ನಗರದಲ್ಲಿ ಫುಟ್ಪಾತಲ್ಲೇ ಕಾರು ಪಾರ್ಕಿಂಗ್ !

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಬಲ್ಲಾಳಭಾಗ್ ಜನನಿಬಿಡ ಪ್ರದೇಶವೊಂದರಲ್ಲಿ ಫುಟ್ಪಾತ್ ಮೇಲೆಯೇ ಕಾರು ಪಾರ್ಕಿಂಗ್ ಮಾಡಲಾಗಿದ್ದು, ಪಾದಚಾರಿಗಳನ್ನು ಕಂಗೆಡಿಸಿದ ದೃಶ್ಯ ಶನಿವಾರ ಕಂಡುಬಂತು.

ಬಲ್ಲಾಳಭಾಗ್ ಪ್ರಸಾದ್ ಆರ್ಟ್ ಗ್ಯಾಲರಿ ಮುಂಭಾಗದ ರಸ್ತೆ ಜನನಿಬಿಡ ಪ್ರದೇಶವಾಗಿದ್ದು, ಇಲ್ಲಿ ದಿನನಿತ್ಯ ಸಾವಿರಾರು ಮಂದಿ ಸಂಚರಿಸುತ್ತಾರೆ. ಕೆಎಲ್14 ಟಿ 4318 ನಂಬ್ರದ ಮಾರುತಿ ಸುಝುಕಿ ಸ್ವಫ್ಟ್ ಕಾರನ್ನು ಫುಟ್ಪಾತ್ ಮೇಲೆಯೇ ನಿಲ್ಲಿಸಲಾಗಿತ್ತು.

ಕಾಸರಗೋಡಿನಿಂದ ಬಂದ ವ್ಯಕ್ತಿಯೊಬ್ಬರು ಅದನ್ನು ಇಲ್ಲಿನ ಫುಟ್ಪಾತಲ್ಲಿ ಪಾರ್ಕಿಂಗ್ ಮಾಡಿ ತೆರಳಿದವರು ಸುಮಾರು ಹೊತ್ತಿನವರೆಗೂ ಬಂದಿರಲಿಲ್ಲ. ಕಾರು ನಿಂತ ಪಕ್ಕದಲ್ಲೇ ಕಾಲೇಜಿನ ವಿದ್ಯಾರ್ಥಿನಿಯರು ಫುಟ್ಪಾತ್ ಬಿಟ್ಟು ರಸ್ತೆ ಮೇಲೆ ನಡೆದು ಹೋಗುತ್ತಿರುವ ದೃಶ್ಯ ಕಂಡುಬಂತು.