ಕಾರು -ಬೈಕ್ ಅಪಘಾತ ; ದಂಪತಿ ಗಂಭೀರ ಗಾಯ

 

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಮುಂಡಾಜೆ ಸಮೀಪ ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಸ್ಥಳೀಯ ದೀಪು ಎಂಬವರು ಮತ್ತು ಅವರ ಪತ್ನಿ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು   ಆಸ್ಪತ್ರೆಗೆ ದಾಖಲಿಸಲಾಗಿದೆ.


ಕಾರು ಮುಖಾಮುಖಿ :ನಾಲ್ವರು ಆಸ್ಪತ್ರೆಗೆ

ಉಪ್ಪಿನಂಗಡಿ : ಇಲ್ಲಿಗೆ ಸಮೀಪದ ಗೋಳಿತೊಟ್ಟು ಗ್ರಾಮದ ಕೋಲ್ಪೆ ಎಂಬಲ್ಲಿ ಭಾನುವಾರ ಸಾಯಂಕಾಲ ಸಂಭವಿಸಿದ ಕಾರು-ಕಾರು ಡಿಕ್ಕಿಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಮಂಗಳೂರು ಮೂಲದ ಮಂದಿ ಪ್ರಯಾಣಿಸುತ್ತಿದ್ದ ಕಾರಿಗೆ ಇನ್ನೊಂದು ಕಾರು ಕೋಲ್ಪೆ ರಾ ಹೆ 75ರಲ್ಲಿ ಡಿಕ್ಕಿ ಸಂಭವಿಸಿದಾಗ, ಕಾರಿನಲ್ಲಿದ್ದ ಶಕುಂತಳಾ ಹಾಗೂ ಶರಣ್ ಎಂಬಿಬ್ಬರು ಗಂಭೀರ ಗಾಯಗೊಂಡರು. ಇನ್ನೊಂದು ಕಾರಿನಲ್ಲಿದ್ದ ಹಸೈನಾರ್ ಮತ್ತೊಬರು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲ್ಪಟ್ಟಿದ್ದಾರೆ.

ಪ್ರಕರಣದ ಬಗ್ಗೆ ನೆಲ್ಯಾಡಿ ಹೊರ ಠಾಣಾ ಪೆÇಲೀಸರು ಹಾಗೂ ಪುತ್ತೂರು ಸಂಚಾರಿ ಠಾಣಾ ಪೆÇಲೀಸರು ಸ್ಥಳಕ್ಕಾಗಮಿಸಿ ಹೆದ್ದಾರಿ ಸಂಚಾರವನ್ನು ಸುಗಮಗೊಳಿಸಿದರು.