Saturday, August 19, 2017

ಯುಪಿ ಗೋರಖಪುರದಲ್ಲಿ ಶಿಶುಗಳ ಸರಣಿ ಸಾವು ಖಂಡಿಸಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಉತ್ತರಪ್ರದೇಶದ ಗೋರಖಪುರದ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕದ ಕೊರತೆಯಿಂದ ಶಿಶುಗಳು ಮರಣಹೊಂದಿರುವ ಘಟನೆಯನ್ನು ಖಂಡಿಸಿ ಕೇರಳ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್ (ಕೆಎಸ್ಟಿಎ) ಮಂಜೇಶ್ವರ ಉಪ ಜಿಲ್ಲಾ ಸಮಿತಿ...

Àನ್ನಡ ಭಾಷಾಂತರಕಾರರು ಇಲ್ಲದಿರುವುದೇ ಗಡಿನಾಡ ಜನ ಸೈನ್ಯಕ್ಕೆ ಸೇರದಿರಲು ಕಾರಣ

ನಿವೃತ ಸೇನಾಧಿಕಾರಿ ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ``ಗಡಿನಾಡು ಕಾಸರ ಗೋಡಿನ ಯುವ ಸಮೂಹಕ್ಕೆ ಸೈನಿಕರಾಗಿ ಸೇವೆ ಸಲ್ಲಿಸಲು ಅವಕಾಶ ಸಿಗದೇ ಇರಲು ಕನ್ನಡ ಭಾಷಾಂತರಕಾರರು ಇಲ್ಲದಿರುವುದು ಪ್ರಮುಖ ಕಾರಣ'' ಎಂದು ನಿವೃತ್ತ ಜಿಲ್ಲಾ...

ಕಾರು ಡಿಕ್ಕಿ : ಸೈಕಲ್ ಸವಾರ ಬಾಲಕ ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ ಕುಂಬಳೆ : ಕಾರು ಡಿಕ್ಕಿ ಹೊಡೆದು ಸೈಕಲ್ ಸವಾರ ಬಾಲಕ ಗಾಯಗೊಂಡಿದ್ದಾನೆ. ಕೊಡ್ಯಮ್ಮೆ ಚೂರಿತ್ತಡ್ಕ ನಿವಾಸಿ ಮೊಹಮ್ಮದ್ ಹನೀಫ ಎಂಬವರ ಪುತ್ರನೂ ಕುಂಬೋಲ್ ಎಯುಪಿ ಶಾಲೆ ವಿದ್ಯಾರ್ಥಿಯಾದ ಮೊಹಮ್ಮದ್ ಸಿನಾನ್ (12)...

ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕು, ಕಾನೂನು ಅರಿವು ಕಾರ್ಯಕ್ರಮ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ವಿದ್ಯಾರ್ಥಿ ಜೀವನ ಮನುಷ್ಯ ಜೀವನದ ಪ್ರಧಾನ ಮೈಲುಗಲ್ಲಾಗಿದ್ದು, ಇದರಲ್ಲಿ ಇಡುವ ಪ್ರತೀ ಹೆಜ್ಜೆಗಳು ಭಾವೀ ಬದುಕಿನ ರೂಪಗಳಾಗಿರುತ್ತದೆ'' ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಹೇಳಿದರು. ಗುರುವಾರ...

22 ಕಿಲೋ ಗಾಂಜಾ ಪತ್ತೆ : ಒಬ್ಬ ಸೆರೆ, ಇನ್ನೊಬ್ಬಗೆ ಶೋಧ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕುಂಬಳೆ ಮತ್ತು ಮಂಜೇಶ್ವರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ತೂಮಿನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಾವಿಗೆ ರಿಂಗ್ ಹಾಕುವ ಸಮೀಪದಲ್ಲಿದ್ದ ಶೆಡ್ಡೊಂದರಲ್ಲಿ ಬಚ್ಚಿಡಲಾಗಿದ್ದ 22 ಕಿಲೋ ಗಾಂಜಾವನ್ನು ಪತ್ತೆ...

ಸ್ಕೂಟರಿನಲ್ಲಿ ಸಾಗಿಸುತ್ತಿದ್ದ ಮದ್ಯ ಸಹಿತ ಒಬ್ಬ ಸೆರೆ

ಮಂಜೇಶ್ವರ : ಸ್ಕೂಟರಿನಲ್ಲಿ ಸಾಗಿಸುತ್ತಿದ್ದ ನಾಲ್ಕೂವರೆ ಲೀಟರ್ ಅಕ್ರಮ ಮದ್ಯ ಸಹಿತ ಒಬ್ಬನನ್ನು ಕುಂಬಳೆ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಬ್ರಾಣ ಬೀರಂಟಿಕೆರೆ ನಿವಾಸಿ ಸಂಜೀವ್ (19) ಬಂಧಿತ. ಈತ ಸ್ಕೂಟರಿನಲ್ಲಿ ಮದ್ಯ ಸಹಿತ ತೆರಳುತ್ತಿದ್ದಾಗ...

ಕಿಡಿಗೇಡಿಗಳಿಂದ ಕಾರಿಗೆ ಹಾನಿ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಬ್ಯಾಂಕೊಂದರ ಮುಂಭಾಗ ನಿಲ್ಲಿಸಲಾಗಿದ್ದ ಕಾರಿನ ಗಾಜನ್ನು ಪುಡಿಗೈದು ಹಾನಿಗೊಳಿಸಿದ ಬಗ್ಗೆ ಮಂಜೇಶ್ವರ ಪೆÇಲೀಸರಿಗೆ ದೂರು ನೀಡಲಾಗಿದೆ. ಪೈವಳಿಕೆ ನಿವಾಸಿ ಇಬ್ರಾಹಿಂ ಖಲೀಲ್ ಎಂಬವರ ನ್ಯಾನೋ ಕಾರನ್ನು ಹಾನಿಗೊಳಿಸಲಾಗಿದೆ. ಬುಧವಾರ...

ಸರಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕುಂಬಳೆ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಕೇರಳ ಸರಕಾರದ ಪ್ರಧಾನ ಕಚೇರಿಗಳಲ್ಲಿ ಸ್ವಾತಂತ್ರ ದಿನದಂದು ವಿವಿಧ ರೀತಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದು, ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೇರಳ ಸರಕಾರದ ಬಜೆಟಿನ ಸಿಂಹಪಾಲು...

ಡಿವೈಎಫೈ -ಬಿಜೆಪಿ ಘರ್ಷಣೆ : ಹಲವರು ಆಸ್ಪತ್ರೆಗೆ, ಹಾನಿ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮಾವುಂಗಾಲಿನಲ್ಲಿ ನಡೆದ ರಾಜಕೀಯ ಘರ್ಷಣೆಯಲ್ಲಿ ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನೀಲೇಶ್ವರ ಸಮೀಪದ ಮಾವುಕ್ಕೋಲು ಎಂಬಲ್ಲಿ ಮೆರವಣಿಗೆಯೊಂದಿಗೆ ಆಗಮಿಸಿದ ಡಿವೈಎಫೈ ಕಾರ್ಯಕರ್ತರು ವ್ಯಾಪಕ ಅಕ್ರಮ ನಡೆಸಿರುವುದಾಗಿ ಬಿಜೆಪಿ ಆರೋಪಿಸಿದೆ. ಮಾವುಂಗಾಲಿನಲ್ಲಿ...

ಯುವಕನ 7 ಸಾವಿರ ನಗದು, ಬೆಳ್ಳಿ ಸರ ಎಗರಿಸಿದ ದರೋಡೆಕೋರರು

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಬುಧವಾರ ಮುಂಜಾನೆ ಸ್ನೇಹಿತನೊಂದಿಗೆ ತೆರಳುತ್ತಿದ್ದ ಯುವಕನಿಂದ ಕಾಸರಗೋಡು ಎರಿಯಾಲಿನಲ್ಲಿ ಏಳು ಸಾವಿರ ರೂ ನಗದು ಹಾಗೂ ಬೆಳ್ಳಿ ಸರವನ್ನು ದರೋಡೆಕೋರರು ಅಪಹರಿಸಿದ್ದಾರೆ. ಪೈವಳಿಕೆ ಪಚ್ಚಂಬಳ ನಿವಾಸಿ ಫೈಸಲ್ ಕಲಂದರ(25)ನಿಂದ...

ಸ್ಥಳೀಯ

ಇಸ್ಲಾಂ ಧರ್ಮಕ್ಕೆ ಮತಾಂತರಿತ ಹಿಂದೂ ಯುವತಿ ಚಿತ್ರ ವೈರಲ್

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ``ಇದು ನನ್ನ ಜೀವನವಾಗಲಿದೆಯೇ ?'' ಎಂದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಶಾಫಿನ್ ಜಹಾನ್ ಎಂಬಾತನ ಜತೆ  ನಡೆದ ತನ್ನ ವಿವಾಹವನ್ನು ಮೂರು ತಿಂಗಳ ಹಿಂದೆ ಕೇರಳ ಹೈಕೋರ್ಟ್...

ಚೌತಿ ಹಬ್ದಕ್ಕೆ `ಗ್ರೀನ್ ಗಣೇಶ’ನನ್ನು ತನ್ನಿ

ಮಂಗಳೂರು :  ಈ ವರ್ಷದ ಗಣೇಶ ಚತುರ್ಥಿಯಂದು ನ್ಯಾಷನಲ್ ಎನ್ವಿರಾನ್ಮೆಂಟ್ ಕೇರ್ ಫೌಂಡೇಶನ್  ಎಂಬ ಪರಿಸರ ಸಂಘಟನೆಯ ವಿಶಿಷ್ಟ ಯೋಜನೆಯೊಂದು ಯಶಸ್ವಿಯಾಗಿದ್ದೇ ಆದಲ್ಲಿ ಅದು ಸಸಿಗಳನ್ನು ನೆಟ್ಟು ಪರಿಸರ ರಕ್ಷಿಸುವಲ್ಲಿಯೂ ಸಹಕಾರಿಯಾಗಿ ನಿಜಾರ್ಥದಲ್ಲಿ...

ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗೆ ಕಾರ್ಯನಿರ್ವಹಿಸುವ `ಏಂಜಲ್ ಬಾಕ್ಸ್’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪ್ರಸ್ತುತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕಂದಮ್ಮಗಳನ್ನೂ ರಾಕ್ಷಸ ಪ್ರವೃತ್ತಿಯುಳ್ಳವರು ತಮ್ಮ ದಾಹಕ್ಕೆ ಒಳಪಡಿಸುತ್ತಿದ್ದಾರೆ. ಅತ್ಯಾಚಾರದ ಬಗ್ಗೆ ಒಂಚೂರು ಅರಿವಿಲ್ಲದ ಮಕ್ಕಳ ಬದುಕು ಬರ್ಬರವಾಗುತ್ತದೆ....

ಯುಪಿಸಿಎಲ್ ವಿಸ್ತರಣೆಗೆ 160 ಎಕ್ರೆ ಜಾಗ ಸ್ವಾಧೀನ

ನಮ್ಮ ಪ್ರತಿನಿಧಿ ವರದಿ ಉಡುಪಿ : ಮುಂದಿನ ಹಂತದಲ್ಲಿ 1800 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗಾಗಿ ಸ್ಥಾವರದ ವಿಸ್ತರಣೆ ಕಾರ್ಯ ನಡೆಯಬೇಕಿದ್ದು, ಇದಕ್ಕಾಗಿ ಉಡುಪಿ ವಿದ್ಯುತ್ ನಿಗಮ ನಿಯಮಿತ (ಯುಪಿಸಿಎಲ್) 160 ಎಕ್ರೆ ಜಾಗ...

ಕಲ್ಸಂಕ ಸೇತುವೆ ರೂ 1.25 ಕೋಟಿ ವೆಚ್ಚದಲ್ಲಿ ವಿಸ್ತರಣೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದಲ್ಲಿರುವ ಕಲ್ಸಂಕ ಸೇತುವೆಯನ್ನು ರೂ 1.25 ಕೋಟಿ ವೆಚ್ಚದಲ್ಲಿ ವಿಸ್ತಾರಗೊಳಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವ ಶಕ್ತಿ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಅವರು ಕೊಡಂಕೂರಿನಲ್ಲಿ...

ದರೆಗುಡ್ಡೆ ಬಿಸಿಎಂ ಹಾಸ್ಟೆಲ್ ದುರವಸ್ಥೆ

ತರಕಾರಿ ಇಡುವ ಜಾಗವೇ ವಿದ್ಯಾರ್ಥಿಗಳು ಮಲಗುವ ಕೋಣೆ ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ದರೆಗುಡ್ಡೆ ಪಂಚಾಯತಿನ ಬಾಡಿಗೆ ಕೊಠಡಿಯಲ್ಲಿ 1987ರಲ್ಲಿ ಆರಂಭವಾದ ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಬಿಸಿಎಂ ಹಾಸ್ಟೆಲಿನಲ್ಲಿ ಮೂಲ...

ಬಿ ಸಿ ರೋಡು ಸರ್ವಿಸ್ ರಸ್ತೆಯಲ್ಲಿ ಕೃತಕ ಕೆರೆ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಬಿ ಸಿ ರೋಡು ಸರ್ವಿಸ್ ರಸ್ತೆ ಸಮಸ್ಯೆ ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಂಡು ಬರುತ್ತಿಲ್ಲ. ಇಲ್ಲಿನ ಸರ್ವಿಸ್ ರಸ್ತೆಯ ಅವ್ಯವಸ್ಥೆಯ ಫಲ ಇಲ್ಲಿನ ಸಾರ್ವಜನಿಕರು ಕಳೆದ ಹಲವು...

ಅಧಿಕಾರಿಗಳ ನಿಯುಕ್ತಿ ವಿರೋಧಿಸಿದ ಜಿ ಪಂ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಗ್ರಾಮೀಣ ಪ್ರದೇಶಗಳ ಬ್ಯಾಂಕ್ ಶಾಖೆಗಳಿಗೆ ಕನ್ನಡ ತಿಳಿಯದ ಅಧಿಕಾರಿಗಳನ್ನು ನಿಯುಕ್ತಿಗೊಳಿಸಿರುವುದು ಸರ್ಕಾರಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಅಡ್ಡಿಯಾಗಿದೆ ಎಂದು ದ ಕ ಜಿಂ ಪಂ ಸಭೆಯಲ್ಲಿ ಸದಸ್ಯರು...

ಬೀದಿ ಬದಿ ವ್ಯಾಪಾರಸ್ಥರ ಮೇಲೆ ದಾಳಿ ಖಂಡಿಸಿ ಸಿಐಟಿಯು ಧರಣಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೀದಿ ಬದಿ ವ್ಯಾಪಾರಸ್ಥರ ಮೇಲಾಗುತ್ತಿರುವ ನಿರಂತರ ದಾಳಿಯನ್ನು ಖಂಡಿಸಿ ಹಾಗೂ ಪರ್ಯಾಯ ವ್ಯವಸ್ಥೆಗಾಗಿ ಒತ್ತಾಯಿಸಿ ಬೀದಿ ಬದಿ ವ್ಯಾಪಾರಸ್ಥರು ಸಿಐಟಿಯು ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿ...

ಬಹುರಾಷ್ಟ್ರೀಯ ಕಂಪೆನಿ ಕೆಲಸ ತ್ಯಜಿಸಿ ದೇಸಿ ಹಸು ಸಾಕುತ್ತಿರುವ ಉಡುಪಿ ವ್ಯಕ್ತಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಉಡುಪಿಯ ಅಂಬಲಪಾಡಿ ನಿವಾಸಿ ಸೋಮನಾಥ ಪೂಜಾರಿ ಝಾಂಬಿಯಾದ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಾ ಸಾಕಷ್ಟು ಸಂಪಾದನೆ ಮಾಡುತ್ತಿದ್ದರು. ಆದರೆ ಅದೇನಾಯ್ತೋ ಏನೋ ಅಷ್ಟೊಂದು...