Wednesday, June 28, 2017

ಅತ್ಯಾಚಾರಿ ಪಾದ್ರಿಗಳಿಗೆ ಶಿಕ್ಷೆ ಸಡಿಲಿಸಿದ ಪೋಪ್

ಪೋಪ್ ಫ್ರಾನ್ಸಿಸ್ ಅವರ ಈ ಮೃದು ಧೋರಣೆಯನ್ನು ಅತ್ಯಾಚಾರಕ್ಕೊಳಗಾದ ಅನೇಕ ಸಂತ್ರಸ್ತ ಮಹಿಳೆಯರು ತೀವ್ರವಾಗಿ ವಿರೋಧಿಸಿದ್ದು ಇದರಿಂದ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಹೇಳಿದ್ದಾರೆ.   ವ್ಯಾಟಿಕನ್ ನಗರ : ಕೆಲವು ಮಹಿಳೆಯರ ಮೇಲೆ ಲೈಂಗಿಕ...

`ಲಿಪ್ಸ್ಟಿಕ್ ಅಂಡರ್ ಮೈ ಬುರ್ಖಾ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ `ನೋ’ ವಿರುದ್ಧ ನಿರ್ದೇಶಕಿ ಹೋರಾಟ

``ಲಿಂಗ ಸಮಾನತೆಗೆ ಸಂಬಂಧಪಟ್ಟ ಚಿತ್ರವೆಂಬ ಪ್ರಶಸ್ತಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆದಿರುವ ಚಿತ್ರವೊಂದು  ಭಾರತದ ಸೆನ್ಸಾರ್ ಮಂಡಳಿಯಿಂದ ದಾಳಿಗೊಳಗಾಗಿದೆಯೆಂಬುದು ವಿಪರ್ಯಾಸವೇ ಸರಿ'' ಎನ್ನುತ್ತಾರೆ ಅಲಂಕೃತ ಶ್ರೀವಾತ್ಸವ. ಸಮಾಜದ ಒಂದು ನಿರ್ದಿಷ್ಟ ವರ್ಗವನ್ನು ಗುರಿಯಾಗಿಸಿದ...

ಬಾಳಿಗಾ ಹಿಂದೂವಲ್ಲವೇ : ಪರಿವಾರಕ್ಕೆ ಎದುರಾದ ಪ್ರಶ್ನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು :  ನಗರದಲ್ಲಿ ಆಯೋಜಿಸಲಾದ ಸೌಹಾರ್ದ ಸಮಾವೇಶ ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬರುತ್ತಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ವಿರುದ್ಧ ಪ್ರತಿಭಟಿಸುತ್ತಿರುವ ಸಂಘ ಪರಿವಾರದ ಸಂಘಟನೆಗಳಿಗೆ ಕೊಲೆಗೀಡಾದ ಬಿಜೆಪಿ ಕಾರ್ಯಕರ್ತ...

ಹರ್ಷ ಭೋಗ್ಲೆ ಏಕೆ ಕಮೆಂಟರಿ ಬಾಕ್ಸಿನಿಂದ ಮಾಯವಾಗಿದ್ದಾರೆ ?

ಕ್ರಿಕೆಟ್ ಆಟಗಾರರಾದ ಎಂ ಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ಮುರಳಿ ವಿಜಯ್ ಅವರಿಂದಾಗಿ ಹರ್ಷ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು `ಭಾರತೀಯ ಕ್ರಿಕೆಟಿನ ಧ್ವನಿ' ಹರ್ಷ ಭೋಗ್ಲೆಯವರನ್ನು ಕಳೆದ ಒಂದು...

ಎನೈಟಿಕೆಯ ಈ ಸಂಶೋಧಕ ಗ್ರಾಮೀಣ ಮನೆಗಳಿಗೆ ಪೂರೈಸುತ್ತಾರೆ ಪೆಡಲ್ ಪವರ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸುರತ್ಕಲ್ ಎನೈಟಿಕೆ ವಿದ್ಯಾರ್ಥಿ ಬೈಸಿಕಲ್ ಪೆಡಲ್ ಬಳಸಿ ಬೆಳಕು ಉತ್ಪಾದಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಸರಳ, ಕಡಿಮೆ ವೆಚ್ಚದ ಮಾನವ ಸ್ನಾಯು ಶಕ್ತಿಯಿಂದ ಬ್ಯಾಟರಿ ಚಾರ್ಜ್ ಮಾಡಿ ಗ್ರಾಮೀಣ ಮನೆಗಳಿಗೆ...

ಬುಂಡೇಲಖಂಡದ ಗ್ರಾಮಗಳ ಹೆಸರಿಗೂ ಜಾತಿ ಕಳಂಕ

``ನನ್ನ ಗ್ರಾಮದ ಹೆಸರು ನನ್ನ ಪಾಲಿಗೆ ಶಾಪವಿದ್ದಂತೆ. ನನ್ನ ಜಾತಿಯನ್ನು ನಾನು ಅಡಗಿಸಬಹುದು. ಆದರೆ ನನ್ನ ಗ್ರಾಮದ ಹೆಸರು ಹೇಳಿದೊಡನೆ ನನ್ನನ್ನು ನಿಂದಿಸಲಾಗುತ್ತದೆ'' ಎಂದು ಚಾಮರಸೇನ ಗ್ರಾಮದ ಯುವ ನಿವಾಸಿಯೊಬ್ಬರು ವಿಷಾದದಿಂದ ನುಡಿಯುತ್ತಾರೆ. ಝಾನ್ಸಿ...

ಮೆಡಿಕಲ್ ವೆಚ್ಚ ಕ್ಲೇಮ್ ಮಾಡುವ ರಾಜ್ಯ ಶಾಸಕರ ಸಂಖ್ಯೆಯಲ್ಲಿ ಇಳಿಕೆ

ಸಿಐಡಿ ತನಿಖೆಯ ಭಯದ ನೆರಳಿನಲ್ಲಿ ಹಲವರು ಇಲ್ಲದ ಕಾಯಿಲೆಗಳಿಗೆ ಅಸ್ತಿತ್ವದಲ್ಲಿಯೇ ಇಲ್ಲದ ಆಸ್ಪತ್ರೆಗಳ ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಹಣ ಪಡೆದು ವಂಚಿಸಿದ ಪ್ರಕರಣಗಳು ಬೆಳಕಿಗೆ ಬಂದಿವೆ. ವಿಶೇಷ ವರದಿ ಬೆಂಗಳೂರು : ಕಳೆದ ಹಲವು ವರ್ಷಗಳಲ್ಲಿ ಶಾಸಕರು...

ಧೋನಿ, ಕೊಹ್ಲಿ ಸಾಲಿನಲ್ಲಿ ನಿಲ್ಲಬೇಕಾದ ದಾಖಲೆ

ಭಾರತದ ಬಹುತೇಕ ಪುರುಷ ಕ್ರಿಕೆಟಿಗರು ಮಿತಾಲಿಗೆ ಸಮನಾದ ದಾಖಲೆಯನ್ನು ಹೊಂದಿಲ್ಲದಿದ್ದರೂ ಜನಪ್ರಿಯರಾಗಿದ್ದಾರೆ. ಆಸ್ಟ್ರೇಲಿಯದ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ಸಜ್ಜಾಗುತ್ತಿದ್ದಂತೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಕಪ್ತಾನರಾದ ಮಿಥಾಲಿ ರಾಜ್ ಸಾಧನೆಯನ್ನು...

ಯುವಪೀಳಿಗೆಗೆ ಮೀಸಲಾತಿ ಕಂಟಕಪ್ರಾಯ

ಮದನ್ ಎಲ್ ಎನ್ ಭಾರತ ಸ್ವಾತಂತ್ರ್ಯ ಪಡೆದ ನಂತರ ದೇಶದ ಪರಿಶಿಷ್ಟ ಸಮುದಾಯಗಳು ಮುಖ್ಯವಾಹಿನಿಗೆ ಬರುವವರೆಗೂ ತಾತ್ಕಾಲಿಕವಾಗಿ ಮೀಸಲಾತಿ ಸೌಲಭ್ಯವನ್ನು ಪಡೆಯುವಂತಾಗಬೇಕು ಎಂದು ಸಂವಿಧಾನದಲ್ಲಿ ಹೇಳಲಾಗಿತ್ತು. ಆದರೆ ಕ್ರಮೇಣವಾಗಿ ರಾಜಕೀಯ ಪಕ್ಷಗಳು ತಮ್ಮದೇ...

ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಗೆಟಪ್ಪಿನಲ್ಲಿ ಹಾರ್ಡ್ ಕೋರ್ ರೌಡಿಗಳು

ಪೊಲೀಸ್ ಮೂಲಗಳ ಪ್ರಕಾರ 8,956 ರೌಡಿ ಶೀಟರುಗಳ ಪೈಕಿ ಕನಿಷ್ಠ 2,700 ಮಂದಿ ತಾವು ಸುಧಾರಿಸಿದ್ದೇವೆ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಹೆಚ್ಚಿನ ಪ್ರಕರಣಗಳ್ಲಿ ಸಮಾಜ ಸೇವೆಯೆಂಬ...

ಸ್ಥಳೀಯ

ಶ್ರೀರಾಮ ಸೇನೆ ಪ್ರತಿಭಟನೆ : ಕಾದುನೋಡುವ ಎಂದ ಶ್ರೀ

ನಮ್ಮ ಪ್ರತಿನಿಧಿ ವರದಿ ಉಡುಪಿ : ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ನಡೆಸಿ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಇದೀಗ ಶ್ರೀರಾಮ ಸೇನೆ ಜುಲೈ 2ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಪೇಜಾವರ...

ಸೌಹಾರ್ದತೆಗೆ ಪೇಜಾವರ ಶ್ರೀ ಇಫ್ತಾರ್ : ಬಜರಂಗದಳ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ``ಉಡುಪಿ ಮಠದಲ್ಲಿ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮಿ ಅವರು ಶಾಂತಿ ಸೌಹಾರ್ದತೆಯ ದೃಷ್ಟಿಯಿಂದ ಮಾಡಿರುವ ಇಫ್ತಾರ್ ಕೂಟದ ಬಗ್ಗೆ ಕೇವಲ ಸಂಕುಚಿತ ಮನೋಭಾವದ ವ್ಯಕ್ತಿಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದೆ....

ಪತಂಜಲಿ ಸಾಬೂನಲ್ಲಿ ರಬ್ಬರ್ ತುಂಡು

ಮಂಗಳೂರು : ನಗರದ ಸಮಾಜ ಸೇವಕ ಚಂದ್ರಹಾಸ ಮಾಡೂರು ಎಂಬವರು ಉಡುಪಿಯಿಂದ ಪತಂಜಲಿ ಉತ್ಪನ್ನ ಏಜೆಂಟರೊಬ್ಬರಿಂದ ತರಿಸಲಾದ ಅಲೋವೆರಾ ಕಾಂತಿ ಸಾಬೂನಿನಲ್ಲಿ ರಬ್ಬರ್ ತುಂಡು ಪತ್ತೆಯಾಗಿದೆ. ಈ ಬಗ್ಗೆ ಚಂದ್ರಹಾಸ್ ಅವರು ಪತಂಜಲಿ...

ಅನುಮತಿ ಇಲ್ಲದೆ ಬಸ್ ನಿಲ್ದಾಣ ನಿರ್ಮಿಸಿ ಜಾಹೀರಾತು ಫಲಕ ಅಳವಡಿಸಲು ಹುನ್ನಾರ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ನಿರಾಕರಣೆ ಹೊರತಾಗಿಯೂ ಇಲ್ಲಿನ ಪುರಸಭಾ ವ್ಯಾಪ್ತಿಯ ಕೆಲವು ಕಡೆ ಜಾಹೀರಾತು ಸಂಸ್ಥೆಯೊಂದು ಬಸ್ ನಿಲ್ದಾಣಗಳನ್ನು ನಿರ್ಮಿಸಿ ಜಾಹೀರಾತು ಫಲಕ ಅಳವಡಿಸಲು ತುರ್ತು...

ವಾಟ್ಸಪ್ಪಲ್ಲಿ ರಾಜಕೀಯ ನಾಯಕರ ತೇಜೋವಧೆ

2 ಠಾಣೆಯಲ್ಲಿ ದೂರು ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಕೋಮುಸೂಕ್ಷ್ಮ ಪ್ರದೇಶವಾಗಿರುವ ಕಲ್ಲಡ್ಕದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿದ್ದ ಅಹಿತಕರ ಘಟನೆಗಳು ಹಾಗೂ ಉದ್ವಿಗ್ನ ಪರಿಸ್ಥಿತಿ ನಿಧಾನಕ್ಕೆ ತಣ್ಣಗಾಗುತ್ತಿರುವಂತೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣ...

ಗಿನ್ನಿಸ್ ದಾಖಲೆಯತ್ತ ಕಾರ್ಕಳ ಕಲಾವಿದ

 ಮಂಗಳೂರು : ಕರಾವಳಿ ಜಿಲ್ಲೆಯ ಶಿಲ್ಪಿಯೊಬ್ಬನ ದೃಷ್ಟಿ ಗಿನ್ನಿಸ್ ದಾಖಲೆಯತ್ತ ಚಲಿಸಿದೆ. ಹೌದು, ಕಾರ್ಕಳ ನಿವಾಸಿ 30 ವರ್ಷದ ಸುರೇಂದ್ರ ಆಚಾರ್ ಪೆನ್ಸಿಲ್ ಚೂಪುಗಳನ್ನು ಬಳಸಿಕೊಂಡು ಕಲಾತ್ಮಕ ಪ್ರಕಾರಗಳನ್ನು ರಚಿಸುವುದರಲ್ಲಿ ನಿಪುಣರಾಗಿದ್ದು, ಇದೀಗ...

ಕೆಎಸ್ಸಾರ್ಟಿಸಿ ಮಾರ್ಗಗಳ ನಿರ್ಬಂಧಕ್ಕೆ ಖಾಸಗಿ ಬಸ್ ನಿರ್ವಾಹಕರ ಆಶಯ

ನಮ್ಮ ಪ್ರತಿನಿಧಿ ವರದಿ ಉಡುಪಿ : ಪ್ರತಿ ಆರ್ಟಿಎ ಸಭೆಯಲ್ಲಿ ಇನ್ನಷ್ಟು ಕೆಎಸ್ಸಾರ್ಟಿಸಿ ಅನುದಾನಿತ ಜವಹರಲಾಲ್ ನರ್ಮ್ ಬಸ್ಸುಗಳ ಕಾರ್ಯಾಚರಣೆಗೆ  ಬೇಡಿಕೆಗಳು ಇದ್ದರೂ ಖಾಸಗಿ ಬಸ್ ನಿರ್ವಾಹಕರು ನರ್ಮ್ ಬಸ್ಸುಗಳ ಮಾರ್ಗಗಳನ್ನೇ ನಿರ್ಬಂಧಿಸಬೇಕು ಎಂದು...

ಉಳ್ಳಾಲ, ಗಂಗೊಳ್ಳಿಯಲ್ಲಿ ಕಡಲ್ಕೊರೆತ ತೀವ್ರ

  ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ನದಿ, ತೊರೆ, ಕಡಲು ತುಂಬಿದ್ದು, ಉಳ್ಳಾಲದಲ್ಲಿ ಕಡಲು ಪ್ರಕ್ಷುಬ್ದಗೊಂಡಿದೆ. ಅಲೆಗಳ ಆರ್ಭಟ ಜೋರಾಗಿದೆ. ಸಮುದ್ರ ತೀರದಲ್ಲಿದ್ದ ಮನೆಗಳು ಅಲೆಗಳ ಅಬ್ಬರಕ್ಕೆ...

ಪುತ್ತೂರು ಕೃಷಿ ಇಲಾಖೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಕೃಷಿಗೆ ಉತ್ತೇಜನ ನೀಡಬೇಕೆನ್ನುವ ನಿಟ್ಟಿನಲ್ಲಿ ಸರಕಾರ ಕೃಷಿ, ತೋಟಗಾರಿಕೆ ಇಲಾಖೆಗಳಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಕಟ್ಟಡ, ಪರಿಕರ ಸೇರಿದಂತೆ ಎಲ್ಲಾ ಸವಲತ್ತುಗಳನ್ನೂ ನೀಡುತ್ತಿದೆ. ಆದರೆ ಎಲ್ಲಾ ಅನುಕೂಲತೆಗಳು...

ವಾರದೊಳಗೆ ಪಾಲಿಕೆ ಕಚೇರಿಯಲ್ಲಿ ಮಾಹಿತಿ ಕೇಂದ್ರ ಆರಂಭ ಭರವಸೆ

ಮೇಯರ್ ಫೋನ್ ಇನ್ ಕಾರ್ಯಕ್ರಮ ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರಪಾಲಿಕೆ ವ್ಯಾಪ್ತಿಯ ಜನತೆಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ ಅವರ ಎರಡನೇ ಬಾರಿಯ ಫೋನ್ ಇನ್ ಕಾರ್ಯಕ್ರಮದಲ್ಲೂ ಸಾರ್ವಜನಿಕರಿಂದ...