ಮರಕ್ಕೆ ಕಾರು ಡಿಕ್ಕಿ : 4 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ

ಕರಾವಳಿ ಅಲೆ  ವರದಿ

ಕಾರ್ಕಳ : ತಾಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರ ಎಂಬಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಮಗು ಸೇರಿದಂತೆ 4 ಜನ ಗಾಯಗೊಂಡಿದ್ದಾರೆ.

ತೀರ್ಥಹಳ್ಳಿ ನಿವಾಸಿಗಳಾದ ಚೆನ್ನಕೇಶವ, ವೆಂಕಟೇಶ್, ಪ್ರೇಮಾ, ಸಂದೀಪ್ ಹಾಗೂ ಮಗು ನಿಕ್ಸಿತ್ ಎಂಬವರು ದೇವರ ದರ್ಶನ ಪಡೆಯುವ ಸಲುವಾಗಿ ತೀರ್ಥಹಳ್ಳಿಯಿಂದ ಉಡುಪಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಸೋಮೇಶ್ವರ ಎಂ ಎಂಬಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ.

ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ವೆಂಕಟೇಶ್, ಪ್ರೇಮಾ, ನಿಕ್ಸಿತ್ ಹಾಗೂ ಸಂದೀಪ್ ಗಾಯಗೊಂಡಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY