ಸೀಎಂ ವಿರುದ್ಧ ಸಿಬಿಐ ಕೋರ್ಟಿನಲ್ಲಿ ಕೇಸು

ಬೆಂಗಳೂರು : ಗಣಿ ಲೀಸ್ ನವೀಕರಣ ಮಾಡಿರುವ ಆರೋಪದಲ್ಲಿ ಸೀಎಂ ಸಿದ್ದರಾಮಯ್ಯ, ಒಬ್ಬ ಹಿರಿಯ ಐಎಎಸ್ ಅಧಿಕಾರಿ ಹಾಗೂ ಎಂಟು ಗಣಿ ಕಂಪೆನಿಗಳ ವಿರುದ್ಧ ಸಿಬಿಐ ವಿಶೇಷ ಕೋರ್ಟಲ್ಲಿ ಖಾಸಗಿ ಕೇಸೊಂದು ದಾಖಲಾಗಿದೆ.

ಕೇಂದ್ರ ಸರ್ಕಾರದ ಅಧಿಕೃತ ಒಪ್ಪಿಗೆ ಪಡೆಯದೆ ಸಿದ್ದರಾಮಯ್ಯ ಎಂಟು ಕಂಪೆನಿಗಳ ಗಣಿ ಲೈಸೆನ್ಸ್ ನವೀಕರಣಗೊಳಿಸುವಂತೆ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ (ಆಗಿನ ವಾಣಿಜ್ಯ ಮತ್ತು ಇಂಡಸ್ಟ್ರೀ ಇಲಾಖೆಯ ಕಾರ್ಯದರ್ಶಿ) ಸಲಹೆ ನೀಡಿದ್ದರು ಎಂದು ರಾಮಮೂರ್ತಿ ಗೌಡ ದೂರು ನೀಡಿದ್ದಾರೆ.

ಈ ಪ್ರಕರಣವನ್ನು ಭಾರತೀಯ ದಂಡ ಸಂಹಿತೆ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಹಾಗೂ ಎಂಎಂಆರ್‍ಡಿ ಕಾಯ್ದೆಯಡಿ ವಿಚಾರಣೆ ನಡೆಸಬೇಕೆಂದು ಗೌಡ ಕೋರಿದ್ದಾರೆ. ಗೌಡ 2015 ಮಾರ್ಚಿನಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆದರೆ ಲೋಕಾಯುಕ್ತ ಈ ಪ್ರಕರಣ ಮುಚ್ಚಿಬಿಟ್ಟಿದೆ. ಬಳಿಕ ಸಿಬಿಐಗೆ ದೂರು ನೀಡಿದ್ದಾರೆ.