ನಗದುರಹಿತ ವಹಿವಾಟು ನಡೆಸಿದರೆ ತಂತ್ರಜ್ಞಾನ ವಹಿವಾಟು ಶುಲ್ಕ ಕಡಿತ

ನವದೆಹಲಿ : ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ವಿತ್ತ ಸಚಿವಾಲಯ ಸಾರ್ವಜನಿಕ ಬ್ಯಾಂಕುಗಳಿಗೆ ಸುತ್ತೋಲೆಯನ್ನು ಹೊರಡಿಸಿ, ಐಎಂಪಿಎಸ್ ಮತ್ತು ಯುಪಿಐ ತಂತ್ರಜ್ಞಾನದ ಮೂಲಕ ನಡೆಸಲಾಗುವ ಎಲ್ಲ ವಹಿವಾಟುಗಳಿಗೆ ಶುಲ್ಕಗಳನ್ನು ಕಡಿಮೆ ಮಾಡುವಂತೆ ಆದೇಶಿಸಿದ್ದು ಒಂದು ಸಾವಿರ ರೂಗಳಿಗೂ ಹೆಚ್ಚಿನ ಎನ್‍ಇಎಫ್‍ಟಿ ವಹಿವಾಟುಗಳ ಶುಲ್ಕ ಕಡಿಮೆ ಮಾಡಲು ಕೋರಿದೆ.

ಆರ್ ಬಿ ಐ ನಿಯಮಗಳ ಅನ್ವಯ 10,000 ರೂಪಾಯಿವರೆಗಿನ ವಹಿವಾಟಿಗೆ 2.50 ರೂ, ಹತ್ತು ಸಾವಿರದಿಂದ ಒಂದು ಲಕ್ಷದವರೆಗೆ ಐದು ರೂ, ಒಂದು ಲಕ್ಷದಿಂದ ಎರಡು ಲಕ್ಷದವರೆಗೆ 15 ರೂ ಮತ್ತು ಎರಡು ಲಕ್ಷ ರೂಗಳಿಗೂ ಮೇಲ್ಪಟ್ಟ ವಹಿವಾಟುಗಳಿಎ 25 ರೂ ಶುಲ್ಕ ಮತ್ತು ಸೂಕ್ತ ಸೇವಾ ಶುಲ್ಕಕ ವಿಧಿಸಬೇಕಿದೆ. ಯು ಎಸ್ ಎಸ್ ಡಿ ವಹಿವಾಟುಗಳಿಗೆ ಒಂದು ಸಾವಿರ ರೂಪಾಯಿಗೂ ಮೇಲ್ಪಟ್ಟ ವಹಿವಾಟಿಗೆ ಇನ್ನೂ 50 ಪೈಸೆ ರಿಯಾಯಿತಿ ನೀಡಲು ಆದೇಶಿಸಲಾಗಿದೆ.

ಮೊಬೈಲ್ ಮುಖಾಂತರ ನಡೆಸಲಾಗುವ ವಹಿವಾಟುಗಳಿಗೆ ಯು ಎಸ್ ಎಸ್ ಡಿ ಎಂದು ಹೇಳಲಾಗುತ್ತದೆ. ಡಿಸೆಂಬರ್ 30ರವರೆಗೆ ಈ ಶುಲ್ಕವನ್ನು ರದ್ದುಪಡಿಸಲಾಗಿದೆ. ಡಿಜಿಟಲ್ ಮತ್ತು ಕಾರ್ಡ್ ವಹಿವಾಟುಗಳನ್ನು ಉದ್ದೇಶಿಸಲು ವಿತ್ತ ಸಚಿವಾಲಯ ಈ ಸುತ್ತೋಲೆಯನ್ನು ಹೊರಡಿಸಿದೆ.

ಎನ್ ಇ ಎಫ್ ಟಿ ವಹಿವಾಟುಗಳಿಗೆ ವಿಧಿಸಲಾಗುವ ಶುಲ್ಕವನ್ನೂ ಮೀರಿ ಯಾವುದೇ ಶುಲ್ಕ ವಿಧಿಸುವಂತಿಲ್ಲ ಎಂದು ಸಾರ್ವಜನಿಕ ಬ್ಯಾಂಕುಗಳಿಗೆ ಆದೇಶಿಸಲಾಗಿದೆ. ಐಎಂಪಿಎಸ್ ಮೊಬೈಲ್ ಮೂಲಕ ಪಾವತಿ ಮಾಡುವ ಸೌಲಭ್ಯವಾಗಿದ್ದು ಯುಪಿಐ ಸೌಲಭ್ಯದ ಮೂಲಕ ಗ್ರಾಹಕರು ತಮ್ಮ ಖಾತೆಗಳಿಂದ ವಾಣಿಜ್ಯ ವಹಿವಾಟು ನಡೆಸಬಹುದಾಗಿದೆ.