭಿವೃದ್ಧಿಗಾಗಿ ಸ್ಪಂದಿಸದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಲು ಸಾರ್ವಜನಿಕರು...

ತೆಂಗಿನ ಮರದಿಂದ ಕೆಂಡಕ್ಕೆ ಬಿದ್ದ ಪಾತ್ರಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಭೂತದ ಕೋಲದ ಉತ್ಸವದ ಸಂದರ್ಭದಲ್ಲಿ ತೆಂಗಿನ ಮರದಿಂದ ಕೆಂಡದ ರಾಶಿಗೆ ಬಿದ್ದು, ಗಂಭೀರ ಗಾಯಗೊಂಡಿದ್ದ ಸುಮೇಶ್ (38) ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇರಳದ ಕಣ್ಣೂರು ಜಿಲ್ಲೆಯ ಅಳಿಕೋಡಿ...

ದನ ಸಾಗಾಟದ ಮಾಹಿತಿ ಇಲ್ಲ ಸಂಘಟನೆ ಪ್ರತಿಕ್ರಿಯೆ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಹೆಜಮಾಡಿ ಡಾಬದ ಬಳಿ ಪತ್ತೆಯಾಗಿದೆ ಎನ್ನಲಾದ ದನಗಳನ್ನು ತುಂಬಿಸಿಟ್ಟಿದ್ದ ಪಿಕಪ್ ವಾಹನದ ಬಗ್ಗೆ ನಮ್ಮ ಸಂಘಟನೆಯ ಯಾವೊಬ್ಬ ಸದಸ್ಯರಿಗೂ ಯಾರೂ ಮಾಹಿತಿ ನೀಡಿಲ್ಲ ಎಂಬುದಾಗಿ ಬಜರಂಗದಳ ಕಾಪು...

ನಾಗರಿಕರಿಂದ ಗ್ರಾಮ ಪಂಚಾಯತಿಗೆ ಮುತ್ತಿಗೆ

ಕಟಪಾಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಬೋರ್ವೆಲ್ಲಿನಿಂದ ನೀರೆತ್ತದಂತೆ ಸ್ಥಳೀಯರೊಬ್ಬರು ಆಕ್ಷೇಪ ವ್ಯಕ್ತಪಡಿಸಿರುವುದರ ವಿರುದ್ಧ ಕಟಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೆ ಎನ್ ನಗರದ ನಾಗರಿಕರು ಬುಧವಾರ ಗ್ರಾಮ...

ನೀರಿನ ಸಮಸ್ಯೆ : ಮುಲ್ಕಿ ನಗರ ಪಂಚಾಯತಿ ವಿರುದ್ಧ ಆಕ್ರೋಶ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇಲ್ಲಿನ ನಗರ ಪಂಚಾಯತಿ ವ್ಯಾಪ್ತಿಯ ಗೇರುಕಟ್ಟೆ ಬಳಿ ಹಲವಾರು ವರ್ಷಗಳಿಂದ ನೀರಿನ ಸಮಸ್ಯೆ ಕಾಡುತ್ತಿದ್ದರೂ ಪಂಚಾಯತಿ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಪಂಚಾಯತಿ ಆಡಳಿತದ ವಿರುದ್ಧ ಆಕ್ರೋಶ...

`ಸ್ಮಾರ್ಟ್ ರಸ್ತೆ’ಯಾಗಲಿದೆ ಪಿವಿಎಸ್-ಲೇಡಿಹಿಲ್ ರೋಡ್

ಪಾಲಿಕೆ ಬಜೆಟ್ಟಿನಲ್ಲಿ ಮಂಡನೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಹಾನಗರ ಪಾಲಿಕೆಯ 2017-18ನೇ ಸಾಲಿನ ಬಜೆಟ್ ಮಂಡನೆ ಮಂಗಳವಾರ ನಡೆದಿದ್ದು, ಪಿವಿಎಸ್ ವೃತ್ತದಿಂದ ಲೇಡಿಹಿಲ್ಲಿನವರೆಗಿನ ರಸ್ತೆಯನ್ನು ಸ್ಮಾರ್ಟ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಪ್ರಸ್ತಾವನೆ ಮಂಡಿಸಲಾಗಿದೆ. ತೆರಿಗೆ,...