ಕ್ಯಾನ್ಸರ್ ನಿಯಂತ್ರಣದ ಪ್ರಚಾರಕ್ಕೆ ಚಾಲನೆ

ವೃತ್ತ ನಿರೀಕ್ಷಕರಿಂದ ಕುಂಜತ್ತೂರಿನಿಂದ ಚಾಲನೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರ ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿರುವ ಮಂಗಲ್ಪಾಡಿ, ಮಂಜೇಶ್ವರ ಗ್ರಾ ಪಂ.ಗಳಲ್ಲಿ ಅಧಿಕಗೊಳ್ಳುತ್ತಿರುವ ಮಾರಕವಾದ ಕ್ಯಾನ್ಸರ್ ರೋಗವನ್ನು ನಿಯಂತ್ರಿಸಲು ಹಾಗು ನಿರ್ಮೂಲನಗೊಳಿಸಲು ವಿವಿಧ ಯೋಜನೆಗಳ ಭಾಗವಾಗಿ  ಎರಡು ದಿವಸಗಳಲ್ಲಿ ನಡೆಸಲ್ಪಡುವ ಮಾಹಿತಿ ಶಿಬಿರದ ಪ್ರಚಾರಕ್ಕೆ ಕುಂಬಳೆ ವೃತ್ತ ನಿರೀಕ್ಷಕ ಮನೋಜ್ ಚಾಲನೆ ನೀಡಿದರು. ಬಳಿಕ ಕ್ಯಾನ್ಸರ್ ರೋಗವನ್ನು ಹೇಗೆ ತಡೆಗಟ್ಟಬಹುದು ಎಂಬ ವಿಷಯದಲ್ಲಿ ಬೀದಿ ನಾಟಕ ನಡೆಯಿತು. ಬಳಿಕ ಮಂಜೇಶ್ವರ ಹೊಸಂಗಡಿ ಸೇರಿದಂತೆ ಹಲವೆಡೆ ಪರ್ಯಟನೆ ನಡೆದು ಶನಿವಾರ ಸಂಜೆ ಪ್ರಚಾರ ಅಂತ್ಯಗೊಂಡಿತು.

ಇದರಂತೆ ಹಲವೆಡೆ ಈಗಾಗಲೇ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ, ಜನವರಿ 23 ರಂದು ಮಂಗಲ್ಪಾಡಿ ಸಿ ಎಚ್ ಸಿ ಕೇಂದ್ರದಲ್ಲಿ ಮತ್ತು ಜನವರಿ 24 ರಂದು ಮಂಜೇಶ್ವರ ಸಿ ಎಚ್ ಸಿ ಕೇಂದ್ರದಲ್ಲಿ  ಕ್ಯಾನ್ಸರ್ ರೋಗಗಳ ಬಗ್ಗೆ ಮಾಹಿತಿ ಶಿಬಿರ ನಡೆಯಲಿದೆ.