ಪಣಂಬೂರಿನಲ್ಲಿ ಕಾರು ಅಪಘಾತ, ನಾಲ್ವರು ಪಾರು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ವೃತ್ತದ ಬಳಿಯಲ್ಲಿ ಮಂಗಳೂರಿನಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದ ಕಾರು ಹೆದ್ದಾರಿ ಮೈಲುಗಲ್ಲಿಗೆ ಡಿಕ್ಕಿ ಹೊಡೆದು ರಸ್ತೆ ಬದಿಗೆ ಬಂದು ನಿಂತಿದೆ.

ಅಪಘಾತದ ಸಂದರ್ಬದಲ್ಲಿ ಕಾರಿನಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಮಂಗಳೂರು ನಿವಾಸಿಗಳು ಪಣಂಬೂರಿನಲ್ಲಿ ಕ್ರಿಕೆಟ್ ಪಂದ್ಯಾಟಕ್ಕೆಂದು ಬಂದಿದ್ದರು. ಕಾರು ಅತೀ ವಾಗದಿಂದ ಚಾಲನೆ ಮಾಡಿಕೊಂಡು ಬಂದು ಎದುರಿನಲ್ಲಿ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್  ಹಾಕಿದಾಗ ಕಾರು ಚಾಲಕನ ನಿಯಂತ್ರಣ ತಪ್ಪಿರಬೇಕು ಎಂದು ಶಂಕಿಸಲಾಗಿದೆ.

ಅಪಘಾತದ ರಭಸಕ್ಕೆ ಸಿಮೆಂಟಿನ ಮೈಲಿಗಲ್ಲು ತುಂಡಾಗಿ ಚರಂಡಿಯಲ್ಲಿ ಬಿದ್ದಿದೆ ಹಾಗೂ ಕಾರು ಚರಂಡಿ ಬದಿಯಲ್ಲಿ ಹೋಗಿದೆ. ಕ್ರೇನ್ ತಂದು ಕಾರನ್ನು ಮೇಲೆತ್ತಲಾಯಿತು. ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.