ಮುಲ್ಕಿ ರೈಲ್ವೇ ನಿಲ್ದಾಣಕ್ಕೆ ಹೋಗುತ್ತಿದ್ದ ಕಾರು ಪಲ್ಟಿ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಿನ್ನಿಗೋಳಿ ಮೂಲ್ಕಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ತಿರುವಿನಲ್ಲಿ ಮುಲ್ಕಿ ರೈಲ್ವೇ ನಿಲ್ದಾಣಕ್ಕೆ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಮುಲ್ಕಿ ರೈಲ್ವೇ ನಿಲ್ದಾಣಕ್ಕೆ ಹೊರಟಿದ್ದ ಕಾರು ಕೆಂಚನಕೆರೆ ತಿರುವಿನಲ್ಲಿ ಇನ್ನೊಂದು ವಾಹನಕ್ಕೆ ಸೈಡ್ ಕೊಡುವಾಗ ಚಾಲಕನ ನಿಯಂತ್ರಣ ತಪ್ಪಿದೆ. ಕಾರಿನಲ್ಲಿದ್ದವರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.

ಕಿನ್ನಿಗೋಳಿ ತಾಜ್ಯ ಹೆದ್ದಾರಿಯ ಕೆಂಚನಕೆರೆ ತಿರುವಿನಲ್ಲಿ ಕಳೆದೊಂದು ವಾರದಿಂದ ಪೈಪುಲೈನ್ ಕೆಲಸಕ್ಕೆ  ರಸ್ತೆ ಅಗೆಯುತ್ತಿದ್ದು ಹೊಂಡ ಮುಚ್ಚಿಲ್ಲ ಸ್ಥಳದಲ್ಲಿ ಧೂಳುಮಯ ವಾತಾವರಣವಿದ್ದು ಅಪಾಯಕಾರಿ ಸ್ಥಿತಿ ನಿಮಾಣವಾಗಿದೆ.