Saturday, October 21, 2017

ಹುಬ್ಬಳ್ಳಿಯಲ್ಲಿ ಎಮ್ಮೆಯೊಂದಿಗೆ ಪ್ರತಿಭಟನೆ, ಮರವೇರಿ ಕುಳಿತ ಕನ್ನಡ ಹೋರಾಟಗಾರ

ಹುಬ್ಬಳ್ಳಿ : ನಗರದ ಸಂಗ್ರಾಮ ಸೇನೆ ಕಾರ್ಯಕರ್ತರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಎದುರು ಎಮ್ಮೆಯೊಂದಿಗೆ ಗುರುವಾರ ಪ್ರತಿಭಟನೆ ನಡೆಸಿದರು. ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದು, ನಡೆಯುತ್ತಿರುವ ಕಾಮಗಾರಿಗಳಿಂದ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಎರಡು ವರ್ಷಗಳಿಂದ...

ಹೆದ್ದಾರಿ ಡಿನೋಟಿಫೈ ಸಮರ್ಥಿಸಿದ ಸೀಎಂ

ಬೆಂಗಳೂರು : ರಾಜ್ಯದ ನಗರ ಸ್ಥಳೀಯ ಆಡಳಿತಗಳ ವ್ಯಾಪ್ತಿಯ ಪ್ರದೇಶಗಳ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಕೆಲವು ಭಾಗವನ್ನು ಡಿನೋಟಿಫೈ ಮಾಡಲು ತನ್ನ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಸೀಎಂ ಸಿದ್ದರಾಮಯ್ಯ ಬಲವಾಗಿ...

ಪುತ್ರಿಯ ಅತ್ಯಾಚಾರ ; ಮಗುವಿಗೆ ಜನ್ಮ : ಆರೋಪಿ ತಂದೆ ಬಂಧನ

ಹುಣಸೂರು : ಅತ್ಯಾಚಾರ ಮಾಡಿ ಅಪ್ರಾಪ್ತ ಪುತ್ರಿ ಗರ್ಭವತಿಯಾಗಿ ಮಗುವೊಂದಕ್ಕೆ ಜನ್ಮ ನೀಡಲು ಕಾರಣನಾದ ಆರೋಪಿ ತಂದೆಯನ್ನು ಪೊಲೀಸರು ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ. 14 ವರ್ಷದ ಬಾಲಕಿ ಇತ್ತೀಚೆಗೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ...

ಒಂದು ತಿಂಗಳಲ್ಲಿ ಆನೆಗೆ ನಾಲ್ಕನೆ ಬಲಿಯಾದವಗೆ 5 ಲಕ್ಷ ರೂ ಪರಿಹಾರ

ಸದನದಲ್ಲಿ ರಮಾನಾಥ ರೈ ಬೆಂಗಳೂರು : ಹಾಸನದ ಸಕಲೇಶಪುರದ ಹೊಂಕರವಳ್ಳಿಯಲ್ಲಿ ಹೆಣ್ಣಾನೆಯೊಂದು ಮರಿ ಹಾಕುತ್ತಿದ್ದಾಗ ಚಿತ್ರೀಕರಿಸಲು ಹೋದ ಕಾಫಿ ತೋಟದ ಮಾಲಿಕನ ಮೇಲೆ ಆನೆಗಳು ದಾಳಿ ಮಾಡಿದ ಕಾರಣ ಆತ ಮೃತಪಟ್ಟಿದ್ದಾನೆ. ಆಲೂರಿನ ಹೈದೂರು ಗ್ರಾಮದ...

ಮಗ ಫೇಲಾಗಿದ್ದಕ್ಕೆ ಅಮ್ಮ ನೇಣಿಗೆ

 ಬೆಂಗಳೂರು : ಪರೀಕ್ಷೆಯಲ್ಲಿ ಫೇಲಾಗುವ ಭಯದಿಂದ ಪ್ರತೀ ವರ್ಷ ಹಲವು ವಿದ್ಯಾರ್ಥಿಗಳು ಪ್ರಾಣಕಳೆದುಕೊಳ್ಳುತ್ತಾರೆ. ಕೆಲವರು ಫಲಿತಾಂಶಕ್ಕೆ ಮೊದಲು ಆತ್ಮಹತ್ಯೆ ಮಾಡಿಕೊಂಡರೆ, ಇನ್ನು ಕೆಲವರು ಫಲಿತಾಂಶದ ನಂತರ ಆ ಕೆಲಸಕ್ಕೆ ಕೈ ಹಾಕುತ್ತಾರೆ. ಆದರೆ...

ಸಹೋದರಿಯ ಗಂಡನ ಕೊಂದು ರಿಕ್ಷಾ ಖರೀದಿ ಸಾಲ ಪಾವತಿಸಿದ !

ಮೈಸೂರು : ಆಟೋ ಚಾಲಕನೊಬ್ಬ ತಾನು ಖರೀದಿಸಿದ ರಿಕ್ಷಾ ಸಾಲದ ಕಂತು ಪಾವತಿಸಲು ಸಹೋದರಿ ಗಂಡನನ್ನೇ ಕೊಲೆ ಮಾಡಿದ ಘಟನೆ ಮೈಸೂರಿನ ಕೃಷ್ಣರಾಜನಗರ ತಾಲೂಕಿನಿಂದ ವರದಿಯಾಗಿದೆ. ಇತ್ತೀಚೆಗಷ್ಟೆ ಮದುವೆಯಾಗಿದ್ದ ಸಹೋದರಿ ಗಂಡನ ಮೈಮೇಲಿದ್ದ...

`ಪ್ರಾಮಾಣಿಕತೆಯಿಂದ ಕರ್ತವ್ಯ ಮಾಡಿದ್ದಕ್ಕಾಗಿ ಮಗ ಕೊಲೆಯಾದ’

ಅನುರಾಗ್ ತಿವಾರಿ ಹೆತ್ತವರ ಅಳಲು ಬೆಂಗಳೂರು : ``ನಮ್ಮ ಪುತ್ರ ರಾಜ್ಯದಲ್ಲಿ ಸುಮಾರು 10 ವರ್ಷ ಸೇವೆ ಸಲ್ಲಿಸಿದ ಹೊರತಾಗಿಯೂ ಇಲ್ಲಿಯ ತನಕ ಕರ್ನಾಟಕ ಸರಕಾರದಿಂದ ಯಾರು ಕೂಡ ನಮಗೆ ಕರೆ ಮಾಡಿ ಸಾಂತ್ವನ...

ರಾಜ್ಯದಲ್ಲಿ ನಕ್ಸಲ್ ಚಳುವಳಿ ಅವನತಿ

ಚಿಕ್ಕಮಗಳೂರು : ಮಲೆನಾಡು ಪ್ರಾಂತ್ಯದಲ್ಲಿ ಸಕ್ರಿಯರಾಗಿದ್ದರೆನ್ನಲಾದ ಇಬ್ಬರು ಮಹಿಳೆಯರೂ ಸೇರಿದಂತೆ ಮೂವರು ಶಂಕಿತ ನಕ್ಸಲರ ಶರಣಾಗತಿಯಿಂದ 2010ರಿಂದೀಚೆಗೆ ರಾಜ್ಯದಲ್ಲಿ ಶಸ್ತ್ರಾಸ್ತ್ರ ತ್ಯಜಿಸಿದ ನಕ್ಸಲರ ಸಂಖ್ಯೆ 13ಕ್ಕೇರಿದೆ. ಇದರೊಂದಿಗೆ ರಾಜ್ಯದಲ್ಲಿನ ನಕ್ಸಲ್ ಚಳುವಳಿ ತನ್ನ...

ಕುರುಬ ಮುಖಂಡರ ಸಭೆಯಲ್ಲಿ ಅಸಭ್ಯ ಮಾತುಗಳನ್ನಾಡಿದ ಕಾಗಿನೆಲೆ ಸ್ವಾಮಿ

ವೈರಲ್ ಆದ ಧ್ವನಿಮುದ್ರಿಕೆ ; ಮಠದಿಂದ ಕ್ಷಮೆ ಕೋರಿಕೆ ದಾವಣಗೆರೆ :  ಹರಿಹರ ತಾಲೂಕಿನ ಬೆಳ್ಳೂಡಿ ಕಾಗಿನೆಲೆ ಶಾಖಾ ಗುರಪೀಠದ ನಿರಂಜನಾನಂದಪುರಿ ಸ್ವಾಮಿ ಇತ್ತೀಚೆಗೆ ಮಠದಲ್ಲಿ ನಡೆದ ಕುರುಬ ಸಮುದಾಯ ಮುಖಂಡರ ಸಭೆಯೊಂದರಲ್ಲಿ ಅಸಭ್ಯ ...

ಬೆಂಗಳೂರಲ್ಲಿ ಅಮಿತ್ ಶಾಗೆ ವಾಸಕ್ಕೆ ಒಳ್ಳೆಯ ಮನೆ ಬೇಕಂತೆ

ಬೆಂಗಳೂರು : ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ  ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ `ಮಿಷನ್ 150' ಗುರಿ ಸಾಧಿಸುವಂತೆ  ನೋಡಿಕೊಳ್ಳಲು ಸರ್ವ ಪ್ರಯತ್ನಗಳನ್ನೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ನಡೆಸಲಿದ್ದಾರೆ. ಅದಕ್ಕಾಗಿ...

ಸ್ಥಳೀಯ

ನಗರ ಜೈಲಿನಲ್ಲಿ ಸಹ ಕೈದಿಗಳಿಂದ ಕುಖ್ಯಾತ ಕೈದಿಗಳಿಗೆ ಮಸಾಜ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರಿನ ಕಾರಾಗೃಹದೊಳಗೆ ಇರುವ ಕೆಲವು ವಿಚಾರಣಾಧೀನ ಕೈದಿಗಳು ತಮ್ಮ ಸಹಕೈದಿಗಳಿಂದ ಬಲವಂತವಾಗಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯಗಳು ಇದೀಗ ವೈರಲ್ ಆಗಿದೆ. ಹೊಡೆದಾಟ, ಬಡಿದಾಟಗಳಿಂದಲೇ ಗುರುತಿಸಿಕೊಂಡಿರುವ, ಜೋಡಿಕೊಲೆಗೂ ಕಾರಣವಾಗಿ ಸುದ್ದಿಯಲ್ಲಿರುವ...

ಚರಂಡಿಗೆ ಇಳಿದು ಅಮಾನವೀಯ ರೀತಿಯಲ್ಲಿ ಮ್ಯಾನ್ ಹೋಲಿನಲ್ಲಿ ಕೆಲಸದ ಚಿತ್ರ ವೈರಲ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಯಾವುದೇ ಕಾರಣಕ್ಕೂ ಪೌರ ಕಾರ್ಮಿಕರನ್ನು ಮ್ಯಾನ್ ಹೋಲುಗಳಿಗೆ ಇಳಿಸಿ ಕೆಲಸ ಮಾಡಿಸಬಾರದು ಎನ್ನುವ ಕಾನೂನು ಇದ್ದರೂ ಕೂಡಾ ಮಂಗಳೂರಿನಲ್ಲಿ ಮತ್ತೆ ಪೌರ ಕಾರ್ಮಿಕರನ್ನು ಇದೇ ರೀತಿ ದುಡಿಸುತ್ತಿರುವುದು...

`ಮಂಗಳೂರನ್ನು ಸೌಹಾರ್ದ ತಾಣವನ್ನಾಗಿಸಲು ಬದ್ಧ’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಶಾಂತಿ ಸೌಹಾರ್ದತೆಯ ಬೀಡಾಗಿರುವ ಮಂಗಳೂರು ಸರ್ವಧರ್ಮದ ನಾಡು. ಇತ್ತೀಚಿನ ಹಲವು ವರ್ಷಗಳಲ್ಲಿ ಇಲ್ಲಿನ ಕೋಮುವಾದಿ ಶಕ್ತಿಗಳು ಮಂಗಳೂರನ್ನು ಪ್ರಯೋಗ ಶಾಲೆಯನ್ನಾಗಿಸಿ, ಕೋಮುಜ್ವಾಲೆಯನ್ನು ಹಬ್ಬಿಸುತ್ತಿದ್ದಾರೆ. ತುಳುನಾಡಿನ ಸಂಸ್ಕøತಿಯನ್ನೇ ನಾಶ...

5ನೇ, 6ನೇ ಸೆಮೆಸ್ಟರಿನಲ್ಲಿ ಅನುತ್ತೀರ್ಣಗೊಂಡವರಿಗೆ ವಾರ್ಸಿಟಿ ಹೊಸ ನಿಯಮ

 ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ನಿರ್ಣಯವೊಂದನ್ನು ಬದಿಗಿರಿಸಿರುವ ಮಂಗಳೂರು ವಿಶ್ವವಿದ್ಯಾಲಯ, ಐದನೇ ಮತ್ತು ಆರನೇ ಸೆಮೆಸ್ಟರ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ಪದವಿ ವಿದ್ಯಾರ್ಥಿಗಳಿಗೆ ಅವರು ಅನುತ್ತೀರ್ಣಗೊಂಡಿರುವ ವಿಷಯಗಳ...

ದಕ್ಷಿಣ ಕನ್ನಡ ನೂತನ ಡೀಸಿ ಸೆಂಥಿಲ್ ಅಧಿಕಾರ ಸ್ವೀಕಾರ

ನಮ್ಮ ಪ್ರತಿನಿಧಿ ವರದಿ ಮ0ಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಸಿಕಾಂತ್ ಸೆಂಥಿಲ್ ಎಸ್ ಗುರುವಾರ ಅಧಿಕಾರ ಸ್ವೀಕರಿಸಿದರು. ಪ್ರಭಾರ ಜಿಲ್ಲಾಧಿಕಾರಿ ಕುಮಾರ್ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ...

ಎಲ್ಲಾ ಭಾಷೆಗೂ ಸಮಾನ ಪ್ರಾಧಾನ್ಯತೆ ದೊರೆಯಲಿ : ಎರಿಕ್ ಒಝಾರಿಯೋ

ಹಿಂದಿ  ಹೇರಿಕೆಗೆ ಅಪಸ್ವರ ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಒಂದು ಭಾಷೆ, ಒಂದು ಸಾಹಿತ್ಯ, ಒಂದು ಸಮಾಜ ಹಾಗೂ ಕೊನೆಯದಾಗಿ ಒಂದು ಧರ್ಮದೆಡೆಗೆ ಸಾಗುವ ಪ್ರಯತ್ನದ ಭಾಗವಾಗಿ ಕೇಂದ್ರ ಸರಕಾರ ಹಿಂದಿಯನ್ನು ಹೇರುವ ಪ್ರಯತ್ನ ನಡೆಸುತ್ತಿದೆ''...

ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಕಾಪು ವಲಯ ಫೋಟೋಗ್ರಾಫರ್ಸ್

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಕಾಪು ವಲಯ ಫೋಟೋಗ್ರಾಫರ್ಸ್ ಸದಸ್ಯರು ಬಂಟಕಲ್ಲಿನ ಜಯ ಸೃತಿ ಧಾಮ ಆಶ್ರಮದ ಮಕ್ಕಳೊಂದಿಗೆ ಸಿಹಿ ತಿಂಡಿ ವಿನಿಮಯ ಮಾಡಿಕೊಂಡು, ಪಟಾಕಿ ಸಿಡಿಸಿ ದೀಪಾವಳಿಯನ್ನು ಅರ್ಥಗರ್ಭಿತವಾಗಿ ಆಚರಿಸಿದರು. ಈ ಸಂದರ್ಭ...

ಅಗರಿ ಎಂಟರಪ್ರೈಸಸಿನಲ್ಲಿ ದೀಪಾವಳಿ ಹಬ್ಬದ ಕೊಡುಗೆ

ಮಂಗಳೂರು : ಅವಿಭಜಿತ ದ ಕ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಗುಣಮಟ್ಟದ ಸೇವೆಯಲ್ಲಿ ಮನೆ ಮಾತಾಗಿರುವ ಎಲೆಕ್ಟ್ರಾನಿಕ್ಸ್ ಹಾಗೂ ಗೃಹಪಯೋಗಿ ಉತ್ಪನ್ನಗಳ ಬೃಹತ್ ಮಾರಾಟ ಮಳಿಗೆಯಾದ ಅಗರಿ ಎಂಟರಪ್ರೈಸಸಿನಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರಿಗೆ...

ಭತ್ತದ ಗದ್ದೆ ನಾಶ

ಕಾರವಾರ : ಕಳೆದ 2 ದಿನಗಳಿಂದ ಸುರಿದ ಭಾರೀ ಮಳೆಗೆ ಅಮದಳ್ಳಿಯ ಬಾಳೆರಾಶಿಯಲ್ಲಿ ಹಳ್ಳದ ನೀರು ಉಕ್ಕಿ ಭತ್ತದ ಗದ್ದೆಗೆ ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಬಾಳೆರಾಶಿ ನಿವಾಸಿ ರೈತ ಥಾಕು ದೇವಾ...

ಧರ್ಮ ರಾಜಕಾರಣ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ

ಸ್ವರ್ಣವಲ್ಲಿ ಶ್ರೀ ನಮ್ಮ ಪ್ರತಿನಿಧಿ ವರದಿ ಶಿರಸಿ : ``ಸುಪ್ರಿಂ ಕೋರ್ಟಿನ ಆದೇಶಕ್ಕೂ ಕಾಯದೇ, ಹೊಸ ಕಾಯಿದೆಯನ್ನೂ ಸಹ ರೂಪುಗೊಳಿಸದೇ ಹಿಂದೂ ದೇವಾಲಯಗಳ ಪಾರಂಪರಿಕ, ಸಾಂಪ್ರದಾಯಿಕ ವ್ಯವಸ್ಥೆಗೆ ಧಕ್ಕೆ ತರುವಂತೆ ಆಸ್ತಿಕರ ಧಾರ್ಮಿಕ ಭಾವನೆಗಳನ್ನು ಕೆದಕಿ...