Sunday, March 26, 2017

ಕಾರವಾರ ನಗರದಿಂದ ಕೋಡಿಭಾಗದ ಕಾಳಿ ನದಿವರೆಗೆ ಬೈಪಾಸ್ ನಿರ್ಮಾಣಕ್ಕೆ ಆಗ್ರಹ

 ನಮ್ಮ ಪ್ರತಿನಿಧಿ ವರದಿ ಕಾರವಾರ : ನಗರದಿಂದ ಕೋಡಿಭಾಗದ ಕಾಳಿ ನದಿವರೆಗೆ ಬೈಪಾಸ್ ಅಥವಾ ಪ್ಲೈಓವರ್ ನಿರ್ಮಿಸುವಂತೆ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಂಘದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ನಗರದಿಂದ ಗೋವಾದತ್ತ...

ಬೈಕ್ ಪರಸ್ಪರ ಡಿಕ್ಕಿ : ಸಹಸವಾರ ಮೃತ

ನಮ್ಮ ಪ್ರತಿನಿಧಿ ವರದಿ ಕಾರವಾರ : ತೋಡೂರಿನಲ್ಲಿ ಮಂಗಳವಾರ ಬೈಕುಗಳ ನಡುವೆ ಪರಸ್ಪರ ಅಪಘಾತಕ್ಕೊಳಗಾದಾಗ ಸಹಸವಾರ ಹಿಂಬಂದಿಯಿಂದ ಬರುತ್ತಿರುವ ಟಿಪ್ಪರ್ ಅಡಿಗೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಂಕೋಲಾದ ಬೇಲೆಕೇರಿ ನಿವಾಸಿ ಶಾಂತಾರಾಮ ಬಾನಾವಳಿಕರ್ (26) ಮೃತಪಟ್ಟ...

ಅಕ್ರಮ ಗೋವಾ ಮದ್ಯ ವಶ

ನಮ್ಮ ಪ್ರತಿನಿಧಿ ವರದಿ ಕಾರವಾರ : ಮಡಗಾಂ-ಮಂಗಳೂರು ರೈಲಿನಲ್ಲಿ ಮಂಗಳವಾರ ಅಕ್ರಮವಾಗಿ ಸಾಗಿಸುತ್ತಿದ್ದ ಸಾವಿರಾರು ರೂ ಮೌಲ್ಯದ ಗೋವಾ ಮದ್ಯವನ್ನು ಕಾರವಾರ ರೈಲ್ವೇ ನಿಲ್ದಾಣದ ಆರ್ ಪಿ ಎಫ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಡಗಾಂನಿಂದ ಮಂಗಳೂರು ಕಡೆಗೆ...

ಅಡಿಕೆ ವ್ಯಾಪಾರಕ್ಕೆ ಸಂಬಂಧಿಸಿ ಜಗಳ : ಇಬ್ಬರಿಗೆ ಗಂಭೀರ ಹಲ್ಲೆ

ನಮ್ಮ ಪ್ರತಿನಿಧಿ ವರದಿ ಶಿರಸಿ : ಬಸ್ ನಿಲ್ದಾಣ ಸಮೀಪ ಪೇಟೆಯಲ್ಲಿ ಮಂಗಳವಾರ ಅಡಿಕೆ ವ್ಯಾಪಾರಕ್ಕೆ ಸಂಬಂಧಿಸಿದಂತೆ 5 ಮಂದಿ ಸೇರಿ ಇಬ್ಬರಿಗೆ ಬಾಟಲಿ, ಕೈಯಿಂದ ಹೊಡೆದು ಗಂಭೀರ ಗಾಯಗೊಳಿಸಿದ್ದಾರೆ. ಅಬ್ದುಲ್ ಸಮ್ಮದ್ ಸೈಫುಲ್ಲ ಶುಂಠಿ,...

ಕುಂದಾಪುರ ವಿದ್ಯಾರ್ಥಿ ಕುಮಟಾದಲ್ಲಿ ಆತ್ಮಹತ್ಯೆ

ಕುಮಟಾ : ಇಲ್ಲಿನ ಡಾ ಎ ವಿ ಬಾಳಿಗಾ ವಾಣಿಜ್ಯ ಕಾಲೇಜಿನ ಪಿಯು ವಿದ್ಯಾರ್ಥಿ ಹಾಗೂ ಕುಂದಾಪುರ ಮೂಲದ ಅಳ್ವೆಕೋಡಿ ನಿವಾಸಿ ಗೌತಮ ಕೃಷ್ಣ ಶೆಟ್ಟಿಗಾರ (18) ಮಂಗಳವಾರ ನೇಣಿಗೆ ಶರಣಾಗಿದ್ದಾನೆ. ಕಾಮರ್ಸ್...

ಕಡಲತೀರ ಅಭಿವೃದ್ಧಿ ಸಮಿತಿ ಕಾರ್ಯವೈಖರಿ ವಿರುದ್ಧ ಕಾರವಾರ ನಗರಸಭೆ ಸದಸ್ಯರ ಆಕ್ರೋಶ

 ನಮ್ಮ ಪ್ರತಿನಿಧಿ ವರದಿ ಕಾರವಾರ : ಜಿಲ್ಲಾಡಳಿತದ ಕಡಲತೀರ ಅಭಿವೃದ್ಧಿ ಸಮಿತಿಯ ಕಾರ್ಯವೈಖರಿಯಿಂದ ನಗರಸಭೆ ಆದಾಯ ಗೋತಾ ಹೊಡೆದಿದೆ ಎಂದು ಬಹುತೇಕ ಸದಸ್ಯರು ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ ಸಭಾಂಗಣದಲ್ಲಿ...

ಅಪ್ರಾಪ್ತೆ ಅತ್ಯಾಚಾರಿ ಬಂಧಿಸಲು ಪೊಲೀಸ್ ಇಲಾಖೆ ವಿಫಲ : ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಹೊನ್ನಾವರ : ``ಅಪ್ರಾಪ್ತ ಬುದ್ಧಿಮಾಂದ್ಯೆ ಮೇಲೆ ನಿರಂತರ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿಯನ್ನಾಗಿಸಿ ತಲೆಮರೆಸಿಕೊಂಡಿರುವ ಆರೋಪಿ ಸುಬ್ರಹ್ಮಣ್ಯ ರಾಮ ಭಂಡಾರಿಯನ್ನು ಬಂಧಿಸುವಲ್ಲಿ ವಿಫಲವಾಗಿರುವ ಜಿಲ್ಲಾ ಪೊಲೀಸ್ ಇಲಾಖೆಯ ವಿರುದ್ಧ...

ಕಾರು -ಬೈಕ್ ಡಿಕ್ಕಿ : ಸವಾರರಿಗೆ ಗಾಯ

ನಮ್ಮ ಪ್ರತಿನಿಧಿ ವರದಿ ಕುಮಟಾ : ತಾಲೂಕಿನ ದೀವಗಿ ಸೇತುವೆ ಬಳಿ ಸೋಮವಾರ ಕಾರು ಮತ್ತು ಬೈಕ್ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಧಾರೇಶ್ವರದ ಹೋರಭಾಗ ನಿವಾಸಿಗಳಾದ...

ಗಜನಿಯಲ್ಲಿ ಬಿದ್ದು ವ್ಯಕ್ತಿ ಸಾವು

ನಮ್ಮ ಪ್ರತಿನಿಧಿ ವರದಿ ಕುಮಟಾ : ತಾಲೂಕಿನ ಹಳಕಾರ ವ್ಯಕ್ತಿಯೊಬ್ಬ ಸೋಮವಾರ ಗಜನಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ತಾಲೂಕಿನ ಹಣ್ಣೇಮಠ ನಿವಾಸಿ ಯಂಕು ಪಟಗಾರ (61) ಮೃತ ವ್ಯಕ್ತಿ. ಈತ ಸಾರಾಯಿ ಕುಡಿಯುವ ಚಟದವನಾಗಿದ್ದು, ಹಳಕಾರಕ್ಕೆ ಸಾರಾಯಿ...

ಮರದಿಂದ ಬಿದ್ದು ಗಾಯಗೊಂಡ ರೈತ ಚಿಕಿತ್ಸೆ ಫಲಿಸದೇ ಮೃತ

 ನಮ್ಮ ಪ್ರತಿನಿಧಿ ವರದಿ ಕುಮಟಾ : ಸೊಪ್ಪಿನ ಹೊಸಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ದೋಣಿಹಳ್ಳದ ರೈತ ಅಗ್ನೇಲ್ ಪಿಂಟೊ ಮಾರ್ಚ್ 12ರಂದು ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದು, ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.. ರೈತ ಅಗ್ನೇಲ್...

ಸ್ಥಳೀಯ

ಯುವಕಗೆ ಮಾರಣಾಂತಿಕ ಹಲ್ಲೆ

ನಮ್ಮ ಪ್ರತಿನಿಧಿ ವರದಿ ವಿಟ್ಲ : ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಪೂರ್ವದ್ವೇಷ ಹೊಂದಿದ್ದ ಯುವಕರಿಬ್ಬರು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಕನ್ಯಾನದಲ್ಲಿ ನಡೆದಿದೆ. ಕನ್ಯಾನ ಗ್ರಾಮದ ಮರ್ತನಾಡಿ ನಿವಾಸಿ ಕೂಲಿ...

ಎದೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ ಪ್ಯಾಟ್ರೋಲಿಂಗ್ ವಾಹನ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ರಾತ್ರಿ ಗಸ್ತು ನಿರತವಾಗಿದ್ದ ಪ್ಯಾಟ್ರೋಲಿಂಗ್ ವಾಹನದಲ್ಲಿ ಎದೆನೋವಿನಿಂದ ಬಳಲುತ್ತಿದ್ದ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು ಮಾನವೀಯತೆ ಮೆರೆದ ಘಟನೆ ನಗರದಲ್ಲಿ ನಡೆದಿದೆ. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ...

ಕೊಟ್ಟ ಗಡು ಮುಗಿದರೂ ನಗರದ ಲೇಡಿಗೋಶನ್ ಆಸ್ಪತ್ರೆಯ ನೂತನ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ

ಮಾ 23ರಂದು ಲೋಕಾರ್ಪಣೆ ಎಂದಿದ್ದ ಆರೋಗ್ಯ ಸಚಿವ ರಮೇಶಕುಮಾರ್ ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಲೇಡಿಗೋಶನ್ ಸರಕಾರಿ ಆಸ್ಪತ್ರೆಯ ನೂತನ ಕಟ್ಟಡ ಮಾ 23ರಂದು ಸಿದ್ಧಗೊಳ್ಳಲಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ...

ತ್ಯಾಜ್ಯದಿಂದಲೂ ಸಂಪತ್ತು : ನಿಟ್ಟೆ ವಿದ್ಯಾರ್ಥಿಗಳ ಕೈಚಳಕ

ಮಂಗಳೂರು : ಬಟಾಟೆ ಚಿಪ್ಸ್ ಪೊಟ್ಟಣದಲ್ಲಿ ಸುಂದರವಾದ ಹೂವನ್ನು ತಯಾರಿಸಬಹುದು ಎಂಬುದನ್ನು ಎಂದಾದರೂ ಊಹಿಸಿದ್ದೀರಾ ?, ತಂಪಾದ ಪಾನೀಯದ ಪ್ಲಾಸ್ಟಿಕ್ ಬಾಟಲಿಯಿಂದ ಗೊಂಚಲು ದೀಪವೊಂದು ಸಿದ್ಧಗೊಳ್ಳಬಹುದು ಎಂದು ಕಲ್ಪನೆ ಮಾಡಿದ್ದಿರಾ ? ಇಂತಹದೊಂದು...

ಬಸ್ ದರ ಏರಿಕೆಗೆ ಮುನ್ನ ಆರ್ಟಿಎ ಸಭೆ ಕರೆಯಲು ಸಾರ್ವಜನಿಕರ ಆಗ್ರಹ

ನಮ್ಮ ಪ್ರತಿನಿಧಿ ವರದಿ ಉಡುಪಿ : ಬಹಳ ಸಮಯಗಳ ನಂತರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಕ್ರಮಬದ್ಧವಲ್ಲದ ಮತ್ತು ಧೀರ್ಘ ಸಮಯದ ಬಳಿಕ ನಡೆಯುತ್ತಿರುವ ಸಭೆಯ ಬಗ್ಗೆ ಪ್ರಶ್ನೆಗಳ ಸುರಿಮಳೆಯೇ ಹರಿದುಬಂದಿದೆ. ಸಭೆಯಲ್ಲಿ...

ಬೆಂಗಳೂರು-ಮಂಗಳೂರು ರೈಲು ಓಡಾಟ ಯಾವಾಗ ?

ಮಂಗಳೂರು : ಬಹುನಿರೀಕ್ಷಿತ ಯಶವಂತಪುರ ಮತ್ತು ಹಾಸನ ನಡುವಿನ ರೈಲಿಗೆ ಮಾ 26ರಂದು ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಹಸಿರು ನಿಶಾನೆ ನೀಡುವ ಎಲ್ಲಾ ಸಿದ್ಧತೆ ನಡೆದಿದೆ. ಆದರೆ ಮಂಗಳೂರು-ಬೆಂಗಳೂರು ನಡುವಿನ...

ಬೆಲೆ ಏರಿಕೆ ಖಂಡಿಸಿ ಸಿಪಿಎಂ ವಾಹನ ಜಾಥಾ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಗ್ಯಾಸ್ ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಪಡಿತರ ಅವ್ಯವಸ್ಥೆಯನ್ನು ಸರಿಪಡಿಸಲು ಆಗ್ರಹಿಸಿ ಮತ್ತು ಕುಡಿಯುವ ನೀರು ಒದಗಿಸಲು ಒತ್ತಾಯಿಸಿ ಸಿಪಿಐಎಂ ವತಿಯಿಂದ ದ ಕ...

ತೆಂಗಿನ ಮರಕ್ಕೆ ಗೊಬ್ಬರ ನೀಡುವ ನೆಪದಲ್ಲಿ ವಂಚನೆ

ಮಂಗಳೂರು : ತೆಂಗಿನ ಮರಕ್ಕೆ ರೋಗ ಬಾರದಂತೆ ತಡೆಯಲು ಮತ್ತು ಅಧಿಕ ಇಳುವರಿ ಪಡೆಯಲು ಗೊಬ್ಬರ ಹಾಕುತ್ತೇವೆ ಎಂದು ಮೂವರು ವಂಚಿಸಿದ ಘಟನೆ ನಗರದಲ್ಲಿ ನಡೆದಿದೆ.ಇಲ್ಲಿನ ತಾರೆತೋಟದ ಡ್ಯಾಫ್ನಿ ಹ್ಯಾರಿಯೆಟ್ ಮನೆಗೆ ಶುಕ್ರವಾರ...

ಕಾರ್ನಾಡು ಕೃಷಿಗೆ ರೋಗ : ಸಂಶೋಧನಾ ತಂಡ ಭೇಟಿ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇಲ್ಲಿನ ಕಾರ್ನಾಡು ಧರ್ಮಸ್ಥಾನ, ಚಿತ್ರಾಪು, ಪಡುಬೈಲು ಪ್ರದೇಶದಲ್ಲಿ ಕಳೆದ ಎರಡು ತಿಂಗಳಿಂದ ಕಾಣಿಸಿಕೊಂಡು ತೆಂಗು, ಹಣ್ಣು ಸಹಿತ ಕೃಷಿ ಹಾನಿಗೆ ಕಾರಣವಾದ ಕಪ್ಪಗಿನ ಮಸಿ ಉಂಟಾಗಿರುವ ಪ್ರದೇಶಗಳಿಗೆ...

ಪುತ್ತೂರು ದೇವಳ ತಂತ್ರಿ ಬದಲಾವಣೆ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಪುತ್ತೂರಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಕುಂಟಾರು ರವೀಶ್ ತಂತ್ರಿ ಈ ಬಾರಿಯ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಇದಕ್ಕೆ ಕಾರಣ ಕಳೆದ...