ಕಾರುಗಳು ಜಖಂ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಿಲ್ಲವ ಸಂಘದ ಬಳಿ ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

accident2

ಬಿಲ್ಲವ ಸಂಘದ ಬಳಿ ಕಿನ್ನಿಗೋಳಿಗೆ ಏಕಾಏಕಿ ತಿರುಗಿದ ವಾಹನವೊಂದರ ಹಿಂದುಗಡೆ ಇದ್ದ ಕಾರು ಬ್ರೇಕ್ ಹಾಕಿದ ಪರಿಣಾಮ ಮಂಗಳೂರು ಕಡೆಗೆ ಹೋಗುತ್ತಿದ್ದ ಎರಡು ಕಾರುಗಳು ಡಿಕ್ಕಿಯಾಗಿದೆ. ಅಪಘಾತದಲ್ಲಿ ಎರಡು ಕಾರಿಗೆ ಹಾನಿಯಾಗಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.