Wednesday, May 24, 2017

ನಿಮಗೆ ಗೋವು ರಕ್ಷಿಸಲು ತಿಳಿದಿದೆ, ಮಹಿಳೆಯರನ್ನಲ್ಲ

ರಾಜ್ಯಸಭೆಯಲ್ಲಿ ಜಯಾ ಬಚ್ಚನ್ ವಾಗ್ದಾಳಿ ನವದೆಹಲಿ :``ನಿಮಗೆ ಗೋವುಗಳನ್ನು ರಕ್ಷಿಸಲು ತಿಳಿದಿದೆ, ಆದರೆ ಮಹಿಳೆಯರನ್ನಲ್ಲ. ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳ ಬಗ್ಗೆ ಏನಂತೀರಿ ? ಈ ರೀತಿ ಮಾತನಾಡುವ ನಿಮ್ಮ ಪಕ್ಷದ ಸದಸ್ಯನನ್ನು  ಹೊರಗೆಸೆಯಿರಿ....

`ಚರ್ಚ್ ಕೋರ್ಟ್ ಅಮಾನ್ಯಗೊಳಿಸಿ’ : ಸುಪ್ರೀಂಗೆ ಕ್ರಿಶ್ಚಿಯನ್ ಸಂಸ್ಥೆ ಮನವಿ

ನವದೆಹಲಿ : ಚರ್ಚ್ ಕೋರ್ಟುಗಳನ್ನು ಅಮಾನ್ಯಗೊಳಿಸಬೇಕೆಂದು ಕೋರಿ ಕೇರಳ ಮೂಲದ  ಜಾಯಿಂಟ್ ಕ್ರಿಶ್ಚಿಯನ್ ಕೌನ್ಸಿಲ್ ಎಂಬ ಸಂಸ್ಥೆ ಸುಪ್ರೀಂ ಕೋರ್ಟಿನ ಕದ ತಟ್ಟಿದ್ದು, ಒಂದು ನಿರ್ದಿಷ್ಟ ಧರ್ಮಕ್ಕೆ ಅದರದೇ ಆದ ನ್ಯಾಯಾಂಗ ವ್ಯವಸ್ಥೆಯಿರುವುದು...

`ಯುವತಿಯರು ಕೂಗುತ್ತಿದ್ದರು, ಸಹಾಯ ಯಾಚಿಸಿ ಓಡುತ್ತಿದ್ದರು’

ಗಳೂರಿನ ಎಂ ಜಿ ರಸ್ತೆಯಲ್ಲಿ ಹೊಸ ವರ್ಷಾಚರಣೆಯ ಸಂದರ್ಭ ಯುವತಿಯರ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣ ದೇಶದಾದ್ಯಂತ ಸುದ್ದಿಯಾಗುತ್ತಿದೆ. ಇಲ್ಲಿಯ ತನಕ ಸಂತ್ರಸ್ತ ಯುವತಿಯರ್ಯಾರೂ ದೂರು ನೀಡಲು ಮುಂದೆ ಬಂದಿಲ್ಲವಾದರೂ ಪೊಲೀಸರು...

ಅರಣ್ಯ ಒತ್ತುವರಿದಾರರನ್ನು 4 ತಿಂಗಳಲ್ಲಿ ಒಕ್ಕಲೆಬ್ಬಿಸಿ : ಕರ್ನಾಟಕಕ್ಕೆ ಸುಪ್ರೀಂ ಆದೇಶ

ನವದೆಹಲಿ : ಚಿಕ್ಕಮಗಳೂರು ಜಿಲ್ಲೆಯ ಮಸಕಲಿ ಮೀಸಲು ಅರಣ್ಯ ಪ್ರದೇಶದಲ್ಲಿನ ಒತ್ತುವರಿದಾರರನ್ನು ಗುರುತಿಸಿ ನಾಲ್ಕು ತಿಂಗಳೊಳಗಾಗಿ ಅವರನ್ನು ಒಕ್ಕಲೆಬ್ಬಿಸಿ ಅವರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರಕಾರಕ್ಕೆ ಆದೇಶಿಸಿದೆ. ಕರ್ನಾಟಕದ  ಭೂದಾಖಲೆ ಸರ್ವೇ...

ತಿರುಪತಿ ಲಡ್ಡು ಮತ್ತಷ್ಟು ದುಬಾರಿ

ತಿರುಪತಿ : ತಿರುಪತಿ ತಿಮ್ಮಪ್ಪನ ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತಿರುವ ಲಡ್ಡುವಿನ ದರದಲ್ಲಿ ಏರಿಕೆಯಾಗಲಿದೆ ಎಂಬ ಸುಳಿವು ಸಿಕ್ಕಿದೆ. ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಯ ಮೂಲಗಳ ಪ್ರಕಾರ ಇದುವರೆಗೆ ಲಡ್ಡುವಿಗೆ ನೀಡಲಾಗಿರುವ ಸಬ್ಸಿಡಿಯನ್ನು ಹಿಂದಕ್ಕೆ...

ಉ ಪ್ರ.ದಲ್ಲಿ ಸರ್ಕಾರಿ ಮಾಂಸದಂಗಡಿ ಇಲ್ಲ

ಮಾಂಸದಂಗಡಿಗಳ ನವೀಕರಣ ಪ್ರಕ್ರಿಯೆಯನ್ನೂ ಸ್ಥಗಿತಗೊಳಿಸಿರುವುದು ಪರಿಸ್ಥಿತಿಯನ್ನು ಇನ್ನೂ ಬಿಗಡಾಯಿಸಿದೆ. ಅಧಿಕೃತ ಪರವಾನಗಿ ಹೊಂದಿರುವ  330 ಮಾಂಸದಂಗಡಿಗಳಿಗೂ ಲೈಸೆನ್ಸ್ ನವೀಕರಣ ಮಾಡುವುದು ಅನುಮಾನಾಸ್ಪದವಾಗಿದೆ ಲಖ್ನೋ  : ಹಳೆಯ ಲಕ್ನೋ ನಗರದ ಮೌಲ್ವಿಗಂಜ್ ಪ್ರದೇಶದಲ್ಲಿರುವ ಏಕೈಕ ಕಸಾಯಿ...

ತಲಾಕ್ ಮುಸ್ಲಿಂ ಪುರುಷ-ಮಹಿಳೆ ಸಮಸ್ಯೆ : ಸರ್ಕಾರ

ನವದೆಹಲಿ : ``ಮೂರು ಬಾರಿ ತಲಾಕ್ ಪದ್ಧತಿ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ಮಧ್ಯೆ ಹೋರಾಟವಲ್ಲ. ಇದು ಮುಸ್ಲಿಂ ಪುರುಷರು ಮತ್ತು ಮಹಿಳೆಯರ ಮಧ್ಯೆ ನಡೆಯುತ್ತಿರುವ ಕಲಹ'' ಎಂದು ಸರ್ಕಾರ ಹೇಳಿದೆ. ಸುಪ್ರೀಂ ಕೋರ್ಟಿನಲ್ಲಿ...

ಸೆಕ್ಸ್ ಕಾರ್ಯಕರ್ತರೂ ಇದೀಗ ಕ್ಯಾಶ್ ಲೆಸ್

ಕೊಲ್ಕತ್ತಾ : ನೋಟು ಅಮಾನ್ಯೀಕರಣಗೊಂಡು 50 ದಿನಗಳಾಗಿವೆ. ಇತ್ತೀಚಿಗಿನ ದಿನಗಳಲ್ಲಿ ಹೆಚ್ಚೆಚ್ಚು ವ್ಯಾಪಾರಿಗಳು ಕ್ಯಾಶ್ ಲೆಸ್ ವ್ಯವಹಾರಗಳತ್ತ ಮುಖ ಮಾಡುತ್ತಿದ್ದಾರೆ. ಅಂತೆಯೇ ಏಷ್ಯಾ ಖಂಡದ ಅತಿ ದೊಡ್ಡ ಕೆಂಪು ದೀಪ ಪ್ರದೇಶವಾದ ಕೊಲ್ಕತ್ತಾದ...

ಚಿಂತೆಯನ್ನು ಮರೆತುಬಿಡಿ

ಬದುಕು ಬಂಗಾರ-18 ಚಿಂತೆ, ಆತಂಕ, ಖಿನ್ನತೆ ಜೀವನದಲ್ಲಿ ಸರ್ವೇಸಾಮಾನ್ಯ. ಕೆಲವೊಮ್ಮೆ ಇತರರ ಮಾತುಗಳನ್ನು ನಾವು ಮನಸ್ಸಿಗೆ ತೀರಾ ಹಚ್ಚಿಕೊಂಡಾಗ ನಮಗೆ ಹತಾಶೆಯಾಗುವುದೂ ಉಂಟು, ಇನ್ನು ಕೆಲವೊಮ್ಮೆ ನಾವು ಮುಜುಗರಕ್ಕೂ ಒಳಗಾಗಬಹುದು. ಆದರೆ ಇಂತಹ ಹತಾಶ...

ಚಿದಂಬರಂ ಕುಟುಂಬ ಇಂಗ್ಲೆಂಡಲ್ಲಿ ಅಕ್ರಮ ಆಸ್ತಿ ಹೊಂದಿದೆ : ಸ್ವಾಮಿ

ನವದೆಹಲಿ : ಮಾಜಿ ವಿತ್ತ ಸಚಿವ ಚಿದಂಬರಂ ಪುತ್ರ ಕಾರ್ತಿ ವಿದೇಶಿ ಬ್ಯಾಂಕುಗಳಲ್ಲಿ 21 ಅಕ್ರಮ ಖಾತೆ ಹೊಂದಿದ್ದಾರೆಂಬ ಆರೋಪದ ಬೆನ್ನಲ್ಲೇ, ಇದೀಗ ಚಿದಂಬರಂ ಕುಟುಂಬವು ಇಂಗ್ಲೆಂಡಿನಲ್ಲಿ ಭಾರೀ ಪ್ರಮಾಣದ `ಅಘೋಷಿತ ಆಸ್ತಿ'...

ಸ್ಥಳೀಯ

ನಂದಳಿಕೆ ಕ್ರಶರ್ ಮಾಲಿಕನ ನಿರ್ಲಕ್ಷ್ಯಕ್ಕೆ ಕಾರ್ಮಿಕ ಬಲಿ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಬೆಳ್ಮಣ್ಣು ಸಮೀಪದ ನಂದಳಿಕೆ ಎಂಬಲ್ಲಿ ಕ್ರಶರಿನಲ್ಲಿ ಕಲ್ಲು ದೂಡುವ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ಕಾರ್ಮಿಕನೊಬ್ಬ ಆಯತಪ್ಪಿ ಸಾವನ್ನಪ್ಪಿದ್ದಾನೆ. ನಂದಳಿಕೆ ಗ್ರಾಮದ ಸೂಡ ಪರಿಸರದಲ್ಲಿ ಉಮೇಶ್ ಶೆಟ್ಟಿ ಎಂಬವರಿಗೆ...

ತಂದೆ ಮೇಲಿನ ದ್ವೇಷದಿಂದ ತೊಟ್ಟಿಲಲ್ಲಿ ಮಲಗಿದ್ದ ಮಗುವಿನ ಕೊಲೆಗೆ ಯತ್ನ

 ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಇಲ್ಲಿನ ರಾಗಂ ಜಂಕ್ಷನ್ ಸಮೀಪದ ಕುನ್ನಿಲ್ ಜುಮಾ ಮಸೀದಿ ರಸ್ತೆಯಲ್ಲಿ ತೊಟ್ಟಿಲಲ್ಲಿ ಮಲಗಿದ್ದ 2 ತಿಂಗಳಿನ ಮಗುವನ್ನು ತಂದೆಯ ಮೇಲಿರುವ ದ್ವೇಷದಿಂದ ಸಂಬಂಧಿಕನೊಬ್ಬ ಕೊಲ್ಲಲು ಯತ್ನಿಸಿದ್ದಾನೆ. ಕುನ್ನಿಲ್ ಜುಮಾ...

ಸಮಾಜ ಎದುರಿಸುವ ಹೊಣೆಗಾರಿಕೆ ಇತ್ತು…ಆತ್ಮವಿಶ್ವಾಸ ಬೆಳೆಸಿಕೊಂಡೆ…

ವಿಮಾನ ದುರಂತದ ಕರಾಳ ನೆನಪು ಬಿಚ್ಚಿಟ್ಟ ಶಿಕ್ಷಕಿ ನಮ್ಮ ಪ್ರತಿನಿಧಿ ವರದಿ ಮಂಗಳೂರು : ನನ್ನ ಪತಿ ಸಂಪೂರ್ಣ ಸುಟ್ಟು ಕರಕಲಾಗಿದ್ದರು. ಆಸ್ಪತ್ರೆಯಲ್ಲಿ ಮಲಗಿದ್ದ ಪತಿಯ ಕುತ್ತಿಗೆಯಲ್ಲಿದ್ದ ಸರ ಮತ್ತು ಕೈ ಬೆರಳಿನ ವಜ್ರದ ಉಂಗುರ...

ಮುಡಿಪು -ಮೂಳೂರು ರಸ್ತೆ ಅವ್ಯವಸ್ಥೆ : ಸ್ಥಳೀಯರ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಹೊರವಲಯದ ಕೊಣಾಜೆ ಬಳಿ ಮುಡಿಪು ನಿವಾಸಿಗಳು ಇಲ್ಲಿನ ರಸ್ತೆ ಅವ್ಯವಸ್ಥೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಮುಡಿಪುವಿನಿಂದ ಮೂಳೂರುವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಇಲ್ಲಿನ ಸ್ಥಳೀಯರು ಹಲವು...

ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಕೆಂಜಾರು ಗುಡ್ಡಕ್ಕೆ ದುಬೈನಿಂದ ಬರುತ್ತಿದ್ದ ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನ ಬಿದ್ದು ನಡೆದ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಕೂಳೂರಿನ...

ಬೀಚುಗಳಲ್ಲಿ ಜೀವರಕ್ಷಣಾ ವಿಧಾನದ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಸರ್ಫ್ ಕ್ಲಬ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಜಿಲ್ಲೆಯ ವಿವಿಧೆಡೆಗಳಿಂದ ಬಂದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಣ್ಣೀರುಬಾವಿ ಬೀಚಿನಲ್ಲಿ ರವಿವಾರ ಆಯೋಜಿಸಲಾದ ಜೀವರಕ್ಷಣಾ ವಿಧಾನಗಳ ತರಬೇತಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ನೀರಿನಲ್ಲಿ ಮುಳುಗುತ್ತಿರುವವರ ರಕ್ಷಣೆಯ ವಿಧಾನ ಹಾಗೂ...

ಮುಲ್ಕಿ ಶಾಂಭವಿ ನದಿ ಕುದ್ರು ಪ್ರದೇಶದಲ್ಲಿ ಸೇತುವೆ ಕಾಮಗಾರಿ ನಿಯಂತ್ರಿಸಲು ಭೂಮಾಫಿಯಾ, ಯುಪಿಸಿಎಲ್ ಸಂಚು

ವಿಶೇಷ ವರದಿ ಮಂಗಳೂರು : ಮುಲ್ಕಿ ನಗರ ಪಂಚಾಯತಿಯ ಕಡವಿನ ಬಾಗಿಲು ಬಳಿಯಿಂದ ಕಾಪು ವಿಧಾನಸಭಾ ಕ್ಷೇತ್ರದ ಗಾಂಧಿಪಥ-ನಮ್ಮ ರಸ್ತೆ ಯೋಜನೆಯಡಿ ಸುಮಾರು 6 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೆಜಮಾಡಿಯ ಕೊಕ್ರಾಣಿಕುದ್ರು ರಸ್ತೆ...

ಮಳವೂರು ಅಣೆಕಟ್ಟು ಕಲುಷಿತ ನೀರಿಗೆ ರಾಸಾಯನಿಕ ಸಿಂಪಡಣೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪಲ್ಗುಣಿ ಜಲಾಶಯದ ಮಳವೂರು ಅಣೆಕಟ್ಟಿನಲ್ಲಿ ಕಲುಷಿತಗೊಂಡು ಕಪ್ಪುಬಣ್ಣಕ್ಕೆ ತಿರುಗಿದ್ದ ನೀರಿಗೆ ರವಿವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರಾಸಾಯನಿಕ ಸಿಂಪಡಿಸಿದ್ದರಿಂದ ಸ್ವಲ್ಪಮಟ್ಟಿಗೆ ನೀರಿನ ಮಾಲಿನ್ಯ ಸುಧಾರಣೆ ಕಂಡಿದೆ. ``ಶನಿವಾರ...

ಸೆಝ್ ಕೈಗಾರಿಕಾ ವಿಸರ್ಜನೆ ಮಾಲಿನ್ಯಕ್ಕೆ ಕಾರಣ : ಮೇಯರ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : "ಪಲ್ಗುಣಿ ಕೆಳಜಲಾಶಯದ ಮಳವೂರು ವೆಂಟೆಡ್ ಡ್ಯಾಮಿನ ನೀರು ಕಲುಷಿತಗೊಳ್ಳಲು ಕೆಂಜಾರು ಕಡೆಯ ಮಂಗಳೂರು ವಿಶೇಷ ಆರ್ಥಿಕ ವಲಯ ಹೊರಹಾಕುವ ಕೈಗಾರಿಕಾ ತ್ಯಾಜ್ಯವೇ ಕಾರಣ'' ಎಂದು ಮೇಯರ್ ಕವಿತಾ...

ಮೇ 29ಕ್ಕೆ ಸೋದೆ-ಸುಬ್ರಹ್ಮಣ್ಯ ಮಠಾಧೀಶ್ವರರ ಮುಖಾಮುಖಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಸುಮಾರು 200 ವರ್ಷಗಳ ಬಳಿಕ ಉಡುಪಿ ಸೋದೆ ಮಠ ಮತ್ತು ಕುಕ್ಕೆ ಸುಬ್ರಹ್ಮಣ್ಯ ಮಠದ ಸ್ವಾಮಿಗಳು ಮೇ 29ರಂದು ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಈ ಮೂಲಕ ಸುಮಾರು 2...