ವಾಹನ ತಪಾಸಣೆ ವೇಳೆ ಪೇದೆಗೆ ಕಾರು ಡಿಕ್ಕಿ , ಗಾಯ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಪೊಲೀಸ್ ಸಿಬ್ಬಂದಿಗೆ ಕಾರೊಂದು ಡಿಕ್ಕಿಯಾಗಿ ಗಾಯವಾಗಿದೆ.

ಕಾರ್ಕಳ ನಗರ ಠಾಣಾ ಎಸ್‍ಐ ವಾಹನ ಚಾಲಕ ಸತೀಶ್ ಎಂಬವರು ಗಾಯಗೊಂಡ ಪೊಲೀಸ್ ಸಿಬ್ಬಂದಿ.

ಗುರುವಾರ ಎಸ್‍ಐ ರವಿಕುಮಾರ್ ದುರ್ಗಾ ಹೈಸ್ಕೂಲ್ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಬರುತ್ತಿದ್ದ ಮಾರುತಿ ಈಕೋ ವಾಹನವನ್ನು ಸತೀಶ್ ನಿಲ್ಲಿಸಲು ಸೂಚನೆ ನೀಡಿದಾಗ ನಿಯಂತ್ರಣ ಕಳೆದುಕೊಂಡ ಚಾಲಕ ನೇರವಾಗಿ ಸತೀಶಗೆ ಗುದ್ದಿದ ಪರಿಣಾಮ ಸತೀಶ್ ರಸ್ತೆ ಬಿದ್ದು ತಲೆ ಹಾಗೂ ಮೈಕೈಗೆ ಗಾಯಗಳಾಗಿವೆ.