Wednesday, June 28, 2017

ಬೈಕ್ ಗುದ್ದಿ ಪಾದಚಾರಿಯ ಕಾಲು ಮುರಿತ

ಪಡುಬಿದ್ರಿ : ಬಡಾ ಎರ್ಮಾಳು ಕಲ್ಯಾಣಿ ಬಾರ್ ಮುಂಭಾಗ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಕಾಲೊಂದು ತೀವ್ರ ಜಖಂಗೊಂಡಿದೆ.ಶನಿವಾರ ತಡರಾತ್ರಿ ಈ ಅಪಘಾತ ನಡೆದಿದ್ದು, ಎರ್ಮಾಳು ಕುದ್ರೊಟ್ಟು ಗರೋಡಿ ಬಳಿ...

ವಸೂಲಿ ಜ್ಯೋತಿಷಿಯಿಂದ ಗ್ರಾಹಕಗೆ ಹಲ್ಲೆ

ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಕಪಟತನವನ್ನು ಪ್ರಶ್ನಿಸಿದ ಕಾರಣಕ್ಕಾಗಿ ಕುಪಿತಗೊಂಡ ಜ್ಯೋತಿಷಿಯೊಬ್ಬ ವ್ಯಕ್ತಿಯೊಬ್ಬರಿಗೆ ಶುಕ್ರವಾರ ಹಲ್ಲೆಗೈದು ಹೊರದಬ್ಬಿದ ಘಟನೆ ವರದಿಯಾಗಿದೆ. ಲಾೈಲ ಗ್ರಾಮದ ರಾಮಣ್ಣ ಬೈರ ಎಂಬವರ ಮೇಲೆ ಬೆಳ್ತಂಗಡಿಯ ಪ್ರವಾಸಿ ಬಂಗ್ಲೆ ರಸ್ತೆಯ...

ಮಂಗಳೂರಿಗೆ ಬರುತ್ತಿದ್ದ ಲಾರಿ ಗುದ್ದಿ ಬಸ್ಸಲಿದ್ದ ವ್ಯಕ್ತಿ ಮೃತ

ನಮ್ಮ ಪ್ರತಿನಿಧಿ ವರದಿ ಯಲ್ಲಾಪುರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಆರತಿಬೈಲ್ ಬಳಿ ಗುರುವಾರ ಸಂಜೆ ಬಸ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಕೊಲ್ಲಾಪುರದ ಮಾಳವದೆ ಗ್ರಾಮದ ಸದಾಶಿವ ಯಶವಂತ ಖೋತ...

ಅಪ್ರಾಪ್ತೆ ನಾಪತ್ತೆ : ಅಪಹರಣ ಶಂಕೆ

ನಮ್ಮ ಪ್ರತಿನಿಧಿ ವರದಿ ಶಿರಸಿ : ತಾಲೂಕಿನ ಹಾರುಗಾರದ ಅಪ್ರಾಪ್ತೆಯೊಬ್ಬಳು ಫೆಬ್ರವರಿ 23ರಂದು ಮನೆಯಿಂದ ಹೋದವಳು ವಾಪಸ್ ಬರದೇ ನಾಪತ್ತೆಯಾಗಿದ್ದಾಳೆ. ಅವರನ್ನು ಯಾರೋ ಅಪಹರಿಸಿದ್ದಾರೆಂಬ ಶಂಕೆಯಡಿ ಪಾಲಕರು ಗುರುವಾರ ದೂರು ನೀಡಿದ್ದಾರೆ. ಹಾರುಗಾರದ ಸದಾನಂದ ಗೌಡರು...

ಮಾರಾಮಾರಿ : 3 ಮಂದಿ ಸೆರೆ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಬಹಿರಂಗವಾಗಿ ಸಾರ್ವಜನಿಕ ಪ್ರದೇಶದಲ್ಲಿ ಜಗಳವಾಡಿದ 3 ಮಂದಿಯನ್ನು ಮಂಜೇಶ್ವರ ಪೆÇಲೀಸರು ಸೆರೆ ಹಿಡಿದಿದ್ದಾರೆ. ಉಪ್ಪಳ ನಿವಾಸಿ ಹಸನ್ ಕುಟ್ಟಿ ಎಂಬವರ ಪುತ್ರ ಕಾಶಿಂ (27), ಅಟ್ಟೆಗೋಳಿ ನಿವಾಸಿ...

ಗಾಂಜಾ ವ್ಯಸನಿ ಬಂಧನ

ಬೆಳ್ತಂಗಡಿ : ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ಬಸ್ ನಿಲ್ದಾಣದ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನೊಬ್ಬನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.ಗುರುವಾಯನಕೆರೆ ಸನಿಹದ ಪಿಲಿಚಾಮುಂಡಿಕಲ್ಲು ನಿವಾಸಿ ಯಾಕೂಬ್ (22) ಬಂಧಿತ ಆರೋಪಿ. ಈತ ಪಿಲಿಚಾಮುಂಡಿಕಲ್ಲು...

ಕಾರು -ಬೈಕ್ ಡಿಕ್ಕಿ : ಸವಾರ ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ ಶಿರಸಿ : ಇಲ್ಲಿನ ಸೋಂದಾ ಕ್ರಾಸ್ ಬಳಿ ಗುರುವಾರ ಕಾರು-ಬೈಕ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡಿದ್ದಾನೆ.  ಕಾರೊಂದು ವೇಗದಲ್ಲಿ ಬಂದು ರಸ್ತೆ ತಿರುವಿನಲ್ಲಿ ಬರುತ್ತಿದ್ದ ಬೈಕ್...

ಮರಳು ಅಡ್ಡೆಗೆ ಪೊಲೀಸ್ ದಾಳಿ

ಬಂಟ್ವಾಳ : ನದಿ ಕಿನಾರೆಯಲ್ಲಿ ಅಕ್ರಮ ದಾಸ್ತಾನಿರಿಸಿದ್ದ ಮರಳು ಅಡ್ಡೆ ಪತ್ತೆ ಹಚ್ಚಿ ದಾಳಿ ನಡೆಸಿದ ಬಂಟ್ವಾಳ ನಗರ ಪೊಲೀಸರು ಮರಳು ವಶಪಡಿಸಿಕೊಂಡ ಘಟನೆ ತುಂಬೆ ಗ್ರಾಮದ ಕೆಳಗಿನ ತುಂಬೆ ಎಂಬಲ್ಲಿ ಶುಕ್ರವಾರ...

ಕುಸಿದು ಬಿದ್ದು ಸಾವು

ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ನಿವಾಸಿ ಚಂದ್ರಶೇಖರ ಪೂಜಾರಿ (59) ಎಂಬವರು ಮನೆಯ ಅಂಗಳದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮಾನಸಿಕ ಖಾಯಿಲೆಯಿಂದ ಖಿನ್ನತೆಗೊಳಗಾಗಿ ಬಳಲುತ್ತಿದ್ದ ಅವರು ಇಂದಬೆಟ್ಟು ಸನಿಹದ ಬೆದ್ರಬೆಟ್ಟು...

ವಿದ್ಯುತ್ ತಗುಲಿ ಲೈನ್ ಮ್ಯಾನ್ ಸ್ಪಾಟ್ ಡೆತ್

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಕಂಬವೇರಿ ಸ್ಟೇ ವಯರ್ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಲೈನ್ ಮ್ಯಾನ್ ಕಂಬದಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸರ್ವೆ ಗ್ರಾಮದಲ್ಲಿ ನಡೆದಿದೆ. ಬಾಗಲಕೋಟೆ...

ಸ್ಥಳೀಯ

ಶ್ರೀರಾಮ ಸೇನೆ ಪ್ರತಿಭಟನೆ : ಕಾದುನೋಡುವ ಎಂದ ಶ್ರೀ

ನಮ್ಮ ಪ್ರತಿನಿಧಿ ವರದಿ ಉಡುಪಿ : ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ನಡೆಸಿ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಇದೀಗ ಶ್ರೀರಾಮ ಸೇನೆ ಜುಲೈ 2ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಪೇಜಾವರ...

ಸೌಹಾರ್ದತೆಗೆ ಪೇಜಾವರ ಶ್ರೀ ಇಫ್ತಾರ್ : ಬಜರಂಗದಳ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ``ಉಡುಪಿ ಮಠದಲ್ಲಿ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮಿ ಅವರು ಶಾಂತಿ ಸೌಹಾರ್ದತೆಯ ದೃಷ್ಟಿಯಿಂದ ಮಾಡಿರುವ ಇಫ್ತಾರ್ ಕೂಟದ ಬಗ್ಗೆ ಕೇವಲ ಸಂಕುಚಿತ ಮನೋಭಾವದ ವ್ಯಕ್ತಿಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದೆ....

ಪತಂಜಲಿ ಸಾಬೂನಲ್ಲಿ ರಬ್ಬರ್ ತುಂಡು

ಮಂಗಳೂರು : ನಗರದ ಸಮಾಜ ಸೇವಕ ಚಂದ್ರಹಾಸ ಮಾಡೂರು ಎಂಬವರು ಉಡುಪಿಯಿಂದ ಪತಂಜಲಿ ಉತ್ಪನ್ನ ಏಜೆಂಟರೊಬ್ಬರಿಂದ ತರಿಸಲಾದ ಅಲೋವೆರಾ ಕಾಂತಿ ಸಾಬೂನಿನಲ್ಲಿ ರಬ್ಬರ್ ತುಂಡು ಪತ್ತೆಯಾಗಿದೆ. ಈ ಬಗ್ಗೆ ಚಂದ್ರಹಾಸ್ ಅವರು ಪತಂಜಲಿ...

ಅನುಮತಿ ಇಲ್ಲದೆ ಬಸ್ ನಿಲ್ದಾಣ ನಿರ್ಮಿಸಿ ಜಾಹೀರಾತು ಫಲಕ ಅಳವಡಿಸಲು ಹುನ್ನಾರ

ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ನಿರಾಕರಣೆ ಹೊರತಾಗಿಯೂ ಇಲ್ಲಿನ ಪುರಸಭಾ ವ್ಯಾಪ್ತಿಯ ಕೆಲವು ಕಡೆ ಜಾಹೀರಾತು ಸಂಸ್ಥೆಯೊಂದು ಬಸ್ ನಿಲ್ದಾಣಗಳನ್ನು ನಿರ್ಮಿಸಿ ಜಾಹೀರಾತು ಫಲಕ ಅಳವಡಿಸಲು ತುರ್ತು...

ವಾಟ್ಸಪ್ಪಲ್ಲಿ ರಾಜಕೀಯ ನಾಯಕರ ತೇಜೋವಧೆ

2 ಠಾಣೆಯಲ್ಲಿ ದೂರು ನಮ್ಮ ಪ್ರತಿನಿಧಿ ವರದಿ ಬಂಟ್ವಾಳ : ತಾಲೂಕಿನ ಕೋಮುಸೂಕ್ಷ್ಮ ಪ್ರದೇಶವಾಗಿರುವ ಕಲ್ಲಡ್ಕದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿದ್ದ ಅಹಿತಕರ ಘಟನೆಗಳು ಹಾಗೂ ಉದ್ವಿಗ್ನ ಪರಿಸ್ಥಿತಿ ನಿಧಾನಕ್ಕೆ ತಣ್ಣಗಾಗುತ್ತಿರುವಂತೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣ...

ಗಿನ್ನಿಸ್ ದಾಖಲೆಯತ್ತ ಕಾರ್ಕಳ ಕಲಾವಿದ

 ಮಂಗಳೂರು : ಕರಾವಳಿ ಜಿಲ್ಲೆಯ ಶಿಲ್ಪಿಯೊಬ್ಬನ ದೃಷ್ಟಿ ಗಿನ್ನಿಸ್ ದಾಖಲೆಯತ್ತ ಚಲಿಸಿದೆ. ಹೌದು, ಕಾರ್ಕಳ ನಿವಾಸಿ 30 ವರ್ಷದ ಸುರೇಂದ್ರ ಆಚಾರ್ ಪೆನ್ಸಿಲ್ ಚೂಪುಗಳನ್ನು ಬಳಸಿಕೊಂಡು ಕಲಾತ್ಮಕ ಪ್ರಕಾರಗಳನ್ನು ರಚಿಸುವುದರಲ್ಲಿ ನಿಪುಣರಾಗಿದ್ದು, ಇದೀಗ...

ಕೆಎಸ್ಸಾರ್ಟಿಸಿ ಮಾರ್ಗಗಳ ನಿರ್ಬಂಧಕ್ಕೆ ಖಾಸಗಿ ಬಸ್ ನಿರ್ವಾಹಕರ ಆಶಯ

ನಮ್ಮ ಪ್ರತಿನಿಧಿ ವರದಿ ಉಡುಪಿ : ಪ್ರತಿ ಆರ್ಟಿಎ ಸಭೆಯಲ್ಲಿ ಇನ್ನಷ್ಟು ಕೆಎಸ್ಸಾರ್ಟಿಸಿ ಅನುದಾನಿತ ಜವಹರಲಾಲ್ ನರ್ಮ್ ಬಸ್ಸುಗಳ ಕಾರ್ಯಾಚರಣೆಗೆ  ಬೇಡಿಕೆಗಳು ಇದ್ದರೂ ಖಾಸಗಿ ಬಸ್ ನಿರ್ವಾಹಕರು ನರ್ಮ್ ಬಸ್ಸುಗಳ ಮಾರ್ಗಗಳನ್ನೇ ನಿರ್ಬಂಧಿಸಬೇಕು ಎಂದು...

ಉಳ್ಳಾಲ, ಗಂಗೊಳ್ಳಿಯಲ್ಲಿ ಕಡಲ್ಕೊರೆತ ತೀವ್ರ

  ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ನದಿ, ತೊರೆ, ಕಡಲು ತುಂಬಿದ್ದು, ಉಳ್ಳಾಲದಲ್ಲಿ ಕಡಲು ಪ್ರಕ್ಷುಬ್ದಗೊಂಡಿದೆ. ಅಲೆಗಳ ಆರ್ಭಟ ಜೋರಾಗಿದೆ. ಸಮುದ್ರ ತೀರದಲ್ಲಿದ್ದ ಮನೆಗಳು ಅಲೆಗಳ ಅಬ್ಬರಕ್ಕೆ...

ಪುತ್ತೂರು ಕೃಷಿ ಇಲಾಖೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ಕೃಷಿಗೆ ಉತ್ತೇಜನ ನೀಡಬೇಕೆನ್ನುವ ನಿಟ್ಟಿನಲ್ಲಿ ಸರಕಾರ ಕೃಷಿ, ತೋಟಗಾರಿಕೆ ಇಲಾಖೆಗಳಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಕಟ್ಟಡ, ಪರಿಕರ ಸೇರಿದಂತೆ ಎಲ್ಲಾ ಸವಲತ್ತುಗಳನ್ನೂ ನೀಡುತ್ತಿದೆ. ಆದರೆ ಎಲ್ಲಾ ಅನುಕೂಲತೆಗಳು...

ವಾರದೊಳಗೆ ಪಾಲಿಕೆ ಕಚೇರಿಯಲ್ಲಿ ಮಾಹಿತಿ ಕೇಂದ್ರ ಆರಂಭ ಭರವಸೆ

ಮೇಯರ್ ಫೋನ್ ಇನ್ ಕಾರ್ಯಕ್ರಮ ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರಪಾಲಿಕೆ ವ್ಯಾಪ್ತಿಯ ಜನತೆಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ ಅವರ ಎರಡನೇ ಬಾರಿಯ ಫೋನ್ ಇನ್ ಕಾರ್ಯಕ್ರಮದಲ್ಲೂ ಸಾರ್ವಜನಿಕರಿಂದ...