ಮುಗಿಯದ ಚಿಲ್ಲರ ಗೋಳು

ಎಟಿಎಂಗಳಲ್ಲಿ ಹಣ ತೆಗೆಯಲು ವಿಧಿಸಿದ ಮಿತಿಯನ್ನು ಎರಡು ಸಾವಿರದಿಂದ ನಾಲ್ಕೂವರೆ ಸಾವಿರಕ್ಕೆ ಹೆಚ್ಚಿಸಲಾಗಿದೆ. ಈಗಲೂ ಹಲವು ಎಟಿಎಂಗಳಲ್ಲಿ ಐದು ನೂರು ಮತ್ತು ನೂರು ರೂಪಾಯಿ ಮುಖಬೆಲೆ ನೋಟುಗಳು ಸಿಗುತ್ತಿಲ್ಲ. ಇದರಿಂದ ಜನಸಾಮಾನ್ಯರಿಗೆ ತುಂಬಾ ಕಷ್ಟವಾಗಿದೆ. ಖಾತೆಯಲ್ಲಿ ಎರಡು ಸಾವಿರಕ್ಕಿಂತ ಕಡಿಮೆ ಮೊತ್ತವಿದ್ದರೆ ಅಂಥವರು ಹಣವನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ. ಇಲ್ಲವೇ ನೂರು ರೂಪಾಯಿ ಯಾವ ಎಟಿಎಂನಲ್ಲಿ ಸಿಗುತ್ತದೆ ಎಂದು ಎಟಿಎಂ ಇರುವಲ್ಲಿ ಹುಡುಕಾಟ ನಡೆಸಬೇಕಿದೆ. ಆರಂಭದಲ್ಲಿ ಗ್ರಾಮಾಂತರ ಪ್ರದೇಶಗಳ ಬವಣೆ ಕಡೆ ಗಮನ ನೀಡುತ್ತೇವೆ ಎಂದು ಆರ್ ಬಿ ಐ ಹೇಳಿತ್ತಾದರೂ ಅವರ ಭರವಸೆಗಳು ಭರವಸೆಯಾಗಿಯೇ ಉಳಿದಿದೆ ವಿನಃ ಕಾರ್ಯರೂಪಕ್ಕೆ ಬರುತ್ತಿಲ್ಲ. ಇದರಿಂದ ಜನ ಇನ್ನೂ ಚಿಲ್ಲರೆ ಸಮಸ್ಯೆಯಿಂದ ಮುಕ್ತಿ ಸಿಕ್ಕಿದಂತೆ ಕಾಣುತ್ತಿಲ್ಲ

  • ರಜತ್ ಯೆಯ್ಯಾಡಿ ಮಂಗಳೂರು