Saturday, January 20, 2018

ತರಗತಿಗೆ ನುಗ್ಗಿ ಶಿಕ್ಷಕಿ ಮೇಲೆ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿದ ಭೂಪ

ಬೆಂಗಳೂರು : ಮಾಗಡಿಯ ಶಾಂಬಯ್ಯನಪಾಳ್ಯದಲ್ಲಿರುವ ಸರಕಾರಿ ಶಾಲೆಯೊಂದರಲ್ಲಿ ಬುಧವಾರ ಅಪರಾಹ್ನ ಶಿಕ್ಷಕಿಯೊಬ್ಬರು ಮಕ್ಕಳಿಗೆ ಸಮಾಜವಿಜ್ಞಾನ ಪಾಠ ಮಾಡುತ್ತಿರುವಾಗ ತರಗತಿಗೆ ನುಗ್ಗಿದ ವ್ಯಕ್ತಿಯೊಬ್ಬ ಶಿಕ್ಷಕಿಯೊಂದಿಗೆ ಜಗಳಕ್ಕಿಳಿದು, ವಿದ್ಯಾರ್ಥಿಗಳು ನೋಡನೋಡುತ್ತಿದ್ದಂತೆಯೇ ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು...

ರಾಜ್ಯಾಧ್ಯಕ್ಷತೆಗೆ ಅಂತಿಮ ರೇಸಿನಲ್ಲಿ ಪಾಟೀಲದ್ವಯರು, ಡೀಕೆಶಿ

ಹೈಕಮಾಂಡಿಗೆ ವೇಣುಗೋಪಾಲ್ ವರದಿ ನವದೆಹಲಿ : ಎಐಸಿಸಿ  ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಪಕ್ಷ ವ್ಯವಹಾರಗಳ ಉಸ್ತುವಾರಿ  ಕೆ ಸಿ ವೇಣುಗೋಪಾಲ್ ಶುಕ್ರವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಕೆಪಿಸಿಸಿ ಅಧ್ಯಕ್ಷತೆಗಾಗಿ ಕರ್ನಾಟಕ...

ಜೈಲು ಇಲಾಖೆ ಮುಖ್ಯಸ್ಥರಾಗಿ ಮೇಘರಿಕ್ ಅಧಿಕಾರ ಸ್ವೀಕಾರ

ಬೆಂಗಳೂರು : ಡಿಜಿಪಿ ಎಚ್ ಎನ್ ಸತ್ಯನಾರಾಯಣ ರಾವ್ ಅವರಿಂದ ತೆರವಾದ ಕಾರಾಗೃಹ ಇಲಾಖೆ ಮುಖ್ಯಸ್ಥರಾಗಿ ನಿನ್ನೆ ಎಡಿಜಿಪಿ ಎನ್ ಎಸ್ ಮೇಘರಿಕ್ ಅಧಿಕಾರ ಸ್ವೀಕರಿಸಿದರು. ಕೇವಲ 20 ನಿಮಿಷ ನಡೆದ ಸರಳ...

ಗೌರಿ ಹಂತಕರ ಗುರುತು ಪತ್ತೆ : ಗೃಹ ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು :  ಪತ್ರಕರ್ತೆ ಗೌರಿ ಲಂಕೇಶ್  ಹಂತಕರ ಬಗ್ಗೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಸ್ಪಷ್ಟ ಸುಳಿವು ದೊರೆತಿದೆ, ಕೊಲೆ ನಡೆಸಿದವರನ್ನು ಗುರುತಿಸಲಾಗಿದೆ ಎದು ಗೃಹ ಸಚಿವ ರಾಮಲಿಂಗಾ ರೆಡ್ಡಿ...

14ರ ಪುತ್ರಿಯ ಅತ್ಯಾಚಾರಿ ತಂದೆ ಬಂಧಿಸಿದ ಪೊಲೀಸ್

ಬೆಳಗಾವಿ : 14 ವರ್ಷ ವಯಸ್ಸಿನ ಪುತ್ರಿಗೆ ಅಶ್ಲೀಲ ವಿಡಿಯೋ ತೋರಿಸಿ ದೌರ್ಜನ್ಯವೆಸಗಿದ ತಂದೆಯನ್ನು ಪೆÇಲೀಸರು ಬಂಧಿಸಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಪುತ್ರಿಗೆ ಸೆಕ್ಸ್ ವಿಡಿಯೋ ತೋರಿಸಿ ಲೈಂಗಿಕ ಸುಖ ನೀಡುವಂತೆ ಒತ್ತಾಯಿಸುತ್ತಿದ್ದ....

ಸುತ್ತೂರು ಸ್ವಾಮಿಯ ಸಹೋದರಗೆ ಕೆಪಿಎಸ್ಸಿ ಸದಸ್ಯತ್ವ : ಸೀಎಂ ಆಫರ್

ಬೆಂಗಳೂರು : ದಕ್ಷಿಣ ಕರ್ನಾಟಕ ಮತ್ತು ಮೈಸೂರಿನಲ್ಲಿ ಲಿಂಗಾಯತ ಮತಗಳ ಓಲೈಕೆ ದೃಷ್ಟಿಯಿಂದ ಸೀಎಂ ಸಿದ್ದರಾಮಯ್ಯ ಸುತ್ತೂರು ಮಠಾಧೀಶರ ಸಹೋದರಗೆ ಕೆಪಿಎಸ್‍ಸಿ ಸದಸ್ಯತ್ವ ನೀಡಲು ಮುಂದಾಗಿದ್ದಾರೆ. ಎರಡು ವಾರಗಳ ಹಿಂದೆ ರಾಜ ಭವನದಲ್ಲಿ...

ಪೊಲೀಸ್ ರಕ್ಷಣೆ ಕೋರಿದ ಮಥಾೈ

ಬೆಂಗಳೂರು :  ``ನನಗೆ ಗೆಳೆಯರು ಮತ್ತು ಹಿತೈಷಿಗಳು ನೀಡಿರುವ ಮಾಹಿತಿಯಂತೆ ಯಾವುದೇ ಸಂದರ್ಭದಲ್ಲಿ ನನ್ನ ಮೇಲೆ ದಾಳಿ ನಡೆಯಬಹುದು. ನಾಲ್ವರು ಹಿರಿಯ ಐಎಎಸ್ ಅಧಿಕಾರಿಗಳು ನನಗೆ ಪದೇಪದೇ ಕಿರುಕುಳ ನೀಡುತ್ತಿದ್ದಾರೆ'' ಎಂದು ಐಎಎಸ್...

ಪ್ರತಾಪ ಸಿಂಹಗೆ ರೆಡ್ಡಿ ಎಚ್ಚರಿಕೆ

ಬೆಂಗಳೂರು : ಐತಿಹಾಸಿಕ ವ್ಯಕ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದನ್ನು ಮುಂದುವರಿಸಿದರೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ರಾಮಲಿಂಗ ರೆಡ್ಡಿ ಎಚ್ಚರಿಸಿದ್ದಾರೆ. ``ಒನಕೆ ಓಬವ್ವ...

ಕಲ್ಲಡ್ಕ ಭಟ್ ವಿರುದ್ಧ ಮತ್ತೊಂದು ಕೇಸಿನಲ್ಲಿ ಪೊಲೀಸರಿಗೆ ಹೈ ತಡೆ

 ಬೆಂಗಳೂರು : ಆರೆಸ್ಸೆಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯ ಸರಕಾರ ಅನುಮತಿ  ನೀಡಿ ಹೊರಡಿಸಿದ್ದ ಆದೇಶಕ್ಕೆÉ ಹೈಕೋರ್ಟ್ ಗುರುವಾರದಂದು ತಡೆಯಾಜ್ಞೆ ವಿಧಿಸಿದೆ. ಸರಕಾರದ ಆದೇಶದ ವಿರುದ್ಧ ಹಾಗೂ  ಬಂಟ್ವಾಳ...

ಬಿಜೆಪಿ, ಆರೆಸ್ಸೆಸ್ ವಿರುದ್ಧ `ಉಗ್ರವಾದ’ ಆರೋಪ ಬೇಡ : ರಾಹುಲ್ ಸೂಚನೆ

ಬೆಂಗಳೂರು : ಇನ್ನೇನು ಕೆಲವೇ ತಿಂಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ``ಹಿಂದೂ ಉಗ್ರಗಾಮಿಗಳು'' ಮತ್ತು ``ಭಯೋತ್ಪಾದಕರು'' ಎಂದು ಸಂಬೋಧಿಸದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷ ನಾಯಕರಿಗೆ...

ಸ್ಥಳೀಯ

ಇನ್ನೊಬ್ಬ ಹಿಂದೂ ಮುಖಂಡ ಬಂಧನ

ರೇಷ್ಮಾ ಕಿಡ್ನಾಪ್ ಪ್ರಕರಣ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅನ್ಯಧರ್ಮೀಯ ಯುವಕನನ್ನು ಪ್ರೀತಿಸಿ ಮದುವೆಯಾಗಿ ಮುಂಬಯಿಗೆ ಪರಾರಿಯಾಗಿದ್ದ ಹಿಂದೂ ಸಂಘಟನೆ ಮುಖಂಡನ ಪುತ್ರಿ ರೇಷ್ಮಾ ಪ್ರಕರಣಕ್ಕೆ ಸಂಬಂಧಿಸಿ ಮುಂಬಯಿ ಪೊಲೀಸರು ಹಿಂದೂ ಸಂಘಟನೆಯ ಇನ್ನೊಬ್ಬ...

ಕಣ್ಣೂರಿನಲ್ಲಿ ಎಬಿವಿಪಿ ಕಾರ್ಯಕರ್ತ ಹತ್ಯೆ

ಕಾಸರಗೋಡು : ಮುಸುಕುಧಾರಿ ದುಷ್ಕರ್ಮಿಗಳ ತಂಡವೊಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ಯ ಕಾರ್ಯಕರ್ತನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆಗೈದು ಪರಾರಿಯಾಗಿದೆ. ಕಣ್ಣೂರಿನ ಪೆರವೂರ್‍ನಲ್ಲಿ ಈ ಕೃತ್ಯ ನಡೆದಿದ್ದು, ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿ ಶ್ಯಾಮ್...

ಕರಾವಳಿಯಲ್ಲಿ ನಡೆಯುತ್ತಿದೆ ಕೋಮುದ್ವೇಷ ಬಿತ್ತನೆ ಕಾರ್ಯ

ವಿಶೇಷ ವರದಿ ಮಂಗಳೂರು : ಜಿಲ್ಲೆಯಲ್ಲಿ ಮುಖ್ಯವಾಗಿ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹಲವಾರು ನೈತಿಕ ಪೊಲೀಸಗಿರಿ ಘಟನೆಗಳ ನಂತರದ ಬೆಳವಣಿಗೆಯೆಂಬಂತೆ ಕಳೆದ ಕೆಲ ದಿನಗಳಿಂದ ಪರಿವಾರ ಸಂಘಟನೆಗಳು, ಮುಖ್ಯವಾಗಿ ಬಜರಂಗದಳವು ಲವ್ ಜಿಹಾದ್...

ಕೆಐಒಸಿಎಲ್ಲಿನಲ್ಲಿ ದೀಪಕ್ ಸಹೋದರಗೆ ನೌಕರಿ : ಸಚಿವ ಹೆಗಡೆ ಭರವಸೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕುದ್ರೆಮುಖ ಕಬ್ಬಿಣದ ಅದಿರು ಕಂಪೆನಿಯಲ್ಲಿ (ಕೆಐಒಸಿಎಲ್) ಇತ್ತೀಚೆಗೆ ಕಾಟಿಪಳ್ಳದಲ್ಲಿ ಕೊಲೆಗೀಡಾದ ದೀಪಕ್ ರಾವ್ ಸಹೋದರ ಸತೀಶಗೆ ಉದ್ಯೋಗ ನೀಡವುದಾಗಿ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ...

ಶಾಲೆಯ ಆವರಣ ಬೇಲಿ ಕಿತ್ತೆಸೆದ ಅಧಿಕಾರಿಗಳು

ಬೆಂಗರೆ ನಾಗರಿಕ ಒಕ್ಕೂಟ ಪ್ರತಿಭಟನೆ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೆಂಗರೆಯ ಕಸಬಾ ಪ್ರದೇಶದಲ್ಲಿ ಇಸ್ಲಾಮಿಕ್ ವೆಲ್ಫೇರ್ ಸೆಂಟರ್ ಅಧೀನದ ಎ ಆರ್ ಕೆ ಹೈಯರ್ ಪ್ರೈಮರಿ ಶಾಲೆಯ ಆವರಣ ಬೇಲಿಯನ್ನು ಅಧಿಕಾರಿಗಳು ಧ್ವಂಸಗೊಳಿಸಿರುವುದನ್ನು...

ಎರಡು ಶಾಲೆಗಳ ಮಧ್ಯಾಹ್ನ ಊಟದ ನಿಲುಗಡೆ : ಜಿಲ್ಲಾ ಪಂಚಾಯತ್ ಸಭೆಯಲ್ಲಿ ಭಾರೀ ವಾಗ್ವಾದ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಲ್ಲಡ್ಕ ಶ್ರೀರಾಮ ವಿದ್ಯಾಲಯ ಮತ್ತು ಪುಣಚ ಶ್ರೀದೇವಿ ಹೈಸ್ಕೂಲಿಗೆ ಮಧ್ಯಾಹ್ನದ ಊಟ ರದ್ದುಪಡಿಸಿದ್ದು ಗುರುವಾರ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆಗೆ...

ಇಂದಿನಿಂದ ಶಿರಾಡಿ ಘಾಟಿ ರಸ್ತೆಯಲ್ಲಿ ಎರಡನೇ ಹಂತದ ಕಾಮಗಾರಿ ; ವಾಹನ ಸಂಚಾರ ನಿಷೇಧ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಂಗಳೂರು-ಬೆಂಗಳೂರು ರೂಟಿನ ಶಿರಾಡಿ ಘಾಟಿ ರಸ್ತೆಯ ಎರಡನೇ ಹಂತದ(ಎನ್ ಎಚ್-75) ಅಭಿವೃದ್ಧಿ ಕಾಮಗಾರಿಗೆ ಸಿದ್ಧತೆ ನಡೆಯುತ್ತಿದ್ದು, ಇಂದಿನಿಂದ (ಜನವರಿ 20) ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಅಭಿವೃದ್ಧಿ...

ಸಿಮೆಂಟ್ ಶೀಟಿನ ಗೂಡಿನಲ್ಲೂ ಜೇನು ಕೃಷಿ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಪ್ರಗತಿಪರ ಕೃಷಿಕರೊಬ್ಬರು ಸಿಮೆಂಟ್ ಶೀಟಿನಲ್ಲಿ ಜೇನುಗೂಡನ್ನು ತಯಾರಿಸುವ ಮೂಲಕ ಯಶಸ್ವಿಕಂಡಿದ್ದು, ಮರದ ಪೆಟ್ಟಿಗೆಗೆ ಇನ್ನು ಜೇನು ಕೃಷಿಕರು ಆಶ್ರಯಿಸಬೇಕಿಲ್ಲ ಮತ್ತು ಮರದ ಪೆಟ್ಟಿಗೆಯಲ್ಲಿ ಮಾತ್ರ ಜೇನು ಸಂಸಾರ...

ಪಲಿಮಾರಿನಲ್ಲಿ ತ್ಯಾಜ್ಯಕ್ಕೆ ಬೆಂಕಿ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚರ್ಚ್ ಒಂದರ ಮುಂಭಾಗ ಶೇಖರಣೆ ಮಾಡಲಾದ ತ್ಯಾಜ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ. ಚರ್ಚ್ ಮುಂಭಾಗದಲ್ಲಿ ಬೃಹತ್...

ವಾಹನ ಪಲ್ಲಕ್ಕಿಯಲ್ಲಿ 4, ಭಕ್ತರ ಪಲ್ಲಕ್ಕಿಯಲ್ಲಿ ಇಬ್ಬರು ಸ್ವಾಮಿಗಳು

ಪರ್ಯಾಯ ಉತ್ಸವ ಮೆರವಣಿಗೆ ನಮ್ಮ ಪ್ರತಿನಿಧಿ ವರದಿ ಉಡುಪಿ : ಪರ್ಯಾಯ ಉತ್ಸವದ ಅಂಗವಾಗಿ ಗುರುವಾರ ನಡೆದ ಪರ್ಯಾಯ ಉತ್ಸವ ಮೆರವಣಿಗೆಯಲ್ಲಿ ವಾಹನದ ಮೇಲೆ ಇರಿಸಲಾಗಿದ್ದ ಪಲ್ಲಕ್ಕಿಯಲ್ಲಿ ನಾಲ್ಕು ಸ್ವಾಮಿಗಳು ಮತ್ತು ಭಕ್ತರು ಹೊತ್ತೊಯ್ಯುವ ಪಲ್ಲಕ್ಕಿಯಲ್ಲಿ...