Sunday, August 20, 2017

ಬಸ್-ಕಾರು ಡಿಕ್ಕಿ : ಮೂವರು ಗಂಭೀರ

 ನಮ್ಮ ಪ್ರತಿನಿಧಿ ವರದಿ ಸಿದ್ದಾಪುರ : ಇಲ್ಲಿನ ಸಾಗರ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಬಸ್ತಿಬೈಲ ಬಳಿ ಬುಧವಾರ ಡಸ್ಟರ ಕಾರು-ಬಸ್ ಮುಖಾಮುಖಿ ಡಿಕ್ಕಿಯಾಗಿ 3 ಜನರು ಗಂಭೀರ ಗಾಯಗೊಂಡಿದ್ದಾರೆ. ಸಾಗರದಿಂದ ಹೊನ್ನಾವರ ಕಡೆ ಹೋಗುತ್ತಿದ್ದ ಬಸ್ಸಿಗೆ ಎದುರಿನಿಂದ...

ಔಷಧಿಯೆಂದು ಕ್ರಿಮಿನಾಶಕ ಸೇವಿಸಿ ವ್ಯಕ್ತಿಯೊಬ್ಬ ಸಾವು

ನಮ್ಮ ಪ್ರತಿನಿಧಿ ವರದಿ ಶಿರಸಿ : ಗಿಡಕ್ಕೆ ಹೊಡೆಯುವ ಕ್ರಿಮಿನಾಶಕವನ್ನು ಔಷಧಿಯೆಂದು ತಪ್ಪಾಗಿ ತಿಳಿದು ಕುಡಿದ ವಿದ್ಯಾನಗರದ ವ್ಯಕ್ತಿಯೊಬ್ಬರು ಬುಧವಾರ ಅಸ್ವಸ್ಥಗೊಂಡು ಬಳಿಕ ಮೃತಪಟ್ಟಿದ್ದಾರೆ. ಮೂಲತ ಸಿದ್ದಾಪುರದ ಕೊಂಡ್ಲಿಯವರಾಗಿದ್ದು, ಸದ್ಯ ವಿದ್ಯಾನಗರದಲ್ಲಿರುವ ನಾರಾಯಣ ನಾಯ್ಕ ಅವರು...

ಕಾರು ಡಿಕ್ಕಿ : ಸೈಕಲ್ ಸವಾರ ಬಾಲಕ ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ ಕುಂಬಳೆ : ಕಾರು ಡಿಕ್ಕಿ ಹೊಡೆದು ಸೈಕಲ್ ಸವಾರ ಬಾಲಕ ಗಾಯಗೊಂಡಿದ್ದಾನೆ. ಕೊಡ್ಯಮ್ಮೆ ಚೂರಿತ್ತಡ್ಕ ನಿವಾಸಿ ಮೊಹಮ್ಮದ್ ಹನೀಫ ಎಂಬವರ ಪುತ್ರನೂ ಕುಂಬೋಲ್ ಎಯುಪಿ ಶಾಲೆ ವಿದ್ಯಾರ್ಥಿಯಾದ ಮೊಹಮ್ಮದ್ ಸಿನಾನ್ (12)...

22 ಕಿಲೋ ಗಾಂಜಾ ಪತ್ತೆ : ಒಬ್ಬ ಸೆರೆ, ಇನ್ನೊಬ್ಬಗೆ ಶೋಧ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಕುಂಬಳೆ ಮತ್ತು ಮಂಜೇಶ್ವರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ತೂಮಿನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಾವಿಗೆ ರಿಂಗ್ ಹಾಕುವ ಸಮೀಪದಲ್ಲಿದ್ದ ಶೆಡ್ಡೊಂದರಲ್ಲಿ ಬಚ್ಚಿಡಲಾಗಿದ್ದ 22 ಕಿಲೋ ಗಾಂಜಾವನ್ನು ಪತ್ತೆ...

ಸ್ಕೂಟರಿನಲ್ಲಿ ಸಾಗಿಸುತ್ತಿದ್ದ ಮದ್ಯ ಸಹಿತ ಒಬ್ಬ ಸೆರೆ

ಮಂಜೇಶ್ವರ : ಸ್ಕೂಟರಿನಲ್ಲಿ ಸಾಗಿಸುತ್ತಿದ್ದ ನಾಲ್ಕೂವರೆ ಲೀಟರ್ ಅಕ್ರಮ ಮದ್ಯ ಸಹಿತ ಒಬ್ಬನನ್ನು ಕುಂಬಳೆ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಬ್ರಾಣ ಬೀರಂಟಿಕೆರೆ ನಿವಾಸಿ ಸಂಜೀವ್ (19) ಬಂಧಿತ. ಈತ ಸ್ಕೂಟರಿನಲ್ಲಿ ಮದ್ಯ ಸಹಿತ ತೆರಳುತ್ತಿದ್ದಾಗ...

ಕಿಡಿಗೇಡಿಗಳಿಂದ ಕಾರಿಗೆ ಹಾನಿ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಬ್ಯಾಂಕೊಂದರ ಮುಂಭಾಗ ನಿಲ್ಲಿಸಲಾಗಿದ್ದ ಕಾರಿನ ಗಾಜನ್ನು ಪುಡಿಗೈದು ಹಾನಿಗೊಳಿಸಿದ ಬಗ್ಗೆ ಮಂಜೇಶ್ವರ ಪೆÇಲೀಸರಿಗೆ ದೂರು ನೀಡಲಾಗಿದೆ. ಪೈವಳಿಕೆ ನಿವಾಸಿ ಇಬ್ರಾಹಿಂ ಖಲೀಲ್ ಎಂಬವರ ನ್ಯಾನೋ ಕಾರನ್ನು ಹಾನಿಗೊಳಿಸಲಾಗಿದೆ. ಬುಧವಾರ...

16 ಕಳವು ಪ್ರಕರಣದ ಆರೋಪಿಗಳ ಬಂಧನ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಬುಧವಾರ ತಡರಾತ್ರಿ ರಿಕ್ಷಾವೊಂದರಲ್ಲಿ ಬಂದು ಕಳವು ನಡೆಸಲು ಸ್ಕೆಚ್ ಹಾಕುತ್ತಿದ್ದ 6 ಮಂದಿ ಕುಖ್ಯಾತ ಕಳ್ಳರನ್ನು ಸಂಪ್ಯ ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಗಳು 16 ಕಡೆಗಳಲ್ಲಿ ಕಳ್ಳತನ...

ಮಹಿಳೆಗೆ ಕೊಲೆ ಬೆದರಿಕೆ

ಉಡುಪಿ : ಜಾಗ ಖರೀದಿಸಿದ ದಲಿತ ಮಹಿಳೆಗೆ ಜಾಗದ ಮಾಲಿಕಳ ಮಗಳೇ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಉಡುಪಿ ನಗರದ ಹೊರವಲಯದ ಬೈಲೂರು ವಾಸುಕಿನಗರ 5ನೇ ಕ್ರಾಸ್ ನಿವಾಸಿ, ದಲಿತ...

ಯುವಕನ 7 ಸಾವಿರ ನಗದು, ಬೆಳ್ಳಿ ಸರ ಎಗರಿಸಿದ ದರೋಡೆಕೋರರು

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಬುಧವಾರ ಮುಂಜಾನೆ ಸ್ನೇಹಿತನೊಂದಿಗೆ ತೆರಳುತ್ತಿದ್ದ ಯುವಕನಿಂದ ಕಾಸರಗೋಡು ಎರಿಯಾಲಿನಲ್ಲಿ ಏಳು ಸಾವಿರ ರೂ ನಗದು ಹಾಗೂ ಬೆಳ್ಳಿ ಸರವನ್ನು ದರೋಡೆಕೋರರು ಅಪಹರಿಸಿದ್ದಾರೆ. ಪೈವಳಿಕೆ ಪಚ್ಚಂಬಳ ನಿವಾಸಿ ಫೈಸಲ್ ಕಲಂದರ(25)ನಿಂದ...

ಮಂಡೆಕಾಪು ಮನೆಯಿಂದ ಕಳವಾದ ಚಿನ್ನಾಭರಣ ಪತ್ತೆ

ಕುಂಬಳೆ : ಕಟ್ಟತ್ತಡ್ಕ ಹಾಗೂ ಮಂಡೆಕಾಪುವಿನ ಮನೆಗಳಿಂದ ಚಿನ್ನಾಭರಣ ಸಹಿತ ವಿವಿಧ ಸೊತ್ತುಗಳನ್ನು ಕಳವುಗೈದ ಆರೋಪಿಗಳನ್ನು ಪೆÇಲೀಸರು ಕಸ್ಟಡಿಗೆ ಪಡೆದು, ಕದ್ದ ಸೊತ್ತುಗಳನ್ನು ಪತ್ತೆಹಚ್ಚಿದ್ದಾರೆ. ಮಂಜೇಶ್ವರ ಕುಂಡುಕೊಳಕೆ ನಿವಾಸಿ ಮೊಹಮ್ಮದ್ ಶಿಹಾಬ್ ಯಾನೆ ಶಿಹಾಬ್...

ಸ್ಥಳೀಯ

ಇಸ್ಲಾಂ ಧರ್ಮಕ್ಕೆ ಮತಾಂತರಿತ ಹಿಂದೂ ಯುವತಿ ಚಿತ್ರ ವೈರಲ್

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ``ಇದು ನನ್ನ ಜೀವನವಾಗಲಿದೆಯೇ ?'' ಎಂದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಶಾಫಿನ್ ಜಹಾನ್ ಎಂಬಾತನ ಜತೆ  ನಡೆದ ತನ್ನ ವಿವಾಹವನ್ನು ಮೂರು ತಿಂಗಳ ಹಿಂದೆ ಕೇರಳ ಹೈಕೋರ್ಟ್...

ಚೌತಿ ಹಬ್ದಕ್ಕೆ `ಗ್ರೀನ್ ಗಣೇಶ’ನನ್ನು ತನ್ನಿ

ಮಂಗಳೂರು :  ಈ ವರ್ಷದ ಗಣೇಶ ಚತುರ್ಥಿಯಂದು ನ್ಯಾಷನಲ್ ಎನ್ವಿರಾನ್ಮೆಂಟ್ ಕೇರ್ ಫೌಂಡೇಶನ್  ಎಂಬ ಪರಿಸರ ಸಂಘಟನೆಯ ವಿಶಿಷ್ಟ ಯೋಜನೆಯೊಂದು ಯಶಸ್ವಿಯಾಗಿದ್ದೇ ಆದಲ್ಲಿ ಅದು ಸಸಿಗಳನ್ನು ನೆಟ್ಟು ಪರಿಸರ ರಕ್ಷಿಸುವಲ್ಲಿಯೂ ಸಹಕಾರಿಯಾಗಿ ನಿಜಾರ್ಥದಲ್ಲಿ...

ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗೆ ಕಾರ್ಯನಿರ್ವಹಿಸುವ `ಏಂಜಲ್ ಬಾಕ್ಸ್’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಪ್ರಸ್ತುತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕಂದಮ್ಮಗಳನ್ನೂ ರಾಕ್ಷಸ ಪ್ರವೃತ್ತಿಯುಳ್ಳವರು ತಮ್ಮ ದಾಹಕ್ಕೆ ಒಳಪಡಿಸುತ್ತಿದ್ದಾರೆ. ಅತ್ಯಾಚಾರದ ಬಗ್ಗೆ ಒಂಚೂರು ಅರಿವಿಲ್ಲದ ಮಕ್ಕಳ ಬದುಕು ಬರ್ಬರವಾಗುತ್ತದೆ....

ಯುಪಿಸಿಎಲ್ ವಿಸ್ತರಣೆಗೆ 160 ಎಕ್ರೆ ಜಾಗ ಸ್ವಾಧೀನ

ನಮ್ಮ ಪ್ರತಿನಿಧಿ ವರದಿ ಉಡುಪಿ : ಮುಂದಿನ ಹಂತದಲ್ಲಿ 1800 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗಾಗಿ ಸ್ಥಾವರದ ವಿಸ್ತರಣೆ ಕಾರ್ಯ ನಡೆಯಬೇಕಿದ್ದು, ಇದಕ್ಕಾಗಿ ಉಡುಪಿ ವಿದ್ಯುತ್ ನಿಗಮ ನಿಯಮಿತ (ಯುಪಿಸಿಎಲ್) 160 ಎಕ್ರೆ ಜಾಗ...

ಕಲ್ಸಂಕ ಸೇತುವೆ ರೂ 1.25 ಕೋಟಿ ವೆಚ್ಚದಲ್ಲಿ ವಿಸ್ತರಣೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ನಗರದಲ್ಲಿರುವ ಕಲ್ಸಂಕ ಸೇತುವೆಯನ್ನು ರೂ 1.25 ಕೋಟಿ ವೆಚ್ಚದಲ್ಲಿ ವಿಸ್ತಾರಗೊಳಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವ ಶಕ್ತಿ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಅವರು ಕೊಡಂಕೂರಿನಲ್ಲಿ...

ದರೆಗುಡ್ಡೆ ಬಿಸಿಎಂ ಹಾಸ್ಟೆಲ್ ದುರವಸ್ಥೆ

ತರಕಾರಿ ಇಡುವ ಜಾಗವೇ ವಿದ್ಯಾರ್ಥಿಗಳು ಮಲಗುವ ಕೋಣೆ ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ದರೆಗುಡ್ಡೆ ಪಂಚಾಯತಿನ ಬಾಡಿಗೆ ಕೊಠಡಿಯಲ್ಲಿ 1987ರಲ್ಲಿ ಆರಂಭವಾದ ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಬಿಸಿಎಂ ಹಾಸ್ಟೆಲಿನಲ್ಲಿ ಮೂಲ...

ಬಿ ಸಿ ರೋಡು ಸರ್ವಿಸ್ ರಸ್ತೆಯಲ್ಲಿ ಕೃತಕ ಕೆರೆ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ಬಿ ಸಿ ರೋಡು ಸರ್ವಿಸ್ ರಸ್ತೆ ಸಮಸ್ಯೆ ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಂಡು ಬರುತ್ತಿಲ್ಲ. ಇಲ್ಲಿನ ಸರ್ವಿಸ್ ರಸ್ತೆಯ ಅವ್ಯವಸ್ಥೆಯ ಫಲ ಇಲ್ಲಿನ ಸಾರ್ವಜನಿಕರು ಕಳೆದ ಹಲವು...

ಅಧಿಕಾರಿಗಳ ನಿಯುಕ್ತಿ ವಿರೋಧಿಸಿದ ಜಿ ಪಂ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಗ್ರಾಮೀಣ ಪ್ರದೇಶಗಳ ಬ್ಯಾಂಕ್ ಶಾಖೆಗಳಿಗೆ ಕನ್ನಡ ತಿಳಿಯದ ಅಧಿಕಾರಿಗಳನ್ನು ನಿಯುಕ್ತಿಗೊಳಿಸಿರುವುದು ಸರ್ಕಾರಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಅಡ್ಡಿಯಾಗಿದೆ ಎಂದು ದ ಕ ಜಿಂ ಪಂ ಸಭೆಯಲ್ಲಿ ಸದಸ್ಯರು...

ಬೀದಿ ಬದಿ ವ್ಯಾಪಾರಸ್ಥರ ಮೇಲೆ ದಾಳಿ ಖಂಡಿಸಿ ಸಿಐಟಿಯು ಧರಣಿ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಬೀದಿ ಬದಿ ವ್ಯಾಪಾರಸ್ಥರ ಮೇಲಾಗುತ್ತಿರುವ ನಿರಂತರ ದಾಳಿಯನ್ನು ಖಂಡಿಸಿ ಹಾಗೂ ಪರ್ಯಾಯ ವ್ಯವಸ್ಥೆಗಾಗಿ ಒತ್ತಾಯಿಸಿ ಬೀದಿ ಬದಿ ವ್ಯಾಪಾರಸ್ಥರು ಸಿಐಟಿಯು ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿ...

ಬಹುರಾಷ್ಟ್ರೀಯ ಕಂಪೆನಿ ಕೆಲಸ ತ್ಯಜಿಸಿ ದೇಸಿ ಹಸು ಸಾಕುತ್ತಿರುವ ಉಡುಪಿ ವ್ಯಕ್ತಿ

ನಮ್ಮ ಪ್ರತಿನಿಧಿ ವರದಿ ಉಡುಪಿ : ಉಡುಪಿಯ ಅಂಬಲಪಾಡಿ ನಿವಾಸಿ ಸೋಮನಾಥ ಪೂಜಾರಿ ಝಾಂಬಿಯಾದ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಾ ಸಾಕಷ್ಟು ಸಂಪಾದನೆ ಮಾಡುತ್ತಿದ್ದರು. ಆದರೆ ಅದೇನಾಯ್ತೋ ಏನೋ ಅಷ್ಟೊಂದು...