ಕಾರು ಪಲ್ಟಿ : ಪ್ರಯಾಣಿಕರಿಗೆ ಗಂಭೀರ ಗಾಯ

ಸಾಂದರ್ಭಿಕ ಚಿತ್ರ

ಕರಾವಳಿ ಅಲೆ  ವರದಿ

ಉಡುಪಿ : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-66ರ ಕರಾವಳಿ ಬೈಪಾಸ್ ಬಳಿ ಕಾರೊಂದು ಪಲ್ಟಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬ್ರಹ್ಮಾವರ ಹಳೆ ಸಿಂಡಿಕೇಟ್ ಬ್ಯಾಂಕ್ ಬಳಿಯ ರಥಬೀದಿ ನಿವಾಸಿ ಬಿ ಕೆ ಪಾಂಡುರಂಗ ನಾಯಕ್, ಆತನ ಮಗ ಗುರುರಾಜ ನಾಯಕ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುರುರಾಜ ನಾಯಕ್ ತನ್ನ ಕಾರು ಚಾಲಕ ದಿನೇಶ್ ಎಂಬಾತ ಚಲಾಯಿಸಿಕೊಂಡು ಬರುತ್ತಿದ್ದ ಕಾರಿನಲ್ಲಿ ಮಂಗಳೂರಿಂದ ಬ್ರಹ್ಮಾವರ ಕಡೆಗೆ ಬರುತ್ತಿದ್ದ ವೇಳೆ ಕರಾವಳಿ ಬೈಪಾಸ್ ಬಳಿ ಕಾರು ಪಲ್ಟಿಯಾಗಿದೆ. ಗಾಯಾಳು ಗುರುರಾಜ ನಾಯಕ್ ನೀಡಿದ ದೂರಿನಂತೆ ಕಾರು ಚಾಲಕ ದಿನೇಶ್ ವಿರುದ್ಧ ಉಡುಪಿ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY