Sunday, February 18, 2018

ರಿಕ್ಷಾಗೆ ಮಿನಿ ಲಾರಿ ಡಿಕ್ಕಿ : ಕೃಷಿಕ ಮೃತ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಖಾಸಗಿ ರಿಕ್ಷಾವೊಂದಕ್ಕೆ ಮಿನಿ ಲಾರಿ ಡಿಕ್ಕಿ ಹೊಡೆದ ಅಪಘಾತದಲ್ಲಿ ಕೃಷಿಕರೊಬ್ಬರು ಮೃತಪಟ್ಟಿದ್ದಾರೆ. ಸಿಪಿಐ ಕಾರ್ಯಕರ್ತ ಹಾಗೂ ಕಾಞಂಗಾಡ್ ಪರಿಸರವಾಸಿ ಕುಂಞÂಕೈಲು (69) ಮೃತ ದುರ್ದೈವಿ. ರಾಷ್ಟ್ರೀಯ ಹೆದ್ದಾರಿ ಕೇಳೋತ್ತ್...

ಯುವತಿಗೆ ಹಲ್ಲೆ

ಮಂಜೇಶ್ವರ : ನೆರೆಯಲ್ಲಿರುವ ಮನೆಯವರು ಸೇರಿಕೊಂಡು ಹಲ್ಲೆಗೈದಿರುವುದಾಗಿ ಆರೋಪಿಸಿ ಯುವತಿಯೊಬ್ಬಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ. ಉಪ್ಪಳ ಸೋಂಕಾಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಅನೀಸ ಹಲ್ಲೆಗೀಡಾಗಿ ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾದ ಯುವತಿ. ಸಮೀಪದ ಬಾಡಿಗೆ ಕೊಠಡಿಯಲ್ಲಿದ್ದ...

ಕೆರೆಯಲ್ಲಿ ಗೃಹಿಣಿ ಶವ

ಕಾಸರಗೋಡು : ಮಾಯಿಪ್ಪಾಡಿ ಭಗವತೀ ನಗರ ಪುಳ್ಕೂರಿನಲ್ಲಿ ಗೃಹಿಣಿ ಕೆರೆಗೆ ಬಿದ್ದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪುಳ್ಕೂರಿನ ಉದಯ ಎಂಬವರ ಪತ್ನಿ ಶಶಿಕಲಾ ಸಾವನ್ನಪ್ಪಿದ ಗೃಹಿಣಿಯಾಗಿದ್ದಾರೆ. ಮನೆ ಪಕ್ಕದ ಬಯಲಿನಲ್ಲಿ ಕೃಷಿ ಚಟುವಟಿಕೆಗಳಿಗೆ ನೀರು...

ಚಿಕಿತ್ಸೆ ಫಲಿಸದೇ ಗಾಯಾಳು ಸಾವು : ಶಂಕೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಪತ್ನಿ ಮನೆಯಲ್ಲಿ ಸುಟ್ಟ ಗಾಯಗಳೊಂದಿಗೆ ಪತ್ತೆಯಾದ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದು, ಆತ ಸಾವಿನ ಬಗ್ಗೆ ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ. ವೆಳ್ಳರಿಕುಂಡ್ ಪ್ಲಾಚಿಕ್ಕರ ಪರಶಿಷ್ಟ ಜಾತಿ ಕಾಲನಿ...

ಮರಳು ಸಾಗಾಟದ 2 ಲಾರಿ, ಓಮ್ನಿ ವಶಕ್ಕೆ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಅನಧಿಕೃತ ಮರಳು ಸಾಗಾಟದ ಎರಡು ಲಾರಿ ಮತ್ತು ಒಂದು ಓಮ್ನಿಯನ್ನು ಮಂಜೇಶ್ವರ ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರು ಲಾರಿ ಚಾಲಕರನ್ನು ಬಂಧಿಸಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ. ತೂಮಿನಾಡಿನಿಂದ ವಶಪಡಿಸಿಕೊಂಡ...

ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಮಲಯಾಳ ಕಡ್ಡಾಯ ಮಾಡದಂತೆ ಆದೇಶ ಹೊರಡಿಸಿ : ಎಐಎಸ್ಎಫ್

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ವಿದ್ಯಾಲಯಗಳಲ್ಲಿ ಮಲಯಾಳ ಕಡ್ಡಾಯ ಮಾಡದಂತೆ ಭಾಷಾ ಮಸೂದೆಗೆ ಪ್ರತ್ಯೇಕ ತಿದ್ದುಪಡಿ ತರಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನಿನ ಮಂಜೇಶ್ವರ ಮಂಡಲ ಪ್ರತಿನಿಧಿ...

ಮನೆಯ ನೀರಿನ ಟ್ಯಾಂಕ್ ಕಳವು

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕುಂಬಳೆ ಸಮೀಪದ ಶಿರಿಯಾ ಸೀರೆ ಶ್ರೀ ಶಂಕರನಾರಾಯಣ ದೇವಸ್ಥಾನ ಬಳಿಯ ನಿವಾಸಿ  ಸುಬ್ರಾಯ ಕಾರಂತ ಶಿರಿಯಾ ಅವರ ಮನೆಯ ಕುಡಿಯುವ ನೀರಿನ ಟ್ಯಾಂಕ್ ಸಹಿತ ಇನ್ನಿತರ ಉಪಕರಣಗಳನ್ನು...

ಬೇಡಿಕೆ ಆಗ್ರಹಿಸಿ ಕೆ ಎಸ್ ಇ ಬಿ ನೌಕರರಿಂದ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ವಿವಿಧ ಬೇಡಿಕೆ ಒತ್ತಾಯಿಸಿ ಕೇರಳ ಇಲೆಕ್ಟ್ರಿಸಿಟಿ ಕೋ ಫೆಡರೇಶನ್ ನೇತೃತ್ವದಲ್ಲಿ ಕಾಸರಗೋಡು ವಿದ್ಯುತ್ ಸರ್ಕಲ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಯಿತು. ವಿದ್ಯುತ್ ಇಲಾಖೆಯಲ್ಲಿ ಹುದ್ದೆಗಳನ್ನು ಕಡಿತಗೊಳಿಸುವ ನಿಲುವನ್ನು...

ರಸ್ತೆ ತಡೆ ಹೋರಾಟ ಅಂತ್ಯ

ಚೆರ್ಕಳ-ಕಲ್ಲಡ್ಕ ರಸ್ತೆ ದುರಸ್ತಿ ಭರವಸೆ ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ರಸ್ತೆ ದುರಸ್ತಿಗೆ ಒತ್ತಾಯಿಸಿ ಖಾಸಗಿ ಬಸ್ ನೌಕರರು ಮತ್ತು ಸಾರ್ವಜನಿಕರು ಹಮ್ಮಿಕೊಂಡಿದ್ದ ಮುಷ್ಕರ ಗುರುವಾರ ನಾಲ್ಕನೇ ದಿನ ಮುಗಿಸಿದ್ದು, ಅಧಿಕಾರಿಗಳು...

`ಗೋವಿಂದ ಪೈ ನಿವಾಸ ಸಾಂಸ್ಕೃತಿಕ ಕಲಾ ಕೇಂದ್ರವನ್ನಾಗಿಸಲು ಸರಕಾರ ಮುಂದಾಗಲಿ’

ಮಂಜೇಶ್ವರ : ರಾಷ್ಟ್ರಕವಿ ಗೋವಿಂದ ಪೈ ನಿವಾಸವನ್ನು ಸಾಂಸ್ಕೃತಿಕ ಕಲಾ ಕೇಂದ್ರವನ್ನಾಗಿಸಲು ಕೇರಳ, ಕರ್ನಾಟಕ ಸರಕಾರಗಳು ಮುಂದಾಗಬೇಕೆಂದು ಮಾಜಿ ಶಾಸಕ ನ್ಯಾಯವಾದಿ ಸಿ ಎಚ್ ಕುಞಂಬು ಅಭಿಪ್ರಾಯಪಟ್ಟರು. ಮಂಜೇಶ್ವರದ ಕೀರ್ತಿಯನ್ನು ವಿಶ್ವಮಾನ್ಯಕ್ಕೆ ಏರಿಸಿದ...

ಸ್ಥಳೀಯ

ಅಪರಿಚಿತ ಯುವಕ ನದಿಗೆ ಹಾರಿ ಆತ್ಮಹತ್ಯೆ

ಕರಾವಳಿ ಅಲೆ ವರದಿ ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ನದಿ ನೂತನ ಸೇತುವೆಯ ಮೇಲಿಂದ ಅಪರಿಚಿತ ಯುವಕನೊಬ್ಬ ನದಿಗೆ ಹಾರಿ ಶುಕ್ರವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ...

ವ್ಯಕ್ತಿಗೆ ಐವರ ತಂಡ ಹಲ್ಲೆ

ಒಳಚರಂಡಿ ಕಾಮಗಾರಿ, ರಸ್ತೆ ವಿವಾದ ಹಿನ್ನೆಲೆ ಕರಾವಳಿ ಅಲೆ ವರದಿ ಮಂಗಳೂರು : ಒಳಚರಂಡಿ ಕಾಮಗಾರಿ, ರಸ್ತೆ ಅಗಲೀಕರಣದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಐವರ ತಂಡ ಹಲ್ಲೆ ನಡೆಸಿದೆ. ನಗರದ ನಾಗುರಿ ಬಳಿ ಈ ಘಟನೆ ನಡೆದಿದೆ....

ಕೊಲೆಗೆ ಸಂಚು ರೂಪಿಸಿದ್ದ ಮೂರು ರೌಡಿಗಳ ಬಂಧನ, ಇಬ್ಬರು ಪರಾರಿ

ಕರಾವಳಿ ಅಲೆ ವರದಿ ಮಂಗಳೂರು : ಕೊಲೆಯ ಪ್ರತೀಕಾರ ತೀರಿಸಲೆಂದು ಸಂಚು ರೂಪಿಸಿದ್ದ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುವ ವಾಹನ ತಡೆದು ದರೋಡೆ ಮಾಡಿ ನಗದು ಹಣ, ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದ ಐವರು...

ಬಂಟ್ವಾಳ ಸಾಹಿತ್ಯ ಸಮ್ಮೇಳನದಲ್ಲೂ ರಾಜಕೀಯವೇ ?

ಮುಹಮ್ಮದ್ ಬಿಸಿಯೂಟ ವಿವಾದದ ಕುರಿತು ಮಾತನಾಡಿದ್ದಾರೆ. ಅದು ಅವರ ವೈಯಕ್ತಿಕ ಅಥವಾ ರಾಜಕೀಯ ವಿಚಾರ. ಅವರು ಮಾತನಾಡಿದ್ದು ಸರಿಯೋ ತಪೆÇ್ಪೀ ಎಂಬುವುದಲ್ಲ ಇಲ್ಲಿನ ವಿಷಯ. ಅವರು ವಿವಾದಾತ್ಮಕವಾಗಿ ಮಾತನಾಡಿದ್ದರೂ ಅದನ್ನು ಸಾಹಿತ್ಯ ಸಮ್ಮೇಳನಕ್ಕೆ...

ಮಂಗಳೂರು ಸೆಂಟ್ರಲ್, ಕಣ್ಣೂರು ರೈಲು ನಿಲ್ದಾಣಗಳಲ್ಲಿ ಹೆಚ್ಚುವರಿ ಪ್ಲಾಟ್ ಫಾರ್ಮ್

ಕರಾವಳಿ ಅಲೆ ವರದಿ ಮಂಗಳೂರು : ಮಂಗಳೂರು ಸೆಂಟ್ರಲ್ ಮತ್ತು ಕಣ್ಣೂರು ರೈಲು ನಿಲ್ದಾಣಗಳಲ್ಲಿ ಹೆಚ್ಚುವರಿ ಪ್ಲಾಟ್ ಫಾರ್ಮ್ ನಿರ್ಮಿಸಲು ಕೇಂದ್ರ ಸರ್ಕಾರ ತಲಾ 40 ಲಕ್ಷ ರೂ ತೆಗೆದಿರಿಸಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ...

`ಮಾನವ ಹಕ್ಕು ಖಚಿತಪಡಿಸಲು ಕರ್ತವ್ಯ ನಿಭಾಯಿಸುವ ಅಗತ್ಯ ಇದೆ’

ಕರಾವಳಿ ಅಲೆ ವರದಿ ಮಂಗಳೂರು : ಭಾರತೀಯ ಸಂವಿಧಾನಾತ್ಮಕ ಹಕ್ಕುಗಳು ಮತ್ತು ವಿಶ್ವಸಂಸ್ಥೆಯ ಜಾಗತಿಕ ಘೋಷಣೆಯನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದಾಗ ಭಾರತ ದೇಶವು ಅದರ ಕಾನೂನಿನೊಂದಿಗೆ ಸರಿಯಾದ ಪಥದಲ್ಲಿ ಸಾಗುತ್ತಿದೆ. ಯುಡಿಎಚ್ಚಾರಿನ ಸಮಾನ ಘನತೆಯ ಹಕ್ಕುಗಳು,...

ಧಾರ್ಮಿಕ ಪ್ರಭಾಷಣಕ್ಕೆ ದುಬಾರಿ ಸಂಭಾವನೆ ಪಡೆಯುವುದಕ್ಕೆ ಕೂರ್ನಡ್ಕ ಜಲಾಲಿ ವಿರೋಧ

ಕರಾವಳಿ ಅಲೆ ವರದಿ ಪುತ್ತೂರು : ಕೇರಳದಿಂದ ಕರ್ನಾಟಕಕ್ಕೆ ಧಾರ್ಮಿಕ ಪ್ರವಚನ ನೀಡಲು ಬರುವ ಕೆಲವು ಧಾರ್ಮಿಕ ಮತಪಂಡಿತರು ದುಬಾರಿ ಸಂಭಾವನೆ ಪಡೆಯುತ್ತಿರುವುದು ಅತ್ಯಂತ ಖೇದಕರ ವಿಚಾರವಾಗಿದೆ ಎಂದು ಕೂರ್ನಡ್ಕ ಮುದರ್ರಿಸ್ ಜಲಾಲಿ ಹೇಳಿದರು. ಧಾರ್ಮಿಕ...

ನಾಯಕತ್ವ ಗುಣ ಇಲ್ಲದವರಿಂದ ದೇಶದ ಬದಲಾವಣೆ ಅಸಾಧ್ಯ : ಎಂ ಆರ್ ರವಿ

ಕರಾವಳಿ ಅಲೆ ವರದಿ ಪುತ್ತೂರು : ``ಕೇವಲ ನಾಯಕರಿದ್ದ ಮಾತ್ರಕ್ಕೆ ದೇಶದಲ್ಲಿ ಬದಲಾವಣೆ ಅಸಾಧ್ಯ, ನಾಯಕರಲ್ಲಿ ನಾಯಕತ್ವದ ಗುಣವಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದ್ದಲ್ಲಿ ಮಾತ್ರ ಬದಲಾವಣೆಯನ್ನು ಕಾಣಲು ಸಾಧ್ಯ'' ಎಂದು ದಕ್ಷಿಣ ಕನ್ನಡ ಜಿಲ್ಲಾ...

ಪ್ರತಿಭಾ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಶರತ್ ಮಡಿವಾಳ ತಂದೆ ಚಿಂತನೆ

ಕರಾವಳಿ ಅಲೆ ವರದಿ ಬಂಟ್ವಾಳ : ರಾಜಕೀಯಕ್ಕಾಗಿ ತನ್ನ ಮಗನ ಸಾವಿನ ಬಗ್ಗೆ ಅನಗತ್ಯ ಮಾತನಾಡಿದ ಮಂಗಳೂರು ಮನಪಾ ಸದಸ್ಯೆ ಪ್ರತಿಭಾ ಕುಳಾಯಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು...

ಶಿಕ್ಷೆಗೊಳಗಾಗಿ ತಲೆಮರೆಸಿ ಕೊಂಡವ ಪೊಲೀಸ್ ವಶ

ಕರಾವಳಿ ಅಲೆ ವರದಿ ಉಪ್ಪಿನಂಗಡಿ : ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿ ಕೇರಳ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿದ್ದ ತಂಬಿ ಮ್ಯಾಥ್ಯೂ (52) ಎಂಬಾತನÀನ್ನು ಉಪ್ಪಿನಂಗಡಿ ಗ್ರಾಮಾಂತರ ಪೊಲೀಸರು ಗುರುವಾರ ಬಂಧಿಸಿದ್ದು, ಕೇರಳದ ಸಿಬಿಸಿಐಡಿ ಪೊಲೀಸರಿಗೆ...