Saturday, December 16, 2017

ರಾಘವೇಶ್ವರ ಶ್ರೀ ವಿರುದ್ಧ ತನಿಖೆಗೆ ತ್ರಿಸದಸ್ಯ ಸಮಿತಿ ನೇಮಕಕ್ಕೆ ಆದೇಶ

ಬೆಂಗಳೂರು : ಹೊಸನಗರ ರಾಮಚಂದ್ರಾಪುರ ಮಠದಲ್ಲಿ ಸಾಕಷ್ಟು ಆರ್ಥಿಕ ಅವ್ಯವಹಾರಗಳು ನಡೆದಿವೆಯೆಂದು ಆರೋಪಿಸಿ ರಾಘವೇಶ್ವರ ಸ್ವಾಮಿಯನ್ನು ಪೀಠದಿಂದ ಕೆಳಗಿಳಸಬೇಕೆಂಬ ಬೇಡಿಕೆಯೊಂದಿಗೆ ಎದುರ್ಕಳ ಈಶ್ವರ ಭಟ್ ಮತ್ತು ಜೈಕೃಷ್ಣ ಎಂಬವರು ಕಳೆದ ವರ್ಷದ ಎಪ್ರಿಲ್...

“ಚುನಾವಣೆ ಗೆಲ್ಲಲು ಕೆಲವು ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ”

``ಕಳೆದ ನಾಲ್ಕು ವರ್ಷಗಳಲ್ಲಿ ನಾವು ಹಿರಿಯ ನಾಯಕರನ್ನು ಇನ್ನೂ ಹೆಚ್ಚಿನ ಗೌರವದಿಂದ ಕಾಣಬೇಕಿತ್ತು.'' ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಬಿ ಎಲ್ ಶಂಕರ್ ತಮ್ಮ ನೇರಾನೇರ ಮಾತುಗಳಿಗೆ ಹೆಸರಾದವರು. ಇತರರು ಅಭಿಪ್ರಾಯ ವ್ಯಕ್ತಪಡಿಸಲು ಹಿಂದೆ ಮುಂದೆ ನೋಡುವ...

ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ದಾವಣಗೆರೆ : ಇಲ್ಲಿಗೆ ಸಮೀಪದ ಗುಡಲ್ ಎಂಬ ಗ್ರಾಮದಲ್ಲಿ  ಒಂದೇ ಕುಟುಂಬದ ಮೂರು ಮಂದಿ ಸದಸ್ಯರು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಪಟ್ಟವರು ನಟರಾಜ್ (40), ಆತನ ಪತ್ನಿ  ಪಲ್ಲವಿ (24) ಹಾಗೂ ಪುತ್ರ ಪ್ರದೀಪ್...

ಬೆಂಗಳೂರಿನಲ್ಲಿ ಅಕ್ರಮ ವಾಸ್ತವ್ಯದ ಮೂವರು ಪಾಕ್ ಪ್ರಜೆಗಳ ಸೆರೆ

ಬೆಂಗಳೂರು : ಇಲ್ಲಿನ ಕುಮಾರಸ್ವಾಮಿ ಬಡಾ ವಣೆಯಲ್ಲಿ ನಕಲಿ ಗುರುತಿನ ಚೀಟಿ ಮಾಡಿಸಿಕೊಂಡು ಅಕ್ರಮವಾಗಿ ವಾಸಿಸುತ್ತಿದ್ದ ಮೂವರು ಪಾಕ್ ಪ್ರಜೆಗಳು ಹಾಗೂ ಕೇರಳದ ವ್ಯಕ್ತಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ``ಪಾಸ್‍ಪೋರ್ಟ್ ಕಾಯ್ದೆಯ ವಿವಿಧ...

10 ಕೋಟಿ ರೂ ಮೌಲ್ಯದ ಮಾದಕ ವಸ್ತು ವಶ, ಬಂಧನ

ಬೆಂಗಳೂರು : ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಲೇಶ್ಯಾಗೆ ಎಫಿಡ್ರಿನ್ ಮಾದಕ ವಸ್ತು ಸಾಗಿಸಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡಿಕೊಂಡಿದ್ದ...

`ಶುದ್ಧ ಹಸ್ತರಿಗೆ ಸಲ್ಲದ ಕರ್ನಾಟಕ’

``ಐಎಎಸ್ ಅಧಿಕಾರಿಗಳ ಮಾಫಿಯಾ ಶೈಲಿಯ ಬೆದರಿಕೆಗಳು ಹೆಚ್ಚಾಗುತ್ತಿವೆ.  ನಾನು ರಾಜ್ಯದ ನಿಷ್ಟಾವಂತ ಅಧಿಕಾರಿಗಳ ದನಿಯಾಗಿರಲು ಬಯಸುತ್ತೇನೆ.'' ಐಎಎಸ್ ಅಧಿಕಾರಿ ಅನುರಾಗ್ ತಿವಾರಿಯವರ ನಿಗೂಢ ಸಾವು ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ಬಯಲು ಮಾಡುವ ಐಎಎಸ್ ಅಧಿಕಾರಿಗಳು...

ಉದ್ಯಮಿ ಪುತ್ರನ ಹತ್ಯೆ ಪ್ರಕರಣ : ರಶೀದ್ ಮಲಬಾರಿ ಸಹಚರರ ಸೆರೆ

ಬೆಳಗಾವಿ : ಭೂಗತ ಪಾತಕಿ ರಶೀದ್ ಮಲಬಾರಿಯ ಇನ್ನಿಬ್ಬರು ಸಹಚರರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಪುತ್ರನ ಹತ್ಯೆ ಪ್ರಕರಣದಲ್ಲಿ ಇವರು ಪ್ರಮುಖ ಪಾತ್ರ ವಹಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು.ಮುಂಬಯಿ ಮುಂದ್ರಾ ನಿವಾಸಿ...

ಬರಲಿದೆ ದೇವಳಗಳ ಮಾಹಿತಿ ಒದಗಿಸುವ ಮೊಬೈಲ್ ಆ್ಯಪ್

 ಬೆಂಗಳೂರು : ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ, ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ, ಕಟೀಲು  ದುರ್ಗಾಪರಮೇಶ್ವರಿ ದೇವಳ ಮುಂತಾದ  ಸುಮಾರು 200 ಪ್ರಮುಖ ಮುಜರಾಯಿ ದೇವಳಗಳ  ಬಗ್ಗೆ ಭಕ್ತಾದಿಗಳ ಅನುಕೂಲಕ್ಕಾಗಿ ಸಮಗ್ರ  ಮಾಹಿತಿಯೊದಗಿಸುವ ಮೊಬೈಲ್...

ಅಪ್ರಾಪ್ತೆ ಒಪ್ಪಿಸಿ ಸೆಕ್ಸ್ ಮಾಡಿದರೆ ಅತ್ಯಾಚಾರವೇ : `ಹೈ’ ತೀರ್ಪು

ಬೆಂಗಳೂರು : ಅಪ್ರಾಪ್ತೆಯನ್ನು ಒಪ್ಪಿಸಿ ಲೈಂಗಿಕ ಕ್ರಿಯೆ ನಡೆಸಿದರೂ ಅದು ಅತ್ಯಾಚಾರಕ್ಕೆ ಸಮಾನವಾಗಿರುವ ಅಪರಾಧವಾಗಿದೆ ಎಂದು ಹೈಕೋರ್ಟ್ ಆದೇಶ ನೀಡಿದೆ. ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ 3 ವರ್ಷಗಳ ಲೈಂಗಿಕ ಕ್ರಿಯೆ ನಡೆಸಿದ ಪ್ರಕರಣದಲ್ಲಿ ಜೈಲು...

ಪಾಳೆಗಾರಿಕೆ ಪದ್ಧತಿ ಅಂತ್ಯವಾದರೆ ಸಮಾನತೆ ಸಾಧ್ಯ : ದಲೈ ಲಾಮ

 ಬೆಂಗಳೂರು : ಸಮಾಜದಲ್ಲಿ ಇನ್ನೂ ಬಲವಾಗಿ ತಳವೂಳಿರುವ ಪಾಳೆಗಾರಿಕೆ ಪದ್ಧತಿಯಿಂದಾಗಿಯೇ  ಕೆಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಇನ್ನೂ ಮರೀಚಿಕೆಯಾಗಿದೆ ಎಂದು ಟಿಬೆಟಿನ ಆಧ್ಯಾತ್ಮಿಕ ಗುರು ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ದಲೈ...

ಸ್ಥಳೀಯ

ತೊಕ್ಕೊಟ್ಟು ಲಾಡ್ಜಿನಲ್ಲಿ ಅನ್ಯಕೋಮು ಜೋಡಿ

ಪೊಲೀಸರ ದಾಳಿ ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರದ ಹೊರವಲಯದ ಉಳ್ಳಾಲ ತೊಕ್ಕೊಟ್ಟಿನಲ್ಲಿರುವ ಲಾಡ್ಜಿನಲ್ಲಿ ಅನ್ಯಕೋಮಿನ ಜೋಡಿ ಇದ್ದ ಬಗ್ಗೆ ಮಾಹಿತಿ ಪಡೆದ ಪರಿವಾರ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರು ದಾಳಿ...

ನಕಲಿ ಚಿನ್ನ ಅಡವಿಟ್ಟು 16.70 ಲಕ್ಷ ರೂ ವಂಚನೆ

ಮೂವರ ವಿರುದ್ಧ ಕೇಸು ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-66ರ ಸಂತೆಕಟ್ಟೆ ಎಂಬಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕರಾವಳಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಬ್ರಹ್ಮಾವರ ಶಾಖೆಯಲ್ಲಿ ಚಿನ್ನಾಭರಣ ಅಡವು ಸಾಲಕ್ಕೆ...

5 ಕೋಟಿ ರೂ ವೆಚ್ಚದಲ್ಲಿ ಪಡೀಲ್ ಬಳಿ ಹೊಸ ಸೇತುವೆ ನಿರ್ಮಾಣ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೊನೆಗೂ ಪಡೀಲಿನಲ್ಲಿ ದಿನನಿತ್ಯ ಕಂಗೆಡುತ್ತಿದ್ದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಕ್ಕಿ ನೂತನ ಮೇಲ್ಸೇತುವೆ ಕಾಮಗಾರಿ ಲೋಕಾರ್ಪಣೆಗೊಂಡಿತು. ಪಡೀಲ್ ಬಳಿ ನೂತನ ಸೇತುವೆಯ ಪಕ್ಕದಲ್ಲೇ ಹಳೆ ಕೆಳಸೇತುವೆಗೆ ಪರ್ಯಾಯವಾಗಿ...

ವಾಹನವಿಲ್ಲದಿದ್ದರೂ ಪೊಲೀಸರಿಂದ ಹಳೆ ಮಾಲಕರಿಗೆ ಟ್ರಾಫಿಕ್ ಉಲ್ಲಂಘನೆ ನೋಟಿಸು

ಮ್ಮ ಪ್ರತಿನಿಧಿ ವರದಿ ಮಂಗಳೂರು : ಕೆಲವು ಸಮಯದ ಹಿಂದೆ ತಮ್ಮ ವಾಹನ ಬೇರೆಯವರಿಗೆ ಮಾರಾಟ ಮಾಡಲಾಗಿ, ಅವರ ಹೆಸರಲ್ಲಿ ಆ ವಾಹನ ನೋಂದಾವಣೆಯಾಗಿದ್ದರೂ, ಮಂಗಳೂರು ನಗರ ಪೊಲೀಸರು ಮಾಜಿ ಮಾಲಕರಿಗೆ `ಸಂಚಾರಿ ನಿಯಮ...

ಗರಿಗೆದರಿತು ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸರಿಸುಮಾರು 15 ದಿನಗಳಿಂದ ಪ್ರಕ್ಷುಬ್ದಗೊಂಡಿದ್ದ ಕಡಲು ಇದೀಗ ಸಹಜ ಸ್ಥಿತಿಗೆ ಮರಳಿದೆ. ಓಖಿ ಚಂಡಮಾರುತದಿಂದ ಲಕ್ಷದ್ವೀಪಕ್ಕೆ ಸ್ಥಗಿತಗೊಂಡಿದ್ದ ಹಡಗುಯಾನ  ಪುನರಾರಂಭಗೊಂಡಿದ್ದು, ಮಂಗಳೂರು ಹಳೆ ಬಂದರಿನಿಂದ ಈಗಾಗಲೇ 10...

ಸ್ವಿರ್ಝಲ್ಯಾಂಡ್ ಸಂಸದ ನಿಕ್ ಗುಗ್ಗರ್ ನಮ್ಮ ಉಡುಪಿಯವರು

ಮಂಗಳೂರು : ಇತ್ತೀಚೆಗೆ ಸ್ವಿರ್ಝಲ್ಯಾಂಡಿನ ರಾಜಧಾನಿ ಬರ್ನ್ ನಗರದಲ್ಲಿ ಸ್ವಿಸ್ ನ್ಯಾಷನಲ್ ಕೌನ್ಸಿಲ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಿಕ್ ಗುಗ್ಗರ್ ಅವರು ಮೂಲತಃ ಉಡುಪಿ ಜಿಲ್ಲೆಯವರು. ನಲ್ವತ್ತೇಳು ವರ್ಷದ ನಿಕ್ ಹುಟ್ಟಿದ್ದು...

ಭಿಕ್ಷೆ ಎತ್ತುವ `ಬಿಳಿತೊನ್ನು’ ರೋಗದ ಮಕ್ಕಳಿಗೆ ನೆರವಾದ ನಗರ ವಿದ್ಯಾರ್ಥಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೆಲವು ವರ್ಷದಿಂದ ನಗರದ ಬೀದಿ ಬದಿಯಲ್ಲಿ ಭಿಕ್ಷೆ ಬೇಡುತ್ತ ಜೀವನ ಸಾಗಿಸುತ್ತಿದ್ದ ಅಲ್ಬಿನೋ ರೋಗಗ್ರಸ್ಥ (ಬಿಳಿತೊನ್ನು) ಆರು ಮಂದಿ ಮಕ್ಕಳು ಮತ್ತು ಅವರ ಕುಟುಂಬಿಕರಿಗೆ ನೆರವಾಗಿರುವ ಮಂಗಳೂರು...

ಸುಳ್ಯದ ಶಾಲೆಗೆ ಆದಾಯ ಮೂಲ ಈ ರಬ್ಬರ್ ತೋಟ !

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸುಳ್ಯ ಬಾಳಿಲದ ವಿದ್ಯಾಬೊಧಿಸಿ ಎಜ್ಯುಕೇಶನ್ ಸಂಸ್ಥೆಯ 10 ವರ್ಷಗಳ ಹಿಂದೆ ನೆಟ್ಟಿದ್ದ ಸುಮಾರು 900 ರಬ್ಬರ್ ಗಿಡಗಳು ಈಗ ಬೆಳೆದು ನಿಂತು ಇಳುವರಿ ಕೊಡುತ್ತಿದ್ದು, ಇದು ಸಂಸ್ಥೆಯ...

ಕರಾವಳಿ ಉತ್ಸವ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಲಗೋರಿ ಚಾಂಪಿಯನ್ಶಿಪ್ ಜನೆವರಿ 6ಕ್ಕೆ

ಮಂಗಳೂರು : ರಾಷ್ಟ್ರೀಯ ಮಟ್ಟದ ಎರಡು ದಿನಗಳ ಲಗೋರಿ ಚಾಂಪಿಯನ್ಶಿಪ್-2018 ಜನವರಿ 6ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ. ಮೊದಲ ಬಾರಿಗೆ ಲಗೋರಿ ತುಳುನಾಡು ಕಪ್ ಕಳೆದ ಬಾರಿ ಜುಲೈ ತಿಂಗಳಲ್ಲಿ...

ವಾಣಿಜ್ಯ ಸಂಕೀರ್ಣಗಳಿಂದ ಸಾರ್ವಜನಿಕ ಪ್ರದೇಶ ಪಾರ್ಕಿಂಗ್ ಸ್ಥಳವಾಗಿ ಆಕ್ರಮಣ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯ ಪ್ರಯುಕ್ತ ಮಂಗಳೂರು ನಗರ ವೇಗವಾಗಿ ಬೆಳೆಯುತ್ತಿದ್ದರೂ ನಗರಕ್ಕೊಂದು ಆಕಾರ ನೀಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ``ನಗರದಲ್ಲಿ ಟ್ರಾಫಿಕ್ ಹೆಚ್ಚಾಗಿದ್ದು, ಪರಿಣಾಮವಾಗಿ ನಗರ ನಿವಾಸಿಗಳು ತೊಂದರೆ ಎದುರಿಸುತ್ತಿದ್ದಾರೆ....