ಅಕ್ರಮ ಮರಳುಗಾರಿಕೆ : ಇಬ್ಬರ ವಿರುದ್ಧ ಕೇಸು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮಂದಾರ್ತಿ ಸಮೀಪದ 33ನೇ ಶಿರೂರು ಗ್ರಾಮದ ಗೋಳಿಬೆಟ್ಟು ಪ್ರದೇಶದ ಸೀತಾನದಿಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಯಾಂತ್ರಿಕೃತ ಮರಳುಗಾರಿಕೆಗೆ ಉಡುಪಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳು ದಾಳಿ ನಡೆಸಿ ಆರೋಪಿಗಳಾದ ಮಂದಾರ್ತಿ ನಿವಾಸಿ ಗಣೇಶ ಶೆಟ್ಟಿ ಮತ್ತು ಶಿರೂರು ಗ್ರಾಮ ನೀರಜೆಡ್ಡು ನಿವಾಸಿ ಗುರುಪ್ರಸಾದ್ ಎಂಬವರ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.

ದಾಳಿ ವೇಳೆ ಅಕ್ರಮ ಮರಳುಗಾರಿಕೆಗೆ ಬಳಸಿದ ಯಾಂತ್ರೀಕೃತ ದೋಣಿ, ಕಬ್ಬಿಣದ ಪೈಪ್, ರಬ್ಬರ್ ಪೈಪ್, ಜರಡಿಯನ್ನು ವಶಪಡಿಸಿಕೊಳ್ಳಲಾಗಿದೆ.