`ಕೇನ್ಸ್’ನಲ್ಲಿ ದೀಪಿಕಾ ರೆಡ್ ಹಾಟ್ ಲುಕ್

ದೀಪಿಕಾ ಪಡುಕೋಣೆ ಪ್ಯಾರೀಸಿನಲ್ಲಿ ಪ್ರತಿವರ್ಷದಂತೆ ನಡೆಯುವ ಕೇನ್ಸ್ ಫಿಲ್ಮ್ ಫೆಸ್ಟಿವಲ್ಲಿನಲ್ಲಿ ಭಾಗವಹಿಸುತ್ತಿದ್ದು ಅವಳ ಮೊದಲ ದಿನದ ಲುಕ್ ಇದು. ಕೆಂಪು ಬಣ್ಣದ ಮ್ಯಾಕ್ಸಿಯಲ್ಲಿ ಬಹಳ ಹಾಟ್ ಆಗಿ ಕಾಣಿಸುತ್ತಿದ್ದಾಳೆ ದೀಪಿಕಾ.

ದೀಪಿಕಾ ಸೌಂದರ್ಯ ಪ್ರಸಾಧನ ಲಾರಿಯಲ್ ಪ್ಯಾರಿಸ್ ಬ್ರಾಂಡ್ ಅಂಬಾಸಿಡರ್ ಆಗಿ ಕೇನ್ಸ್‍ನಲ್ಲಿ ಭಾಗವಹಿಸುತ್ತಿದ್ದಾಳೆ. ಈಗಾಗಲೇ ದೀಪಿಕಾ ಪ್ಯಾರೀಸಿಗೆ ಹೊರಟು ನಿಂತ ಫೋಟೋ, ಅವಳು ಅಲ್ಲಿ ಬೆಳಗಿನ ಜಾವ ಸೂರ್ಯಸ್ನಾನ ಮಾಡುವ ಫೋಟೋ ಹೀಗೆ ಒಂದೊಂದಾಗಿ ಹೊರಬೀಳುತ್ತಿವೆ. 2010ರಲ್ಲಿ ಮೊದಲ ಬಾರಿ ದೀಪಿಕಾ ಕೇನ್ಸ್ ಫೆಸ್ಟಿನಲ್ಲಿ ಭಾಗವಹಿಸಿದ್ದಾಗ ಸೀರೆ ಉಟ್ಟಿದ್ದಳು. ಈ ಬಾರಿ ಯಾವ ಯಾವ ನಮೂನೆಯಲ್ಲಿ ಮಿಂಚುತ್ತಾಳೆ ನೋಡಬೇಕಿದೆ. ಸೋನಂ ಕಪೂರ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಹೆಚ್ಚೂಕಡಿಮೆ ಪ್ರತೀ ವರ್ಷ ಆ ಸಮಾರಂಭದಲ್ಲಿ ಭಾಗವಹಿಸುತ್ತಿದ್ದು ಅವರ ಥರಾವರಿ ಡ್ರೆಸ್ ಬಗ್ಗೆಯೂ ಅವರ ಅಭಿಮಾನಿಗಳಲ್ಲಿ ಕುತೂಹಲವಿದೆ.