ನಗದುರಹಿತ ವ್ಯವಸ್ಥೆ ದುಬಾರಿಯಾಗುತ್ತದೆ

ಅಮೆರಿಕನ್ನರು ಶೇ 45ರಷ್ಟು ನಗದು ಬಳಸುತ್ತಾರೆ. ಜರ್ಮನ್ನರು ಶೇ 80ರಷ್ಟು ಪ್ರಮಾಣದ ವ್ಯಾಪಾರವನ್ನು ನಗದು ರೂಪದಲ್ಲೇ ನಡೆಸುತ್ತದೆ. ಜಪಾನಿನಲ್ಲಿ ಜಿಡಿಪಿಯ ಶೇ 20ರಷ್ಟು ಪ್ರಮಾಣದ ನಗದು ಬಳಕೆಯಾಗುತ್ತದೆ. ಜಪಾನೀಯರು ನಗದು ಬಯಸುತ್ತಾರೆ.

* ದೇವಾಂಗ್ಷು ಗುಪ್ತಾ

ಆರ್ಥಿಕ ವಹಿವಾಟಿನ ಪ್ರಮಾಣವನ್ನು ಪರಿಗಣಿಸಿದರೆ ಅಮೆರಿಕನ್ನರು ಶೇ 45ರಷ್ಟು, ಜರ್ಮನ್ನರು ಶೇ 80ರಷ್ಟು, ಜಪಾನೀಯರು ಶೇ 82ರಷ್ಟು ವಹಿವಾಟನ್ನು ನಗದು ರೂಪದಲ್ಲೇ ನಡೆಸುತ್ತಾರೆ. ಭಾರತದಲ್ಲಿ ನಗದುರಹಿತ ಅರ್ಥವ್ಯವಸ್ಥೆಯನ್ನು ಜಾರಿಗೊಳಿಸಲು ಸಜ್ಜಾಗುತ್ತಿರುವ ನರೇಂದ್ರ ಮೋದಿ ಸರ್ಕಾರದ ನೀತಿಯಿಂದ ಸರ್ಕಾರಕ್ಕೆ ಹೆಚ್ಚು ಲಾಭವಾದರೆ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗುತ್ತದೆ.
ನಗದುರಹಿತ ಮತ್ತು ನಗದು ಆರ್ಥಿಕತೆಯನ್ನು ಕುರಿತ ಸಂವಾದದಲ್ಲಿ ವೆಚ್ಚ ಮತ್ತು ಲಾಭಗಳನ್ನು ಪರಿಗಣಿಸಿಯೇ ಇಲ್ಲ. ನಗದು ಆರ್ಥಿಕ ವ್ಯವಸ್ಥೆಯಲ್ಲಿ ಸರ್ಕಾರವೇ ವೆಚ್ಚವನ್ನು ಭರಿಸಿ ಲಾಭ ಪಡೆದರೆ ನಗದುರಹಿತ ವ್ಯವಸ್ಥೆಯಲ್ಲಿ ಸರ್ಕಾರಕ್ಕೆ ಹೆಚ್ಚಿನ ಲಾಭವಾಗುತ್ತದೆ. ಸೇವಾ ನಿರ್ವಾಹಕರು ಹೆಚ್ಚಿನ ಶುಲ್ಕ ಪಡೆಯುತ್ತಾರೆ. ಗ್ರಾಹಕರು ಮತ್ತು ಬಳಕೆದಾರರು ಹೆಚ್ಚಿನ ಮೊತ್ತ ನೀಡುತ್ತಾರೆ. 2000 ರೂ ಒಂದು ನೋಟು ಮುದ್ರಣಕ್ಕೆ 3.55 ರೂ ಖರ್ಚಾಗುತ್ತದೆ. ಇದನ್ನು ಅಧಿಕಾರಿಗೆ ಸಂಬಳದ ರೂಪದಲ್ಲಿ ಪಾವತಿ ಮಾಡಿದರೆ ಸರ್ಕಾರಕ್ಕೆ 1996.45 ರೂ ಲಾಭವಾಗುತ್ತದೆ. ಇತರ ವ್ಯವಹಾರಗಳಲ್ಲಿ ಈ ನೋಟನ್ನು ಬಳಸಿದರೂ ಖರ್ಚಾಗುವುದಿಲ್ಲ.
ನಗದುರಹಿತ ಹಣವನ್ನು ಜನರು ತಮ್ಮ ನಿತ್ಯ ವ್ಯವಹಾರಗಳಿಗೆ ಬಳಸಬಹುದು. ಮೊಬೈಲ್ ಬ್ಯಾಂಕಿಂಗ್, ವ್ಯಾಲೆಟ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕವೂ ಬಳಸಬಹುದು. ಈ ವ್ಯವಹಾರ ವಹಿವಾಟಿಗೆ ನೆರವು ನೀಡುವ ಸೇವಾದಾರ ಸಂಸ್ಥೆಗಳು ಆರ್ ಬಿ ಐ ನಿಯಮದಂತೆ ವ್ಯಾಪಾರಿ ರಿಯಾಯಿತಿ ಶುಲ್ಕವನ್ನು ಪಡೆಯುತ್ತಾರೆ. ನಗದು ನೋಟುಗಳಿಗಿಂತಲೂ ಭಿನ್ನವಾಗಿ ತಂತ್ರಜ್ಞಾನ ಹಣ ನಿರಂತರವಾಗಿ ಚಾಲನೆಯಲ್ಲಿರಬಹುದು. ಬಳಕೆದಾರರು ಎಲ್ಲ ವೆಚ್ಚವನ್ನೂ ಭರಿಸುತ್ತಾರೆ.
ವ್ಯಾಪಾರಿ ರಿಯಾಯಿತಿ ಶುಲ್ಕದ ಮೊತ್ತದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ತಾವು ಗಳಿಸಿದ ಲಾಭದಿಂದ ಉದ್ಯಮಗಳು ತೆರಿಗೆ ಪಾವತಿಸುತ್ತವೆ. ಶ್ರೀಮಂತ ರಾಷ್ಟ್ರಗಳಲ್ಲಿ ಜನರು ನಗದುರಹಿತ ವ್ಯವಹಾರ ನಡೆಸುವ ಕಾರಣವೆಂದರೆ ಹೆಚ್ಚು ಹಣವನ್ನು ಬಳಿಯಲ್ಲಿರಿಸಿಕೊಳ್ಳುವುದು ಅಪಾಯಕಾರಿಯಾಗುತ್ತದೆ. ಸ್ಕಾಂಡಿನೇವಿಯಾದಲ್ಲಿ ಹೆಚ್ಚಿನ ಸಾಮಾಜಿಕ ಸುರಕ್ಷತೆಯ ದೃಷ್ಟಿಯಿಂದ ಸಣ್ಣಪುಟ್ಟ ವಹಿವಾಟುಗಳೂ ಸಹ ನಗದುರಹಿತವಾಗಿ ನಡೆಯುತ್ತವೆ. ಸ್ವೀಡನ್ನಿನ ಪ್ರಜೆಗಳಿಗೆ ತಾವು ಪಾವತಿಸುವ ತೆರಿಗೆಯ ಹಣ ಉಚಿತ ಆರೋಗ್ಯ ಸೇವೆ, ಪಿಂಚಣಿ, ಉಚಿತ ಶಿಕ್ಷಣ ಮತ್ತು ಕಾನೂನು ನೆರವಿನ ಮೂಲಕ ತಮಗೇ ಲಭಿಸುತ್ತದೆ ಎಂದು ವಿಶ್ವಾಸ ಇರುತ್ತದೆ. ಈ ನಿಟ್ಟಿನಲ್ಲಿ ತಗಲುವ ವೆಚ್ಚ ಮತ್ತು ಈ ವೆಚ್ಚದ ವಿತರಣೆಯನ್ನು ಗಮನಿಸಿದಾಗ ನಗದುರಹಿತ ಆರ್ಥಿಕ ವ್ಯವಸ್ಥೆ ಇರುವ ದೇಶಗಳಲ್ಲೂ ಜನರು ಏಕೆ ನಗದು ವಹಿವಾಟು ನಡೆಸುತ್ತಾರೆ ಎಂದು ಗ್ರಹಿಸಬಹುದು.
ವಹಿವಾಟಿನ ಪ್ರಮಾಣವನ್ನು ಪರಿಗಣಿಸಿದರೆ ಅಮೆರಿಕನ್ನರು ಶೇ 45ರಷ್ಟು ನಗದು ಬಳಸುತ್ತಾರೆ. ಜರ್ಮನ್ನರು ಶೇ 80ರಷ್ಟು ಪ್ರಮಾಣದ ವ್ಯಾಪಾರವನ್ನು ನಗದು ರೂಪದಲ್ಲೇ ನಡೆಸುತ್ತದೆ. ಜಪಾನ್‍ನಲ್ಲಿ ಜಿಡಿಪಿಯ ಶೇ 20ರಷ್ಟು ಪ್ರಮಾಣದ ನಗದು ಬಳಕೆಯಾಗುತ್ತದೆ. ಭಾರತದಲ್ಲಿ ಇದು ನವಂಬರ್ 8ರವರೆಗೂ ಶೇ 13ರಷ್ಟಿತ್ತು. ಜಪಾನೀಯರು ನಗದು ಬಯಸುತ್ತಾರೆ. ಏಕೆಂದರೆ ಬ್ಯಾಂಕುಗಳಲ್ಲಿನ ಬಡ್ಡಿ ದರ ಅತಿ ಕಡಿಮೆ ಇರುತ್ತದೆ ಮತ್ತು ವ್ಯಾಪಾರಿ ರಿಯಾಯಿತಿ ಶುಲ್ಕದ ಪ್ರಮಾಣ ಹೆಚ್ಚಾಗಿರುತ್ತದೆ.
ಕಾನೂನು ಪಾಲನೆ ಕಟ್ಟುನಿಟ್ಟಾಗಿರುವ ಜಪಾನಿನಲ್ಲಿ ಬೃಹತ್ ಮೊತ್ತದ ನಗದು ಕೊಂಡೊಯ್ಯುವುದೂ ಕಷ್ಟವೇನಲ್ಲ. ಈ ಅರ್ಥಶಾಸ್ತ್ರೀಯ ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ನೋಡಿದರೆ ಭಾರತ ಸರ್ಕಾರ ನಗದುರಹಿತ ವಹಿವಾಟಿಗೆ ಪ್ರಚೋದಿಸುತ್ತಿರುವುದು ಅಸಹಜವೇನಲ್ಲ. ಹಾಗೆಯೇ ಸೇವೆ ಒದಗಿಸುವ ಕಂಪನಿಗಳೂ ಸಹ ನಗದುರಹಿತ ಆರ್ಥಿಕತೆಗೆ ಕುಮ್ಮಕ್ಕು ನೀಡುತ್ತವೆ. ಸ್ವೀಡನ್ ಮತ್ತು ಜರ್ಮನಿಯಂತೆ ಭಾರತ ತನ್ನ ನಾಗರಿಕರಿಗೆ ಸಾಮಾಜಿಕ ಸುರಕ್ಷತೆ ನೀಡುತ್ತದೆಯೇ ಎಂಬ ಪ್ರಶ್ನೆ ಎದುರಾದಾಗ ನಿರುತ್ತರರಾಗುತ್ತೇವೆ.