ಸಲಿಂಗಕಾಮಿ ದೇವಮಾನವ ವಿರುದ್ಧ ಪ್ರಕರಣ ದಾಖಲು

ಜೈಪುರ : ಕಳೆದ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ನಗೌರಿನ 75 ವರ್ಷದ ಸ್ವಯಂ ಘೋಷಿತ ದೇವಮಾನವನ ವಿರುದ್ಧ ಉದಯಪುರದ ನೊಂದ 22 ವರ್ಷದ ಯುವಕ ದೂರು ನೀಡಿದ್ದಾನೆ. ಸದ್ಯ ದೇವಮಾನವ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು. ಆರೋಪಿ ಮಹಂತ ರಾಮ್ ಶರಂದಾಸ್ ವಿರುದ್ಧ ಜ 5ರಂದು ಸಲಿಂಗಕಾಮ ಮತ್ತು ಹಫ್ತಾ ಕೇಸು ದಾಖಲಿಸಲಾಗಿದೆ ಎಂದು ಘಂಟಾಘರ್ ಠಾಣೆಯ ಪೊಲೀಸ್ ಅಧಿಕಾರಿ ರಾಜೇಂದ್ರ ಸಿಂಗ್ ಜೈನ್ ತಿಳಿಸಿದ್ದಾರೆ.

LEAVE A REPLY