Saturday, January 20, 2018

ಉದ್ಘಾಟನೆಗೊಂಡರೂ ಕಾರ್ಯಾರಂಭಿಸದ ದೆಂಜಿಪ್ಪಾಡಿ ಪುನರ್ ವಸತಿ ಕೇಂದ್ರ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ ಎಂಬಲ್ಲಿ ಕುಟಂಬವೊಂದು ದಾನವಾಗಿ ನೀಡಿದ ಮನೆಯಲ್ಲಿ ನಿವೃತ್ತ ಮುಸ್ಲಿಂ ಅಧಿಕಾರಿಗಳ ಸಂಘದಿಂದ ಸ್ಥಾಪಿತಗೊಂಡ ಪುನರ್ ವಸತಿ ಕೇಂದ್ರವೊಂದು ಉದ್ಘಾಟನೆಗೊಂಡು ಎರಡು ತಿಂಗಳಾಗುತ್ತಾ...

ಬೆಳ್ತಂಗಡಿಯಲ್ಲಿ ದುಬಾರಿ ಬೆಲೆಯ ಖಾಸಗಿ ಕಲ್ಯಾಣಮಂಟಪಕ್ಕೆ ಬದಲು ಪುರಭವನ ನಿರ್ಮಿಸಲು ಆಗ್ರಹ

ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ತಾಲೂಕು ಕೇಂದ್ರದಲ್ಲಿ ಸದ್ಯದಲ್ಲಿಯೇ ಸುಸಜ್ಜಿತ ಮಿನಿವಿಧಾನ ಸೌಧವೂ ಉದ್ಘಾಟನೆಯಾಗಲಿದ್ದು ಸಂಘ-ಸಂಸ್ಥೆಗಳಿಗೆ, ಸಾಂಸ್ಕøತಿಕ, ಧಾರ್ಮಿಕ ಶುಭ ಸಮಾರಂಭ ಹಾಗೂ ಸರಕಾರಿ ಕಾರ್ಯಕ್ರಮಗಳಿಗೂ ಜನಸಾಮಾನ್ಯರಿಗೂ ಕೈಗೆಟಕುವ ಕಡಿಮೆ ಬಾಡಿಗೆಯಲ್ಲಿ ಲಭ್ಯವಾಗಲು...

ಕುಳಾಯಿಯ `ಬಗ್ಗುಂಡಿ’ ಕೆರೆ ಅಭಿವೃದ್ಧಿಗೆ ಚಿಂತನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಹಾಗೂ ಇತರ ಬೃಹತ್ ಉದ್ಯಮಗಳು ಸ್ಥಳೀಯ ಪ್ರದೇಶಾಭಿವೃದ್ಧಿಗಾಗಿ ನೀಡಿರುವ ಹಣಕಾಸಿನಿಂದ ಕುಳಾಯಿಯಲ್ಲಿರುವ ಬಗ್ಗುಂಡಿ ಕೆರೆ ಅಭಿವೃದ್ಧಿಗೊಳಿಸಲಾಗುವುದು ಎಂದು ದ...

ಕಲ್ಲುಕ್ವಾರಿ ವಿರುದ್ಧ ಕ್ರಮಕೈಗೊಳ್ಳದ ಅಧಿಕಾರಿಗಳಿಗೆ ಗ್ರಾಮಸ್ಥರ ತರಾಟೆ

ನಮ್ಮ ಪ್ರತಿನಿಧಿ ವರದಿ ಕುಂದಾಪುರ : ಗಣಿ ಅಧಿಕಾರಿಗಳು ಕಲ್ಲುಕ್ವಾರಿಗೆ ದಾಳಿ ನಡೆಸಿದ ಸಂದರ್ಭ ದೂರುದಾರರಿಂದಲೇ ಅಧಿಕಾರಿಗಳು ಛೀಮಾರಿ ಹಾಕಿಸಿಕೊಂಡ ಘಟನೆ ಶನಿವಾರ ಯಡ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗರಿಕೆಮಠದ ಕಲ್ಲುಕ್ವಾರಿಯಲ್ಲಿ ನಡೆದಿದೆ. ಗಣಿ ಇಲಾಖೆ...

ಕಟ್ಟಡ ನಿರ್ಮಾಣ ಸಂಸ್ಥೆ ವಿರುದ್ಧ ವಂಚನೆ ದೂರು

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಕಾರ್ಕಳದ ಸಾಲ್ಮರ ಎಂಬಲ್ಲಿ ನಿರ್ಮಾಣವಾಗುತ್ತಿಉವ ಸಮೃದ್ಧಿ ಹಿಲ್ಸ್ ಎಂಬ ವಾಣಿಜ್ಯ ಹಾಗೂ ವಸತಿ ಸಂಕೀರ್ಣದ ನಿರ್ಮಾಣ ಸಂಸ್ಥೆಯಾಗಿರುವ ಸ್ಟ್ರೆಕೋನ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಸಂಸ್ಥೆಯ ಮಾಲಿಕ ಸುರೇಶ್...

ರಕ್ಷಿತಾರಣ್ಯಕ್ಕೆ ಬೆಂಕಿಯಿಟ್ಟ ಕಿಡಿಗೇಡಿಯ ಬೈಕ್ ಪತ್ತೆ

ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯಕ್ಕೆ ಬೆಂಕಿಯಿಟ್ಟ ಕಿಡಿಗೇಡಿಯ ಬೈಕ್ ಪತ್ತೆಯಾಗಿದ್ದು, ಪರಾರಿಯಾದ ಆರೋಪಿಗಾಗಿ ಶೋಧ ನಡೆಯುತ್ತಿದೆ. ಕಳೆಂಜಿಮಲೆ ರಕ್ಷಿತಾರಣ್ಯದ ಅನಿಲಕಟ್ಟೆಯ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು...

ದರೋಡೆಕೋರ ಸೆರೆ, 6 ಮಂದಿ ಪರಾರಿ

ಹೆದ್ದಾರಿಯಲ್ಲಿ ಆಯುಧಗಳನ್ನು ಹಿಡಿದು ಸಂಚು ಹೂಡಿದ್ದ ತಂಡ ನಮ್ಮ ಪ್ರತಿನಿಧಿ ವರದಿ ಪುತ್ತೂರು : ನಡುರಾತ್ರಿ ಹೆದ್ದಾರಿ ಬದಿಯಲ್ಲಿ ಆಯುಧಗಳನ್ನು ಹಿಡಿದು ವಾಹನ ಚಾಲಕರ ದರೋಡೆಗೆ ಸಂಚು ನಡೆಸುತ್ತಿದ್ದ ತಂಡವನ್ನು ಸಂಪ್ಯ ಪೊಲೀಸರ ತಂಡ ಅಟ್ಟಾಡಿಸಿದ್ದು,...

ಐವರು ಗಂಭೀರ, 12 ಪ್ರಯಾಣಿಕರು ಆಸ್ಪತ್ರೆಗೆ

ಸಾರಡ್ಕ ಚೆಕ್ಪೋಸ್ಟ್ ಬಳಿ ಲಾರಿ -ಬಸ್ ಮುಖಾಮುಖಿ ನಮ್ಮ ಪ್ರತಿನಿಧಿ ವರದಿ ವಿಟ್ಲ : ಭಾರೀ ಸರಕು ಸಾಗಾಟದ ಲಾರಿ ಮತ್ತು ಕೇರಳ ಸಾರಿಗೆಯ ಮಲಬಾರ್ ಬಸ್ ಸಾರಡ್ಕ ಚೆಕ್ಪೋಸ್ಟ್ ಸಮೀಪ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ...

ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಮಹಿಳೆ ಸಾವು

ನಮ್ಮ ಪ್ರತಿನಿಧಿ ವರದಿ ಕುಂದಾಪುರ : ಚಲಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಯೊಬ್ಬರು ರಸ್ತೆಗೆಸೆಯಲ್ಪಟ್ಟು ಸಾವನ್ನಪ್ಪಿದ ಘಟನೆ ಶಂಕರ ನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಹಾಲಾಡಿ ಸಮೀಪದ ಹೈಕಾಡಿ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಸಾವನ್ನಪ್ಪಿದ...

ರಿಕ್ಷಾ ಚಾಲಕನ ಮಗನಿಗೆ ವಾರ್ಸಿಟಿ ಚಿನ್ನದ ಪದಕ ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಿಕ್ಷಾ ಚಾಲಕರಾಗಿ ಜೀವನ ಸಾಗಿಸುತ್ತಿದ್ದ 55 ವರ್ಷದ ಹಸೈನಾರ್ ಇಂದು ತನ್ನ ಮಗನ ಸಾಧನೆಯಿಂದ ಹೆಮ್ಮೆಯಿಂದ ಉಬ್ಬಿ ಹೋಗಿದ್ದಾರೆ. ಹಸೈನಾರ್ ಮಗ ಮುಸ್ತಾಫ ಕೆ ಎಚ್ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಥಮ...

ಸ್ಥಳೀಯ

ಇನ್ನೊಬ್ಬ ಹಿಂದೂ ಮುಖಂಡ ಬಂಧನ

ರೇಷ್ಮಾ ಕಿಡ್ನಾಪ್ ಪ್ರಕರಣ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅನ್ಯಧರ್ಮೀಯ ಯುವಕನನ್ನು ಪ್ರೀತಿಸಿ ಮದುವೆಯಾಗಿ ಮುಂಬಯಿಗೆ ಪರಾರಿಯಾಗಿದ್ದ ಹಿಂದೂ ಸಂಘಟನೆ ಮುಖಂಡನ ಪುತ್ರಿ ರೇಷ್ಮಾ ಪ್ರಕರಣಕ್ಕೆ ಸಂಬಂಧಿಸಿ ಮುಂಬಯಿ ಪೊಲೀಸರು ಹಿಂದೂ ಸಂಘಟನೆಯ ಇನ್ನೊಬ್ಬ...

ಕಣ್ಣೂರಿನಲ್ಲಿ ಎಬಿವಿಪಿ ಕಾರ್ಯಕರ್ತ ಹತ್ಯೆ

ಕಾಸರಗೋಡು : ಮುಸುಕುಧಾರಿ ದುಷ್ಕರ್ಮಿಗಳ ತಂಡವೊಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ಯ ಕಾರ್ಯಕರ್ತನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆಗೈದು ಪರಾರಿಯಾಗಿದೆ. ಕಣ್ಣೂರಿನ ಪೆರವೂರ್‍ನಲ್ಲಿ ಈ ಕೃತ್ಯ ನಡೆದಿದ್ದು, ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿ ಶ್ಯಾಮ್...

ಕರಾವಳಿಯಲ್ಲಿ ನಡೆಯುತ್ತಿದೆ ಕೋಮುದ್ವೇಷ ಬಿತ್ತನೆ ಕಾರ್ಯ

ವಿಶೇಷ ವರದಿ ಮಂಗಳೂರು : ಜಿಲ್ಲೆಯಲ್ಲಿ ಮುಖ್ಯವಾಗಿ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹಲವಾರು ನೈತಿಕ ಪೊಲೀಸಗಿರಿ ಘಟನೆಗಳ ನಂತರದ ಬೆಳವಣಿಗೆಯೆಂಬಂತೆ ಕಳೆದ ಕೆಲ ದಿನಗಳಿಂದ ಪರಿವಾರ ಸಂಘಟನೆಗಳು, ಮುಖ್ಯವಾಗಿ ಬಜರಂಗದಳವು ಲವ್ ಜಿಹಾದ್...

ಕೆಐಒಸಿಎಲ್ಲಿನಲ್ಲಿ ದೀಪಕ್ ಸಹೋದರಗೆ ನೌಕರಿ : ಸಚಿವ ಹೆಗಡೆ ಭರವಸೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕುದ್ರೆಮುಖ ಕಬ್ಬಿಣದ ಅದಿರು ಕಂಪೆನಿಯಲ್ಲಿ (ಕೆಐಒಸಿಎಲ್) ಇತ್ತೀಚೆಗೆ ಕಾಟಿಪಳ್ಳದಲ್ಲಿ ಕೊಲೆಗೀಡಾದ ದೀಪಕ್ ರಾವ್ ಸಹೋದರ ಸತೀಶಗೆ ಉದ್ಯೋಗ ನೀಡವುದಾಗಿ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ...

ಶಾಲೆಯ ಆವರಣ ಬೇಲಿ ಕಿತ್ತೆಸೆದ ಅಧಿಕಾರಿಗಳು

ಬೆಂಗರೆ ನಾಗರಿಕ ಒಕ್ಕೂಟ ಪ್ರತಿಭಟನೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೆಂಗರೆಯ ಕಸಬಾ ಪ್ರದೇಶದಲ್ಲಿ ಇಸ್ಲಾಮಿಕ್ ವೆಲ್ಫೇರ್ ಸೆಂಟರ್ ಅಧೀನದ ಎ ಆರ್ ಕೆ ಹೈಯರ್ ಪ್ರೈಮರಿ ಶಾಲೆಯ ಆವರಣ ಬೇಲಿಯನ್ನು ಅಧಿಕಾರಿಗಳು ಧ್ವಂಸಗೊಳಿಸಿರುವುದನ್ನು...

ಎರಡು ಶಾಲೆಗಳ ಮಧ್ಯಾಹ್ನ ಊಟದ ನಿಲುಗಡೆ : ಜಿಲ್ಲಾ ಪಂಚಾಯತ್ ಸಭೆಯಲ್ಲಿ ಭಾರೀ ವಾಗ್ವಾದ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಲ್ಲಡ್ಕ ಶ್ರೀರಾಮ ವಿದ್ಯಾಲಯ ಮತ್ತು ಪುಣಚ ಶ್ರೀದೇವಿ ಹೈಸ್ಕೂಲಿಗೆ ಮಧ್ಯಾಹ್ನದ ಊಟ ರದ್ದುಪಡಿಸಿದ್ದು ಗುರುವಾರ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆಗೆ...

ಇಂದಿನಿಂದ ಶಿರಾಡಿ ಘಾಟಿ ರಸ್ತೆಯಲ್ಲಿ ಎರಡನೇ ಹಂತದ ಕಾಮಗಾರಿ ; ವಾಹನ ಸಂಚಾರ ನಿಷೇಧ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು-ಬೆಂಗಳೂರು ರೂಟಿನ ಶಿರಾಡಿ ಘಾಟಿ ರಸ್ತೆಯ ಎರಡನೇ ಹಂತದ(ಎನ್ ಎಚ್-75) ಅಭಿವೃದ್ಧಿ ಕಾಮಗಾರಿಗೆ ಸಿದ್ಧತೆ ನಡೆಯುತ್ತಿದ್ದು, ಇಂದಿನಿಂದ (ಜನವರಿ 20) ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಅಭಿವೃದ್ಧಿ...

ಸಿಮೆಂಟ್ ಶೀಟಿನ ಗೂಡಿನಲ್ಲೂ ಜೇನು ಕೃಷಿ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಪ್ರಗತಿಪರ ಕೃಷಿಕರೊಬ್ಬರು ಸಿಮೆಂಟ್ ಶೀಟಿನಲ್ಲಿ ಜೇನುಗೂಡನ್ನು ತಯಾರಿಸುವ ಮೂಲಕ ಯಶಸ್ವಿಕಂಡಿದ್ದು, ಮರದ ಪೆಟ್ಟಿಗೆಗೆ ಇನ್ನು ಜೇನು ಕೃಷಿಕರು ಆಶ್ರಯಿಸಬೇಕಿಲ್ಲ ಮತ್ತು ಮರದ ಪೆಟ್ಟಿಗೆಯಲ್ಲಿ ಮಾತ್ರ ಜೇನು ಸಂಸಾರ...

ಪಲಿಮಾರಿನಲ್ಲಿ ತ್ಯಾಜ್ಯಕ್ಕೆ ಬೆಂಕಿ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚರ್ಚ್ ಒಂದರ ಮುಂಭಾಗ ಶೇಖರಣೆ ಮಾಡಲಾದ ತ್ಯಾಜ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ. ಚರ್ಚ್ ಮುಂಭಾಗದಲ್ಲಿ ಬೃಹತ್...

ವಾಹನ ಪಲ್ಲಕ್ಕಿಯಲ್ಲಿ 4, ಭಕ್ತರ ಪಲ್ಲಕ್ಕಿಯಲ್ಲಿ ಇಬ್ಬರು ಸ್ವಾಮಿಗಳು

ಪರ್ಯಾಯ ಉತ್ಸವ ಮೆರವಣಿಗೆ ನಮ್ಮ ಪ್ರತಿನಿಧಿ ವರದಿ ಉಡುಪಿ : ಪರ್ಯಾಯ ಉತ್ಸವದ ಅಂಗವಾಗಿ ಗುರುವಾರ ನಡೆದ ಪರ್ಯಾಯ ಉತ್ಸವ ಮೆರವಣಿಗೆಯಲ್ಲಿ ವಾಹನದ ಮೇಲೆ ಇರಿಸಲಾಗಿದ್ದ ಪಲ್ಲಕ್ಕಿಯಲ್ಲಿ ನಾಲ್ಕು ಸ್ವಾಮಿಗಳು ಮತ್ತು ಭಕ್ತರು ಹೊತ್ತೊಯ್ಯುವ ಪಲ್ಲಕ್ಕಿಯಲ್ಲಿ...