Thursday, January 18, 2018

ಪೇದೆಗೆ ತಂಡದಿಂದ ಮಾರಣಾಂತಿಕ ಹಲ್ಲೆ

ಬೆಂಗಳೂರು : ಇಲ್ಲಿನ ಪಾದರಾಯಣಪುರದಲ್ಲಿ ರಾತ್ರಿ ವೇಳೆ ಕರ್ತವ್ಯ ನಿರತನಾಗಿದ್ದ ಪೊಲೀಸ್ ಕಾನ್‍ಸ್ಟೆಬಲ್ ಮೇಲೆ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ದುಷ್ಕರ್ಮಿಗಳ ದಾಳಿಯಿಂದಾಗಿ ಗಂಭೀರ ಗಾಯಗೊಂಡಿರುವ ಜೆ ಜೆ ನಗರ ಪೊಲೀಸ್ ಠಾಣೆಯ...

ಸರಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಲೋಕಾಯುಕ್ತ !

ಬೆಂಗಳೂರು : ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸುತ್ತಿರುವ ಕರ್ನಾಟಕ ಲೋಕಾಯುಕ್ತ, ರಾಜ್ಯದ ಇತಿಹಾಸದಲ್ಲೇ ಪ್ರಥಮ ಎಂಬಂತೆ ಸರ್ಕಾರದ ಹಸ್ತಕ್ಷೇಪ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದೆ. ಹಿಂದೊಮ್ಮೆ ಪ್ರಬಲ ಶಕ್ತಿಯಾಗಿದ್ದ ಲೋಕಾಯುಕ್ತ ಸಂಸ್ಥೆ ಕೆಲವು ವರ್ಷದಿಂದ ಹಲ್ಲಿಲ್ಲದ...

ಬಿಜೆಪಿಯಿಂದ `ಆಧುನಿಕ ಅಸ್ಪ øಶ್ಯತೆ’ : ಪ್ರಕಾಶ್ ರೈ

ಬೆಂಗಳೂರು : ತಾವು ಶಿರಸಿಯಲ್ಲಿ ಕಳೆದ ಶನಿವಾರ ಭಾಗವಹಿಸಿದ್ದ ಸಮಾರಂಭದ ವೇದಿಕೆಯನ್ನು ಗೋಮೂತ್ರ ಸಿಂಪಡಿಸಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಶುದ್ಧೀಕರಿಸಿದ್ದಾರೆಂಬ ವರದಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಹುಭಾಷಾ ನಟ  ಪ್ರಕಾಶ್ ರೈ, ಇದು `ಆಧುನಿಕ...

ರಾಜ್ಯ ಸರಕಾರ ಪಕ್ಷದೊಂದಿಗೆ ಹೊಂದಿಕೊಂಡಿಲ್ಲ : ಪರಂ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ನಡುವೆ ಬಹುಕಾಲದಿಂದ ನಡೆಯುತ್ತಿರುವ ಮುಸುಕಿನ ಗುದ್ದಾಟದ ಮುಂದುವರಿದ ಭಾಗವೇನೋ ಎಂಬಂತೆ ``ರಾಜ್ಯ ಸರಕಾರವು  ಪಕ್ಷದ ಜತೆ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿಲ್ಲ''...

ಮಹದೇವಪ್ಪ ಕೂಡ ಸೀಎಂ ಹುದ್ದೆ ಆಕಾಂಕ್ಷಿ ಎಂದ ಸಿದ್ದು

ಬೆಂಗಳೂರು : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮೈಸೂರಿನಲ್ಲಿ ನಡೆದ ಸಾಧನಾ ಸಂಭ್ರಮ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ, ``ಲೋಕೋಪಯೋಗಿ ಸಚಿವ ಎಚ್ ಸಿ ಮಹದೇವಪ್ಪ ಕೂಡ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿದ್ದಾರೆ'' ಎಂದು ಹೇಳುವ ಮೂಲಕ ಹಲವರ...

ಜೆಡಿಎಸ್ ಸೇರಿದ ಆಸ್ನೋಟಿಕರ್

ಪಕ್ಷದಲ್ಲೂ ಶಾಸಕರ ವಲಸೆ ಭೀತಿ ಬೆಂಗಳೂರು : ತಮ್ಮ ಬೆಂಬಲಿಗರೊಂದಿಗೆ ಮಾಜಿ ಬಿಜೆಪಿ ಸಚಿವ ಆನಂದ್ ಆಸ್ನೋಟಿಕರ್ ಸೋಮವಾರ  ಜಾತ್ಯತೀತ ಜನತಾ ದಳಕ್ಕೆ ಪಕ್ಷದ ಮುಖ್ಯಸ್ಥ ಎಚ್ ಡಿ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್...

ಕೊಳ್ಳೇಗಾಲದ ದೇವಳಕ್ಕೆ ಸೀಎಂ ಸಿದ್ದರಾಮಯ್ಯ ಆಭರಣ ದಾನ

ರಾಜಕೀಯ-ಮಾಧ್ಯಮ ವಲಯದಲ್ಲಿ ಭಾರೀ ಚರ್ಚೆ ಚಾಮರಾಜನಗರ : ರಾಜಕಾರಣಿಗಳು ದೇವಸ್ಥಾನಗಳಿಗೆ ಚಿನ್ನ-ಬೆಳ್ಳಿಯ ಸೊತ್ತು ದಾನ ಮಾಡುವುದು ಹೊಸತೇನಲ್ಲ. ಇದೀಗ ಸೀಎಂ ಸಿದ್ದರಾಮಯ್ಯ ದೇವಸ್ಥಾನವೊಂದಕ್ಕೆ ಚಿನ್ನ-ಬೆಳ್ಳಿ ಸೊತ್ತು ದಾನ ಮಾಡಿ  ಸುದ್ದಿಯಾಗಿದ್ದಾರೆ. ಕೊಳ್ಳೆಗಾಲದ ಮಲೆಮಹದೇಶ್ವರ ದೇವಸ್ಥಾನದಲ್ಲಿ ಈಗ...

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾ ಅಸಮರ್ಥ

ಬೆಂಗಳೂರು : ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆ ಇಲಾಖೆಯ (ಡಿಪಿಎಆರ್) ದಾಖಲೆಗಳನ್ನು ತಿರುಚಿದ ಹಾಗೂ ಲೋಕಾಯುಕ್ತ ನೀಡಿದ ಆದೇಶದ ಮಾಹಿತಿಯ ಬಗ್ಗೆ ಹಿರಿಯಾಧಿಕಾರಿಗಳನ್ನು ಕತ್ತಲಲ್ಲಿರಿಸಿದ ಇಬ್ಬರು ಕಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ...

`ಬಡವರನ್ನು ಹಸಿವಿನಿಂದ ನರಳಿಸುತ್ತಿರುವ ಆಧಾರ್’ : ರಾಜಧಾನಿಯಲ್ಲಿ ಪ್ರತಿಭಟನೆ

ಬೆಂಗಳೂರು : ರಾಜಧಾನಿಯ ಹಾಗೂ ರಾಜ್ಯದ ವಿವಿಧೆಡೆಗಳಿಂದ ಬಂದಿರುವ ಹಲವಾರು ನಾಗರಿಕರು ಟೌನ್ ಹಾಲ್ ಎದುರು `ಆಧಾರ್' ವಿರುದ್ಧ ಪ್ರತಿಭಟನೆ ನಡೆಸಿ, ಆಧಾರ್ ಸಂಖ್ಯೆಯನ್ನು ಎಲ್ಲಾ ಸೇವೆಗಳಿಗೆ ಕಡ್ಡಾಯಗೊಳಿಸಿದ ನಂತರ ಹಲವಾರು ಸೌಲಭ್ಯಗಳನ್ನು...

ಕಾಂಗ್ರೆಸ್ ಆಡಳಿತದಲ್ಲಿ ಅತ್ಯಧಿಕ ಅಕ್ರಮ ಗಣಿಗಾರಿಕೆ : ಕುಮಾರಸ್ವಾಮಿ ಆರೋಪ

ಬೆಂಗಳೂರು : ಹಿಂದಿನ ಚುನಾವಣೆ ಹೊತ್ತಿಗೆ ಅಕ್ರಮ ಮರಳುಗಾರಿಕೆಯನ್ನು ತನ್ನ ಮುಖ್ಯ ಚುನಾವಣಾ ವಿಷಯವಾಗಿಸಿಕೊಂಡಿದ್ದ ಕಾಂಗ್ರೆಸ್ ಇಂದು ಅಧಿಕಾರಿದಲ್ಲಿದರೂ ಅಕ್ರಮ ಮರಳುಗಾರಿಕೆ ನಿಂತಿಲ್ಲ. ಬದಲಾಗಿ ಅಕ್ರಮಗಳಿಗೆ ಉತ್ತೇಜನ ನೀಡುತ್ತಿದೆ ಎಂಬ ಆರೋಪ ಸಾಮಾನ್ಯವಾಗಿಬಿಟ್ಟಿದೆ. ರಾಜ್ಯದಲ್ಲಿ...

ಸ್ಥಳೀಯ

ಸಚಿವ ಅನಂತ ಹೆಗಡೆ ಕಚೇರಿ ಎದುರು ಮಹಿಳೆಯರ ಧರಣಿ

7 ಜಿಲ್ಲೆಗಳಿಂದ ಬಂದ 4,000ಕ್ಕೂ ಹೆಚ್ಚು ಅಂಗನವಾಡಿ, ಆಶಾ ಕಾರ್ಯಕರ್ತೆಯರು ನಮ್ಮ ಪ್ರತಿನಿಧಿ ವರದಿ ಕಾರವಾರ : ಸುಮಾರು 7 ಜಿಲ್ಲೆಗಳಿಂದ ಬಂದ 4,000ಕ್ಕೂ ಹೆಚ್ಚು ಅಂಗನವಾಡಿ, ಆಶಾ, ಬಿಸಿಯೂಟದ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಕೆಗೆ...

`ಡಾಕ್ಟರ್ ಆನ್ ಸ್ಪಾಟ್’ ಅಂಬುಲೆನ್ಸ್ ಕೊಡುಗೆ, ಮನೆಬಾಗಿಲಿಗೆ ತುರ್ತು ಚಿಕಿತ್ಸೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಕ್ಷಿಣ ಭಾರತದ ವೈದ್ಯಕೀಯ ಕೇಂದ್ರವಾದ ಮಂಗಳೂರು ಅಭಿವೃದ್ಧಿ ಪಥದಲ್ಲಿರುವ ಆರೋಗ್ಯ ಸಂರಕ್ಷಣಾ ವಲಯಕ್ಕೆ ಇನ್ನೊಂದು ಸೇವಾ ಸೌಲಭ್ಯ ಸೇರ್ಪಡೆಯಾಗಿದೆ. ಹೌದು, ಇಂಡಿಯಾನ ಆಸ್ಪತ್ರೆಯು `ಡಾಕ್ಟರ್ ಆನ್ ಸ್ಪಾಟ್'...

ಅಮೆರಿಕಾದಲ್ಲೊಂದು ರಸ್ತೆಗೆ ಮಂಗಳೂರು ಮೂಲದ ಆಸ್ಟಿನ್ ಡಿಸೋಜಾರ ಹೆಸರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಲಯನ್ಸ್ ಕ್ಲಬ್ ಮೂಲಕ ಸಮಾಜಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಖ್ಯಾತ ಸಾಮಾಜಿಕ ಕಾರ್ಯಕರ್ತ ಮಂಗಳೂರು ಮೂಲದ 67 ವರ್ಷದ ಡಾ ಆಸ್ಟಿನ್ (ಪ್ರಭು) ಡಿಸೋಜಾ ಅವರ ಹೆಸರನ್ನು...

ರಸ್ತೆ ಸುರಕ್ಷತೆ, ನೀರು ಸಂರಕ್ಷಣೆ ಜಾಗೃತಿಗಾಗಿ ಸೈಕಲ್ ರ್ಯಾಲಿ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ರಸ್ತೆ ಸುರಕ್ಷತೆ, ನೀರು ಸಂರಕ್ಷಣೆ ಜಾಗೃತಿಗಾಗಿ ಮತ್ತು ಮಾದಕ ವ್ಯಸನ ನಿರ್ಮೂಲನೆಗಾಗಿ ಪಡುಬಿದ್ರಿ ರೋಟರಿ ಕ್ಲಬ್ ಭಾನುವಾರ ಕಾಪು ವಿದ್ಯಾನಿಕೇತನ ಶಾಲೆಯಿಂದ ಹೆಜಮಾಡಿ ತನಕ ಸೈಕ್ಲೊಥಾನ್ 2018ಅನ್ನು...

ಮುಖ್ಯಮಂತ್ರಿ ಸಿದ್ದರಾಮಯ್ಯರ ಬಿಜೆಪಿ ವಿರೋಧಿ ಹೇಳಿಕೆ ಖಂಡಿಸಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಭಾರತೀಯ ಜನತಾ ಪಕ್ಷದ ಸದಸ್ಯರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ನೀಡಿದ ಹೇಳಿಕೆಗಳನ್ನು ವಿರೋಧಿಸಿ ಕಾಂಗ್ರೆಸ್ ಭವನದ ಹಾದಿಯಲ್ಲಿ ಬರುವ ಬ್ರಹ್ಮಗಿರಿ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು....

ಫೆಬ್ರವರಿ 16ರಂದು ಉದ್ಯೋಗ ಮೇಳ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಜಿಲ್ಲಾಡಳಿತದ ವತಿಯಿಂದ ಮಂಗಳೂರು ಉದ್ಯೋಗ ಮೇಳವು ಫೆಬ್ರವರಿ 16ರಂದು ಮಂಗಳೂರು ವಿಶ್ವ ವಿದ್ಯಾನಿಲಯದ ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ...

ಮಳವೂರಿನಲ್ಲಿ ಜಪ್ತಿಯಾದ 8,000 ಟನ್ ಮರಳು ಶಿರಾಡಿ ರಸ್ತೆ ದುರಸ್ತಿಗೆ ಬಳಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಜನವರಿ 20ರಿಂದ ಶಿರಾಡಿ ಘಾಟಿ ರಸ್ತೆ ದುರಸ್ತಿ ಕಾಮಗಾರಿ ನಡೆಯಲಿದ್ದು, ಕಳೆದ ಭಾನುವಾರ ಮತ್ತು ಸೋಮವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಇಲ್ಲಿನ ಮಳವೂರು...

ಪರ್ಯಾಯಕ್ಕಾಗಿ ಈ ಬಾರಿ ದಾಖಲೆ 3,800 ಕೆಜಿ ಮಟ್ಟು ಗುಳ್ಳ ಸಮರ್ಪಣೆ’

ಉಡುಪಿ : ಇಲ್ಲಿಗೆ ಸಮೀಪದ ಮಟ್ಟು ಎಂಬ ಗ್ರಾಮದಲ್ಲಿ ವ್ಯಾಪಕವಾಗಿ ಬೆಳೆಯಲಾಗುವ ಮಟ್ಟು ಗುಳ್ಳ ತನ್ನ ವಿಶಿಷ್ಟ ರುಚಿಗೆ ಹೆಸರುವಾಸಿ. ಇಂದು ನಡೆಯುತ್ತಿರುವ ಫಲಿಮಾರು ಮಠಾಧೀಶರು ಪರ್ಯಾಯಕ್ಕೆ  ಸಲ್ಲಿಸಲಾದ ಹೊರೆಕಾಣಿಕೆಯಲ್ಲಿ  ಬೆಳಗಾರರು ಕೊಡಮಾಡಿದ...

ಹಲ್ಲೆ ಪ್ರಕರಣ : ಇತ್ತಂಡದ ಅಪರಾಧಿಗಳಿಗೆ ಶಿಕ್ಷೆ ಪ್ರಕಟ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಉಳ್ಳಾಲದ ಅಲೇಕಳದಲ್ಲಿ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎರಡೂ ತಂಡದ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲೇಕಳದ ಝಾಕಿರ್...

ಚೀನಾಗೆ ಅಡಿಕೆ ರಫ್ತು ಸದ್ಯ ತಡೆದ ಕ್ಯಾಂಪ್ಕೋ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಚೀನಾ ದೇಶಕ್ಕೆ  ಹಸಿ ಅಡಿಕೆ ರಫ್ತು ಮಾಡುವ ಪ್ರಸ್ತಾಪ ಈ ಹಿಂದೆ ಕ್ಯಾಂಪ್ಕೋ ಮುಂದಿತ್ತಾದರೂ  ಅಡಿಕೆಗೆ  ದೊರಕುತ್ತಿರುವ ಉತ್ತಮ ಬೆಲೆ ಹಾಗೂ ಮಾರುಕಟ್ಟೆ ಸ್ಥಿರತೆಯಿಂದಾಗಿ ಈ ಪ್ರಸ್ತಾಪವನ್ನು...