ಹಳೇ ಕಳ್ಳ ಬಂಧನ : ಲಕ್ಷಾಂತರ ರೂ ಮೌಲ್ಯದ ನಗ -ನಗದು ವಶ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಹಳೇ ಕಳ್ಳನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.   ಮಿಯ್ಯಾರು ಗ್ರಾಮದ ಚರ್ಚ್ ಮುಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮೂಲತಃ ಉಪ್ಪಿನಂಗಡಿ ನಿವಾಸಿ ಉಮಾನಾಥ ಪ್ರಭು (47) ಬಂಧಿತ. ಆತ ಕಳೆದ ಹಲವು ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಉಡುಪಿ ನಗರ ಹಾಗೂ ಹೆಬ್ರಿ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಆರೋಪಿಯನ್ನು ವಿಚಾರಣೆ ನಡೆಸಿದ ವೇಳೆ ಆತ ಒಂದು ದೇವಳ ಸೇರಿದಂತೆ ಎಂಟು ಮನೆಗಳಲ್ಲಿ ಕಳವು ನಡೆಸಿದ್ದಾನೆ. ಆರೋಪಿಯಿಂದ 134 ಗ್ರಾಂ ಚಿನ್ನಾಭರಣ, ಕಾಲು ಕೇಜಿ ಬೆಳ್ಳಿಯ ಆಭರಣ ಮತ್ತು 14 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.