Monday, February 20, 2017

ದುಬೈನಲ್ಲಿ ಸಲ್ಲದ 12 ವಿಷಯಗಳು

ಸಾರ್ವಜನಿಕವಾಗಿ ಮದ್ಯಸೇವನೆ ನಿಷಿದ್ಧ ದುಬೈನಲ್ಲಿ ಕುಡಿತಕ್ಕೆ ಅವಕಾಶವಿದ್ದರೂ ಸಾರ್ವಜನಿಕವಾಗಲ್ಲ. ಮನೆಯಲ್ಲಿ ಮನೆ ಮಾಲೀಕರ ಒಪ್ಪಿಗೆಯಿಂದ ಕುಡಿಯಬಹುದಾದರೂ ಅದಕ್ಕೂ ಪರವಾನಗಿ ಬೇಕು. ಆನ್ಲೈನ್ ಮೂಲಕ ಅಥವಾ ಬಾರ್/ಪಬ್ಬಿನಿಂದ ಈ ಪರವಾನಗಿ ಪಡೆಯಬಹುದು. ಹೊಟೇಲುಗಳಲ್ಲೂ ಕುಳಿತು...

`ನಗರೀಕರಣ ಜಾತಿ ವ್ಯವಸ್ಥೆ ಶಿಥಿಲಗೊಳಿಸಿಲ್ಲ’

ದಲಿತ ಸಮುದಾಯಗಳು ನಗರಗಳಿಗೆ ವಲಸೆ ಹೋದನಂತರವೂ ತಮ್ಮ ಜಾತಿ ದೌರ್ಜನ್ಯದಿಂದ ಪಾರಾಗಿಲ್ಲ ಎಂದು ಪ್ರತಿಪಾದಿಸಿದ ಸಾಯಿನಾಥ್ ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ನಿರೀಕ್ಷೆ ಹುಸಿಯಾಗಿದೆ ಎಂದು ಹೇಳಿದ್ದಾರೆ. ನಗರೀಕರಣ ಪ್ರಕ್ರಿಯೆ ತೀವ್ರಗೊಂಡಂತೆಲ್ಲಾ ಜಾತಿ ವ್ಯವಸ್ಥೆ...

ತೆರಿಗೆ ಹೊರೆ ಹೊರಲಾರದ `ಬಡ ರಾಜಕಾರಣಿಗಳು’ !

ಚುನಾಯಿತರಾಗುವ ಒಂದು ವರ್ಷದ ಮುನ್ನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಶೇ 72ರಷ್ಟು ಸಂಸದರು ಮತ್ತು ಶಾಸಕರು ತಮ್ಮ ಆದಾಯ ಪತ್ರದಲ್ಲಿ ವರ್ಷಕ್ಕೆ 10 ಲಕ್ಷ ರೂ ಆದಾಯ ಇರುವುದಾಗಿ ಘೋಷಿಸಿದ್ದರು. 4910...

`ಸಬ್ಸಿಡಿ ನೆಕ್ಕುವ ಅಭ್ಯಾಸದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’

ಮ ಪ್ರ ಬಿಜೆಪಿ ಶಾಸಕನಿಂದ ರೈತರ ಲೇವಡಿ ಭೋಪಾಲ್ : ಸಮಸ್ಯೆಗಳಿಂದ ಕಂಗೆಟ್ಟು ದೇಶದಾದ್ಯಂತ ಕಳೆ ಕೆಲ ವರ್ಷಗಳಿಂದ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ ಮಧ್ಯ ಪ್ರದೇಶದ ಬಿಜೆಪಿ ಶಾಸಕ  ರಾಮೇಶ್ವರ ಶರ್ಮ ಮಾತ್ರ...

ಮಧ್ಯಾಹ್ನದ ಊಟದಲ್ಲಿ ಇಲಿ : ಸರ್ಕಾರಿ ಶಾಲೆ ಮಕ್ಕಳು ಅಸ್ವಸ್ಥ

ನವದೆಹಲಿ : ಸರ್ಕಾರಿ ಶಾಲೆಯೊಂದರ ಮಧ್ಯಾಹ್ನದ ಬಿಸಿಯೂಟ ಸೇವಿಸಿದ 9 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಸಿಯೂಟದಲ್ಲಿ ಸತ್ತ ಇಲಿ ಕಂಡು ಬಂದಿರುವುದೇ ಈ ಅವಾಂತರಕ್ಕೆ ಕಾರಣ ಎಂದು ದೂರಲಾಗಿದೆ. ದಿಯೋಲಿ ಪ್ರದೇಶದ ಸರ್ಕಾರಿ...

ಎಐಎಡಿಎಂಕೆ ಬಣದಿಂದ ಶಶಿಕಲಾ ಉಚ್ಛಾಟನೆ

ಸೇಡಿನ ರಾಜಕೀಯ ಚೆನ್ನೈ : ತಮಿಳನಾಡಿನಲ್ಲಿ ಸೇಡಿನ ರಾಜಕೀಯ ಆರಂಭಿಸಿರುವ ಪನ್ನೀರ್ ಸೆಲ್ವಂ ಬಣವು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ಮತ್ತು ಆಕೆಯ ಇಬ್ಬರು ಸಂಬಂಧಿಗಳಾದ ದಿನಕರನ್ ಹಾಗೂ ವೆಂಕಟೇಶ್ ಮತ್ತು...

ಶೌಚಗುಂಡಿ ಸ್ವಚ್ಛಗೊಳಿಸುತ್ತಿದ್ದ ಮೂವರು ಉಸಿರುಗಟ್ಟಿ ಮೃತ

ಮುಂಬೈ : ಸೇಪ್ಟಿಕ್ ಟ್ಯಾಂಕೊಂದರ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ ಮೂವರು ಉಸಿರುಗಟ್ಟಿ ದಾರುಣ ಸಾವನ್ನಪ್ಪಿದ ಘಟನೆ ಮಾಲ್ವಾಣಿಯ ಜರಿಮರಿ ಪ್ರದೇಶದಲ್ಲಿ ನಡೆದಿದೆ. ಮೃತರನ್ನು ಮೂರ್ತಿ ಹರಿಜನ್ (30), ಮಾಯಾ ಹರಿಜನ್ (26) ಮತ್ತು...

ಮೋದಿ ಸರ್ಕಾರದಿಂದ ಬಾಬಾ ರಾಮದೇವಗೆ ಅಚ್ಛೇ ದಿನ್ !

ನವದೆಹಲಿ : ಮೋದಿ ಸರ್ಕಾರದಿಂದ ಖಂಡಿತವಾಗಿಯೂ `ಪತಂಜಲಿ; ಉತ್ಪಾದನೆಯ ಬಾಬಾ ರಾಮದೇವರಿಗೆ ಅಚ್ಛೇ ದಿನ ಸನ್ನಿಹಿತವಾಗುತ್ತಿದೆ ! ಯೋಗ ಕೌಶಲ್ಯದ ಬಳಿಕ ಬಿ ಎಸ್ ಎಫ್ ಯೋಧರು ಇನ್ನು ಮುಂದೆ ಪತಂಜಲಿ ಬ್ರಾಂಡಿನ ಉತ್ಪನ್ನಗಳನ್ನೇ...

ಪನ್ನೀರ್ ಸೆಲ್ವಂ ಸಹಿತ ಬೆಂಬಲಿಗ ಶಾಸಕರು ಅನರ್ಹತೆ ಭೀತಿಯಲ್ಲಿ

ಚೆನ್ನೈ :  ಮಾಜಿ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಹಾಗೂ ಮಾಜಿ ಶಿಕ್ಷಣ ಸಚಿವ  ಕೆ ಪಾಂಡ್ಯರಾಜನ್ ಸಹಿತ ಪನ್ನೀರ್ ಸೆಲ್ವಂ ಅವರನ್ನು ಬೆಂಬಲಿಸುವ 8  ಮಂದಿ ಶಾಸಕರು ಫೆಬ್ರವರಿ 18, ಶನಿವಾರದಂದು ...

ಬಾಂಗ್ಲಾ ಗಡಿಯಲ್ಲಿ 2,000 ರೂ ನಕಲಿ ನೋಟಿನ ಬಂಡಲ್ ಪತ್ತೆ

ಮಾಲ್ಡಾ : ನೋಟು ನಿಷೇಧಗೊಂಡು ನೂರು ದಿನ ಕಳೆಯುತ್ತಿದ್ದಂತೆ ಇಂಡೋ-ಬಾಂಗ್ಲಾ ಗಡಿಯಲ್ಲಿ ಭಾರೀ ಹೊಸ 2,000 ರೂಪಾಯಿ ನಕಲಿ ನೋಟುಗಳು ಪತ್ತೆಯಾಗಲಾರಂಭಿಸಿವೆ. ಫೆಬ್ರವರಿ 14ರಂದು ನಕಲಿ ನೋಟಿನ ಬಂಡಲೊಂದನ್ನು ಬಿ ಎಸ್ ಎಫ್...

ಸ್ಥಳೀಯ

ರಾತ್ರಿ `ದೇವಿಮಹಾತ್ಮೆ’ ಬಯಲಾಟ ; ಮರುದಿನ ಕೋಳಿ ಅಂಕಕ್ಕೆ ಸಿದ್ಧತೆ

 ದೇವಿ ಮೇಲೆ ಭಕ್ತಿ ; ಜೂಜಿನಲ್ಲಿ ಪ್ರೀತಿ ಬೆಳ್ತಂಗಡಿ : ಶನಿವಾರ ರಾತ್ರಿ ಮೂರ್ಜೆ ಪಿಲಾತಕಟ್ಟೆ ಎಂಬಲ್ಲಿ ಕಟೀಲು ಮೇಳದ ದೇವಿಮಹಾತ್ಮೆ ಯಕ್ಷಗಾನ ಬಯಲಾಟ ಆಯೋಜಿಸಿರುವ ಪಿಲಾತಕಟ್ಟೆ ಯಕ್ಷಗಾನ ಸಮಿತಿ ಸಂಘಟಕರು ಇದೇ ಬಯಲಾಟದ...

ಕುಡುಕನ ಅವಾಂತರ, ಭಯಭೀತ ಜನತೆ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಕುಡುಕನ ಅವಾಂತರದಿಂದ ಮೂಲ್ಕಿ-ಕಿನ್ನಿಗೋಳಿ ರಾಜ್ಯ ಹೆದ್ದಾರಿಯ  ಕೆರೆಕಾಡು ಬಸ್ಸು ನಿಲ್ದಾಣದಲ್ಲಿ ರಕ್ತದಕಲೆ ಹಾಗೂ ತಲೆಗೂದಲು ಪತ್ತೆಯಾಗಿ ಸ್ಥಳದಲ್ಲಿ ಭಯದ ವಾತಾವರಣ ಸೃಷ್ಠಿಯಾದ ಘಟನೆ ಶನಿವಾರ ಬೆಳಗಿನ ಜಾವ...

ಸುರತ್ಕಲ್ಲಲ್ಲಿ ಸದ್ಯವೇ ಆರ್ ಟಿ ಒ ಕಚೇರಿ

ಮಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಘೋಷಣೆ ಮಾಡಿದ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಸುರತ್ಕಲ್ ಪ್ರದೇಶದÀಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ (ರೀಜನಲ್ ಟ್ರಾನ್ಸ್‍ಪೋರ್ಟ್ ಆಫೀಸ್-ಆರ್‍ಟಿಒ) ಕಾರ್ಯಾರಂಭಿಸಲಿದೆ. ಈ ಮೂಲಕ ಸುರತ್ಕಲ್ ವ್ಯಾಪ್ತಿಯ ಜನರ...

ವಿದೇಶಗಳಲ್ಲಿರುವ ಕನ್ನಡಿಗರ ಡಾಟಾ ಆಧರಿತ ವ್ಯವಸ್ಥೆಗೆ ಸಮಿತಿ ಶಿಫಾರಸು

ಮಂಗಳೂರು : ಕೇರಳದ ಮಾದರಿಯಲ್ಲಿ ನಮ್ಮಲ್ಲೂ ವಿದೇಶಕ್ಕೆ ಪ್ರಯಾಣ ಬೆಳೆಸುವ ಕನ್ನಡಿಗರ ಮೇಲೆ ನಿಗಾ ಇರಿಸಲು ಡಾಟಾ ಆಧರಿತ ವ್ಯವಸ್ಥೆಯೊಂದಾಗಬೇಕೆಂದು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿಗಾಗಿರುವ ವಿಧಾನ ಪರಿಷತ್ತಿನ ಸಮಿತಿಯೊಂದು ರಾಜ್ಯ...

ನಿಟ್ಟೆ-ಮಂಗಳೂರು ಮ್ಯಾರಥಾನಲ್ಲಿ 14,000ಕ್ಕೂ ಅಧಿಕ ಜನರ ಓಟ

ಮಂಗಳೂರು :  ನಿಟ್ಟೆ-ಮಂಗಳೂರು ಮ್ಯಾರಥಾನಲ್ಲಿ ಸುಮಾರು  14,000ಕ್ಕೂ ಅಧಿಕ ಜನರು ಓಡಲಿದ್ದಾರೆ. ವಿವಿಧ ವಿಭಾಗಗಳಲ್ಲಿ ನಡೆಯುವ ಈ ಮ್ಯಾರಥಾನ್ ಭಾನುವಾರ ಬೆಳಿಗ್ಗೆ 6 ಗಂಟೆಗೆ ನಗರದ ಮಂಗಳಾ ಕ್ರೀಡಾಂಗಣದಿಂದ ಆರಂಭವಾಗಲಿದೆ. ಅರ್ಧ ಮ್ಯಾರಥಾನ್ ಸೇರಿದಂತೆ...

ಬಂಟ್ವಾಳ ಪೇಟೆ ರಸ್ತೆ ಅಗಲಗೊಳಿಸಲು ಕಾಂಗ್ರೆಸ್ ಆಕ್ಷೇಪವಿಲ್ಲ : ಪುರಸಭಾಧ್ಯಕ್ಷ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಬಂಟ್ವಾಳ ಪೇಟೆ ರಸ್ತ ಅಗಲೀಕರಣಕ್ಕೆ ಪುರಸಭಾಡಳಿತ ಸಂಪೂರ್ಣ ಸಹಮತ ವ್ಯಕ್ತಪಡಿಸುತ್ತಿದೆ ಎಂದು ಪುರಸಭಾಧ್ಯಕ್ಷ ಪಿ ರಾಮಕೃಷ್ಣ ಆಳ್ವ ಅವರು ಹೇಳಿದ್ದಾರೆ. ಶನಿವಾರ ಪುರಸಭಾ ಕಚೇರಿಯಲ್ಲಿ 2017-18ನೇ ಸಾಲಿನ 61.36...

ಕೊಲ್ಯ ಬಳಿ ರೈಲು ಸಂಚಾರ ಸ್ಥಗಿತ : ಕಂಗೆಟ್ಟ ಪ್ರಯಾಣಿಕರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೇರಳದಿಂದ ಮಂಗಳೂರಿಗೆ ಬರುತ್ತಿದ್ದ ರೈಲನ್ನು ದಾರಿ ಮಧ್ಯದಲ್ಲಿ ಹಳಿಗಳ ದುರಸ್ತಿಗಾಗಿ ಸುಮಾರು ಅರ್ಧ ಗಂಟೆ ಕಾಲ ನಿಲುಗಡೆಗೊಳಿಸಿದ ಘಟನೆ ಕೊಲ್ಯ ಬಳಿ ನಡೆದಿದೆ. ರೈಲಿನ ಸಂಚಾರವನ್ನು ಏಕಾಏಕಿ ಸ್ಥಗಿತಗೊಳಿಸಿದ...

ಆಶ್ರಯ ಕಾಲೊನಿ ಭೂಬಳಕೆ ಅಕ್ರಮ ಎಂದು ಡೀಸಿಗೆ ದೂರು

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಇಲ್ಲಿನ ಪುರಸಭೆ ವತಿಯಿಂದ ನೆರೆ ಹಾವಳಿ ಸಂತ್ರಸ್ತರಿಗೆ ನೀಡಿರುವ ಆಶ್ರಯ ಕಾಲೊನಿಯು ಖಾಸಗಿ ಜಮೀನನ್ನು ಅತಿಕ್ರಮಿಸಿ ಬಳಸಲಾಗಿದೆ ಎಂದು ವ್ಯಕ್ತಿಯೋರ್ವರು ರಾಜ್ಯ ಕಂದಾಯ ಸಚಿವರು ಸೇರಿದಂತೆ, ವಿಧಾನ...

ಕದ್ರಿ ಬಾಲೆಯರು ಕೊಡಗಿನಲ್ಲಿ ಪತ್ತೆ

ಮಂಗಳೂರು : ನಗರದ ಕದ್ರಿ ಬಳಿಯಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಇದೀಗ ಮಡಿಕೇರಿಯಲ್ಲಿ ಪತ್ತೆಯಾಗಿದ್ದು, ಕದ್ರಿ ಪೊಲೀಸರು ಅಲ್ಲಿಗೆ ತೆರಳಿ ಕರೆತಂದು ಹೆತ್ತವರಿಗೆ ಒಪ್ಪಿಸಿದ್ದಾರೆ. ಫೆ 11ರಂದು ಕಾಣೆಯಾಗಿದ್ದ 17ರ ಹರೆಯದ ಇಬ್ಬರು ವಿದ್ಯಾರ್ಥಿನಿಯರ...

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಮಾನಾಂತರ ಟ್ಯಾಕ್ಸಿವೇ ನಿರ್ಮಾಣ

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದಕ್ಷಿಣ ಪಾಶ್ರ್ವದಲ್ಲಿ ಸಮಾನಾಂತರ ಟ್ಯಾಕ್ಸಿ ಟ್ರ್ಯಾಕ್ (ದ್ವಿತೀಯ ಹಂತದ ಟ್ಯಾಕ್ಸಿವೇ) ನಿರ್ಮಿಸಲು ಪ್ರಸ್ತಾವವನ್ನು ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರ ಅಂಗೀಕರಿಸಿದೆ. ಪಿಬಿಐ ಕನಸ್ಟ್ರಕ್ಷನ್ ಕಂಪೆನಿಗೆ ಕೆಲಸ...