Wednesday, June 28, 2017

ಟ್ರಂಪ್ ವಲಸೆ ನೀತಿಯಿಂದ ತಗ್ಗಿದ ಅಮೆರಿಕ ವರನ ಕನಸು

ವಿಶ್ಲೇಷಣೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಭಾರತದ ಮದುವೆ ಮಾರುಕಟ್ಟೆಯಲ್ಲಿ ಹಿಂದೆಂದೂ ಕಾಣದಂತಹ ಪ್ರಮುಖ ಬದಲಾವಣೆಯೊಂದು ಆಗಿದೆ. ದಶಕಗಳಿಂದ ದೇಶದ ಮದುವೆ ಮಾರುಕಟ್ಟೆಗಳಲ್ಲಿ ಅಮೆರಿಕದ ಭಾರತೀಯ ಯುವಕರಿಗೆ ಹೆಚ್ಚಿನ ಬೇಡಿಕೆ ಇತ್ತು....

ಶಾಲಾ ಮಕ್ಕಳ ಬಿಸಿಯೂಟಕ್ಕೂ ಆಧಾರ್ ಕಡ್ಡಾಯ ?

ಖಾಲಿ ಹೊಟ್ಟೆಗಳನ್ನು ತುಂಬುವುದಕ್ಕಿಂತ ಹೆಚ್ಚಾಗಿ ತನ್ನ ಅಂಕಿ ಅಂಶಗಳನ್ನು  ತುಂಬಿಸುವುದೇ ಸರಕಾರದ ಮುಖ್ಯ ಉದ್ದೇಶವೆಂಬುದು ವಿಪರ್ಯಾಸವೇ ಸರಿ. ಅಪೌಷ್ಠಿಕತೆಯಿಂದ ಬಳಲುತ್ತಿರುವ ಅತ್ಯಂತ ಹೆಚ್ಚು ಮಕ್ಕಳು ಇರುವ ದೇಶ ಭಾರತ. ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸಿ...

ಜಲ್ಲಿಕಟ್ಟು ಸ್ಪರ್ಧೆ : ಇಬ್ಬರು ಮೃತ ; 56 ಮಂದಿಗೆ ಗಾಯ

ಪುದುಕೊಟ್ಟಿ (ತಮಿಳುನಾಡು) : ತಿರುವಪ್ಪೂರು ಜಿಲ್ಲೆಯಲ್ಲಿ ನಿನ್ನೆ ಆಯೋಜಿಸಲಾಗಿದ್ದ ಜಲ್ಲಿಕಟ್ಟು ಸ್ಪರ್ಧೆಯ ವೇಳೆ ಹೋರಿ ಕೊಂಬಿಗೆ ಸಿಲುಕಿ ಜಲ್ಲಿಕಟ್ಟು ಸ್ಪರ್ಧಿಯೊಬ್ಬನ ಸಹಿತ ಇಬ್ಬರು ಮೃತಪಟ್ಟಿದ್ದರೆ, ಇತರ 56 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು...

`ಸೈಲೆಂಟ್ ಹಾರ್ಟ್ ಅಟ್ಯಾಕ್’ ಸೂಚನೆ ತಂತ್ರಜ್ಞಾನ ಅಭಿವೃದ್ಧಿ : ತ ನಾ ವಿದ್ಯಾರ್ಥಿ ಸಾಧನೆ

ಚೆನ್ನೈ : ತಮಿಳುನಾಡಿನ ಹತ್ತನೇ ತರಗತಿಯ ಬಾಲಕನೊಬ್ಬ ಅದ್ಭುತ ಸಾಧನೆಯೊಂದನ್ನು ಮಾಡಿದ್ದಾನೆ. ಯಾವುದೇ ಮುನ್ಸೂಚನೆಯಿಲ್ಲದೆ ಸಂಭವಿಸುವ ಹೃದಯಾಘಾತವನ್ನು ಅದು ಸಂಭವಿಸುವ ಮೊದಲೇ ತಿಳಿದುಕೊಳ್ಳುವ ತಂತ್ರಜ್ಞಾನವನ್ನು ಈ ಬಾಲಕ ಅಭಿವೃದ್ಧಿಪಡಿಸಿದ್ದು ಇದು ಹಲವರ ಪ್ರಾಣಗಳನ್ನು...

`ನಿಮ್ಮ ಪತ್ನಿಗೆ ಹೊಡೆಯುತ್ತೀರಾ ?’

ಮುಸ್ಲಿಮರಿಗೆ ಅಮೆರಿಕಾದಲ್ಲಿ ಪ್ರಶ್ನೆ ಹೌಸ್ಟನ್ : ತಮ್ಮ ರಾಜ್ಯದ ಮೂರನೇ ವಾರ್ಷಿಕ ಮುಸ್ಲಿಮ್ ದಿನಾಚರಣೆ ಸಂದರ್ಭ ತಮ್ಮನ್ನು ಭೇಟಿಯಾಗಲು ಇಚ್ಛಿಸಿದ್ದ ಮುಸ್ಲಿಮರಿಗೆ ಒಕ್ಲಹಾಮಾದ ರಿಪಬ್ಲಿಕನ್ ಪಕ್ಷದ ಜನಪ್ರತಿನಿಧಿಯಾಗಿರವ ಜಾನ್ ಬೆನ್ನೆಟ್ `ನೀವು ನಿಮ್ಮ ಪತ್ನಿಗೆ...

ಉ ಪ್ರ ಅತ್ಯಾಚಾರಿ ಸಚಿವಗೆ ಜಾಮೀನುರಹಿತ ವಾರೆಂಟ್

ನವದೆಹಲಿ/ ಲಕ್ನೋ : ಅತ್ಯಾಚಾರ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಉತ್ತರ ಪ್ರದೇಶ ಸಚಿವ ಗಾಯತ್ರಿ ಪ್ರಜಾಪತಿ ಮತ್ತು ಇತರ ಆರು ಮಂದಿಯ ವಿರುದ್ಧ ಪೊಲೀಸರು ಮೊನ್ನೆ ಜಾಮೀನುರಹಿತ ವಾರೆಂಟ್ ಹೊರಡಿಸಿದ್ದಾರೆ. ದೇಶಬಿಟ್ಟು ಪಲಾಯನಗೈಯುವ ಸಂಚು...

ಅವಳಿ ಮಕ್ಕಳಿಗೆ ಕರಣ್ ತಂದೆ

ಮುಂಬೈ : ಬಾಲಿವುಡ್ಡಿನ ಯಶಸ್ವೀ ಫಿಲ್ಮ್ ಮೆಕರ್ ಕರಣ್ ಜೋಹರ್ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳಿಗೆ ಈಗ ತಂದೆಯಾಗಿದ್ದಾರೆ. 44 ವಯಸ್ಸಿನ ಕರಣ್ ಜೋಹರ್ ಒಂದು ಗಂಡು ಹಾಗೂ ಒಂದು ಹೆಣ್ಣು...

ಖಾದರ್, ದೇಶಪಾಂಡೆ ಸೇರಿ ಐವರು ಸಚಿವರ ವಿದೇಶ ಪ್ರವಾಸಕ್ಕೆ ಕೇಂದ್ರ ತಡೆ

ನವದೆಹಲಿ : ಕೇಂದ್ರ ವಿದೇಶಾಂಗ ಸಚಿವಾಲಯವು (ಎಂಇಎ) ಕರ್ನಾಟಕದ ಐದು ಮಂದಿ ಕ್ಯಾಬಿನೆಟ್ ಸಚಿವರ ವಿದೇಶ ಪ್ರವಾಸಕ್ಕೆ `ಕ್ಲಿಯರೆನ್ಸ್' ನೀಡಲು ನಿರಾಕರಿಸಿದೆ. ಯು ಟಿ ಖಾದರ್, ಆರ್ ವಿ ದೇಶಪಾಂಡೆ, ಮಹದೇವ ಪ್ರಸಾದ್, ರೋಶನ್...

ಡಬ್ಬಿಂಗ್ ನಿಷೇಧದಿಂದ ಪ್ರಯೋಜನವೇನು ?

`ಹಣ ತೆತ್ತು ಚಿತ್ರ ವೀಕ್ಷಿಸುವ ಜನರಿಗೆ ತಮಗಿಷ್ಟವಾದ ಭಾಷೆಯಲ್ಲಿ ಸಿನೆಮಾ ನೋಡುವ ವೀಕ್ಷಿಸುವ ಹಕ್ಕು ಇದೆ' ಕನ್ನಡ ಚಿತ್ರರಂಗ ಮತ್ತೊಮ್ಮೆ ಡಬ್ಬಿಂಗ್ ವಿವಾದದ ಸುಳಿಯಲ್ಲಿ ಸಿಲುಕಿಗೊಂಡಿದೆ.  ಅಜಿತ್ ಕುಮಾರ್ ಅವರ ತಮಿಳು ಚಿತ್ರ `ಯೆನ್ನೈ...

ಶಾಲೆಗಳಲ್ಲಿ ಲೈಂಗಿಕ ಹಲ್ಲೆಗಳಿಗಿಲ್ಲ ಸೂಕ್ತ ಕಾನೂನಿನ ರಕ್ಷಣೆ

ಬೆಂಗಳೂರು ಮೂಲದ ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ಹಲ್ಲೆಯ ಮತ್ತೊಂದು ಪ್ರಕರಣ ದಾಖಲಾದ ಮೇಲೆ ಹೊರಬಂದಿರುವ ವಾಸ್ತವಾಂಶಗಳು ಇನ್ನಷ್ಟು ಭೀಕರವಾಗಿದ್ದು, ಪ್ರಾಂಶುಪಾಲರು ಲೈಂಗಿಕ ಹಲ್ಲೆಯನ್ನು ನಿತ್ಯದ ಪರಿಪಾಠವಾಗಿ ಕಳೆದ ಹಲವು ವರ್ಷಗಳಿಂದ ಶಾಲೆಯಲ್ಲಿ...

ಸ್ಥಳೀಯ

ಶ್ರೀರಾಮ ಸೇನೆ ಪ್ರತಿಭಟನೆ : ಕಾದುನೋಡುವ ಎಂದ ಶ್ರೀ

ನಮ್ಮ ಪ್ರತಿನಿಧಿ ವರದಿ ಉಡುಪಿ : ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ನಡೆಸಿ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಇದೀಗ ಶ್ರೀರಾಮ ಸೇನೆ ಜುಲೈ 2ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಪೇಜಾವರ...

ಸೌಹಾರ್ದತೆಗೆ ಪೇಜಾವರ ಶ್ರೀ ಇಫ್ತಾರ್ : ಬಜರಂಗದಳ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ``ಉಡುಪಿ ಮಠದಲ್ಲಿ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮಿ ಅವರು ಶಾಂತಿ ಸೌಹಾರ್ದತೆಯ ದೃಷ್ಟಿಯಿಂದ ಮಾಡಿರುವ ಇಫ್ತಾರ್ ಕೂಟದ ಬಗ್ಗೆ ಕೇವಲ ಸಂಕುಚಿತ ಮನೋಭಾವದ ವ್ಯಕ್ತಿಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದೆ....

ಪತಂಜಲಿ ಸಾಬೂನಲ್ಲಿ ರಬ್ಬರ್ ತುಂಡು

ಮಂಗಳೂರು : ನಗರದ ಸಮಾಜ ಸೇವಕ ಚಂದ್ರಹಾಸ ಮಾಡೂರು ಎಂಬವರು ಉಡುಪಿಯಿಂದ ಪತಂಜಲಿ ಉತ್ಪನ್ನ ಏಜೆಂಟರೊಬ್ಬರಿಂದ ತರಿಸಲಾದ ಅಲೋವೆರಾ ಕಾಂತಿ ಸಾಬೂನಿನಲ್ಲಿ ರಬ್ಬರ್ ತುಂಡು ಪತ್ತೆಯಾಗಿದೆ. ಈ ಬಗ್ಗೆ ಚಂದ್ರಹಾಸ್ ಅವರು ಪತಂಜಲಿ...

ಅನುಮತಿ ಇಲ್ಲದೆ ಬಸ್ ನಿಲ್ದಾಣ ನಿರ್ಮಿಸಿ ಜಾಹೀರಾತು ಫಲಕ ಅಳವಡಿಸಲು ಹುನ್ನಾರ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ನಿರಾಕರಣೆ ಹೊರತಾಗಿಯೂ ಇಲ್ಲಿನ ಪುರಸಭಾ ವ್ಯಾಪ್ತಿಯ ಕೆಲವು ಕಡೆ ಜಾಹೀರಾತು ಸಂಸ್ಥೆಯೊಂದು ಬಸ್ ನಿಲ್ದಾಣಗಳನ್ನು ನಿರ್ಮಿಸಿ ಜಾಹೀರಾತು ಫಲಕ ಅಳವಡಿಸಲು ತುರ್ತು...

ವಾಟ್ಸಪ್ಪಲ್ಲಿ ರಾಜಕೀಯ ನಾಯಕರ ತೇಜೋವಧೆ

2 ಠಾಣೆಯಲ್ಲಿ ದೂರು ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಕೋಮುಸೂಕ್ಷ್ಮ ಪ್ರದೇಶವಾಗಿರುವ ಕಲ್ಲಡ್ಕದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿದ್ದ ಅಹಿತಕರ ಘಟನೆಗಳು ಹಾಗೂ ಉದ್ವಿಗ್ನ ಪರಿಸ್ಥಿತಿ ನಿಧಾನಕ್ಕೆ ತಣ್ಣಗಾಗುತ್ತಿರುವಂತೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣ...

ಗಿನ್ನಿಸ್ ದಾಖಲೆಯತ್ತ ಕಾರ್ಕಳ ಕಲಾವಿದ

 ಮಂಗಳೂರು : ಕರಾವಳಿ ಜಿಲ್ಲೆಯ ಶಿಲ್ಪಿಯೊಬ್ಬನ ದೃಷ್ಟಿ ಗಿನ್ನಿಸ್ ದಾಖಲೆಯತ್ತ ಚಲಿಸಿದೆ. ಹೌದು, ಕಾರ್ಕಳ ನಿವಾಸಿ 30 ವರ್ಷದ ಸುರೇಂದ್ರ ಆಚಾರ್ ಪೆನ್ಸಿಲ್ ಚೂಪುಗಳನ್ನು ಬಳಸಿಕೊಂಡು ಕಲಾತ್ಮಕ ಪ್ರಕಾರಗಳನ್ನು ರಚಿಸುವುದರಲ್ಲಿ ನಿಪುಣರಾಗಿದ್ದು, ಇದೀಗ...

ಕೆಎಸ್ಸಾರ್ಟಿಸಿ ಮಾರ್ಗಗಳ ನಿರ್ಬಂಧಕ್ಕೆ ಖಾಸಗಿ ಬಸ್ ನಿರ್ವಾಹಕರ ಆಶಯ

ನಮ್ಮ ಪ್ರತಿನಿಧಿ ವರದಿ ಉಡುಪಿ : ಪ್ರತಿ ಆರ್ಟಿಎ ಸಭೆಯಲ್ಲಿ ಇನ್ನಷ್ಟು ಕೆಎಸ್ಸಾರ್ಟಿಸಿ ಅನುದಾನಿತ ಜವಹರಲಾಲ್ ನರ್ಮ್ ಬಸ್ಸುಗಳ ಕಾರ್ಯಾಚರಣೆಗೆ  ಬೇಡಿಕೆಗಳು ಇದ್ದರೂ ಖಾಸಗಿ ಬಸ್ ನಿರ್ವಾಹಕರು ನರ್ಮ್ ಬಸ್ಸುಗಳ ಮಾರ್ಗಗಳನ್ನೇ ನಿರ್ಬಂಧಿಸಬೇಕು ಎಂದು...

ಉಳ್ಳಾಲ, ಗಂಗೊಳ್ಳಿಯಲ್ಲಿ ಕಡಲ್ಕೊರೆತ ತೀವ್ರ

  ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ನದಿ, ತೊರೆ, ಕಡಲು ತುಂಬಿದ್ದು, ಉಳ್ಳಾಲದಲ್ಲಿ ಕಡಲು ಪ್ರಕ್ಷುಬ್ದಗೊಂಡಿದೆ. ಅಲೆಗಳ ಆರ್ಭಟ ಜೋರಾಗಿದೆ. ಸಮುದ್ರ ತೀರದಲ್ಲಿದ್ದ ಮನೆಗಳು ಅಲೆಗಳ ಅಬ್ಬರಕ್ಕೆ...

ಪುತ್ತೂರು ಕೃಷಿ ಇಲಾಖೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಕೃಷಿಗೆ ಉತ್ತೇಜನ ನೀಡಬೇಕೆನ್ನುವ ನಿಟ್ಟಿನಲ್ಲಿ ಸರಕಾರ ಕೃಷಿ, ತೋಟಗಾರಿಕೆ ಇಲಾಖೆಗಳಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಕಟ್ಟಡ, ಪರಿಕರ ಸೇರಿದಂತೆ ಎಲ್ಲಾ ಸವಲತ್ತುಗಳನ್ನೂ ನೀಡುತ್ತಿದೆ. ಆದರೆ ಎಲ್ಲಾ ಅನುಕೂಲತೆಗಳು...

ವಾರದೊಳಗೆ ಪಾಲಿಕೆ ಕಚೇರಿಯಲ್ಲಿ ಮಾಹಿತಿ ಕೇಂದ್ರ ಆರಂಭ ಭರವಸೆ

ಮೇಯರ್ ಫೋನ್ ಇನ್ ಕಾರ್ಯಕ್ರಮ ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರಪಾಲಿಕೆ ವ್ಯಾಪ್ತಿಯ ಜನತೆಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ ಅವರ ಎರಡನೇ ಬಾರಿಯ ಫೋನ್ ಇನ್ ಕಾರ್ಯಕ್ರಮದಲ್ಲೂ ಸಾರ್ವಜನಿಕರಿಂದ...