Sunday, December 17, 2017

ಕಾಡುಕೋಣ ಕೊಂದ ನಾಲ್ವರಿಗೆ ಸಜೆ, ದಂಡ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕಾಡುಕೋಣವನ್ನು ಕೊಂದು ಮಾಂಸ ಮಾಡಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರಿಗೆ ಕಾಸರಗೋಡು ಚೀಫ್ ಜ್ಯುಡೀಶಿಯಲ್ ಮೆಜಿಸ್ಟ್ರೇಟ್ ನ್ಯಾಯಾಲಯ ಎರಡು ಸೆಕ್ಷನ್ನುಗಳಲ್ಲಾಗಿ ತಲಾ ಒಂದು ವರ್ಷ ಸಜೆ ಎಂಬಂತೆ...

ಕಾಣೆಯಾದವಳು ಪ್ರಿಯತಮನ ಜೊತೆ ಠಾಣೆಯಲ್ಲಿ ಹಾಜರ್

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಇಬ್ಬರು ಮಕ್ಕಳನ್ನು ನೆರೆ ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿದ್ದ ಯುವತಿ ಪ್ರಿಯತಮನೊಂದಿಗೆ ಮರಳಿ ಬಂದು ಪೆÇಲೀಸ್ ಠಾಣೆಯಲ್ಲಿ ಹಾಜರಾಗಿದ್ದಾಳೆ. ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಯುವತಿ ಮಕ್ಕಳನ್ನು ಬಿಟ್ಟು ಪ್ರಿಯತಮನೊಂದಿಗೆ...

ಸ್ಮಶಾನಕ್ಕೆ ಭೂಮಿ ಇಲ್ಲದೆ ಜನ ಪರದಾಟ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಗಡಿ ಪರಿಸರದ ಹಿಂದುಳಿದ ಪ್ರದೇಶಗಳಲ್ಲಿ ಸೂಕ್ತ ಸ್ಮಶಾನ ಸೌಕರ್ಯವಿಲ್ಲದ ಕಾರಣ ಸಮಸ್ಯೆಗಳಿಂದ ಬಳಲಿ ಬೆಂಡಾಗಿರುವ ಹಲವು ಗಡಿನಾಡ ಮಂದಿ ಶವ ಸಂಸ್ಕಾರಕ್ಕೆ ಕರ್ನಾಟಕದತ್ತ ಮುಖಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಕೆಲ...

ಕಾಡಾನೆಗಳಿಂದ ಕೃಷಿ ನಾಶ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮುಳ್ಳೇರಿಯ ಸಮೀಪದ ಕೊಟ್ಟಂಗುಳಿ ನಿವಾಸಿ ಚಾತು ನಾಯರ್ ಅವರ ಕೃಷಿ ಕಾಡಾನೆಯಿಂದ ಸರ್ವ ನಾಶಗೊಂಡಿದೆ. ಇದೀಗ ಕೃಷಿ ನಾಶಗೊಂಡ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ. ಕಾಡಿನಿಂದ ಆಹಾರ ಹುಡುಕಿ ಕಾಡಾನೆಗಳು...

ವ್ಯಾಪಾರಿಗೆ ಇರಿತ : ಯುವಕ ಬಂಧನ

 ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮೊಗ್ರಾಲ್ ಪುತ್ತೂರಿನಲ್ಲಿರುವ ಲೈಟ್ ಆಂಡ್ ಸೌಂಡ್ಸ್ ಅಂಗಡಿಯನ್ನು ಹಾನಿಗೊಳಿಸಿ ವ್ಯಾಪಾರಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೆÇಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಪೇರಾಲ್ ಮೈಮೂನ್ ನಗರದ ಕೆ ಶಂಶುದ್ದೀನ್ ಎಂಬ...

ಯುವಕ ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡ : ಕೂಲಿ ಕಾರ್ಮಿಕನಾದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಾಟುಕುಕ್ಕೆ ಬಾಳೆಮೂಲೆ ಬಳಿಯ ಕಟೀಲ್ತಡ್ಕ ಎಂಬಲ್ಲಿನ ಸುಬ್ಬಯ್ಯ ನಾಯ್ಕರ ಪುತ್ರ ಕೃಷ್ಞ ನಾಯ್ಕ ಮೃತ ವ್ಯಕ್ತಿ. ಸಂಜೆ...

ವನ್ಯ ಮೃಗಗಳ ಆಕ್ರಮಣದಿಂದ ಪರಿಹಾರ ಆಗ್ರಹಿಸಿ ಕೃಷಿಕ ಮೋರ್ಚಾ ಅರಣ್ಯ ಇಲಾಖೆ ಎದುರು ಧರಣಿ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ವನ್ಯ ಮೃಗಗಳ ಆಕ್ರಮಣದಿಂದ ರೈತರನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಕೃಷಿಕ ಮೋರ್ಚಾ ಇದರ ನೇತೃತ್ವದಲ್ಲಿ ಜಿಲ್ಲಾ ಅರಣ್ಯ ಇಲಾಖೆಯ ಎದುರು ಧರಣಿ  ನಡೆಸಲಾಯಿತು. ಕಾಡು ಮೃಗಗಳ ಆಕ್ರಮಣದಿಂದ...

ಪ್ರಿಯತಮನ ಅರಸಿ ಬಂದ ಬುರ್ಖಾ ಯುವತಿ ಬೆಂಗಳೂರಿಗೆ ವಾಪಾಸ್

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಪ್ರಿಯತಮನನ್ನು ಹುಡುಕಿ ಬದಿಯಡ್ಕಕ್ಕೆ ಬುರ್ಖಾ ಧರಿಸಿ ಬಂದ ಬೆಂಗಳೂರು ನಿವಾಸಿಯಾದ ಯುವತಿಯನ್ನು ಬೆಂಗಳೂರಿನಿಂದ ಆಗಮಿಸಿದ ಆಕೆಯ ಸಂಬಂಧಿಕರು ಕರೆದೊಯ್ದರು. ಶುಕ್ರವಾರ ಬದಿಯಡ್ಕದಲ್ಲಿ ಬುರ್ಖಾ ಧರಿಸಿ ಸಂಶಯಾಸ್ಪದವಾಗಿ ಕಂಡುಬಂದ ಬೆಂಗಳೂರು...

ತಲಪಾಡಿ ಟೋಲ್ ಸಿಬ್ಬಂದಿ ದುರ್ವರ್ತನೆ ಯುವ ಕಾಂಗ್ರೆಸ್ಸಿಗರ ಜಿಲ್ಲಾಧಿಕಾರಿಗೆ ದೂರು

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ತಲಪಾಡಿಯಲ್ಲಿ ನವಯುಗ  ಸಂಸ್ಥೆಯ  ಟೋಲ್‍ನಲ್ಲಿ ಕಾಮಗಾರಿ ಮುಗಿಯುವ ಮೊದಲೇ ಸುಂಕ ವಸೂಲಾತಿ ಪ್ರಾರಂಭಗೊಂಡಿದ್ದು, ತಲಪಾಡಿ ಟೋಲ್ ಪರಿಸರದ ಸಿಬ್ಬಂದಿಗಳಿಂದ ನಿತ್ಯವೂ ಪ್ರಯಾಣಿಕರಿಗೆ ಕಿರುಕುಳವಾಗುತ್ತಿದೆ. ಟೋಲ್‍ನಲ್ಲಿ ಕ್ರಿಮಿನಲ್ ಹಿನ್ನೆಲೆಯಿರುವ...

ಮೋದಿ, ಪಿಣರಾಯಿ ಸರಕಾರಕ್ಕೆ ರಣ ಕಹಳೆ ಯಾತ್ರೆ ಮುನ್ನೆಚ್ಚರಿಕೆ

ಕೇಂದ್ರ ಮಾಜಿ ಸಚಿವ ಎ ಕೆ ಆಂಟನಿ ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಉಪ್ಪಿನಕಾಯಿ ಮಾರಾಟಗಾರನನ್ನೂ ಕೂಡಾ ಜಿಎಸ್ಟಿಯೊಳಗೆ ಸೇರಿಸಿ ಅಂತವರ ಜೀವನ ಕ್ರಮಕ್ಕೇ ತಿರುಗೇಟಾದ ಮೋದಿ ಸರಕಾರಕ್ಕೂ ಅದೇ ರೀತಿ ದುರಾಡಳಿತಕ್ಕೆ ಸಾಕ್ಷಿಯಾಗುತ್ತಿರುವ...

ಸ್ಥಳೀಯ

ಕುಮಟಾದ ಸುದ್ದಿ ವಾಹಿನಿ ಕಚೇರಿಗೆ ಬೀಗ ಜಡಿದ ತಹಶೀಲ್ದಾರ್ ತಂಡ

ಪ್ರಚೋದನಾಕಾರಿ ಹೇಳಿಕೆ ಬಿತ್ತರ ಆರೋಪ ನಮ್ಮ ಪ್ರತಿನಿಧಿ ವರದಿ ಕುಮಟಾ : ಅಕ್ರಮವಾಗಿ ನಡೆಸುತ್ತಿದ್ದ ಕುಮಟಾದ `ನೂತನ' ಲೋಕಲ್ ಸುದ್ದಿ ವಾಹಿನಿಯನ್ನು ರದ್ದುಗೊಳಿಸಿ, ಕಚೇರಿಯಲ್ಲಿದ್ದ ಸೊತ್ತುಗಳನ್ನು ತಹಶೀಲ್ದಾರ್ ಮೇಘರಾಜ್ ನಾಯ್ಕ ಶುಕ್ರವಾರ ಜಪ್ತಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಎಸ್...

ಗೆಳೆಯನ ಕಾರು ಮಾರಾಟ ಮಾಡಿ ವಂಚಿಸಿದ ಇಬ್ಬರ ವಿರುದ್ಧ ಕೇಸು

ನಮ್ಮ ಪ್ರತಿನಿಧಿ ವರದಿ ಉಡುಪಿ : ಗೆಳೆತನದ ಆಧಾರದಲ್ಲಿ ಎರಡು ದಿನದ ಮಟ್ಟಿಗೆ ಟೊಯೋಟಾ ಫಾರ್ಚುನರ್ ಕಾರನ್ನು ಪಡೆದುಕೊಂಡವರು ವಾಪಾಸು ನೀಡದೇ, ಬೇರೊಬ್ಬರಿಗೆ ಮಾರಾಟ ಮಾಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳ ವಿರುದ್ಧ...

ಶಾಲಾ ಸನಿಹ ಮದ್ಯದಂಗಡಿ ತೆರವಿಗೆ ವಿದ್ಯಾರ್ಥಿಗಳಿಂದ ಕಾರ್ಡ್ ಅಭಿಯಾನ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದು ಬಾರ್ ಅಂಡ್ ರೆಸ್ಟೊರಂಟ್ ಉದ್ಘಾಟನೆ ಮಾಡದೇ ಮರಳಿದ್ದ ಮಂಗಳೂರು ಮೇಯರ್ ಕವಿತಾ ಸನಿಲಗೆ ಸೆಡ್ಡು ಹೊಡೆದು ಕುಂಟಿಕಾನದಲ್ಲಿ ಬಾರ್ ರಾಜಾರೋಷವಾಗಿ ತೆರೆದು ಕಾರ್ಯಾಚರಣೆ...

ಉತ್ತರ ಕನ್ನಡ ಹಿಂಸಾಚಾರ : ದೇಶಪಾಂಡೆ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ ಮತ್ತು ಶಿರಸಿಯಲ್ಲಿ ಇತ್ತೀಚೆಗೆ ವ್ಯಾಪಕ ಹಿಂಸಾಚಾರ ಮತ್ತು ಅಹಿತಕರ ಘಟನೆಗಳು ನಡೆದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಮಾತ್ರ ಏನೂ...

ಪಂಪ್ವೆಲ್ ಬೈಪಾಸ್-ಕರಾವಳಿ ವೃತ್ತ ಟ್ರಾಫಿಕ್ ಜಾಂ

ಕಂಕನಾಡಿ ಹಳೇ ರಸ್ತೆ ಒಳಚರಂಡಿ ದುರಸ್ತಿ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸಂಪೂರ್ಣ ಹೊಂಡ ಬಿದ್ದಿದ್ದ ಪಂಪ್ವೆಲ್ ಹಳೇ ರಸ್ತೆಯನ್ನು ಇದೀಗ ಕಾಮಗಾರಿಗಾಗಿ ಕೈಗೆತ್ತಿಕೊಳ್ಳಲಾಗಿದೆ. ಕಂಕನಾಡಿ ವೃತ್ತದಿಂದ ಪ್ರಾರಂಭಗೊಂಡು ಫಾದರ್ ಮುಲ್ಲರ್ ಆಸ್ಪತ್ರೆ ಪಕ್ಕದ ರಸ್ತೆಯಾಗಿ...

ಇಂದು ಮಡಂತ್ಯಾರಲ್ಲಿ ಏಸು ಕ್ರಿಸ್ತ ಯಕ್ಷಗಾನ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕ್ರಿಸ್ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳಿವೆಯೆನ್ನುವಾಗ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಚರ್ಚ್ ಆಡಳಿತವು  ಬೈಬಲ್ ಆಧರಿತ ಯಕ್ಷಗಾನ `ಶ್ರೀ ಏಸು ಕ್ರಿಸ್ತ ಮಹಾತ್ಮೆ' ಪ್ರದರ್ಶಿಸಲು ವೇದಿಕೆ ಸಜ್ಜುಗೊಳಿಸಿದೆ....

ಮುಲ್ಕಿ ಸರ್ಫಿಂಗ್ ಪಾಯಿಂಟಲ್ಲಿ 200 ಬ್ಯಾಗ್ ತ್ಯಾಜ್ಯ ಸಂಗ್ರಹ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸರ್ಫಿಂಗ್ ಸ್ವಾಮಿ ಫೌಂಡೇಷನ್ ಇತ್ತೀಚೆಗೆ ಆಯೋಜಿಸಿದ್ದ ಬೃಹತ್ ಬೀಚ್ ಸ್ವಚ್ಛತೆ ಮತ್ತು ಅರಿವು ಕಾರ್ಯಕ್ರಮದಲ್ಲಿ ಮುಲ್ಕಿ-ಹೆಜಮಾಡಿ ಸರ್ಫಿಂಗ್ ಪಾಯಿಂಟಲ್ಲಿ 200 ಬ್ಯಾಗ್ ತ್ಯಾಜ್ಯ ಸಂಗ್ರಹಿಸಲಾಗಿದೆ. ಮಂಗಳೂರು ಸರ್ಫ್ ಕ್ಲಬ್...

ದೀಪೆÇೀತ್ಸವ ಅಲಂಕಾರಕ್ಕೆ ಕಿಡಿಗೇಡಿಗಳಿಂದ ಹಾನಿ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಹೊಸಂಗಡಿಯಲ್ಲಿ ನಡೆಯುತ್ತಿರುವ ಅಯ್ಯಪ್ಪ ದೀಪೆÇೀತ್ಸವದ ಅಂಗವಾಗಿ ಹಾಕಲಾಗಿದ್ದ ಪ್ರಚಾರ ವಸ್ತುಗಳನ್ನು ಕಿಡಿಗೇಡಿಗಳು ಹಾನಿಗೈದ ಘಟನೆ ಗುರುವಾರ ರಾತ್ರಿ ನಡೆದಿದೆ. ಹೊಸಂಗಡಿ ಪೇಟೆ, ರೈಲ್ವೇ ಗೇಟು ಪರಿಸರ, ಕ್ಷೇತ್ರ ಪರಿಸರಗಳಲ್ಲಿ...

ಸನ್ಯಾಸಿನಿಯರು ನಡೆಸುವ ಕಾರ್ಮಲ್ ಶಾಲೆಗೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕಾರ್ಮಲ್ ಸನ್ಯಾಸಿನಿಯರು ನಡೆಸುವ ಸಾಮಾಜಿಕ ಚಟುವಟಿಕೆಗಳು ಇತರರಿಗೆ ಮಾದರಿ ಹಾಗೂ ಪ್ರಶಂಸನೀಯವೂ ಆಗಿದೆ. ಹಾಗೂ ಸಣ್ಣ ಸಣ್ಣ ಕಾರ್ಯಗಳು ಮುಂದೆ ನಡೆಯಲಿರುವ ದೊಡ್ಡ ಸಾಮಾಜಿಕ ಚಟುವಟಿಕೆಗಳಿಗೆ ನಾಂದಿ...

ನೀರು ಪೆÇೀಲು : ಕಷ್ಟದಲ್ಲಿ ಗ್ರಾಮಸ್ಥರು

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಮಂಜೇಶ್ವರ ಗ್ರಾ ಪಂ 8ನೇ ವಾರ್ಡು ಅಂಬೇಡ್ಕರ್ ಕಾಲೊನಿಯಲ್ಲಿ ಕೇರಳ ವಾಟರ್ ಆಥೋರಿಟಿ ಮಣ್ಣಿನಡಿಯಲ್ಲಿ ಅಳವಡಿಸಲಾಗಿರುವ ಪೈಪುಗಳು ತುಂಡಾಗಿ ನೀರು ಪೆÇೀಲಾಗುತ್ತಿದೆ. ಹಲವಾರು ಸಲ ಇಲಾಖೆಯ ಅಧಿಕಾರಿಗಳಿಗೆ...