Monday, May 22, 2017

600 ಕೋಟಿ ರೂ ಚಿನ್ನ ಸ್ಮಗ್ಲಿಂಗ್ ಮಾಡಿದ ದಿಲ್ಲಿ ಉದ್ಯಮಿ ಬಂಧನ

ನವದೆಹಲಿ : ಸಮುದ್ರ ಮಾರ್ಗದ ಮೂಲಕ ದುಬೈಯಿಂದ 600 ಕೋಟಿ ರೂ ಮೌಲ್ಯದ 2,000 ಕಿಲೋ ವಿದೇಶಿ ಚಿನ್ನದ ಗಟ್ಟಿ ಸ್ಮಗ್ಲಿಂಗ್ ಮಾಡಿದ್ದನೆನ್ನಲಾದ ದಿಲ್ಲಿ ಮೂಲದ ಉದ್ಯಮಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‍ಐ)...

ಭಯೋತ್ಪಾದನೆ ನಿಗ್ರಹಿಸಿ :ಮುಸ್ಲಿಮರಿಗೆ ಟ್ರಂಪ್ ಕರೆ

ರಿಯಾದ್ : ಇಸ್ಲಾಮಿಕ್ ಜಗತ್ತಿನಿಂದ ಹೊರಹೊಮ್ಮುತ್ತಿರುವ `ಇಸ್ಲಾಮಿಕ್ ಉಗ್ರವಾದಿಗಳ ಬಿಕ್ಕಟ್ಟು' ನಿವಾರಿಸಲು ಮಧ್ಯಪೂರ್ವ ರಾಷ್ಟ್ರಗಳ ನಾಯಕರು ಹೋರಾಟ ನಡೆಸಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ಸೌದಿ ಅರೇಬಿಯಾದಲ್ಲಿ ತನ್ನ ಗೌರವಾರ್ಥ ಔತಣ...

ಪಾಕಿನಲ್ಲಿ ಭಾರತೀಯ ಬಂಧನ

ಇಸ್ಲಾಮಾಬಾದ್ : ಪ್ರಯಾಣ ದಾಖಲೆ ಇಲ್ಲದ ಭಾರತೀಯ ಪ್ರಜೆಯೊಬ್ಬನನ್ನು ನಿನ್ನೆ ಇಲ್ಲಿ  ಬಂಧಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಬಂಧಿತ ಭಾರತೀಯ ಪ್ರಜೆಯ ಗುರುತು ಪತ್ತೆಯಾಗಿಲ್ಲ. ಈತನನ್ನು ಇಸ್ಲಾಮಾಬಾದಿನ ಎಫ್-8 ಪ್ರದೇಶದಿಂದ ಬಂಧಿಸಲಾಗಿದೆ....

ಸೌಹಾರ್ದ ಸಂಬಂಧಗಳೇ ಸಂತಸದ ಬದುಕಿನ ಗುಟ್ಟು

ಬದುಕು ಬಂಗಾರ-32 ನಮಗೆ ಜೀವನದಲ್ಲಿ ಯಾವುದರಿಂದ ಹೆಚ್ಚಿನ ಸಂತೋಷ ದೊರೆಯುವುದು ಎಂಬ ವಿಚಾರವಾಗಿ ನಡೆಸಲಾದ ಹಾರ್ವರ್ಡ್ ಅಧ್ಯಯನವೊಂದರ ಬಗ್ಗೆ ನಿಮಗೆ ಗೊತ್ತೇನು ? ಮನಃಶಾಸ್ತ್ರದಲ್ಲಿ ಇದೊಂದು  ಕ್ರಾಂತಿಕಾರಕ ಅಧ್ಯಯನವೆಂದೇ ಹೇಳಬಹುದು. ಈ ಅಧ್ಯಯನ ತಂಡವು ಪುರುಷರನ್ನು...

ಐಎಎಸ್ ಅಧಿಕಾರಿ ತಿವಾರಿ ಸಾವು ಪ್ರಕರಣ ಎಸೈಟಿಗೆ

ಲಕ್ನೌ : ಐಎಎಸ್ ಅಧಿಕಾರಿ ಅನುರಾಗ್ ತವೇರಿ ನಿಗೂಢ ಸಾವು ಪ್ರಕರಣವನ್ನು 5 ಮಂದಿ ಸದಸ್ಯರಿಂದ ರಚಿತವಾದ ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಲಾಗಿದೆ. 2007 ಬ್ಯಾಚ್ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಅನುರಾಗ್ ತವೇರಿ...

ಜೀವನದ ಸೋಲಿಗೆ ಆತ್ಮಹತ್ಯೆ ದಾರಿಯಾಗದು

ಜೀವನವನ್ನು ಮಂಗಳಕರವಾಗಿ ಮಾಡಿಕೊಂಡು ಬದುಕಿ, ಸಾಧಿಸಿ ತೋರಿಸುವುದು ಪ್ರಜ್ಞಾವಂತರ ಲಕ್ಷಣ. ಆತ್ಮಹತ್ಯೆಯನ್ನು ಮಾಡಿಕೊಂಡವರು ನೆಮ್ಮದಿಯಾಗಿ ತೆರಳುತ್ತಾರೆ. ಆದರೆ ಅವರ ಕುಟುಂಬದವರು ಶೋಕಸಾಗರದಲ್ಲಿ ನರಳುತ್ತಾರೆ. ಎಂ ಅವಿನಾಶ್ ಮನುಷ್ಯನ ಜೀವನವೆಂಬುದು ಕಷ್ಟ-ಸುಖಗಳ ಸರಮಾಲೆ. ಏಳು-ಬೀಳುಗಳು, ನೋವು-ನಲಿವುಗಳು...

ಬರಗಾಲ ಪೀಡಿತ ಗ್ರಾಮದ ದನಗಳ ವ್ಯಥೆಯ ಕಥೆ

ಗ್ರಾಮದ ಪವಿತ್ರ ಹೋರಿಗೂ ಗೋಶಾಲೆಯೇ ಗತಿಯಾಗಿ ಬಿಟ್ಟಿದೆ ಆಶಾ ಮೆನನ್ ರಾಯಚೂರು : ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೋನಲ್ಲ್ ಎಂಬ ಗ್ರಾಮದಲ್ಲಿ ವಿಶಿಷ್ಟ ಆಚರಣೆಯೊಂದಿದೆ. ಈ ಗ್ರಾಮದ ಜನರು ದೇವರಿಗೆ ಯಾವುದೇ ವಿಶೇಷ...

ಕರ್ಣನ್ ಮೇಲ್ಮನವಿಗೆ ಸುಪ್ರೀಂ ತಿರಸ್ಕಾರ

ನವದೆಹಲಿ : ನ್ಯಾಯಾಲಯದ ನಿಂದನೆ ಆರೋಪಕ್ಕಾಗಿ ತನ್ನ ವಿರುದ್ಧ ಜಾರಿಯಾಗಿರುವ ಆರು ತಿಂಗಳ ಜೈಲು ಶಿಕ್ಷೆಗೆ ಆದೇಶಕ್ಕೆ ತಡೆಯಾಜ್ಞೆ ಕೋರಿ ಕಲ್ಕತ್ತ ``ಹೈಕೋರ್ಟ್ ಜಸ್ಟಿಸ್ ಸಿ ಎಸ್ ಕರ್ಣನ್ ಸಲ್ಲಿಸಿರುವ ಮನವಿಯನ್ನು ಸುಪ್ರೀಂ...

ಆಧಾರ್ ಕಡ್ಡಾಯಕ್ಕೆ ತಡೆ ಹೇರಲು ಸುಪ್ರೀಂ ನಕಾರ

ನವದೆಹಲಿ :  ವಿವಿಧ ಸಮಾಜ ಕಲ್ಯಾಣ ಯೋಜನೆಗಳ  ಸವಲತ್ತು ಪಡೆಯಲು ನಾಗರಿಕರು ತಮ್ಮ ಆಧಾರ್ ಸಂಖ್ಯೆಗಳನ್ನು ಅರ್ಜಿಯಲ್ಲಿ ಕಡ್ಡಾಯವಾಗಿ  ಉಲ್ಲೇಖಿಸಬೇಕೆಂದು  ಸರಕಾರ ಹೊರಡಿಸಿರುವ ಅಧಿಸೂಚನೆಗಳಿಗೆ ತಡೆಯಾಜ್ಞೆ ವಿಧಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ....

ಮಕ್ಕಳ ಕಿಡ್ನಾಪ್ : ಇಬ್ಬರ ಹತ್ಯೆ

ಜಮ್ಶೆಡ್ಪುರ (ಝಾರ್ಖಂಡ) : ಇಲ್ಲಿ ಮಕ್ಕಳನ್ನು ಅಪಹರಿಸುವ ಗ್ಯಾಂಗುಗಳು ಸಕ್ರಿಯಗೊಂಡಿವೆ ಎಂಬ ವದಂತಿ ಹರಡಿದ ಕಳೆದ 24 ಗಂಟೆಗಳ ಅವಧಿಯಲ್ಲಿ ಉದಿಕ್ತ ಗುಂಪುಗಳ ನಡೆಸಿದ ಎರಡು ದಾಳಿಗಳಲ್ಲಿ ಇಬ್ಬರು ಥಳಿತಕ್ಕೊಳಗಾಗಿ ಮೃಪಟ್ಟಿದ್ದಾರೆ. ಈ...

ಸ್ಥಳೀಯ

ಶಂಕಾಸ್ಪದ ವಿವಾಹಿತೆ ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ವಿವಾಹಿತೆ ಬೆಳ್ಳಂಪಳ್ಳಿ ಗ್ರಾಮದ ಪುಣಚೂರು ಕಂಬಳಮಜಲು ನಿವಾಸಿ ಉಷಾ ನಾಯ್ಕ ನೇಣು ಬಿಗಿದ ಸ್ಥಿತಿಯಲ್ಲಿ ಸಂಶಯಸ್ಪಾದವಾಗಿ ಸಾವನ್ನಪ್ಪಿದ್ದಾಳೆ. ಒಂದು ವರ್ಷದ ಹಿಂದೆ ಪುಣಚೂರು ಬೆಳ್ಳಂಪಳ್ಳಿಯ...

ಸಿಡಿಲು ಬಡಿದು ಕುಕ್ಕೆ ದೇವಳ ಗೋಪುರ, ಹಲವು ಮನೆಗೆ ಹಾನಿ

ನಮ್ಮ ಪ್ರತಿನಿಧಿ ವರದಿ ಸುಬ್ರಹ್ಮಣ್ಯ : ಕಳೆದೆರಡು ದಿನಗಳಿಂದ ಸುಬ್ರಹ್ಮಣ್ಯದಲ್ಲಿ ಸುರಿಯುತ್ತಿರುವ ಸಿಡಿಲು, ಮಿಂಚು, ಸಹಿತ ಭಾರೀ ಮಳೆಗೆ ಅಪಾರ ಹಾನಿ ಸಂಭವಿಸಿದೆ. ರವಿವಾರ ಬೆಳಗ್ಗಿನ ಜಾವ ಅಪ್ಪಳಿಸಿದ ಸಿಡಿಲಿಗೆ ಕುಕ್ಕೆ ಸುಬ್ರ್ಮಹ್ಮಣ್ಯ ಕ್ಷೇತ್ರದ...

ಬಾರ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ : ಕೆಸಿಡಿಸಿಎಲ್ ಅಧಿಕಾರಿಗಳ ಪರಿಶೀಲನೆ

ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಬಾರ್ಯ ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇವರು ಕೆಸಿಡಿಸಿಎಲ್ಲಿಗೆ ಸೇರಿದ ಜಾಗದಲ್ಲಿ ಕಲ್ಲುಗಳನ್ನು ರಾಶಿ ಹಾಕಿದ್ದಾರೆ. ಇಲ್ಲಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಕೆಸಿಡಿಸಿಎಲ್ ಅಧಿಕಾರಿಗಳು...

ಕಾನೂನುಬಾಹಿರ ಟೆಂಡರ್ : ಹೂಳು ತೆಗೆಯುವ ನೆಪದಲ್ಲಿ ಮರಳು ಲೂಟಿ

ಕಾರ್ಕಳ ಪುರಸಭೆಯಿಂದ ಸುಪ್ರೀಂ ಕೋರ್ಟ್ ಹಸಿರುಪೀಠ ಆದೇಶ ಉಲ್ಲಂಘನೆ ಜನಪ್ರತಿನಿಧಿಗಳ ಜಾಣ ಮೌನ ವಿಶೇಷ ವರದಿ ಕಾರ್ಕಳ : ಇಲ್ಲಿನ ಪುರಸಭೆಗೆ ನೀರು ಪೂರೈಸುವ ಮುಂಡ್ಲಿ ಜಲಾಶಯದಲ್ಲಿ ತುಂಬಿದ್ದ ಹೂಳನ್ನು ಎತ್ತುವ ಕಾಮಗಾರಿ ಕುರಿತು ಕಾರ್ಕಳ ಪುರಸಭೆ...

ಕಟೀಲಿನಲ್ಲಿ ದಾಖಲೆಯ ಸಾಮೂಹಿಕ ಮದುವೆ

ನಮ್ಮ ಪ್ರತಿನಿಧಿ ವರದಿ ಮುಲ್ಕಿ : ಇತಿಹಾಸ ಪ್ರಸಿದ್ಧ ಕಟೀಲು ದೇವಸ್ಥಾನದಲ್ಲಿ ರವಿವಾರ ದಾಖಲೆಯ 77 ಸಾಮೂಹಿಕ ಮದುವೆ ನಡೆದಿದೆ. ಬೆಳಗ್ಗಿನಿಂದಲೇ ಕಟೀಲು ದೇವಸ್ಥಾನದಲ್ಲಿ ಜನಜಂಗುಳಿಯ ವಾತಾವರಣ ನೆಲೆಸಿದ್ದು ದೇವಸ್ಥಾನದ ರಸ್ತೆಗಳು ಬ್ಲಾಕ್ ಆಗಿ ಜನಸಂಚಾರ...

ವಿದ್ಯುತ್ ಶಾರ್ಟ್ ಸಕ್ರ್ಯೂಟ್ : ಮನೆಗೆ ಬೆಂಕಿ ತಗುಲಿ ಹಾನಿ

ಭಟ್ಕಳದ ಮಣ್ಕುಳಿಯಲ್ಲಿ ಅಗ್ನಿ ಅನಾಹುತ ನಮ್ಮ ಪ್ರತಿನಿಧಿ ವರದಿ ಭಟ್ಕಳ : ಇಲ್ಲಿನ ಮಣ್ಕುಳಿಯ ಪುಷ್ಪಾಂಜಲಿ ಟಾಕೀಸ್ ರಸ್ತೆಯಲ್ಲಿರುವ ವಿಜಯಕುಮಾರ ಪ್ರಭು ಅವರ ಮನೆಯಲ್ಲಿ ಶನಿವಾರ ವಿದ್ಯುತ್ ಶಾರ್ಟ್ ಸಕ್ರ್ಯೂಟಿನಿಂದ ಆಕಸ್ಮಿಕ ಬೆಂಕಿ ತಗುಲಿ ಅಪಾರ...

`ಯುವಕರು ಸ್ವಯಂ ಉದ್ಯೋಗಿಗಳಾಗಬೇಕು’

ನಮ್ಮ ಪ್ರತಿನಿಧಿ ವರದಿ ಉಡುಪಿ : ``ಯುವಕರು ಉದ್ಯೋಗವನ್ನು ಅರಸುತ್ತಾ ದಿನ ಕಳೆಯುವುದಕ್ಕಿಂತ ಸ್ವಯಂ ಉದ್ಯೋಗಿಗಳಾಗಲು ಮುಂದೆ ಬರಬೇಕು'' ಎಂದು ಮೀನುಗಾರಿಕೆ, ಯುವಶಕ್ತಿ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಶುಕ್ರವಾರ ಜಿಲ್ಲಾ...

ಪ್ರಾಕೃತಿಕ ವಿಕೋಪ : ಸಂತ್ರಸ್ತರ ನೆರವಿಗೆ ಮನಪಾದಿಂದ ಪ್ರತ್ಯೇಕ ಘಟಕ ಆರಂಭ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಮುಂತಾದ ತುರ್ತುಸಂದರ್ಭಗಳಲ್ಲಿ ಸಾರ್ವಜನಿಕರ ಸಹಾಯಕ್ಕೆ ಮಂಗಳೂರು ನಗರಪಾಲಿಕೆಯಲ್ಲಿ ಪ್ರತ್ಯೇಕ ಘಟಕವೊಂದು ಜೂನ್ 1ರಿಂದ ಕಾರ್ಯಾಚರಿಸಲಿದೆ'' ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ. ``ಹತ್ತು ಮಂದಿ...

ಗುರುಪುರ ಗ್ರಾಮ ಪಂಚಾಯತ..

ಗುರುಪುರ ಗ್ರಾಮ ಪಂಚಾಯತ, ಕೆ ಎಸ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಆಸ್ಪತ್ರೆ ಮಂಗಳೂರು ಹಾಗೂ ಗುರುಪುರದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ರವಿವಾರ ಗುರುಪುರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ...

ರಾಜ್ಯದ ಬೀಚ್ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಕೆ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ``ಪ್ರವಾಸೋದ್ಯಮ ಅಭಿವೃದ್ಧಿಯ ಕೇಂದ್ರ ಬಿಂದುವಾದ ಕರಾವಳಿ ತೀರಗಳು ಶೀಘ್ರದಲ್ಲೇ ಹಲವು ಅಭಿವೃದ್ಧಿ ಹೊಂದಲಿವೆ. ಕರ್ನಾಟಕ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಬೀಚ್ ಕೊಡುಗೆ ಮಹತ್ವದ್ದಾಗಿದೆ ಎಂಬುದನ್ನು ಅರಿತುಕೊಂಡಿರುವ ಪ್ರವಾಸೋದ್ಯಮ...