ಆಟೋಗಳಿಗೆ ನಗದುರಹಿತ ಪೇಮೆಂಟ್ ವ್ಯವಸ್ಥೆಗೆ ಚಾಲನೆ

ಸಾಂದರ್ಭಿಕ ಚಿತ್ರ

ಮಂಗಳೂರು : ರಾಜ್ಯದಲ್ಲಿ ಮೊತ್ತಮೊದಲ ಬಾರಿಗೆ ನಗರದಲ್ಲಿ ಆಟೋರಿಕ್ಷಾಗಳಿಗೆ ಕ್ಯಾಶಲೆಸ್ ವ್ಯವಸ್ಥೆ ಪೇಟಿಯಂ ಅಳವಡಿಸಲಾಗಿದೆ.

ಹಿರಿಯ ನಾಗರಿಕ ಸಂಘದ ಅಧ್ಯಕ್ಷ ರಮೇಶ್ ರಾವ್ ಅವರು ಧ್ವಜವನ್ನು ಬೀಸುವ ಮೂಲಕ ಈ ನೂತನ ಸೇವೆಗೆ ಮಂಗಳವಾರ ಚಾಲನೆ ನೀಡಿದರು. ಕುಡ್ಲ ಸೌಹಾರ್ದ ಸಹಕಾರಿ ಸಂಸ್ಥೆಯಡಿ ನಗದುರಹಿತ ಪೇಮೆಂಟ್ ವ್ಯವಸ್ಥೆ ಪೇಟಿಎಂ ಸೇವೆಗೆ ಚಾಲನೆ ನೀಡಲಾಗಿದೆ. ಈ ವ್ಯವಸ್ಥೆಯಿಂದ ಚಿಲ್ಲರೆ ಸಮಸ್ಯೆಗೆ ಪರಿಹಾರ ಸಿಗಲಿದೆ. ರಾಜ್ಯದಲ್ಲಿಯೇ ಮೊತ್ತಮೊದಲ ಬಾರಿಗೆ ಈ ಸೇವೆಯನ್ನು ಇಲ್ಲಿ ಆರಂಭಿಸಲಾಗಿದೆ ಎಂದು ರಮೇಶ್ ರಾವ್ ಹೇಳಿದ್ದಾರೆ.ಆಟೋರಿಕ್ಷಾಗಳು ಜಿಪಿಎಸ್ ಅಳವಡಿಸಿಕೊಂಡು, ಚಾಲಕನ ಹಿಂದುಗಡೆಯಲ್ಲಿ ಪೇಟಿಎಂ ಬಾರ್‍ಕೋಡ್, ಚಾಲಕನ ಮೊಬೈಲ್ ನಂಬರ್ ಡಿಸ್‍ಪ್ಲೇ ಅಳವಡಿಸಲಾಗುತ್ತದೆ. ಪ್ರಯಾಣಿಕರು ಪೇಟಿಎಂ ಬಾರ್ ಕೋಡನ್ನು ಸ್ಕ್ಯಾನ್ ಮಾಡಿ ಅಲ್ಲಿಯೇ ಮೀಟರಿನಲ್ಲಿ ಕಾಣುವ ಪ್ರಯಾಣ ದರವನ್ನು ಚಾಲಕನ ಮೊಬೈಲಿಗೆ ಪಾವತಿಸಬಹುದು. ಬೆಂಗಳೂರಿನ ಟೆಲಿಮ್ಯಾಟ್ರಿಕ್ಸ್ ಫಾರ್‍ಯೂ ಸಂಸ್ಥೆ ಜಿಪಿಎಸ್ ಅಳವಡಿಸಲು ಮುಂದಾಗಿದೆ.