Friday, August 18, 2017

ಲಾರಿಗೆ ಕಾರು ಡಿಕ್ಕಿ : ಮದುವೆಗೆ ಹೋಗುತ್ತಿದ್ದ 7 ಮಂದಿ ಮೃತ

ಬೆಂಗಳೂರು : ಗೆಳೆಯನ ಮದುವೆಗೆ ಬೆಂಗಳೂರಿನಿಂದ ಸಾಗರದತ್ತ ಸಾಗುತ್ತಿದ್ದ ಕಾರೊಂದು ಭೀಕರ ಅಪಘಾತಕ್ಕೀಡಾಗಿ ಅದರಲ್ಲಿದ್ದ ಏಳು ಮಂದಿ ಗೆಳೆಯರು ದಾರುಣ ಮೃತಪಟ್ಟ ಘಟನೆ ಶಿವಮೊಗ್ಗದಿಂದ 10 ಕಿ ಮೀ ಅಂತರದಲ್ಲಿರುವ ತ್ಯಾವರೆಕೊಪ್ಪಕ್ಕೆ ಹತ್ತಿರದ...

ಭೂ ವ್ಯಾಜ್ಯಗಳಲ್ಲಿ ಹಸ್ತಕ್ಷೇಪ ಬೇಡ : ಪೊಲೀಸರಿಗೆ ಸೀಎಂ ನಿರ್ದೇಶನ

ಬೆಂಗಳೂರು : ಭೂ ವಿವಾದಗಳಿಗೆ ಸಂಬಂಧಿಸಿ ಎರಡು ಪಕ್ಷಗಳ ಮಧ್ಯೆ ಮಧ್ಯಸ್ಥಿಕೆ ಮಾಡಬಾರದೆಂದು ನಿನ್ನೆ ಪೊಲೀಸರಿಗೆ ಸೀಎಂ ಸಿದ್ದರಾಮಯ್ಯ ನಿರ್ದೇಶಿಸಿದರು. ``ಭೂ ವಿವಾದ ಇತ್ಯರ್ಥ ಪ್ರಕರಣಗಳಲ್ಲಿ ಪೊಲೀಸರು ಹಸ್ತಕ್ಷೇಪ ಮಾಡುತ್ತಾರೆಂದು ನಿರಂತರ ಸರ್ಕಾರ...

ರಾವ್ ಪಕ್ಷಪಾತಿ, ಯಡ್ಡಿ ಪರ ಎನ್ನುತ್ತಿರುವ ಭಿನ್ನರು

 ಸಂತೋಷ್ ಜತೆ ಹೊಂದಿಕೊಂಡು ಹೋಗಲು ಸಲಹೆ ವಿಶೇಷ ವರದಿ ಬೆಂಗಳೂರು : ರಾಜ್ಯ ಬಿಜೆಪಿ ವ್ಯವಹಾರಗಳ ಉಸ್ತುವಾರಿ ಪಿ ಮುರಳೀಧರ್ ರಾವ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಯಡ್ಡಿಯೂರಪ್ಪ ಪರವಾಗಿದ್ದಾರೆ ಹಾಗೂ ಪಕ್ಷಪಾತಿ ಧೋರಣೆ ತಳೆಯುತ್ತಿದ್ದಾರೆಂದು...

ಖಾಸಗಿ ಬಸ್ ಪರ್ಮಿಟ್ ನಿರಾಕರಿಸಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶ ರದ್ದು

ಬೆಂಗಳೂರು : ರಾಜ್ಯದಾದ್ಯಂತ ಹಲವಾರು ಖಾಸಗಿ ಬಸ್ಸುಗಳಿಗೆ ರೂಟ್ ಪರ್ಮಿಟ್ ನೀಡಲು ನಿರಾಕರಿಸಿ ರಾಜ್ಯ ಸರಕಾರ ಆಗಸ್ಟ್ 5, 2015ರಂದು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ. ಸುಮಾರು 1000ಕ್ಕೂ ಮಿಕ್ಕಿ ಖಾಸಗಿ...

ವಾಟ್ಸಪ್ಪಿನಲ್ಲಿ ಮಹಿಳೆಯ ನಗ್ನ ಚಿತ್ರ ಹಾಕಿದ ಬಿಜೆಪಿ ಎಂಎಲ್ಸಿ

ಬೆಳಗಾವಿ : ಸುದ್ದಿ ಮತ್ತು ಸೂಚನೆಗಳನ್ನು ನೀಡಲು ರೂಪಿಸಿದ್ದ ಬೆಳಗಾವಿ ಮೀಡಿಯಾ ಫೋರ್ಸ್ ವಾಟ್ಸಪ್ ಗುಂಪಿನಲ್ಲಿ ಮಹಿಳೆಯ ನಗ್ನ ಚಿತ್ರಗಳನ್ನು ಹಾಕಿ ಬಿಜೆಪಿ ವಿಧಾನಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ್ ಸುದ್ದಿಯಾಗಿದ್ದಾರೆ. ಈ ಹಿರಿಯ...

ಯಡ್ಡಿ-ಈಶ್ವರಪ್ಪ ಜಗಳ ಅಲಕ್ಷಿಸಿದ ಹೈಕಮಾಂಡ್

ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪ ವಿರುದ್ಧ ಬಂಡಾಯ ಎದ್ದಿರುವುದಕ್ಕೆ ಪಕ್ಷದ ಹೈಕಮಾಂಡ್ ವಿಧಾನಸಭೆಯ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿಲ್ಲ ಎನ್ನುವುದು...

ಓಲಾ ಚಾಲಕನ ವಿರುದ್ಧ ಲೈಂಗಿಕ ಕಿರುಕುಳ ದೂರು

ಬೆಂಗಳೂರು : ರಾತ್ರಿ ಪಾರ್ಟಿಯೊಂದನ್ನು ಮುಗಿಸಿ ಯುವತಿಯೊಬ್ಬಳು ಬೇಗೂರಿನಲ್ಲಿರುವ ತನ್ನ  ಮನೆಗೆ ತೆರಳಲು ಓಲಾ ಕ್ಯಾಬ್ ಒಂದರಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕ್ಯಾಬ್ ಚಾಲಕ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿ  ಯುವತಿ ಪೊಲೀಸ್ ದೂರು...

ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾದರೆ ರಾಜಕೀಯ ನಿವೃತ್ತಿ : ಕುಮಾರಸ್ವಾಮಿ

ಬೆಂಗಳೂರು : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ತೆನೆ ಹೊತ್ತ ಮಹಿಳೆಯ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ``ಜನರಲ್ಲಿ ಗೊಂದಲ ಮೂಡಿಸಲು ಸೀಎಂ ಕಚೇರಿಯಿಂದಲೇ...

ಮಕ್ಕಳ ಅಪಹರಣ ಜಾಲ ಸಕ್ರಿಯ

ಮೈಸೂರಿನಲ್ಲಿ `ಸತ್ತಿದ್ದ' ಮಗು ವರುಷದ ಬಳಿಕ ದಿಢೀರ್ ಪತ್ತೆ ಮೈಸೂರು : ನಿಮ್ಮ ಮಗು ಹುಟ್ಟುವ ಮುನ್ನವೇ ಸತ್ತು ಹೊಯ್ತು ಕಣ್ರೀ ಎಂಬುದನ್ನು ತಾಯಿಗೆ ಹೇಳಿದಾಗ ಆಕೆಗೆ ಗರಬಡಿದಂತಾಯಿತು. ಆದರೆ ತನ್ನ ಗಂಡನ ತದ್ಪ್ರೂಪವುಳ್ಳ...

ಆದೇಶ ಲೆಕ್ಕಕ್ಕಿಲ್ಲ : ಸಿನಿಮಾ ದರ ದುಪ್ಪಟ್ಟು ವಸೂಲಿ

ಬೆಂಗಳೂರು : ರಾಜ್ಯದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ 200 ರೂ ಗರಿಷ್ಠ ಪ್ರವೇಶದ ದರ ನಿಗದಿ ಪಡಿಸಿ ಸರಕಾರ ಆದೇಶ ಹೊರಡಿಸಿದ್ದರೂ ಚಿತ್ರಮಂದಿರಗಳಲ್ಲಿ ದುಪ್ಪಟ್ಟು ದರ ವಸೂಲಿ ಮಾಡಲಾಗುತ್ತಿದೆ. ಸರಕಾರದ ಆದೇಶದ ಪ್ರತಿ ತಮ್ಮ...

ಸ್ಥಳೀಯ

ಮಳೆಗಾಲದಲ್ಲಿ ಮನೆಯೊಳಗೆ `ಚಿಕ್ಕ ಮೇಳ’ ಆಟ

ವಾಸ್ತುದೋಷ ಪರಿಹಾರಕ್ಕೂ ಯಕ್ಷಗಾನ ನಮ್ಮ ಪ್ರತಿನಿಧಿ ವರದಿ ಮಂಗಳೂರು : ಆಟಿ ತಿಂಗಳಲ್ಲಿ ಮನೆಮನೆಗೆ ಬರುವ ಆಟಿ ಕಳಂಜ ಮಾರಿ ಕಳೆದರೆ, ಭಾರೀ ಮಳೆಯ ನಡುವೆ ಮನೆ ಮನೆಗೆ ಬರುವ `ಚಿಕ್ಕ ಮೇಳ' ಮನೆಯೊಳಗಿನ ಸರ್ವದೋಷಗಳನ್ನೂ...

ಉಪ್ಪಿಗೆ ಉತ್ಸಾಹದಿಂದ ಪ್ರತಿಕ್ರಿಯಿಸಿದ ಅಭಿಮಾನಿಗಳು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಸ್ಯಾಂಡಲ್ವುಡ್ ನಟ ಉಪೇಂದ್ರ ರಾಜಕೀಯಕ್ಕೆ ಧುಮುಕುವ ಆಸಕ್ತಿಯನ್ನು ಘೋಷಿದಂದಿನಿಂದ ಅಭಿಮಾನಿಗಳ ಉತ್ಸಾಹ-ಆಸಕ್ತಿಗಳೂ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ನಟ ಉಪ್ಪಿ ತನ್ನ ರುಪ್ಪಿ ರೆಸಾರ್ಟಿನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾಗ...

`ಮಿಸೆಸ್ ಪಾಪ್ಯುಲರ್ 2017′ ಪಡೆದ ನಗರದ ಸೌಜನ್ಯಾ ಹೆಗ್ಡೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ವಿಯೆಟ್ನಾಂನಲ್ಲಿ ಜುಲೈ 27ರಿಂದ ಆಗಸ್ಟ್ 4ರವರೆಗೆ ನಡೆದ ಮಿಸಸ್ ಇಂಡಿಯಾ ವಲ್ರ್ಡ್ ವೈಡ್ ಪೂರಕ ತರಬೇತಿ ಹಾಗೂ ಸ್ಪರ್ಧೆಯಲ್ಲಿ ಮಂಗಳೂರಿನ ಸೌಜನ್ಯಾ ಹೆಗ್ಡೆ 7ನೇ ಸ್ಥಾನ ಪಡೆಯುವುದರೊಂದಿಗೆ...

ಉಡುಪಿ ನಗರಕ್ಕೆ ಬೇಸಗೆ ವೇಳೆ ವಾರಾಹಿ ನೀರು : ಮಧ್ವರಾಜ್

ನಮ್ಮ ಪ್ರತಿನಿಧಿ ವರದಿ ಉಡುಪಿ : ``ಬಜೆ ಗ್ರಾಮದಲ್ಲಿ ವರಾಹಿ ನದಿಗೆ ನಿರ್ಮಿಸಲಾಗಿರುವ ಬಜೆ ಅಣೆಕಟ್ಟಿನಿಂದ ಬೇಸಗೆಕಾಲದ ವೇಳೆ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ'' ಎಂದು ಉಡುಪಿ...

ಇನ್ನಾ ಪಂಚಾಯತ್ ಸದಸ್ಯರು ಸಹಿತ ಕಾರ್ಕಳ ಯುವ ಕಾಂಗ್ರೆಸ್ಸಿಗರಿಂದ ರಸ್ತೆ ಗುಂಡಿಗಳಿಗೆ ಮುಕ್ತಿ

ಯುವಕರ ಉತ್ತಮ ಕಾರ್ಯಕ್ಕೆ ಭಾರೀ ಪ್ರಶಂಸೆ ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಗ್ರಾಮ ಪಂಚಾಯಿತಿಗೆ ಅನುದಾನದ ಕೊರತೆ, ಜನಪ್ರತಿಧಿಗಳ ನಿರ್ಲಕ್ಷ್ಯ, ಹೊಂಡಮಯವಾದ ಇನ್ನಾ-ಸಾಂತೂರು ರಸ್ತೆ, ಈ ಸಮಸ್ಯೆಗೆ ಮುಕ್ತಿ ತೋರಿಸಿದವರು ಗ್ರಾ ಪಂ.ನ ಇಬ್ಬರು...

ಮಂಗಳೂರು ತಲುಪಿದ ರಿಕ್ಷಾ ಛಾಲೆಂಜ್ ರೈಡ್

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಜಗತ್ತಿನಾದ್ಯಂತದ ರಿಕ್ಷಾಗಳ ಭಾಗವಹಿಸುವಿಕೆಯೊಂದಿಗೆ `ಮುಂಬಯಿ ಎಕ್ಸಪ್ರೆಸ್ ರಿಕ್ಷಾ ಚಾಲೆಂಜ್ 2017' ಎಂಬ ವಿಶಿಷ್ಟವಾದ ರಿಕ್ಷಾಗಳ ಸಾಹಸ ಯಾತ್ರೆ ಮಂಗಳವಾರ ಮಂಗಳೂರಿಗೆ ತಲುಪಿದೆ. ರಿಕ್ಷಾ ಚಾಲೆಂಜ್ ಅಧಿಕಾರಿಗಳ ಸಹಯೋಗದೊಂದಿಗೆ ಮಂಗಳೂರು...

ನಿರ್ಗತಿಕರಿಗೆ ಊಟ ನೀಡಿದ ಅಂಗರಗುಂಡಿ ಯುವಕರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಆಗಸ್ಟ್ 15ರಂದು ಎಲ್ಲಾ ಕಡೆ ಧ್ವಜಾರೋಹಣ, ಭಾಷಣ, ಸಿಹಿ ತಿಂಡಿ ವಿತರಣೆ ನಡೆಯುತ್ತಿದ್ದರೆ, ಸುರತ್ಕಲ್ ಅಂಗರಗುಂಡಿಯ ಯುವಕರು ಬಡ, ನಿರ್ಗತಿಕರಿಗೆ ಊಟ ನೀಡಿ ಮಾನವೀಯತೆ ಮೆರೆದರು. ಅಂಗರಗುಂಡಿಯ ರಜ್ಜಾನ್...

ನೇತ್ರಾವತಿ ಉಳಿಸಲು ಪರಿಸರ ಹೋರಾಟಗಾರರಿಂದ ಪ್ರತ್ಯೇಕ ಪ್ರಾಧಿಕಾರ ರಚನೆಗೆ ಆಗ್ರಹ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪಶ್ಚಿಮಘಟ್ಟವನ್ನು ಉಳಿಸುವ ನಿಟ್ಟಿನಲ್ಲಿ ನೇತ್ರಾವತಿ ನದಿ ಹಾಗೂ ಪಶ್ಚಿಮಘಟ್ಟಕ್ಕೆ ರಾಜಕೀಯ ವ್ಯವಸ್ಥೆಯಿಂದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಹ್ಯಾದ್ರಿ ಸಂಚಯದ...

ಸುರತ್ಕಲ್ ಅಗರಿ ಎಂಟರಪ್ರೈಸಸಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಫರ್

ಮಂಗಳೂರು : ಮನೆ ಮಾತಾಗಿರುವ ಅಗರಿ ಎಂಟರಪ್ರೈಸಸ್ ಗ್ರಾಹಕರಿಗೆ ಪ್ರತೀ ತಿಂಗಳು ಹೊಸ ಹೊಸ ಆಫರುಗಳನ್ನು ಒದಗಿಸುತ್ತಾ ಬಂದಿದೆ. ರಂಜಾನ್ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರುಗಳ ಜೊತೆ ಖರೀದಿಗೆ ಉಚಿತ ಬಹುಮಾನಗಳು...

ಪ ವಲಯ ನೂತನ ಐಜಿಪಿಯಾಗಿ ನಿಂಬಾಳ್ಕರ್ ಅಧಿಕಾರ ಸ್ವೀಕಾರ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪಶ್ಚಿಮ ವಲಯ ಐಜಿಪಿಯಾಗಿ ಹೇಮಂತ್ ನಿಂಬಾಳ್ಕರ್ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮನ ಐಜಿಪಿ ಹರಿಶೇಖರನ್ ನೂತನ ಐಜಿಪಿಗೆ ಅಧಿಕಾರ ಹಸ್ತಾಂತರ ಮಾಡಿದರು. ``ಸಮಾಜದ ಸ್ವಾಸ್ಥ್ಯ ಕದಡುವ ಚಟುವಟಿಕೆಗಳಿಗೆ ಕಾನೂನು ರೀತಿಯಲ್ಲಿ...