ನೋಟು ಸಮಸ್ಯೆ ನಿರಂತರ

ದೇಶದಲ್ಲಿನ ಗರಿಷ್ಠ ಮುಖಬೆಲೆಯ ನೋಟುಗಳ ಅಮಾನ್ಯದಿಂದ ಜನತೆಗೆ ಉಂಟಾಗಿರುವ ತೊಂದರೆಯನ್ನು ನಿವಾರಿಸಲು ನೀಡಿದ್ದ 50 ದಿನಗಳ ಗಡುವು ಮುಗಿದ ಬಳಿಕ ಲೋಕಸಭೆಯಲ್ಲಿ ನೋಟು ಅಮಾನ್ಯದ ಬಗ್ಗೆ ಮಾತನಾಡದ ಮೋದಿ ಡಿಸೆಂಬರ್ 31ರಂದು ಶನಿವಾರ ಜನರ ಮುಂದೆ ಮಾತನಾಡಿದ್ದಾರೆ
ಪ್ರಧಾನಿಯವರು ಭಾಷಣಕ್ಕೂ ಮುನ್ನ ಸುದ್ದಿ ಮಾಧ್ಯಮಗಳು ನೋಟು ಅಮಾನ್ಯದ ನಂತರ ಮೋದಿ ಅವರು ಅಕ್ರಮ ಆಸ್ತಿ  ಚಿನ್ನದ ಮೇಲೆ ಸವಾರಿ ಮಾಡಲಿದ್ದಾರೆಂದು ಸುದ್ದಿ ಬಿತ್ತರ ಮಾಡುತ್ತಿದ್ದವು  ಪ್ರಧಾನಿಯವರು ಹೊಸ ಕ್ರಮಗಳನ್ನು ಪ್ರಕಟಿಸುತ್ತಿದ್ದಂತೆಯೇ ಮಾಧ್ಯಮಗಳಿಗೆ ನಿರಾಸೆ ತಂದಿರಬೇಕು. ಸುಮ್ಮನಾದವು
ಪ್ರಧಾನಿ ಅವರು ತಮ್ಮ ಭಾಷಣದಲ್ಲಿ ನೋಟು ನಿಷೇಧದ ಮೇಲಿನ ಬಿಗಿಯಾದ ಕ್ರಮಗಳನ್ನು ಸಡಿಲ ಮಾಡಬೇಕು  ಬ್ಯಾಂಕಿನಿಂದ ಎಟಿಎಂ ಕೇಂದ್ರಗಳಿಂದ ಪಡೆಯುವ ನಗದಿನ ಮೊತ್ತವನ್ನು ಹೆಚ್ಚು ಮಾಡುತ್ತಾರೆಂದು ಆಶಿಸಿದ್ದೆ  ಆದರೆ  ನೋಟು ಅಮಾನ್ಯದ ಬಗ್ಗೆ ಎಂದಿನಂತೆ ರಂಜಕವಾಗಿಯೇ ಮಾತನಾಡಿ ಸುಮ್ಮನಾದರು  ಅಂದರೆ ನೋಟು ಅಮಾನ್ಯದ ಸಮಸ್ಯೆ 50 ದಿನಗಳಿಗೆ ಮುಗಿಯುವುದಲ್ಲ ಅಥವಾ ಇಂತಿಷ್ಟೇ ಸಮಯದಿಂದಲೂ ಅದು ಸಾಧ್ಯವಿಲ್ಲ ಎಂಬುದು ಅವರ ಭಾಷಣದಿಂದ ಯಾರಿಗಾದರೂ ಅರ್ಥವಾದೀತು

  • ಎಂ ಅವಿನಾಶ್ 
    ಕಂಕನಾಡಿ ಮಂಗಳೂರು