ಬಸ್ ಚಾಲಕನ ಓವರ್ಟೇಕ್ ಭರಾಟೆಗೆ ಕಾರು ಜಖಂ

ಡಿಕ್ಕಿ ರಭಸಕ್ಕೆ ರಸ್ತೆ ವಿಭಾಜಕ ಏರಿನಿಂತ ಕಾರು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಕಾಪು ಸಮೀಪದ ಉಚ್ಚಿಲ ಮಸೀದಿ ಬಳಿ ಚಾಲಕನ ಓವರ್ಟೇಕ್ ಭರಾಟೆಯಲ್ಲಿ ಖಾಸಗಿ ಬಸ್ಸೊಂದು ಕಾರಿಗೆ ಡಿಕ್ಕಿಯಾದ ಪರಿಣಾಮ ನಿಯಂತ್ರಣ ಕಳೆದುಕೊಂಡ ಕಾರು ಹೆದ್ದಾರಿ ಪಕ್ಕದ ಲೈಟ್ ಕಂಬಕ್ಕೆ ಡಿಕ್ಕಿಯಾಗಿ ರಸ್ತೆ ವಿಭಾಜಕ ಏರಿ ನಿಂತಿದ್ದು, ಕಾರು ಬಹುತೇಕ ಜಖಂಗೊಂಡಿದೆ.

ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಓವರ್ಟೇಕ್ ಭರಾಟೆಯಲ್ಲಿ ಮುನ್ನುಗ್ಗಿದ ಖಾಸಗಿ ಬಸ್ `ಮಣಿಕಂಠ’ ಚಾಲಕನ ನಿರ್ಲಕ್ಷ್ಯ ದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪಡುಬಿದ್ರಿ ಪೆÇಲೀಸರು ವಾಹನಗಳನ್ನು ಠಾಣೆಗೆ ಸಾಗಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.