ಸಾಲಿಗ್ರಾಮ ದೇವಳದಲ್ಲಿ ಪೇಟಿಎಂ ನಗದುರಹಿತ ದೇಣಿಗೆ ಸಿಸ್ಟಂ ಆರಂಭ

ಉಡುಪಿ : ಇಲ್ಲಿಗೆ ಹತ್ತಿರದ ಗುರುನರಸಿಂಹ ದೇವಸ್ಥಾನದಲ್ಲಿ ಭಕ್ತರಿಂದ ನಗದುರಹಿತ `ಇ-ವ್ಯಾಲೆಟ್ ಪೇಟಿಎಂ’ ದೇಣಿಗೆ ಪದ್ಧತಿ ಆರಂಭಗೊಂಡಿದೆ. ಈ ರೀತಿಯ ವ್ಯವಸ್ಥೆ ಆರಂಭಗೊಂಡಿರುವುದು ರಾಜ್ಯದ ದೇವಸ್ಥಾನವೊಂದರಲ್ಲಿ ಇದೇ ಪ್ರಥಮ.

ದೇವಸ್ಥಾನದಲ್ಲಿ ಎರಡು ತಿಂಗಳ ಹಿಂದೆ ಭಕ್ತರಿಗೆ ದೇಣಿಗೆ ನೀಡಲು ಸಹಾಯವಾಗುವಂತಹ ಸ್ವೈಪಿಂಗ್ ಮೆಶಿನ್ ಪರಿಚಯಿಸಲಾಗಿತ್ತು. ಇಲ್ಲಿ ಈ ವ್ಯವಸ್ಥೆ ನೋಟು ನಿಷೇಧಕ್ಕಿಂತ ಹಿಂದೆಯೇ ಜಾರಿಗೆ ಬಂದಿತ್ತು. ಗುರುವಾರ ಇಲ್ಲಿ ಪೇಟಿಎಂ ಪದ್ಧತಿಯೂ ಆರಂಭಗೊಂಡಿದೆ ಎಂದು ದೇವಸ್ಥಾನ ಟ್ರಸ್ಟಿನ ಅಧ್ಯಕ್ಷ ಅನಂತಪದ್ಮಾನಾಭ ಐತಾಳ್ ತಿಳಿಸಿದರು.

ಆಡಳಿತ ಮಂಡಳಿಯು ದೇವಸ್ಥಾನದ ಹೆಸರಲ್ಲಿ ಪೇಟಿಎಂ ಖಾತೆ ತೆರೆಯಲಾಗಿದೆ. ಇದು ದೇವಸ್ಥಾನದ ಉಳಿತಾಯ ಖಾತೆಯೊಂದಿಗೆ ಲಿಂಕ್ ಹೊಂದಿದೆ. ಡೆಬಿಟ್/ಕ್ರೆಡಿಟ್ ಕಾರ್ಡುಗಳಿಂದ ಹಣ ಪಾವತಿಸಬಹುದು. ಇದಕ್ಕಾಗಿ ಭಕ್ತರು ಪೇಟಿಎಂ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು ಎಂದರು.