ನಗದುರಹಿತ ವ್ಯವಹಾರ : ಮುಸ್ಲಿಮರ ಮನವೊಲಿಸಲು ಕೇಂದ್ರ ಕಾರ್ಯಕ್ರಮ

ನವದೆಹಲಿ : ತಮ್ಮ ದೈನಂದಿನ ಎಲ್ಲ ವ್ಯವಹಾರದಲ್ಲಿ ಡಿಜಿಟಲ್ ಮಾದರಿಯ `ನಗದುರಹಿತ ಭಾರತ’ ನೀತಿಯ ಮನವೊಲಿಕೆಗಾಗಿ ಮುಸ್ಲಿಂ ಸಮುದಾಯಕ್ಕೆ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಕಾರ್ಯಕ್ರಮ ಆರಂಭಿಸಿದೆ.

ಮೊಬೈಲ್ ಬ್ಯಾಂಕಿಂಗಿನ ಲಾಭವೇನೆಂಬುದರ ಅರಿವು ಮೂಡಿಸಲು ಮುಸ್ಲಿಂ ಸಮುದಾಯಕ್ಕೆ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ `ನಗದುರಹಿತ ಚೌಪಲ್’ ಎಂಬ ಕಾರ್ಯಕ್ರಮ ಆರಂಭಿಸಿದ್ದು, ಈ ಮೂಲಕ ಮುಸ್ಲಿಂ ಸಮುದಾಯದ ವ್ಯಾಪಾರಿಗಳು ಮತ್ತು ಸಮುದಾಯವನ್ನು ಗುರಿಯಾಗಿಟ್ಟುಕೊಂಡಿದೆ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ರಾಜ್ಯ ಸಚಿವ ಮುಖ್ತರ್ ಅಬ್ದಬಾಸ್ ನಖ್ವಿ ತಿಳೀಸಿದ್ದಾರೆ.