Thursday, August 17, 2017

ವಿದ್ಯುತ್ ಕಂಬಕ್ಕೆ ಜೀಪ್ ಗುದ್ದಿ ಚಾಲಕ ಗಂಭೀರ

ನಮ್ಮ ಪ್ರತಿನಿಧಿ ವರದಿ ಕುಮಟಾ : ಇಲ್ಲಿನ ಬಗ್ಗೋಣ ಕ್ರಾಸ್ ಬಳಿ ಗುರುವಾರ ಬೆಳಗಿನ ಜಾವ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಗಂಭೀರ ಗಾಯಗೊಂಡಿದ್ದಾನೆ. ಕೇರಳದ ಕಾಸರಕೋಡ...

ಮಡಗಾಂ-ಮಂಗಳೂರು ರೈಲಲ್ಲಿ ಪ್ರಯಾಣಿಕನ ಬ್ಯಾಗು ಎಗರಿಸಿ ಪರಾರಿಯಾಗುತ್ತಿದ್ದ ವ್ಯಕ್ತಿ ಸೆರೆ

ನಮ್ಮ ಪ್ರತಿನಿಧಿ ವರದಿ ಭಟ್ಕಳ : ಪ್ರಯಾಣಿಕರೊಬ್ಬರ ಬ್ಯಾಗನ್ನು ಎತ್ತಿಕೊಂಡು ರೈಲಿನಿಂದ ಜಿಗಿದು ಪರಾರಿಯಾಗಲು ಯತ್ನಿಸಿದ ಆರೋಪಿಯೊಬ್ಬನನ್ನು ಭಟ್ಕಳ ರೈಲ್ವೇ ಪೊಲೀಸರು ಹಿಡಿದು ನಗರ ಠಾಣೆಗೆ ಒಪ್ಪಿಸಿದ್ದಾರೆ. ಮಹಾರಾಷ್ಟ್ರದ ರತ್ನಗಿರಿ ಮೂಲದ ನರೇಶ ಶಾಂತರಾಮ ಬಂಧಿತ...

ರೈಲ್ವೇ ಕಾಲನಿಯಲ್ಲಿ ಗೃಹಿಣಿ ಕೊಲೆಯತ್ನ : ಆರೋಪಿ ಸೆರೆ

  ನಮ್ಮ ಪ್ರತಿನಿಧಿ ವರದಿ ಮಂಗಳೂರು :  ರೈಲ್ವೇ ಕಾಲನಿಯೊಳಗೆ ಬಂದು ಮನೆಯೊಳಗೆ ನುಗ್ಗಿ ಗೃಹಿಣಿ ಅಂಬುಜಾಕ್ಷಿ (55) ಮೇಲೆ ರಾಡಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಸುಮಾರು 1 ಲಕ್ಷ ರೂ ಮೌಲ್ಯದ 35...

ಬೋಟಲ್ಲಿ ವಿದ್ಯುತ್ ತಗುಲಿ ಮೀನುಗಾರ ದುರ್ಮರಣ

ಇನ್ನೊಬ್ಬ ಗಂಭೀರ ನಮ್ಮ ಪ್ರತಿನಿಧಿ ವರದಿ ಕುಮಟಾ : ಶಶಿಹಿತ್ತಲಿನ ಮೀನುಗಾರರು ಸೋಮವಾರ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮುಗಿಸಿ ವಾಪಸ್ ಶಶಿಹಿತ್ತಲಿಗೆ ಬರುತ್ತಿರುವ ಸಂದರ್ಭ ಅಳ್ವೇದಂಡೆ ಕೋಡಿ ದಾಟುವಾಗ ಮಿನಿ ಪರ್ಶಿಯನ್ ಬೋಟ್ ಮೇಲ್ಭಾಗದ ಕಬ್ಬಿಣದ...

ಕರ್ನಾಟಕದಿಂದ ಸಾಗಿಸುತ್ತಿದ್ದ 320 ಲೀಟರ್ ಮದ್ಯ ವಶ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕರ್ನಾಟಕದಿಂದ ಕಾರಿನಲ್ಲಿ ಸಾಗಿಸುತ್ತಿದ್ದ 320 ಲೀಟರ್ ಮದ್ಯವನ್ನು ಅಬಕಾರಿ ದಳದ ಸ್ಪೆಶಲ್ ಸ್ಕ್ವಾಡ್ ವಶಪಡಿಸಿಕೊಂಡಿದೆ. ಸ್ವಿಫ್ಟ್ ಕಾರಿನಲ್ಲಿ ಮದ್ಯ ಸಾಗಿಸುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಬಕಾರಿದಳ...

ಎರ್ಮಾಳಿನ ಗದ್ದೆಯಲ್ಲಿ ಬಾರೀ ಬೆಂಕಿ ಅನಾಹುತ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ತೆಂಕ ಎರ್ಮಾಳಿನ ಬ್ರಹ್ಮಶ್ರೀ ನಾರಾಯಣ ಗುರು ಸಂಸ್ಥೆ ಬಳಿಯ ಗದ್ದೆ ಪ್ರದೇಶದಲ್ಲಿ ವಿದ್ಯುತ್ ಅವಘಡದಿಂದ ಬೆಂಕಿ ಕಾಣಿಸಿಕೊಂಡು ಬಹಳಷ್ಟು ತಾಳೆ ಮರಗಳು ನಾಶಗೊಂಡಿದ್ದು, ತಕ್ಷಣ ಚುರುಕಾದ ಸ್ಥಳೀಯರು...

ಬಾಲಕಿ ನಾಪತ್ತೆ : ಅಪಹರಣ ಶಂಕೆ

ಶಿರಸಿ : ತಾಲೂಕಿನ ಮಡಕೇಶ್ವರ ಗ್ರಾಮದಲ್ಲಿರುವ ಅಜ್ಜಿ ಮನೆಗೆ ಬಂದ ಬಾಲಕಿ ನಾಪತ್ತೆಯಾಗಿದ್ದು, ಯಾರೋ ಅವಳನ್ನು ಅಪಹರಿಸಿರುವ ಶಂಕೆ ಇದೆಯೆಂದು ಬಾಲಕಿಯ ತಂದೆಯು ಬನವಾಸಿ ಠಾಣೆಯಲ್ಲಿ ಬುಧವಾರ ದೂರು ನೀಡಿದ್ದಾರೆ. ಸೊರಬದ ಚನ್ನಪಟ್ಟಣದ...

ಮಾಂಸ ತಂದಿಲ್ಲವೆಂದು ಸಹೋದರನಿಗೆ ಹಲ್ಲೆ

ನಮ್ಮ ಪ್ರತಿನಿಧಿ ವರದಿ ಪುತ್ತೂರು : ನೇಮಕ್ಕೆ ತೆರಳಿ ಮರಳಿ ಬರುವ ವೇಳೆ ಹಂದಿ ಮಾಂಸ ತಂದಿಲ್ಲ ಎಂದು ಆರೋಪಿಸಿ ನಿಡ್ಪಳ್ಳಿ ಗ್ರಾಮದ ಕುಕ್ಕುಪುಣಿ ನಿವಾಸಿ ಗೋಪಾಲ ಎಂಬವರಿಗೆ ಅವರ ಸಹೋದರ ಶೀನ ಎಂಬಾತ...

ಮುರಿದು ಬಿದ್ದ ಬೃಹತ್ ಮರ : ತಪ್ಪಿದ ದುರಂತ

ನಮ್ಮ ಪ್ರತಿನಿಧಿ ವರದಿ ಮುಳ್ಳೇರಿಯಾ : ಚೆರ್ಕಳ-ಜಾಲ್ಸೂರು ರಾಜ್ಯ ಹೆದ್ದಾರಿಯ ಆದೂರು ಚೆಕ್ಪೋಸ್ಟ್ ಬಳಿಯ ಬೃಹತ್ ಮರ ಮುರಿದುಬಿದ್ದಿದೆ. ಜನಸಂಚಾರ ಇಲ್ಲದಿದ್ದರಿಂದ ಭಾರೀ ಅಪಾಯ ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಬೆಳಿಗ್ಗೆ 3 ಗಂಟೆಯ ವೇಳೆ...

ಅಂಬುಲೆನ್ಸಲ್ಲಿ ಅತ್ಯಾಚಾರಕ್ಕೆ ಯತ್ನ : ಆರೋಪಿ ಬಂಧನ

ಬೆಂಗಳೂರು: ಕುಸಿದು ಬಿದ್ದು ಅಸೌಖ್ಯಗೊಂಡ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ಮಹಿಳೆ ಮೇಲೆ ಆಟೋರಿಕ್ಷಾ ಚಾಲಕ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ಆರೋಪಿ ಚಾಲಕ ಯಳಚಿನ ಹಳ್ಳಿ ನಿವಾಸಿ ಸಿದ್ಧರಾಜು (32)ನನ್ನು ಪೊಲೀಸರು...

ಸ್ಥಳೀಯ

ಅಡ್ಯನಡ್ಕದಲ್ಲಿ ಇತ್ತಂಡ ಹೊಡೆದಾಟ

ಸ್ವಾತಂತ್ರ್ಯೋತ್ಸವದಲ್ಲಿ ಮುಸ್ಲಿಮರಿಂದ ಸಿಹಿ ತಿಂಡಿ ಹಂಚಿಕೆ ನಮ್ಮ ಪ್ರತಿನಿಧಿ ವರದಿ ವಿಟ್ಲ : ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮುಸ್ಲಿಂ ಯುವಕರು ಸಿಹಿ ತಿಂಡಿ ಹಂಚುವುದನ್ನು ಹಿಂದೂ ಯುವಕರು ಆಕ್ಷೇಪಿಸಿದ ಕಾರಣ ಅಡ್ಯನಡ್ಕದಲ್ಲಿ ಇತ್ತಂಡಗಳ ಮಧ್ಯೆ ಹೊಡೆದಾಟ ನಡೆದಿದೆ. ಸ್ವಾತಂತ್ರ್ಯೋತ್ಸವದಂದು...

ಜಿಲ್ಲೆಯ ಅಡಕೆ ತೋಟಗಳು ಕೊಳೆರೋಗದಿಂದ ಮುಕ್ತ ; ರೈತರಿಗೆ ಕೂಲಿ ಕೆಲಸಗಾರರದ್ದೇ ಚಿಂತೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಮಳೆ ಕೊರತೆ ಅಡಕೆ ಬೆಳೆಗಾರರ ಮೇಲೆ ಹೇಳಿಕೊಳ್ಳುವ ಪ್ರಭಾವ ಬೀರಿಲ್ಲ. ಮಳೆ ಇಲ್ಲದ ಅವಧಿಯಲ್ಲಿ ಅಡಕೆ ತೋಟಗಳಿಗೆ ಸುಲಭವಾಗಿ ಕೀಟನಾಶಕ ಸಿಂಪಡಿಸಬಹುದು ಮತ್ತು ಈ ವರ್ಷ ಜಿಲ್ಲೆಯ...

ಜಿಲ್ಲಾಡಳಿತ ನಿರ್ಲಕ್ಷ್ಯ : ದಿನವಿಡೀ ಉಪವಾಸ ಬಿದ್ದಿದ್ದ ಕೊರಗ ಅನಾಥ ಸಹೋದರಿಯರು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ನಗರ ಹೊರವಲಯದ ಗಂಜೀಮಠ ಕೊರಗ ಕಾಲೊನಿಯಲ್ಲಿ ಅನಾಥ ಸಹೋದರಿಯರು ತುತ್ತು ಆಹಾರವಿಲ್ಲದೆ ದಿನವಿಡೀ ಕಳೆದಿರುವ ಮನಕಲಕುವ ಘಟನೆ ಸೋಮವಾರ ನಡೆದಿದೆ. ಭಾನುವಾರದಿಂದ ಇದುವರೆಗೆ ನಾವು ಒಂದು ತುತ್ತು ಆಹಾರವನ್ನು...

ಕದ್ರಿಯಲ್ಲಿ ನಗರದ ಪ್ರಥಮ ವಾಯು ಗುಣಮಟ್ಟ ತಪಾಸಣೆ ಕೇಂದ್ರ ಸ್ಥಾಪನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅಕ್ಟೋಬರ್ ವೇಳೆಗೆ ಕರಾವಳಿ ನಗರಕ್ಕೆ ಪ್ರಥಮವೆನ್ನಲಾದ ವಾಯು ಗುಣಮಟ್ಟ ನಿರ್ವಹಣೆ ಕೇಂದ್ರ(ಎಎಕ್ಯೂಎಂ) ಸ್ಥಾಪನೆಗೊಳ್ಳಲಿದೆ. ನಗರದ ವಾತಾವರಣದಲ್ಲಿರುವ ವಾಯು ಸಾಕಷ್ಟು ಉತ್ತಮ ಗುಣಮಟ್ಟ ಹೊಂದಿಲ್ಲ ಎಂಬುದು ಮಾಲಿನ್ಯ ವಿರೋಧಿ ಒಕ್ಕೂಟ...

ಮರಗಿಡಗಳಿಂದ ಅಪಘಾತ ತಿರುವಾಗಿದ್ದ ಪ್ರದೇಶ ಸ್ವಚ್ಛಗೊಳಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ ವಾಟ್ಸಪ್ ಗ್ರೂಪ್ ಯುವಕರು

ನಮ್ಮ ಪ್ರತಿನಿಧಿ ವರದಿ ವಿಟ್ಲ : ಅಪಘಾತ ಸ್ಥಳವಾಗಿದ್ದ ಕಡಂಬು ರಸ್ತೆ ತಿರುವಿನ ಮರಗಳನ್ನು ಯುವಕರು ತೆರವುಗೊಳಿಸಿ ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಸಾರ್ವಜನಿಕರ ಪ್ರಸಂಸೆಗೆ ಪಾತ್ರರಾಗಿದ್ದಾರೆ. ವಿಟ್ಲ-ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿನ ತೀರಾ ಅಪಾಯಕಾರಿ...

ಕರಾವಳಿಯಲ್ಲಿ ಸಣ್ಣ ನಿವೇಶನದಲ್ಲಿ ಮನೆ ನಿರ್ಮಿಸುವವರಿಗೆ ಕಂಟಕವಾಗಲಿರುವ ಪ್ರಸ್ತಾಪಿತ ಝೋನಲ್ ನಿಯಮಾವಳಿ

ಹಿಂದಿನ ಚುನಾವಣೆಯಲ್ಲಿ ಇಶ್ಯೂ ಆಗಿದ್ದ ಇದು ಮುಂದಿನ ಚುನಾವಣೆಯಲ್ಲಿಯೂ ಮತ್ತೆ  ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿರುವುದು ಗಮನಾರ್ಹ. ಆಗಿನ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಆಡಳಿತದಲ್ಲಿದ್ದರೆ, ಈಗ ಕಾಂಗ್ರೆಸ್ ಸರಕಾರವಿದೆ. ವಿಶ್ಲೇಷಣೆ : ಬಿವಿಸೀ ಬೆಂಗಳೂರು, ಮೈಸೂರು...

ಪರಿಸರ ನಾಶ ಕೈಬಿಡುವಂತೆ ಆಗ್ರಹಿಸಿ ಪುಟಾಣಿಗಳ ವಿನೂತನ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಒಂದೆಡೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಸ್ವಾತಂತ್ರ್ಯ ಸಂಭ್ರಮದಲ್ಲಿದ್ದರೆ, ಇನ್ನೊಂದೆಡೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಹ್ಯಾದ್ರಿ ಸಂಚಯನದ ವತಿಯಿಂದ...

ಅಮೆರಿಕಾ ವಿಚಾರ ಸಂಕಿರಣದಲ್ಲಿ ಮಂಗಳೂರಿನ 6 ವಿದ್ಯಾರ್ಥಿಗಳು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಅಮೆರಿಕಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಮಂಗಳೂರಿನ ಶಾಲೆಯೊಂದರ ವಿದ್ಯಾರ್ಥಿಗಳ ತಂಡವೊಂದು ತಯಾರಿ ನಡೆಸಿದೆ. ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಜಪ್ಪಿನಮೊಗರುವಿನ ಯೆನಪೋಯ ಶಲೆಯ ಆರು...

ಫ್ಯಾನ್ ತುಂಡಾಗಿ ಸಮುದ್ರ ಮರಳಲ್ಲಿ ಸಿಲುಕಿದ ಬೋಟು

ಮೀನುಗಾರರು ಅಪಾಯದಿಂದ ಪಾರು ನಮ್ಮ ಪ್ರತಿನಿಧಿ ವರದಿ ಕುಂದಾಪುರ : ಮುಂಡಳ್ಳಿಯ ನೆಸ್ತಾರ ಸಮುದ್ರತೀರದಲ್ಲಿ ಮೊನ್ನೆ ರಾತ್ರಿ ಮೀನುಗಾರಿಕೆ ಮುಗಿಸಿ ಭಟ್ಕಳ ಬಂದರಿಗೆ ಬರುತ್ತಿದ್ದ ಬೋಟ್ ಇಂಜಿನ್ ಫ್ಯಾನ್ ತುಂಡಾಗಿದ್ದು, ಬೋಟು ಮುಳುಗಡೆಯ ಭೀತಿ ಎದುರಾಗಿ...

ಹಸಿರು ಕೇರಳ ಶುಚಿತ್ವಕ್ಕೆ ಚಾಲನೆ

 ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಮನೆಯ ಪ್ರತಿಯೊಬ್ಬ ಸದಸ್ಯನೂ ಮಾಲಿನ್ಯದಿಂದ ಸ್ವಾತಂತ್ರ್ಯಕ್ಕಾಗಿ ಪಣತೊಡಬೇಕಾಗಿದೆ. ಮಾಲಿನ್ಯ ಮುಕ್ತ ಪರಿಸರ ನಿರ್ಮಿಸಿ ರೋಗಮುಕ್ತ ಜೀವನ ನಮ್ಮದಾಗಬೇಕು ಎಂದು ಬದಿಯಡ್ಕ ಗ್ರಾ ಪಂ ಅಧ್ಯಕ್ಷ ಕೆ ಎನ್...