Friday, October 20, 2017

ಮಡೆಸ್ನಾನ ನಿಷೇಧಿಸಿದರೆ ಕುಕ್ಕೆಯಲ್ಲಿ ಚಂಪಾಷಷ್ಠಿ ಬಹಿಷ್ಕಾರ

ಮಲೆಕುಡಿಯರಿಂದ ಎಚ್ಚರಿಕೆ  ನಮ್ಮ ಪ್ರತಿನಿಧಿ ವರದಿ ಮಂಗಳೂರು : ರಾಜ್ಯ ಸರ್ಕಾರದ ಮೌಢ್ಯ ವಿರೋಧಿ ಕಾಯ್ದೆಯಡಿ `ಮಡೆಸ್ನಾನ' ನಿಷೇಧಕ್ಕೆ ಕರಾವಳಿ ಬುಡಕಟ್ಟು ಜನಾಂಗವಾದ ಮಲೆಕುಡಿಯರು ವಿರೋಧ ವ್ಯಕ್ತಪಡಿಸಿದ್ದು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ವರ್ಷ ಚಂಪಾ...

ವೃದ್ಧಗೆ 9 ಲಕ್ಷ ರೂ ವಂಚನೆ ಆರೋಪ ಮೂವರ ವಿರುದ್ಧ ಕೇಸು

ನಮ್ಮ ಪ್ರತಿನಿಧಿ ವರದಿ ಉಡುಪಿ : ವೃದ್ಧರೊಬ್ಬರಿಂದ 9 ಲಕ್ಷ ರೂಪಾಯಿ ಹಣ ಪಡೆದು ವಾಪಾಸು ನೀಡದೇ ವಂಚಿಸಿದ ಮೂವರು ಆರೋಪಿಗಳ ವಿರುದ್ಧ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ನಗರದ ಪೂರ್ಣಪ್ರಜ್ಞ ಕಾಲೇಜು (ಪಿಪಿಸಿ) ಹಿಂಬದಿ...

ಇಬ್ಬರ ಜಗಳದಿಂದ ಎಲ್ಲಾ ಪಟಾಕಿ ಅಂಗಡಿ ತೆರವು

ಕಾಪುದಲ್ಲಿ ಪಟಾಕಿ ಠುಸ್ ಪಡುಬಿದ್ರಿ : ಪಟಾಕಿ ಅಂಗಡಿ ಇಡುವ ಸ್ಥಳದ ಬಗ್ಗೆ ಇಬ್ಬರಲ್ಲಿ ಮಾತಿನ ಚಕಮಕಿ ನಡೆದು ಅಂತಿಮವಾಗಿ ಎಲ್ಲಾ ಹನ್ನೆರಡು ಪಟಾಕಿ ಅಂಗಡಿಗಳು ತೆರವುಗೊಳಿಸಬೇಕಾದ ಅನಿವಾರ್ಯ ಸ್ಥಿತಿ ಕಾಪುವಿನಲ್ಲಿ ನಡೆಯಿತು. ಶಿರ್ವ ಮೂಲದ...

ಡಿಸೆಂಬರಿಂದ ಇಂಡಿಗೋ ಪ್ರಾದೇಶಿಕ ಸೇವೆ ಆರಂಭ

 ನಮ್ಮ ಪ್ರತಿನಿಧಿ ವರದಿ ಮಂಗಳೂರು : ಇಂಡಿಗೋ ವಿಮಾನ ಸಂಸ್ಥೆಯು ಪ್ರಾದೇಶಿಕ ಮಾರುಕಟ್ಟೆಗೆ ಲಗ್ಗೆ ಇಡುವ ಬಗ್ಗೆ ಮಂಗಳವಾರ ಪ್ರಕಟಣೆ ಹೊರಡಿಸಿತು. ಈ ಕಂಪೆನಿಯ ಎಟಿಆರ್ ವಿಮಾನಗಳು ಹೈದರಾಬಾದ್, ಮಂಗಳೂರು, ಮಧುರೈ ಮತ್ತು ನಾಗ್ಪುರ...

ಪಡುಬಿದ್ರಿ ಬಾರ್ ಮುಚ್ಚುವವರೆಗೆ ಹೋರಾಟ : ಲೋಕೇಶ್ ಕಂಚಿನಡ್ಕ

 ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಮೂರು ತಿಂಗಳ ಹಿಂದೆ ನಡೆದ ಪಡುಬಿದ್ರಿ ಗ್ರಾಮಸಭೆಯಲ್ಲಿ, ವಿವಾದಿತ ಬಾರಿಗೆ ಪಡುಬಿದ್ರಿ ಗ್ರಾಮ ಪಂಚಾಯಿತಿ ನೀಡಿದ ಎನ್ನೊಸಿಯನ್ನು ರದ್ದುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದರಿಂದ, ನೀಡಿದ ಎನ್ನೊಸಿ ರದ್ದುಗೊಳಿಸಿದ್ದಲ್ಲದೆ ಅಬಕಾರಿ...

ಮುಲ್ಕಿ ತಹಶೀಲ್ದಾರ್ ಕಚೇರಿ ಅವಸ್ಥೆಗೆ ಸ್ಥಳೀಯರ ಆಕ್ರೋಶ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕಳೆದ 10 ದಿನಗಳಿಂದ ಮುಲ್ಕಿ ತಹಶೀಲ್ದಾರ್ ಕಚೇರಿಯಲ್ಲಿ ಕೆಲಸಕ್ಕಾಗಿ ಬರುವ ನಾಗರಿಕರು ಕಚೇರಿಯಲ್ಲಿನ ಅವ್ಯವಸ್ಥೆ ಬಗ್ಗೆ ತೀವ್ರ ಆಕ್ರೋಶಗೊಂಡಿದ್ದಾರೆ. ಆಧಾರ್ ಕಾರ್ಡ್ ಮಾಡಲೆಂದು ಬರುವ ನಾಗರಿಕರು ಕಳೆದ 10...

ನಗರ ಜೈಲಿನಲ್ಲಿ ಹೋಂ ಗಾರ್ಡುಗಳಿಗೆ 3 ತಿಂಗಳಿನಿಂದ ಸಂಬಳವಿಲ್ಲ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಮಂಗಳೂರು ಜೈಲು ಇದೀಗ ಇನ್ನೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಕಳೆದ ಮೂರು ತಿಂಗಳಿನಲ್ಲಿ ಮೂವರು ಜೈಲು ಅಧೀಕ್ಷಕರನ್ನು ವರ್ಗಾವಣೆಗೊಳಿಸಿ ಜೈಲಿನ ಭದ್ರತೆ...

ಸಚಿವ ರೈ, ಶಾಸಕಿ ಶೆಟ್ಟಿಗೆ ಅವಮಾನ ಮಾಡಿದ ಬಿಜೆಪಿ ಜಿಲ್ಲಾಧ್ಯಕ್ಷನ ವಿರುದ್ಧ ಕಾಂಗ್ರೆಸ್ ದೂರು

ನಮ್ಮ ಪ್ರತಿನಿಧಿ ವರದಿ ವಿಟ್ಲ : ಮರಳು ಸಮಸ್ಯೆ ಬಗ್ಗೆ ಬಿಜೆಪಿ ನಡೆಸಿದ್ದ ಸತ್ಯಾಗ್ರಹ ಸಂದರ್ಭ ಉಸ್ತುವಾರಿ ಸಚಿವರು ಮತ್ತು ಶಾಸಕಿಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಮಠಂದೂರು ಅವಮಾನ ಮಾಡಿದ್ದಾರೆಂದು ಆರೋಪಿಸಿ ವಿಟ್ಲ ಕಾಂಗ್ರೆಸ್...

ರಾಜ್ಯ ಸರ್ಕಾರ ಪರೋಕ್ಷವಾಗಿ ಗೋ ಹಂತಕರ ಪ್ರಚೋದಿಸುತ್ತಿದೆ : ಸುನಿಲ್

ನಮ್ಮ ಪ್ರತಿನಿಧಿ ವರದಿ ಉಡುಪಿ : ರಾಜ್ಯ ಸರ್ಕಾರವು ಗೋರಕ್ಷಣೆ ನಿಟ್ಟಿನಲ್ಲಿ ಕರಾರುವಕ್ಕಾಗಿಲ್ಲ, ಹಾಗಾಗಿ ಪರೋಕ್ಷವಾಗಿ ಗೋಹತ್ಯೆ ಪ್ರಚೋದಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು. ಅವರು ನವೆಂಬರ್ 24 ಮತ್ತು...

ಭಟ್ಕಳ ಗ್ರಾಮೀಣದಲ್ಲಿ ಮಂಗಗಳ ಕಾಟದಿಂದ ರೈತರು ಕಂಗಾಲು

ನಮ್ಮ ಪ್ರತಿನಿಧಿ ವರದಿ ಭಟ್ಕಳ : ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮಂಗಗಳ ಕಾಟದಿಂದ ರೈತರು ಕಂಗಾಲಾಗಿದ್ದಾರೆ. ತೋಟದಲ್ಲಿನ ಬೆಳೆಗಳನ್ನು ತಿನ್ನಲು ಬರುವ ಮಂಗಗಳನ್ನು ಓಡಿಸುವುದೇ ರೈತರ ಕೆಲಸವಾಗಿ ಬಿಟ್ಟಿದೆ. ತಾಲೂಕಿನ ಮಾರೂಕೇರಿ, ಕೋಣಾರ, ಹಾಡುವಳ್ಳಿ, ಕೊಪ್ಪ...

ಸ್ಥಳೀಯ

ನಗರ ಜೈಲಿನಲ್ಲಿ ಸಹ ಕೈದಿಗಳಿಂದ ಕುಖ್ಯಾತ ಕೈದಿಗಳಿಗೆ ಮಸಾಜ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರಿನ ಕಾರಾಗೃಹದೊಳಗೆ ಇರುವ ಕೆಲವು ವಿಚಾರಣಾಧೀನ ಕೈದಿಗಳು ತಮ್ಮ ಸಹಕೈದಿಗಳಿಂದ ಬಲವಂತವಾಗಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯಗಳು ಇದೀಗ ವೈರಲ್ ಆಗಿದೆ. ಹೊಡೆದಾಟ, ಬಡಿದಾಟಗಳಿಂದಲೇ ಗುರುತಿಸಿಕೊಂಡಿರುವ, ಜೋಡಿಕೊಲೆಗೂ ಕಾರಣವಾಗಿ ಸುದ್ದಿಯಲ್ಲಿರುವ...

ಚರಂಡಿಗೆ ಇಳಿದು ಅಮಾನವೀಯ ರೀತಿಯಲ್ಲಿ ಮ್ಯಾನ್ ಹೋಲಿನಲ್ಲಿ ಕೆಲಸದ ಚಿತ್ರ ವೈರಲ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಯಾವುದೇ ಕಾರಣಕ್ಕೂ ಪೌರ ಕಾರ್ಮಿಕರನ್ನು ಮ್ಯಾನ್ ಹೋಲುಗಳಿಗೆ ಇಳಿಸಿ ಕೆಲಸ ಮಾಡಿಸಬಾರದು ಎನ್ನುವ ಕಾನೂನು ಇದ್ದರೂ ಕೂಡಾ ಮಂಗಳೂರಿನಲ್ಲಿ ಮತ್ತೆ ಪೌರ ಕಾರ್ಮಿಕರನ್ನು ಇದೇ ರೀತಿ ದುಡಿಸುತ್ತಿರುವುದು...

ಗಾಂಜಾ ಸೇವಿಸುತ್ತಿದ್ದ ಏಳು ಮಂದಿ ಅರೆಸ್ಟ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಗಾಂಜಾ ಸೇವನೆನಿರತರಾಗಿದ್ದ ಏಳು ಮಂದಿ ಯುವಕರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದುಕೊಂಡಿದ್ದಾರೆ. ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಜ್ಜೋಡಿ ಎರಡನೇ ಕ್ರಾಸ್ ರಸ್ತೆಯ...

`ಮಂಗಳೂರನ್ನು ಸೌಹಾರ್ದ ತಾಣವನ್ನಾಗಿಸಲು ಬದ್ಧ’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಶಾಂತಿ ಸೌಹಾರ್ದತೆಯ ಬೀಡಾಗಿರುವ ಮಂಗಳೂರು ಸರ್ವಧರ್ಮದ ನಾಡು. ಇತ್ತೀಚಿನ ಹಲವು ವರ್ಷಗಳಲ್ಲಿ ಇಲ್ಲಿನ ಕೋಮುವಾದಿ ಶಕ್ತಿಗಳು ಮಂಗಳೂರನ್ನು ಪ್ರಯೋಗ ಶಾಲೆಯನ್ನಾಗಿಸಿ, ಕೋಮುಜ್ವಾಲೆಯನ್ನು ಹಬ್ಬಿಸುತ್ತಿದ್ದಾರೆ. ತುಳುನಾಡಿನ ಸಂಸ್ಕøತಿಯನ್ನೇ ನಾಶ...

5ನೇ, 6ನೇ ಸೆಮೆಸ್ಟರಿನಲ್ಲಿ ಅನುತ್ತೀರ್ಣಗೊಂಡವರಿಗೆ ವಾರ್ಸಿಟಿ ಹೊಸ ನಿಯಮ

 ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ನಿರ್ಣಯವೊಂದನ್ನು ಬದಿಗಿರಿಸಿರುವ ಮಂಗಳೂರು ವಿಶ್ವವಿದ್ಯಾಲಯ, ಐದನೇ ಮತ್ತು ಆರನೇ ಸೆಮೆಸ್ಟರ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ಪದವಿ ವಿದ್ಯಾರ್ಥಿಗಳಿಗೆ ಅವರು ಅನುತ್ತೀರ್ಣಗೊಂಡಿರುವ ವಿಷಯಗಳ...

ದಕ್ಷಿಣ ಕನ್ನಡ ನೂತನ ಡೀಸಿ ಸೆಂಥಿಲ್ ಅಧಿಕಾರ ಸ್ವೀಕಾರ

ನಮ್ಮ ಪ್ರತಿನಿಧಿ ವರದಿ ಮ0ಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಸಿಕಾಂತ್ ಸೆಂಥಿಲ್ ಎಸ್ ಗುರುವಾರ ಅಧಿಕಾರ ಸ್ವೀಕರಿಸಿದರು. ಪ್ರಭಾರ ಜಿಲ್ಲಾಧಿಕಾರಿ ಕುಮಾರ್ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ...

ಎಲ್ಲಾ ಭಾಷೆಗೂ ಸಮಾನ ಪ್ರಾಧಾನ್ಯತೆ ದೊರೆಯಲಿ : ಎರಿಕ್ ಒಝಾರಿಯೋ

ಹಿಂದಿ  ಹೇರಿಕೆಗೆ ಅಪಸ್ವರ ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಒಂದು ಭಾಷೆ, ಒಂದು ಸಾಹಿತ್ಯ, ಒಂದು ಸಮಾಜ ಹಾಗೂ ಕೊನೆಯದಾಗಿ ಒಂದು ಧರ್ಮದೆಡೆಗೆ ಸಾಗುವ ಪ್ರಯತ್ನದ ಭಾಗವಾಗಿ ಕೇಂದ್ರ ಸರಕಾರ ಹಿಂದಿಯನ್ನು ಹೇರುವ ಪ್ರಯತ್ನ ನಡೆಸುತ್ತಿದೆ''...

ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಕಾಪು ವಲಯ ಫೋಟೋಗ್ರಾಫರ್ಸ್

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಕಾಪು ವಲಯ ಫೋಟೋಗ್ರಾಫರ್ಸ್ ಸದಸ್ಯರು ಬಂಟಕಲ್ಲಿನ ಜಯ ಸೃತಿ ಧಾಮ ಆಶ್ರಮದ ಮಕ್ಕಳೊಂದಿಗೆ ಸಿಹಿ ತಿಂಡಿ ವಿನಿಮಯ ಮಾಡಿಕೊಂಡು, ಪಟಾಕಿ ಸಿಡಿಸಿ ದೀಪಾವಳಿಯನ್ನು ಅರ್ಥಗರ್ಭಿತವಾಗಿ ಆಚರಿಸಿದರು. ಈ ಸಂದರ್ಭ...

ಅಗರಿ ಎಂಟರಪ್ರೈಸಸಿನಲ್ಲಿ ದೀಪಾವಳಿ ಹಬ್ಬದ ಕೊಡುಗೆ

ಮಂಗಳೂರು : ಅವಿಭಜಿತ ದ ಕ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಗುಣಮಟ್ಟದ ಸೇವೆಯಲ್ಲಿ ಮನೆ ಮಾತಾಗಿರುವ ಎಲೆಕ್ಟ್ರಾನಿಕ್ಸ್ ಹಾಗೂ ಗೃಹಪಯೋಗಿ ಉತ್ಪನ್ನಗಳ ಬೃಹತ್ ಮಾರಾಟ ಮಳಿಗೆಯಾದ ಅಗರಿ ಎಂಟರಪ್ರೈಸಸಿನಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರಿಗೆ...

ಭತ್ತದ ಗದ್ದೆ ನಾಶ

ಕಾರವಾರ : ಕಳೆದ 2 ದಿನಗಳಿಂದ ಸುರಿದ ಭಾರೀ ಮಳೆಗೆ ಅಮದಳ್ಳಿಯ ಬಾಳೆರಾಶಿಯಲ್ಲಿ ಹಳ್ಳದ ನೀರು ಉಕ್ಕಿ ಭತ್ತದ ಗದ್ದೆಗೆ ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಬಾಳೆರಾಶಿ ನಿವಾಸಿ ರೈತ ಥಾಕು ದೇವಾ...