Monday, May 22, 2017

ಕನ್ನಡಿಗರ ಭಾಷಾಭಿಮಾನವನ್ನೇ ಕೆಣಕಿದ ರಾಮಗೋಪಾಲ

ಮುಂಬೈ : ``ಬಾಹುಬಲಿ-2 ತೆಲುಗು ಚಿತ್ರ ಕರ್ನಾಟಕದಲ್ಲಿ ಕನ್ನಡ ಚಲನಚಿತ್ರಗಳಿಗಿಂತ ಸೂಪರ್ ಹಿಟ್ ಆಗಿರುವುದು ಕನ್ನಡಿಗರಿಗೆ ಅಭಿಮಾನವೇ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ'' ಎಂದು ಕನ್ನಡಿಗರನ್ನು ವ್ಯಂಗ್ಯವಾಡಿ ಸರಣಿ ಟ್ವೀಟ್ ಮಾಡಿರುವ ಖ್ಯಾತ ಬಾಲಿವುಡ್...

ಮಂಗಳೂಳಿನಿಂದ ಹುಬ್ಬಳ್ಳಿ ಮಧ್ಯೆ ಹೊಸ ರೈಲು

ಹುಬ್ಬಳ್ಳಿ : ಮೇ 23ರಂದು ಹುಬ್ಬಳ್ಳಿ-ವಾರಣಸಿ ರೈಲು ಸೇವೆ ಆರಂಭಗೊಳ್ಳಲಿದೆ ಎಂದು ರೈಲ್ವೇ ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ. ಇದೇ ವೇಳೆ ಹುಬ್ಬಳ್ಳಿ ಮತ್ತು ಮೈಸೂರು ಮಧ್ಯೆ  ರೈಲೊಂದರ ಸೇವೆ ಆರಂಭಗೊಳ್ಳಲಿದೆ...

ಜುಲೈ ಒಂದರಿಂದ ರಾಜ್ಯ ಹೋಟೆಲುಗಳು ದುಬಾರಿ

ಬೆಂಗಳೂರು : ಜುಲೈ ಒಂದರಿಂದ ಜಿಎಸ್‍ಟಿ ಜಾರಿಗೊಂಡ ಬಳಿಕ ಹವಾನಿಯಂತ್ರಿತ ಕರ್ನಾಟಕದ ರೆಸ್ಟೋರೆಂಟುಗಳಲ್ಲಿ ಗ್ರಾಹಕರ ಆಹಾರ ಸೇವನೆ ಬೆಲೆ ಮೂರು ಪಟ್ಟು ಹಾಗೂ ಹವಾನಿಯಂತ್ರಣರಹಿತ ರೆಸ್ಟೋರೆಂಟುಗಳಲ್ಲಿ ದುಪ್ಪಟ್ಟು ಆಗಲಿದೆ. ಇದೇ ವೇಳೆ ಪಂಚತಾರಾ ಹೋಟೆಲುಗಳ...

ಮಳವಳ್ಳಿಯಲ್ಲಿ 435 ಚಿನ್ನದ ನಾಣ್ಯ ಪತ್ತೆ

ಬೆಂಗಳೂರು : ಮಂಡ್ಯದ ಮಳವಳ್ಳಿಯ ಬನಸಮುದ್ರ ಎಂಬಲ್ಲಿ ಬಡ ಮಹಿಳೆಯೊಬ್ಬರು ಹೊಸ ಮನೆ ನಿರ್ಮಿಸಲು ಭೂಮಿ ಅಗೆಯುತ್ತಿದ್ದಾಗ ಮಣ್ಣಿನ ಮಡಕೆಯೊಂದರಲ್ಲಿ ಪತ್ತೆಯಾದ 435 ಚಿನ್ನದ ನಾಣ್ಯಗಳನ್ನು ಸರ್ಕಾರಿ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ....

ಬಂಧನ ಭೀತಿಯಿಲ್ಲ: ಎಚ್ಡೀಕೆ

ಬೆಂಗಳೂರು : ಜಂತಕಲ್ ಮೈನಿಂಗ್ ಕುರಿತಂತೆ ಎಸ್‍ಐಟಿ ಅಧಿಕಾರಿಗಳ ಮುಂದೆ ಹಾಜರಾದ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತನಗೆ ಬಂಧನದ ಭೀತಿಯಿಲ್ಲ ಎಂದು ಹೇಳಿದ್ದಾರೆ. ಎಸ್ ಐ ಟಿ ವಿಚಾರಣೆ ಬಳಿಕ ಮಾಧ್ಯಮಗಳಿಗೆ...

ದೇವಳದಲ್ಲಿ ಆಶ್ರಯ ಪಡೆದ ಮೊಸಳೆ ರಕ್ಷಿಸಿದ ಗ್ರಾಮಸ್ಥರು

 ಹುಬ್ಬಳ್ಳಿ :  ಆಹಾರ ಮತ್ತು ಆಶ್ರಯ ಪಡೆಯಲು ತಂಪಾದ ಸ್ಥಳವನ್ನು ಅರಸಿಕೊಂಡು ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲೂಕಿನ ಸೊನ್ನ ಗ್ರಾಮದ ಜನವಸತಿ ಪ್ರದೇಶಕ್ಕೆ  ನುಸುಳಿದ ಮೊಸಳೆಯೊಂದು ಅಲ್ಲಿನ  ಕೃಷ್ಣಾ ನದಿ ದಂಡೆಯಲ್ಲಿರುವ ದೇವಳವೊಂದರಲ್ಲಿ...

ತಿವಾರಿ ದೊಡ್ಡ ಹಗರಣ ಎಕ್ಸಪೋಸ್ ಮಾಡಲಿದ್ದರು ಎಂದ ಯು ಪಿ ಸಚಿವ

ಹಗರಣದ ಬಗ್ಗೆ ನನಗೆ ತಿಳಿಸಿಲ್ಲ : ಖಾದರ್ ಲಕ್ನೋ : ಇಲ್ಲಿನ ಹಜರತ್ ಗಂಜ್ ಪ್ರದೇಶದಲ್ಲಿ ತಮ್ಮ ಜನ್ಮದಿನವಾದ ಮೇ 17ರಂದೇ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಕರ್ನಾಟಕ ಕೇಡರ್ 2007ರ ಐಎಎಸ್ ಅಧಿಕಾರಿ ಹಾಗೂ ಆಹಾರ...

ಪಾತಕಿ ರಶೀದ್ ಮಲಬಾರಿ ಬೆಂಬಿಡದ ಪೊಲೀಸರು

ಬೆಳಗಾವಿ : ಭೂಗತ ಪಾತಕಿ ರಶೀದ್ ಮಲಬಾರಿ ಬೆನ್ನು ಹಿಡಿದಿರುವ ಬೆಳಗಾವಿ ಪೊಲೀಸರು ಆತನು ಸಹಚರರ ಜೊತೆಗೆ ಸೇರಿ ನಡೆಸಿದ ಇನ್ನಷ್ಟು ಕ್ರಿಮಿನಲ್ ಕೃತ್ಯಗಳ ಜಾಲ ಬೇಧಿಸುತ್ತಿದ್ದಾರೆ. ಕಳೆದೆರಡು ದಿನಗಳಿಂದ ಪೊಲೀಸರು ಮಹಾರಾಷ್ಟ್ರ...

ಮಾಜಿ ಸೈನಿಕರ ಬೇಡಿಕೆ ಆಲಿಸದ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ

ಬೆಂಗಳೂರು : ಸರ್ಕಾರದ ಆಹ್ವಾನದ ಮೇರೆಗೆ ಬ್ರಿಗೇಡ್ ರೋಡ್ ಜಂಕ್ಷನಿನಲ್ಲಿ ನವೀಕರಣಗೊಂಡಿರುವ `ವಾರ್ ಮೊಮೋರಿಯಲ್' ಬಳಿ ಸಭೆ ಸೇರಿದ್ದ ಸುಮಾರು 50ರಷ್ಟು ಪ್ರಸಿದ್ಧ ಮಾಜಿ ಸೈನಿಕರು ಸೀಎಂ ಸಿದ್ದರಾಮಯ್ಯದ ಉದಾಸೀನದ ನೀತಿ ವಿರೋಧಿಸಿ...

ಭೂಗರ್ಭದಿಂದ ನೀರು ತೆಗೆಯುವುದು ಸುಲಭವಲ್ಲ

ಬೆಂಗಳೂರು : ಭೂಗರ್ಭದಿಂದ ನೀರು ತೆಗೆಯುವ ಪಾತಾಳಗಂಗೆ ಯೋಜನೆಗೆ ತೀವ್ರ ಪ್ರತಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನ ಯೋಜನೆಯನ್ನು ನಿಧಾನಗತಿಯಲ್ಲಿ ಜಾರಿಗೊಳಿಸುತ್ತಿದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಗ್ರಾಮೀಣಾಭಿವೃದ್ಧಿ ಮತ್ತು...

ಸ್ಥಳೀಯ

ಶಂಕಾಸ್ಪದ ವಿವಾಹಿತೆ ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ವಿವಾಹಿತೆ ಬೆಳ್ಳಂಪಳ್ಳಿ ಗ್ರಾಮದ ಪುಣಚೂರು ಕಂಬಳಮಜಲು ನಿವಾಸಿ ಉಷಾ ನಾಯ್ಕ ನೇಣು ಬಿಗಿದ ಸ್ಥಿತಿಯಲ್ಲಿ ಸಂಶಯಸ್ಪಾದವಾಗಿ ಸಾವನ್ನಪ್ಪಿದ್ದಾಳೆ. ಒಂದು ವರ್ಷದ ಹಿಂದೆ ಪುಣಚೂರು ಬೆಳ್ಳಂಪಳ್ಳಿಯ...

ಸಿಡಿಲು ಬಡಿದು ಕುಕ್ಕೆ ದೇವಳ ಗೋಪುರ, ಹಲವು ಮನೆಗೆ ಹಾನಿ

ನಮ್ಮ ಪ್ರತಿನಿಧಿ ವರದಿ ಸುಬ್ರಹ್ಮಣ್ಯ : ಕಳೆದೆರಡು ದಿನಗಳಿಂದ ಸುಬ್ರಹ್ಮಣ್ಯದಲ್ಲಿ ಸುರಿಯುತ್ತಿರುವ ಸಿಡಿಲು, ಮಿಂಚು, ಸಹಿತ ಭಾರೀ ಮಳೆಗೆ ಅಪಾರ ಹಾನಿ ಸಂಭವಿಸಿದೆ. ರವಿವಾರ ಬೆಳಗ್ಗಿನ ಜಾವ ಅಪ್ಪಳಿಸಿದ ಸಿಡಿಲಿಗೆ ಕುಕ್ಕೆ ಸುಬ್ರ್ಮಹ್ಮಣ್ಯ ಕ್ಷೇತ್ರದ...

ಬಾರ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ : ಕೆಸಿಡಿಸಿಎಲ್ ಅಧಿಕಾರಿಗಳ ಪರಿಶೀಲನೆ

ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಬಾರ್ಯ ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇವರು ಕೆಸಿಡಿಸಿಎಲ್ಲಿಗೆ ಸೇರಿದ ಜಾಗದಲ್ಲಿ ಕಲ್ಲುಗಳನ್ನು ರಾಶಿ ಹಾಕಿದ್ದಾರೆ. ಇಲ್ಲಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಕೆಸಿಡಿಸಿಎಲ್ ಅಧಿಕಾರಿಗಳು...

ಕಾನೂನುಬಾಹಿರ ಟೆಂಡರ್ : ಹೂಳು ತೆಗೆಯುವ ನೆಪದಲ್ಲಿ ಮರಳು ಲೂಟಿ

ಕಾರ್ಕಳ ಪುರಸಭೆಯಿಂದ ಸುಪ್ರೀಂ ಕೋರ್ಟ್ ಹಸಿರುಪೀಠ ಆದೇಶ ಉಲ್ಲಂಘನೆ ಜನಪ್ರತಿನಿಧಿಗಳ ಜಾಣ ಮೌನ ವಿಶೇಷ ವರದಿ ಕಾರ್ಕಳ : ಇಲ್ಲಿನ ಪುರಸಭೆಗೆ ನೀರು ಪೂರೈಸುವ ಮುಂಡ್ಲಿ ಜಲಾಶಯದಲ್ಲಿ ತುಂಬಿದ್ದ ಹೂಳನ್ನು ಎತ್ತುವ ಕಾಮಗಾರಿ ಕುರಿತು ಕಾರ್ಕಳ ಪುರಸಭೆ...

ಕಟೀಲಿನಲ್ಲಿ ದಾಖಲೆಯ ಸಾಮೂಹಿಕ ಮದುವೆ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇತಿಹಾಸ ಪ್ರಸಿದ್ಧ ಕಟೀಲು ದೇವಸ್ಥಾನದಲ್ಲಿ ರವಿವಾರ ದಾಖಲೆಯ 77 ಸಾಮೂಹಿಕ ಮದುವೆ ನಡೆದಿದೆ. ಬೆಳಗ್ಗಿನಿಂದಲೇ ಕಟೀಲು ದೇವಸ್ಥಾನದಲ್ಲಿ ಜನಜಂಗುಳಿಯ ವಾತಾವರಣ ನೆಲೆಸಿದ್ದು ದೇವಸ್ಥಾನದ ರಸ್ತೆಗಳು ಬ್ಲಾಕ್ ಆಗಿ ಜನಸಂಚಾರ...

ವಿದ್ಯುತ್ ಶಾರ್ಟ್ ಸಕ್ರ್ಯೂಟ್ : ಮನೆಗೆ ಬೆಂಕಿ ತಗುಲಿ ಹಾನಿ

ಭಟ್ಕಳದ ಮಣ್ಕುಳಿಯಲ್ಲಿ ಅಗ್ನಿ ಅನಾಹುತ ನಮ್ಮ ಪ್ರತಿನಿಧಿ ವರದಿ ಭಟ್ಕಳ : ಇಲ್ಲಿನ ಮಣ್ಕುಳಿಯ ಪುಷ್ಪಾಂಜಲಿ ಟಾಕೀಸ್ ರಸ್ತೆಯಲ್ಲಿರುವ ವಿಜಯಕುಮಾರ ಪ್ರಭು ಅವರ ಮನೆಯಲ್ಲಿ ಶನಿವಾರ ವಿದ್ಯುತ್ ಶಾರ್ಟ್ ಸಕ್ರ್ಯೂಟಿನಿಂದ ಆಕಸ್ಮಿಕ ಬೆಂಕಿ ತಗುಲಿ ಅಪಾರ...

`ಯುವಕರು ಸ್ವಯಂ ಉದ್ಯೋಗಿಗಳಾಗಬೇಕು’

ನಮ್ಮ ಪ್ರತಿನಿಧಿ ವರದಿ ಉಡುಪಿ : ``ಯುವಕರು ಉದ್ಯೋಗವನ್ನು ಅರಸುತ್ತಾ ದಿನ ಕಳೆಯುವುದಕ್ಕಿಂತ ಸ್ವಯಂ ಉದ್ಯೋಗಿಗಳಾಗಲು ಮುಂದೆ ಬರಬೇಕು'' ಎಂದು ಮೀನುಗಾರಿಕೆ, ಯುವಶಕ್ತಿ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಶುಕ್ರವಾರ ಜಿಲ್ಲಾ...

ಪ್ರಾಕೃತಿಕ ವಿಕೋಪ : ಸಂತ್ರಸ್ತರ ನೆರವಿಗೆ ಮನಪಾದಿಂದ ಪ್ರತ್ಯೇಕ ಘಟಕ ಆರಂಭ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಮುಂತಾದ ತುರ್ತುಸಂದರ್ಭಗಳಲ್ಲಿ ಸಾರ್ವಜನಿಕರ ಸಹಾಯಕ್ಕೆ ಮಂಗಳೂರು ನಗರಪಾಲಿಕೆಯಲ್ಲಿ ಪ್ರತ್ಯೇಕ ಘಟಕವೊಂದು ಜೂನ್ 1ರಿಂದ ಕಾರ್ಯಾಚರಿಸಲಿದೆ'' ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ. ``ಹತ್ತು ಮಂದಿ...

ಗುರುಪುರ ಗ್ರಾಮ ಪಂಚಾಯತ..

ಗುರುಪುರ ಗ್ರಾಮ ಪಂಚಾಯತ, ಕೆ ಎಸ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಆಸ್ಪತ್ರೆ ಮಂಗಳೂರು ಹಾಗೂ ಗುರುಪುರದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ರವಿವಾರ ಗುರುಪುರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ...

ರಾಜ್ಯದ ಬೀಚ್ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಕೆ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಪ್ರವಾಸೋದ್ಯಮ ಅಭಿವೃದ್ಧಿಯ ಕೇಂದ್ರ ಬಿಂದುವಾದ ಕರಾವಳಿ ತೀರಗಳು ಶೀಘ್ರದಲ್ಲೇ ಹಲವು ಅಭಿವೃದ್ಧಿ ಹೊಂದಲಿವೆ. ಕರ್ನಾಟಕ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಬೀಚ್ ಕೊಡುಗೆ ಮಹತ್ವದ್ದಾಗಿದೆ ಎಂಬುದನ್ನು ಅರಿತುಕೊಂಡಿರುವ ಪ್ರವಾಸೋದ್ಯಮ...